Picsart 25 10 22 21 37 44 074 scaled

ಹೊಸ ಮನೆ ಕಟ್ಟಲು ರೂ.2.5 ಲಕ್ಷ ಸಹಾಯಧನ! ಕೇಂದ್ರ ಸರ್ಕಾರದ ಬಂಪರ್ ಯೋಜನೆಗೆ ಅಪ್ಲೈ ಮಾಡಿ

Categories:
WhatsApp Group Telegram Group

ಕರ್ನಾಟಕದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅನೇಕ ಬಡ ಮತ್ತು ಕೆಲವೊಂದು ಸಮುದಾಯಗಳು ಇಂದಿಗೂ ಸ್ವಂತ ಮನೆ ಎಂಬ ಕನಸನ್ನು ಸಾಕಾರಗೊಳಿಸಲು ಹೋರಾಡುತ್ತಿವೆ. ವಿಶೇಷವಾಗಿ ಚರ್ಮಕಾರ ವೃತ್ತಿಯನ್ನು ಆಧರಿಸಿ ಜೀವನ ಸಾಗಿಸುವ ಕುಶಲಕರ್ಮಿಗಳು (Leather Artisans).ಇವರಿಗೆ ವಾಸಿಸಲು ಒಂದು ಸುರಕ್ಷಿತ ಮನೆ ಮತ್ತು ತಮ್ಮ ವೃತ್ತಿಯನ್ನು ನಿರ್ವಹಿಸಲು ಒಂದು ಶೆಡ್ ಎಂಬುದು ಜೀವನದ ಮೂಲಭೂತ ಅಗತ್ಯವಾಗಿದೆ. ಇವರ ಆರ್ಥಿಕ ಸ್ಥಿತಿ ದುರ್ಬಲವಾಗಿರುವ ಕಾರಣ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಮನೆ ಅಥವಾ ಕಾರ್ಯಗಾರ ನಿರ್ಮಾಣ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ, ಕರ್ನಾಟಕ ಸರ್ಕಾರವು ಚರ್ಮಕಾರ ಕುಶಲಕರ್ಮಿಗಳ ಗೌರವಯುತ ಜೀವನ ಮತ್ತು ವೃತ್ತಿ ಭದ್ರತೆಗೆ ಡಾ. ಬಾಬು ಜಗಜೀವನ ರಾಮ್ ವಸತಿ ಮತ್ತು ಕಾರ್ಯಗಾರ ನಿರ್ಮಾಣ ಯೋಜನೆಯನ್ನು ಜಾರಿಗೆ ತಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯೋಜನೆಯ ಉದ್ದೇಶವೇನು?:

ಈ ಯೋಜನೆಯು ಕೇವಲ ವಸತಿ ನೀಡುವುದಲ್ಲ, ಅದು ಚರ್ಮಕಾರ ಕುಶಲಕರ್ಮಿಯ ಜೀವನದಲ್ಲಿ ಶಾಶ್ವತ ಬದಲಾವಣೆಯನ್ನು ತರಲು ಉದ್ದೇಶಿಸಿದೆ. ವಸತಿ ಮತ್ತು ಉದ್ಯೋಗವನ್ನು ಒಟ್ಟಿಗೆ ಒದಗಿಸುವ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಶಕ್ತೀಕರಣಕ್ಕೆ ದಾರಿ ಮಾಡಿಕೊಡುತ್ತದೆ.
ಈ ಯೋಜನೆಯು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ (RGRHCL) ಮೂಲಕ ರಾಜ್ಯದಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ಫಲಾನುಭವಿಗಳಿಗೆ ವಸತಿ ಸಹಿತ ಕಾರ್ಯಗಾರ ಶೆಡ್ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುತ್ತದೆ.

ಆರ್ಥಿಕ ನೆರವು ಎಷ್ಟು ಸಿಗುತ್ತದೆ:

ಪ್ರತಿ ಫಲಾನುಭವಿಗೆ ಒಟ್ಟು ರೂ. 2,50,000 ರ ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ.
ಅದರಲ್ಲೂ,
ಸರ್ಕಾರದ ಪಾಲು: ರೂ. 2,20,000
ಫಲಾನುಭವಿಯ ಪಾಲು: ರೂ. 30,000 ಮಾತ್ರ
ಈ ಮೊತ್ತವನ್ನು ವಸತಿ ಸಹಿತ ಕಾರ್ಯಗಾರ ಘಟಕ ನಿರ್ಮಾಣಕ್ಕೆ ಬಳಸಲಾಗುತ್ತದೆ. ಅಂದರೆ ಮನೆ ಮತ್ತು ಶೆಡ್ ಎರಡನ್ನೂ ಒಳಗೊಂಡ ಸಂಪೂರ್ಣ ಘಟಕ.

ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?:

ಜಾತಿ ಮತ್ತು ಉಪಜಾತಿ:
ಪರಿಶಿಷ್ಟ ಜಾತಿಯ ಚರ್ಮಕಾರ ಕುಶಲಕರ್ಮಿಗಳು ಮಾತ್ರ ಅರ್ಹರು. ಇದರೊಳಗೆ ಈ ಉಪಜಾತಿಗಳು ಸೇರಿವೆ, ಅರುಂಧತಿಯಾರ್, ಚಮ್ಮಡಿಯ, ಚಮಾರ್, ಚಂಬಾರ್, ಚಮಗಾರ್, ಮಾದಾರ್, ಮಾದಿಗ, ಜಾಂಬವಲು, ಹರಳಯ್ಯ, ಮೋಚಿಗಾರ್, ಮುಚಿ, ತೆಲುಗು ಮೋಚಿ, ಧೋರ್, ಕಕ್ಕಯ್ಯ, ಸಮಗಾರ, ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ.

ವಯಸ್ಸು:
ಕನಿಷ್ಠ 18 ವರ್ಷ.

ಆದಾಯ ಮಿತಿ:
ಗ್ರಾಮೀಣ ಪ್ರದೇಶ – ರೂ. 32,000 ಕ್ಕಿಂತ ಕಡಿಮೆ.
ನಗರ ಪ್ರದೇಶ – ರೂ. 87,600 ಕ್ಕಿಂತ ಕಡಿಮೆ.

ನಿವೇಶನ / ಮನೆ:
ಅರ್ಜಿದಾರರ ಹೆಸರಿನಲ್ಲಿ ನಿವೇಶನ ಅಥವಾ ಹಳೆಯ ಮನೆ ಇರಬೇಕು.

ಇತರೆ ಯೋಜನೆಗಳು:
ನಿಗಮದ ಇತರೆ ವಸತಿ ಯೋಜನೆಗಳ ಲಾಭ ಪಡೆದಿರಬಾರದು.

ಸರ್ಕಾರಿ ಉದ್ಯೋಗ:
ಕುಟುಂಬದ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರರಾಗಿರಬಾರದು.

ವಿಶೇಷ ಮೀಸಲಾತಿ:

ಮಹಿಳಾ ಕುಶಲಕರ್ಮಿಗಳಿಗೆ ಶೇ. 33% ಮೀಸಲಾತಿ ಇರುತ್ತದೆ.
ಈ ಮೂಲಕ ಮಹಿಳೆಯರ ವೃತ್ತಿ ಸ್ವಾವಲಂಬನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.

ಲಿಡ್ಕರ್ ಕಾಲೋನಿಗಳ ಅಭಿವೃದ್ಧಿ ಕಾರ್ಯಗಳು:
ಈ ಯೋಜನೆಯು ಕೇವಲ ವೈಯಕ್ತಿಕ ಮನೆಗಳ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ. Leather Industries Development Corporation of Karnataka (LIDKAR) ಕಾಲೋನಿಗಳ ಸಮಗ್ರ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಿದೆ. ಇದರಡಿ ಕೆಳಗೆ ನೀಡಲಾಗಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ,
ಕಾಂಕ್ರೀಟ್ ರಸ್ತೆ ಮತ್ತು ಚರಂಡಿಗಳು.
ಬೀದಿ ದೀಪಗಳು.
ಕುಡಿಯುವ ನೀರಿನ ವ್ಯವಸ್ಥೆ.
ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಚರ್ಮಶಿಲ್ಪಿ ಭವನ ನಿರ್ಮಾಣ.
ಸಾರ್ವಜನಿಕ ಶೌಚಾಲಯ ಸೌಲಭ್ಯಗಳು.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?:

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್ ಆಗಿದ್ದು,  ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಗೆ https://sevasindhu.karnataka.gov.in/Sevasindhu/Kannada?ReturnUrl=%2F ಭೇಟಿ ನೀಡಿ.

Departments and Services, Social Welfare Department ಆಯ್ಕೆಮಾಡಿ.
Dr. Babu Jagjivan Ram Housing and Workshop Scheme ಆಯ್ಕೆ ಮಾಡಿ.
Apply Online ಕ್ಲಿಕ್ ಮಾಡಿ, OTP ಮೂಲಕ ಲಾಗಿನ್ ಆಗಿ.
ವೈಯಕ್ತಿಕ, ಬ್ಯಾಂಕ್ ಮತ್ತು ವಿಳಾಸದ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.
ಅರ್ಜಿಯ ನಂತರ ನಿಮಗೆ Application Number ಸಿಗುತ್ತದೆ, ಇದರ ಮೂಲಕ ಸ್ಥಿತಿ ಪರಿಶೀಲಿಸಬಹುದು.

ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು?:

ಆಧಾರ್ ಕಾರ್ಡ್
ಜಾತಿ ಪ್ರಮಾಣಪತ್ರ (RD ಸಂಖ್ಯೆಯೊಂದಿಗೆ)
ವಾರ್ಷಿಕ ಆದಾಯ ಪ್ರಮಾಣಪತ್ರ
ಪಡಿತರ ಚೀಟಿ
ಇ-ಶ್ರಮ್ ಕಾರ್ಡ್
ನಿವೇಶನ / ಖಾತಾ ಪ್ರಮಾಣಪತ್ರ
ಕೌಶಲ್ಯ ಪರೀಕ್ಷಾ ಪ್ರಮಾಣಪತ್ರ
ಅರ್ಜಿದಾರ ಮತ್ತು ಸಂಗಾತಿಯ ಫೋಟೋಗಳು

ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಯಾವರೀತಿಯಿರುತ್ತದೆ:

ಜಿಲ್ಲಾ ಸಮನ್ವಯಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸುತ್ತಾರೆ.
ಪ್ರಾಥಮಿಕ ಪಟ್ಟಿಯನ್ನು ಸ್ಥಳೀಯ ಶಾಸಕರಿಗೆ ಶಿಫಾರಸ್ಸಿಗೆ ಕಳುಹಿಸಲಾಗುತ್ತದೆ.
ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಅಂತಿಮ ಪಟ್ಟಿಯನ್ನು ತಯಾರಿಸುತ್ತದೆ.
ಪ್ರಧಾನ ಕಛೇರಿಯಿಂದ ಅನುಮೋದನೆ ಸಿಕ್ಕ ನಂತರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಈ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಪ್ರಭಾವವಿಲ್ಲದೆ ನಡೆಯುತ್ತದೆ.

ಒಟ್ಟಾರೆಯಾಗಿ, ಡಾ. ಬಾಬು ಜಗಜೀವನ ರಾಮ್ ವಸತಿ ಮತ್ತು ಕಾರ್ಯಗಾರ ನಿರ್ಮಾಣ ಯೋಜನೆಯು ಕೇವಲ ಮನೆ ನೀಡುವ ಯೋಜನೆಯಲ್ಲ, ಇದು ಬಡ ಚರ್ಮಕಾರರ ಜೀವನದ ಗೌರವ ಮತ್ತು ಆರ್ಥಿಕ ಸ್ವಾವಲಂಬನೆಯ ಹಾದಿ.
ಈ ಯೋಜನೆಯ ಮೂಲಕ ಸರ್ಕಾರವು ಮನೆ + ಉದ್ಯೋಗ ಒದಗಿಸಿಕೊಡುತ್ತದೆ.

WhatsApp Image 2025 09 05 at 10.22.29 AM 1 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories