36 members in bigboss

Biggboss Kannada – ಕಾರ್ತಿಕ್ ಮದ್ವೆ ಆಗೋ ಹುಡುಗಿ ಹೇಗಿರಬೇಕು ಕೇಳಿ..? ಬಿಗ್ ಬಾಸ್ ಮನೆಯಲ್ಲಿ ‘ಬೃಂದಾವನ’ ಧಾರಾವಾಹಿ ತಂಡ

WhatsApp Group Telegram Group

ಬಿಗ್‌ಬಾಸ್‌(Bigg Boss) ಕನ್ನಡದ ದೊಡ್ಡ ರಿಯಾಲಿಟಿ ಶೋ ಆಗಿದ್ದು ಈಗ ಬಿಗ್ ಬಾಸ್ ಸೀಸನ್ 10 ನಡೆಯುತ್ತಿದೆ. ಈ ಸೀಸನ್‌ನಲ್ಲಿ ಅನೇಕ ವಿಶೇಷತೆಗಳು ಕಂಡು ಬಂದಿದ್ದು ಹಲವಾರು ಅಚ್ಚರಿಯ ಸಂಗತಿಗಳು ಮನೆಯೊಳಗೆ ಜರುಗುತ್ತಿವೆ. ದಿನೇ ದಿನೇ ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಈಗಾಗಲೇ ದೊಡ್ಡ ಮನೆಯೊಳಗೆ 15 ಜನ ಇದ್ದಾರೆ ಅದನ್ನ ಹೊರತು ಪಡಿಸಿ ಈಗ ಬರೋಬ್ಬರಿ 36 ಜನ ಹೊಸದಾಗಿ ದೊಡ್ಡ ಮನೆಯೊಳಗೆ ಕಾಲಿಟ್ಟಿದ್ದಾರೆ. ಯಾರು ಈ 36 ಜನ ಮತ್ತೆ ಯಾಕೆ ಬಂದರು ಎಂಬ ಕುತೂಹಲ ಇದ್ಯಾ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಬಿಗ್ ಬಾಸ್ ಮನೆಯಲ್ಲಿ ಒಟ್ಟು 36 ಜನ :

ಈವರೆಗೆ ಬಿಗ್ ಬಾಸ್ ಮನೆಯೊಳಗೆ ಇಷ್ಟೊಂದು ಜನ ಎಂದಿಗೂ ಸೇರಿರಲು ಸಾಧ್ಯವಿಲ್ಲ. ಅಷ್ಟೊಂದು ಜನ ಈ ಬಾರಿ ಮನೆಯಲ್ಲಿದ್ದಾರೆ. ಹೌದು, ಬೃಂಧಾವನ ಎಂಬ ಹೊಸ ಸೀರಿಯಲ್(brundaavana new serial) ಆರಂಭವಾಗುತ್ತಿದೆ. ಆ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಲ್ಲಿ ಪ್ರಮೋಷನ್ ಗೋಸ್ಕರ ಈ ಸೀರಿಯಲ್(serial) ತಂಡ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದೆ .
ಈ ಧಾರಾವಾಹಿಯಲ್ಲಿ ನಟಿಸಿರುವ ಎಲ್ಲ ಕಲಾವಿದರು ಆಗಮಿಸಿದ್ದಾರೆ. ಬಿಗ್ ಬಾಸ್ ಮನೆಯವರೊಂದಿಗೆ ಎಲ್ಲರೂ ಬೆರೆತು ಮಜಾ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆ ಈಗ ನಗುವಿನ ಮನೆಯಾಗಿದೆ.

ಕಾರ್ತಿಕ್ ಬಾಳ ಸಂಗಾತಿ ಹೀಗಿರಬೇಕಂತೆ :

ಮನೆಯೊಳಗೆ ಪ್ರಶ್ನೆಗಳನ್ನು ಕೇಳುವ ಒಂದು ಆಟ ಅಡಿದ್ದಾರೆ ಅದರಲ್ಲಿ ನಂತರ ಒಂದು ಪ್ರಶ್ನೆ ಕಾರ್ತಿಕ್ ಗೆ ಕೇಳಲಾಗಿದೆ. ಕಾರ್ತಿಕ್ ಬಳಿ ನಿಮ್ಮ ಬಾಳ ಸಂಗಾತಿ ಹೇಗಿರ್ಬೇಕು ಎಂದು ಕೇಳಲಾಗಿತ್ತು ಆಗ ಅವರು ಈ ರೀತಿ ತಮ್ಮ ಬಾಳ ಸಂಗಾತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಕನ್ನಡದವರಾಗಿರ್ಬೆಕು, ಇಂಡಿಪೆಂಡೆಂಟ್ ಆಗಿರ್ಬೇಕು, ಲಕ್ಷಣವಾಗಿರಬೇಕು ಆದ್ರೂ ನಾನೇ ಅವ್ರನ್ನಾ ನೋಡ್ಕೊಬೇಕು ಅಂತ. ಪಕ್ಕದಲ್ಲೇ ಸಂಗೀತಾ ಕೂತಿರ್ತಾರೆ. ನಂತರ ಭಾಗ್ಯಶ್ರೀ ಸಂತೋಷ್ ಎಲ್ಲರೂ ಸೇರಿ ಒಂದು ಚಿಕ್ಕ ಸ್ಕಿಟ್ ಮಾಡ್ತಾರೆ. ಕೊನೆಯಲ್ಲಿ ಸಂಗೀತಾ ಜೊತೆ ಕಾರ್ತಿಕ್ ಡಾನ್ಸ್ ಕೂಡ ಮಾಡಿದ್ದಾರೆ.

ಈ ಧಾರಾವಾಹಿ ಕಥೆ ಏನು?:

‘ಬೃಂದಾವನ’ ಹೆಸರಿನ ಧಾರಾವಾಹಿಯನ್ನು ಕೆಎಸ್‌ ರಾಮ್‌ಜೀ ಅವರು ನಿರ್ಮಿಸುತ್ತಿದ್ದಾರೆ. ಬೇರೆ ಧಾರಾವಾಹಿಗಳ ರೀತಿ ಈ ಸೀರಿಯಲ್‌ನಲ್ಲಿ ನೆಗೆಟಿವ್ ಇರುವುದಿಲ್ಲ. ಸಂಬಂಧಗಳು ಹೇಗಿರಬೇಕು, ಮನೆ ಹೇಗಿರಬೇಕು, ಪ್ರೀತಿ ಎಂದರೇನು ಅಂತ ಈ ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. ಇನ್ನು ಈ ಸೀರಿಯಲ್‌ನ 36 ಪಾತ್ರಗಳು ಒಳ್ಳೆಯ ಪಾತ್ರಗಳು ಆಗಿರುತ್ತವೆ. ಮೊಮ್ಮಗನಿಗೆ ಹುಡುಗಿ ಹುಡುಕೋದು ಈ ಸೀರಿಯಲ್‌ನಲ್ಲಿ ಮುಖ್ಯ ಕಥೆ ಆಗಿದೆ.

whatss

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Popular Categories