ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ನಾವು ನಿಮಗೆ ಗೃಹಜ್ಯೋತಿ ಯೋಜನೆ(Gruhajyoti scheme)ಯಿಂದ ಫಲಾನುಭವಿಗಳಿಗೆ ಬರುತ್ತಿರುವ ಹೆಚ್ಚಿನ ಕರೆಂಟ್ ಬಿಲ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅಕ್ಟೋಬರ್ ತಿಂಗಳಿನಿಂದ ಕರೆಂಟ್ ಬಿಲ್ ಹೆಚ್ಚು ಬರುತ್ತದೆ :
ನಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿ ಉಚಿತ ವಿದ್ಯುತ್(Free current) ಗೃಹಜ್ಯೋತಿ ಯೋಜನೆ ಚಾಲನೆಯಲ್ಲಿದೆ. ಆದರೆ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ 10 ರಿಂದ 20 ರೂ ಬರುತ್ತಿದ್ದ ಬಿಲ್‌ನ ಮೊತ್ತ ಈ ಅಕ್ಟೋಬರ್ ತಿಂಗಳಿನಿಂದ ಹೆಚ್ಚು ಬರತಿರುವುದು ನೀವು ಗಮನಿಸುತ್ತಾ ಇರಬಹುದು.
ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ , ಆದರೆ ಇದೇನು ಒಮ್ಮೆಲೆ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತಿದೆ ಎಂದು ಯೋಚನೆ ಮಾಡುತ್ತಿದ್ದಿರಿ ಅಲ್ಲವೇ, ಹೌದು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಒಮ್ಮೆಲೆ ಹೊರೆ ಆಗಿರೋದು ನಿಜವೇ. ಇದಕ್ಕೆ ಕಾರಣ ಬೇಸಿಗೆಯಂತಿರುವ ವಾತಾವರಣ. ಈ ಕಾರಣದಿಂದ ಸರಾಸರಿ ಮೀರಿ ಹೆಚ್ಚು ವಿದ್ಯುತ್ ಬಳಕೆ ಮಾಡಿರುವುದರಿಂದ ವಿದ್ಯುತ್ ಬಿಲ್ ಈಗ 100 – 200 ರೂ.ಗೆ ಹೆಚ್ಚಳ ಆಗಿದೆ.
ತಾಂತ್ರಿಕ ದೋಷದಿಂದ ವಿದ್ಯುತ್ ಬಿಲ್ ಹೆಚ್ಚಾಗಿಲ್ಲ :
ಈ ವರ್ಷ ಬೇಗನೆ ಮಳೆಗಾಲ ಮುಗಿದಿದ್ದರಿಂದ ಜನರ ವಿದ್ಯುತ್ ಬಳಕೆ ಹೆಚ್ಚಾಗಿದೆ. ಹೌದು ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಬಳಕೆ ಕಡಿಮೆ ಇದ್ದೆ ಇರುತ್ತದೆ. ಅದೇ ಬೇಸಿಗೆಯಲ್ಲಿ ಹೆಚ್ಚು ಬಳಕೆ ಮಾಡಿಕೊಳ್ಳುತ್ತೇವೆ. ಆದರೆ ಕಳೆದ ವರ್ಷ ಮಳೆಗಾಲ 4-5 ತಿಂಗಳವರೆಗೆ ಇತ್ತು. ಈ ವರ್ಷ ಜುಲೈ ನಂತರ ಸರಿಯಾಗಿ ಮಳೆಯೇ ಆಗಿಲ್ಲ. ಎಲ್ಲೆಡೆ ಬೇಸಿಗೆ ಧಗೆ ಆವರಿಸಿಕೊಂಡಿದೆ. ಆದರಿಂದ ಫ್ಯಾನ್, ಎಸಿ ಬಳಕೆ ಹೆಚ್ಚಾಗಿ ಬಳಕೆ ಮಾಡುತ್ತಿರುವುದು ವಿದ್ಯುತ್ ಬಿಲ್ ಹೆಚ್ಚಲು ಇದು ಮುಖ್ಯ ಕಾರಣವಾಗುತ್ತದೆ.
ಜೊತೆಗೆ ವಿದ್ಯುತ್ ಉಚಿತ ಎನ್ನುವ ಕಾರಣಕ್ಕೆ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆಯೂ ಹೆಚ್ಚಾಗಿರಬಹುದು. ಅಥವಾ ವಿವಿಧ ಕಾರಣಗಳಿಗೆ ಈ ತಿಂಗಳ ವಿದ್ಯುತ್ ಬಿಲ್ ಹೆಚ್ಚಾಗಿರಬಹುದು. ಆದರೆ ತಾಂತ್ರಿಕ ದೋಷದಿಂದ ಬಿಲ್ ಹೆಚ್ಚಾಗಿದೆ ಎಂಬ ಯಾವುದೇ ದೋಷ ಇಲ್ಲಾ ಎಂದು ಇಲಾಖೆ ತಿಳಿಸಿದೆ.
ಅಕ್ಟೋಬರ್ 12 ರಿಂದ ಎಲ್ಲೆಡೆ ವಿದ್ಯುತ್ ಬಿಲ್ ವಿತರಣೆ ಶುರುವಾಗಿದೆ. ಕರಾವಳಿ ಭಾಗದಲ್ಲಿ ಬಹುತೇಕ ಗ್ರಾಹಕರ ವಿದ್ಯುತ್ ಬಳಕೆ ಗೃಹ ಜ್ಯೋತಿಯ ಸರಾಸರಿ ಮಿತಿಯಿಂದ ಮೀರಿದೆ. ಅದರ ಜತೆಗೆ ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 1.56 ರೂ. ವಿದ್ಯುತ್ ವೆಚ್ಚ ಮತ್ತು ಯುನಿಟ್ ಮೇಲೆ ಶೇ.9 ರಷ್ಟು ಜಿಎಸ್‌ಟಿ ಸೇರುವುದರಿಂದ ಹೆಚ್ಚುವರಿ ಯೂನಿಟ್ ವೆಚ್ ತಲಾ 9 ರೂ. ವರೆಗೆ ಆಗಿದೆ.
ಗೃಹ ಜ್ಯೋತಿ ಗ್ಯಾರಂಟಿಯಿಂದ ಶೂನ್ಯ, 10, 20, 30 ರೂ. ವಿದ್ಯುತ್ ಬಿಲ್ ಪಾವತಿಸಿದವರಿಗೆ ಈ ತಿಂಗಳು 300, 400ರೂ. ವರೆಗೆ ಹೆಚ್ಚುವರಿ ಮೊತ್ತದ ಬಿಲ್ ಬಂದಿದೆ. ಯೋಚನೆ ಮಾಡಬೇಡಿ, ಆದಷ್ಟು ಮಿತಿಯಲ್ಲಿ ವಿದ್ಯುತ್ ಬಳಸಿ ಕಡಿಮೆ ಮೊತ್ತದ ವಿದ್ಯುತ್ ಬಿಲ್ ಪಡೆಯಿರಿ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: Navaratri Festival – ನವರಾತ್ರಿಯ ಉಪವಾಸ ಮಾಡುವವರಿಗೆ ಇದು ಗೊತ್ತಿರಲೇ ಬೇಕು..! ಇಲ್ಲಿದೆ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







