ಆಧಾರ್( Adhar ) ಒಂದು ವಿಶಿಷ್ಟ ಗುರುತಿನ ಕಾರ್ಡ್ ಆಗಿದೆ. ಹೌದು ಆಧಾರ್ ಎನ್ನುವುದು ಭಾರತದ ಜನರಿಗೆ ಬೇಕಾಗಿರುವ ಒಂದು ಅಗತ್ಯ ID ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಐಡೆಂಟಿಟಿ ( identity ) ಇರುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ನ ಮಹತ್ವ ಬಹಳ ಇದೆ. ಆದರೆ ಇದೀಗ ಆಧಾರ್ ಕಾರ್ಡ್ ಅನ್ನು ಹೋಲುವ ಇನ್ನೊಂದು ಹೊಸ ID ಕಾರ್ಡ್ ಒಂದು ತಯಾರಾಗುತ್ತಿದೆ. ಅದರ ಹೆಸರು, ಅದು ಯಾಕೆ ಬೇಕು ? ಮತ್ತು ಅದರ ಮಹತ್ವವನ್ನು ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅಪಾರ್ ಐಡಿ (APAAR ID) ಕಾರ್ಡ್
ಇದೀಗ ಆಧಾರ್ ಕಾರ್ಡ್ ಅನ್ನು ಹೋಲುವಂತ ಇನ್ನೊಂದು ಕಾರ್ಡ್ ಅನ್ನು ಹೊರತಂದಿದ್ದಾರೆ ಅದುವೇ ಆಪಾರ್ (APAAR ID) ಎಂಬ ಒಂದು ಹೊಸ ID ಕಾರ್ಡ್ ಆಗಿದೆ. ಇದನ್ನು ಒಂದು ರಾಷ್ಟ್ರ, ಒಂದು ಐಡಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಹೊರತರಲಿದ್ದು ಇದರಲ್ಲಿ ಮುಖ್ಯವಾಗಿ 12 ಗುರುತಿನ ಸಂಖ್ಯೆಗಳು ಇರುತ್ತದೆ.
ಅಪಾರ್ ಕಾರ್ಡ್ ನ ಅವಶ್ಯಕತೆ :
ಭಾರತ ಸರ್ಕಾರವು ಆಟೋಮ್ಯಾಟಿಕ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ(Automatic Permanent Academic Account Registry) ಅಥವಾ ಅಪಾರ್ ಅನ್ನು ಪರಿಚಯಿಸಿ ಕೊಟ್ಟಿದೆ. ಮುಖ್ಯವಾಗಿ ಇದು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಅವರ ಶೈಕ್ಷಣಿಕ ದಾಖಲೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
ಅಪಾರ್ ID ಕಾರ್ಡ್ ನ ಅಂಶಗಳು ಮತ್ತು ಪ್ರಾಮುಖ್ಯತೆ :
ಅಪಾರ್ ID ಯು ಆಧಾರ್ ಕಾರ್ಡ್ ಅನ್ನು ಹೋಲುವಂತದಾಗಿದ್ದು, ಮುಖ್ಯವಾಗಿ ಇದು ಪ್ರತಿಯೊಬ್ಬರಿಗೂ ವಿಶಿಷ್ಟವಾದ 12 ಅಂಕಿಗಳನ್ನು ಒಳಗೊಂಡಿರುತ್ತದೆ. ಈ ID ಕಾರ್ಡ್ ನ ಸಂಖ್ಯೆಯು ಮುಖಾಂತರ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಶೈಕ್ಷಣಿಕ ಹಂತಗಳಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಹಂತ ಹೇಗಿದೆ ಎಂಬುದನ್ನು ಸೂಕ್ಷ್ಮವಾಗಿ ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಗಳು ಮತ್ತು ಶೈಕ್ಷಣಿಕ ಕೋರ್ಸ್‌ಗಳಲ್ಲಿ ಮಾಡಲಾದ ಎಲ್ಲಾ ಆರ್ಥಿಕ ಮಾಹಿತಿಯನ್ನು ಕೂಡ ಈ ಕಾರ್ಡ್ ನ ಮೂಲಕ ತಿಳಿದುಕೊಳ್ಳಬಹುದು.
ಈ ID ಕಾರ್ಡ್ ಅನ್ನು ಹೇಗೆ ಪಡೆದು ಕೊಳ್ಳುವುದು :
ಅಪಾರ್ ID ಕಾರ್ಡ್ ಅನ್ನು ಪಡೆದುಕೊಳ್ಳಲು ಮೊದಲು ಮಾನ್ಯವಾದ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ. ನಂತರ ಡಿಜಿಲಾಕರ್ ಗೆ ಭೇಟಿ ನೀಡುವುದು. ಡಿಜಿಲಾಕರ್ ನ ಖಾತೆಯನ್ನು ಸಹ ಹೊಂದಿರಬೇಕಾಗಿರುತ್ತದೆ. ಇದಾದ ಬಳಿಕ ಇ-ಕೆವೈಸಿ ಪ್ರಕ್ರಿಯೆಯೂ ಕೂಡ ಇರುತ್ತದೆ. ಆದರೆ ಈ ನೋಂದಣಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯ ಪೋಷಕರ ಒಪ್ಪಿಗೆಯೂ ಕೂಡ ಅಗತ್ಯವಿದೆ.
ನೊಂದಣಿ ಮಾಡಿಕೊಳ್ಳಲು ಬಳಸಲಾಗುವ ವಿಧಾನ:
ಹಂತ 1: ಈ ಕಾರ್ಡ್‌ಗೆ ನೊಂದಣಿ ಆಗಲು ಮೊದಲು abc.gov.in ಗೆ ಸೈಟ್ ಅನ್ನು ಓಪನ್ ಮಾಡಿ ಕೊಂಡು ಅಲ್ಲಿ ವಿದ್ಯಾರ್ಥಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ಖಾತೆಯನ್ನು ಆಯ್ಕೆ ಮಾಡಿಕೊಂಡು ಲಾಗಿನ್ ID ಬಳಕೆ ಮಾಡಿಕೊಂಡು ಡಿಜಿಲಾಕರ್ ಖಾತೆಗೆ ಲಾಗಿನ್ ಮಾಡಿಕೊಳ್ಳಬೇಕು.
ಹಂತ 2: ಈ ಸಂದರ್ಭದಲ್ಲಿ ಪ್ರಾಂಪ್ಟ್ ಮಾಡಿದಾಗ ಕೆವೈಸಿ ಪರಿಶೀಲನೆಗಾಗಿ ಆಧಾರ್ ಕಾರ್ಡ್ ನ ಮಾಹಿತಿ ನೀಡಬೇಕು. ನಂತರದಲ್ಲಿ ಅಲ್ಲಿ ಕೇಳಲಾಗುವ ಶಾಲೆ ಅಥವಾ ವಿಶ್ವವಿದ್ಯಾಲಯದ ಹೆಸರು, ಕೋರ್ಸ್ ಹೆಸರು ಇತ್ಯಾದಿ ಅಗತ್ಯ ಶೈಕ್ಷಣಿಕ ವಿವರಗಳನ್ನು ನೀಡಬೇಕು.
ಹಂತ 3: ಇಷ್ಟೆಲ್ಲ ಆದ ನಂತರ ಮಾಹಿತಿಯನ್ನು ಸೇವ್ ಮಾಡಿಕೊಂಡು ನಂತರ ಬರುವ ಡೇಟಾವನ್ನು ಶಿಕ್ಷಣ ಸಂಸ್ಥೆಗಳು ಮತ್ತಿತರ ವಿವರಗಳನ್ನು ನೀಡಬೇಕಾಗುತ್ತದೆ. ಮತ್ತು ಇದು ವಿದ್ಯಾರ್ಥಿಯ ಆಧಾರ್ ಕಾರ್ಡ್‌ಗೆ ನೇರವಾಗಿ ಲಿಂಕ್ ಆಗಿರುವುದರಿಂದ ವಿದ್ಯಾರ್ಥಿಯು ಜೀವಿತಾವಧಿಯಲ್ಲಿ ಮಾನ್ಯವಾಗಿರುವ ಒಂದು ಅಪಾರ್ ID ಕಾರ್ಡ್ ಅನ್ನು ಹೊಂದಬಹುದಾಗಿದೆ.
ಈ ಅಪಾರ್ ID ಕಾರ್ಡ್ ಅನ್ನು ಕಡ್ಡಾಯವಾಗಿ ಪಡೆಯ ಬೇಕೆಂದಿಲ್ಲ. ಇದು ಅವರ ವೈಯಕ್ತಿಕ ವಿಚಾರ ಆಗಿರುತ್ತದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






