Picsart 25 10 28 23 00 17 332 scaled

EPF ಸದಸ್ಯರಿಗೆ ₹7 ಲಕ್ಷವರೆಗೆ ಲೈಫ್ ಇನ್ಸೂರೆನ್ಸ್ ಕವರೇಜ್.! ಇಡಿಎಲ್‌ಐ ಯೋಜನೆಯ ಸಂಪೂರ್ಣ ವಿವರ

Categories:
WhatsApp Group Telegram Group

ಇಂದಿನ ಕಾಲದಲ್ಲಿ ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ಉಳಿತಾಯ ಮಾಡುವುದನ್ನು ಪ್ರಮುಖವಾಗಿ ಪರಿಗಣಿಸುತ್ತಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ತಮ್ಮ ಪಿಎಫ್ ಅಕೌಂಟ್ (PF Account) ಮೂಲಕ ನಿವೃತ್ತಿಯ ನಂತರದ ಜೀವನಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಆದರೆ, ಈ ಪಿಎಫ್ ಅಕೌಂಟ್‌ನಲ್ಲಿ ಕೇವಲ ಉಳಿತಾಯವಷ್ಟೇ ಅಲ್ಲ, ಜೀವ ವಿಮೆ (Life Insurance) ಕವರೇಜ್ ಸಹ ಅಡಕವಾಗಿದೆ ಎಂಬುದು ನಿಮಗೆ ಗೊತ್ತೆ? ಪಿಎಫ್ ಅಕೌಂಟ್‌ನಲ್ಲಿ ಜೀವ ವಿಮೆ (Life Insurance) ಪ್ರಯೋಜನವನ್ನು ಪಡೆದುಕೊಳ್ಳು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಈ ರೀತಿಯ ಒಂದು ಪ್ರಯೋಜನ ಇದೆ ಎಂದು ಬಹುಮಂದಿಗೆ ತಿಳಿದಿಲ್ಲ. ಈ ಪ್ರಯೋಜನವನ್ನು ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಸ್ ಇನ್ಸೂರೆನ್ಸ್ (Employees Deposit Linked Insurance – EDLI) ಎಂಬ ಸ್ಕೀಮ್ ಮೂಲಕ ಸರ್ಕಾರ ಒದಗಿಸುತ್ತದೆ. ಈ ಯೋಜನೆಯಡಿ, ಪಿಎಫ್ ಸದಸ್ಯರ ಸಾವಿನ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ವಿಮಾ ಪರಿಹಾರ ನೀಡಲಾಗುತ್ತದೆ.

ಇಡಿಎಲ್‌ಐ (EDLI) ಸ್ಕೀಮ್ ಎಂದರೇನು?:

ಇಡಿಎಲ್‌ಐ ಎಂಬುದು EPFO (Employees’ Provident Fund Organisation) ಅಡಿಯಲ್ಲಿ ಕಾರ್ಯನಿರ್ವಹಿಸುವ ಜೀವ ವಿಮೆ ಯೋಜನೆ. ಈ ಯೋಜನೆ ಪ್ರತಿ ಪಿಎಫ್ ಸದಸ್ಯನಿಗೂ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ಅಂದರೆ, ನೀವು ಪಿಎಫ್ ಅಕೌಂಟ್ ಹೊಂದಿದ್ದರೆ, ನಿಮ್ಮ ಪರವಾಗಿ ಇಡಿಎಲ್‌ಐ ಕವರೇಜ್ ಕೂಡ ಸಕ್ರಿಯವಾಗಿರುತ್ತದೆ.
ಈ ಯೋಜನೆಯಡಿ ಉದ್ಯೋಗಿಯ ವೇತನದ 0.5% ರಷ್ಟು ಮೊತ್ತವನ್ನು ಉದ್ಯೋಗದಾತರು (Employer) ಇಡಿಎಲ್‌ಐ ಫಂಡ್‌ಗೆ ಪಾವತಿಸುತ್ತಾರೆ. ಉದ್ಯೋಗಿಯ ವೇತನದಿಂದ ಯಾವುದೇ ಹೆಚ್ಚುವರಿ ಕಡಿತ ಆಗುವುದಿಲ್ಲ.

ಎಷ್ಟು ವಿಮಾ ಮೊತ್ತ ಸಿಗುತ್ತದೆ?:

ಇಡಿಎಲ್‌ಐ ಯೋಜನೆಯಡಿ, ಪಿಎಫ್ ಸದಸ್ಯರ ಸಾವಿನ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ ಅಥವಾ ಕುಟುಂಬದವರಿಗೆ ಕನಿಷ್ಠ ₹2.5 ಲಕ್ಷದಿಂದ ಗರಿಷ್ಠ ₹7 ಲಕ್ಷ ವರೆಗೆ ವಿಮಾ ಪರಿಹಾರ ಸಿಗುತ್ತದೆ.
ಈ ಮೊತ್ತವನ್ನು ಕೆಳಗಿನ ಎರಡು ಮಾನದಂಡಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ,
ಇಪಿಎಫ್ ಸದಸ್ಯ ಮೃತಪಡುವ ಹಿಂದಿನ 12 ತಿಂಗಳ ಸರಾಸರಿ ಪಿಎಫ್ ಹಣವನ್ನು ಗಣಿಸಲಾಗುತ್ತದೆ.
ಅಥವಾ, 12 ತಿಂಗಳ ಸರಾಸರಿ ಮಾಸಿಕ ವೇತನದ 35 ಪಟ್ಟು ಹಣ ಹಾಗೂ ಸರಾಸರಿ ವೇತನದ ಅರ್ಧದಷ್ಟು (ಗರಿಷ್ಠ 1.75 ಲಕ್ಷ ರೂ) ಮೊತ್ತವನ್ನು ಗಣಿಸಲಾಗುತ್ತದೆ.
ಇದರಲ್ಲಿ ಗರಿಷ್ಠ ವೇತನವನ್ನು ₹15,000 ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹೆಚ್ಚು EPF ಸದಸ್ಯರಿಗೆ ₹7 ಲಕ್ಷ ರೂವರೆಗಿನ ಜೀವ ವಿಮೆ ಕವರೇಜ್ ಲಭ್ಯವಾಗುತ್ತದೆ.

ಈ ಸ್ಕೀಮ್‌ಗೆ ಯಾರೆಲ್ಲ ಅರ್ಹರು?:

ಇಪಿಎಫ್ ಅಕೌಂಟ್ ಸಕ್ರಿಯವಾಗಿರುವ ಪ್ರತಿಯೊಬ್ಬ ಉದ್ಯೋಗಿಯೂ ಈ ಸ್ಕೀಮ್‌ನಡಿ ಒಳಪಡುತ್ತಾರೆ.
ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ಪಿಎಫ್ ಸದಸ್ಯರು ಇಬ್ಬರೂ ಈ ಲಾಭ ಪಡೆಯಬಹುದು.
ಉದ್ಯೋಗಿಯು ಪಿಎಫ್‌ಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದರೆ, ಇಡಿಎಲ್‌ಐ ವಿಮೆ ಕವರೇಜ್ ಸಹ ಸಕ್ರಿಯವಾಗಿರುತ್ತದೆ.

ಈ ಸ್ಕೀಮ್‌ನ ಪ್ರಮುಖ ಲಾಭಗಳು ಹೀಗಿವೆ:

ಯಾವುದೇ ಪ್ರತ್ಯೇಕ ವಿಮಾ ಪಾಲಿಸಿಯ ಅಗತ್ಯವಿಲ್ಲ.
ಪಿಎಫ್ ಅಕೌಂಟ್ ಸಕ್ರಿಯವಾಗಿದ್ದರೆ ವಿಮೆ ಸ್ವಯಂಚಾಲಿತವಾಗಿ ಸಿಗುತ್ತದೆ.
ಕುಟುಂಬಕ್ಕೆ ಆರ್ಥಿಕ ಭದ್ರತೆ, ವಿಶೇಷವಾಗಿ ಅಕಾಲಿಕ ಸಾವಿನ ಸಂದರ್ಭದಲ್ಲಿ.
ಉದ್ಯೋಗದಾತರಿಂದಲೇ ಪ್ರೀಮಿಯಂ ಪಾವತಿ, ಉದ್ಯೋಗಿಯ ಮೇಲೆ ಯಾವುದೇ ಭಾರವಿಲ್ಲ.

ಒಟ್ಟಾರೆಯಾಗಿ, ಇಪಿಎಫ್ ಅಕೌಂಟ್ ಕೇವಲ ನಿವೃತ್ತಿ ಉಳಿತಾಯದ ಸಾಧನವೇ ಅಲ್ಲ, ಅದು ಜೀವ ವಿಮೆ ಕವರೇಜ್‌ನಂತಹ ಅದ್ಭುತ ಸುರಕ್ಷತೆಯನ್ನೂ ಒದಗಿಸುತ್ತದೆ. ಇಡಿಎಲ್‌ಐ ಸ್ಕೀಮ್‌ನಿಂದಾಗಿ ಸಾವಿರಾರು ಕುಟುಂಬಗಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಬಳಿಕ ಆರ್ಥಿಕ ಸಹಾಯವನ್ನು ಪಡೆದಿವೆ. ಆದ್ದರಿಂದ ನಿಮ್ಮ ಪಿಎಫ್ ಅಕೌಂಟ್ ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ  ಅದು ನಿಮ್ಮ ಕುಟುಂಬದ ಭವಿಷ್ಯವನ್ನು ಕಾಪಾಡುವ ಒಂದು ಅಮೂಲ್ಯ ಆಧಾರವಾಗುತ್ತದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories