ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season -10) ಅಕ್ಟೋಬರ್ 8 ರಂದು ಪ್ರಾರಂಭವಾಗಿದ್ದು. ಈ ಬಾರಿ ಬಿಗ್ ಬಾಸ್ ಮನೆಗೆ ಎಲ್ಲಾ ಹೊಸ ಸ್ಪರ್ಧಿಗಳೇ ಒಂದೇ ಸಲ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಈ ಬಾರಿಯ ರಿಯಾಲಿಟಿ ಶೋ ಸೀಸನ್ 10 ಆಗಿರುವುದರಿಂದ ಸ್ವಲ್ಪ ವಿಭಿನ್ನತೆ ಮತ್ತು ವಿಶೇಷತೆಯನ್ನು ಹೊಂದಿದೆ. ಬಿಗ್‌ಬಾಸ್ ಸೀಸನ್ 10 ರ ಮೊದಲ ವೀಕೆಂಡ್ ಎಪಿಸೋಡ್ ಕಿಚ್ಚನ ಜೊತೆ ಮುಖಾಮುಖಿಯಲ್ಲಿ ನಡೆದಿದೆ. ಮೊದಲಿನಿಂದಲೂ ಸೈಲೆಂಟ್ ಆಗಿದ್ದ ಡ್ರೋನ್ ಪ್ರತಾಪ್ ಅವರಿಗೆ ಸುದೀಪ್ ಅವರ ಜೊತೆ ಮಾತನಾಡಿದ ನಂತರ ಸ್ವಲ್ಪ ಹುರುಪು ಬಂದಿದೆ ಅಂತಾನೇ ಹೇಳಬಹುದು. ಈ ಎಪಿಸೋಡ್ ನಲ್ಲಿ ಏನಿಲ್ಲಾ ಮಾತಿನ ಚಕಮಕಿ ನೆಡೆದಿದೆ ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಈ ಸಲದ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಒಂದೇ ಸಲ ಎಂಟ್ರಿ ಕೊಟ್ಟಿದ್ದರು, ಇದರಲ್ಲಿ ಡ್ರೋನ್ ಪ್ರತಾಪ್ ಸಹ ಒಬ್ಬರು. ಆದ್ರೆ ಡ್ರೋನ್ ಪ್ರತಾಪ್ ಬಿಗ್ ಬಾಸ್ ಆರಂಭದ ದಿನವೇ ವೈಟಿಂಗ್ ಲೀಸ್ಟ್ ನಲ್ಲಿದ್ದು, ಅದಾದ ನಂತರ, ಅಸಮರ್ಥರೆಂದು ಹೇಳಿಕೊಂಡು ಮನೆಯೊಳಗೆ ಕಾಲಿಟ್ಟಿದ್ದರು.
ತುಕಾಲಿ ಸಂತೋಷ್ಗೆ ಕಿಚ್ಚನ ಕ್ಲಾಸ್ :
ಬಿಗ್‌ಬಾಸ್ ಸೀಸನ್ 10 ರ ಮೊದಲ ವೀಕೆಂಡ್ ಎಪಿಸೋಡ್ ಕಿಚ್ಚನ ಜೊತೆ ಮುಖಾಮುಖಿಯಲ್ಲಿ ನಡೆದಿದೆ. ಈ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಎಲ್ಲರಿಗೂ ಹೇಳಿದರು. ಅದಲ್ಲದೆ ಎಲ್ಲ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿ ಮಾಡಿದ ತಪ್ಪುಗಳನ್ನು ಹಾಗೂ ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸಗಳನ್ನು ವಿವರವಾಗಿ ಎಲ್ಲರಿಗೂ ತಿಳಿಸಿದರು. ಮತ್ತು ಬಿಗ್ ಬಾಸ್ ನ ರೂಲ್ಸ್ ಬಗ್ಗೆ ತಿಳಿಸಿ ಎಚ್ಚರ ವಹಿಸಿದರು. ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ನಡೆದ ಮಾತುಕಥೆಗಳ ಬಗ್ಗೆ ಮಾತನಾಡುತ್ತಾ, ಒಬ್ಬರನ್ನು ಅಳಿಸಿ ತಾವು ನಗೋದು ಕಾಮಿಡಿ ಅನಿಸುತ್ತಾ? ಎಂದು ತುಕಾಲಿ ಸಂತೋಷ್ ಅವರಿಗೆ ಸುದೀಪ್ ಕ್ಲಾಸ್ ತೆಗದುಕೊಂಡರು.
ಡ್ರೋನ್ ಪ್ರತಾಪನಿಗೆ ಎಲ್ಲರ ಸಾಥ್ :
ದೊಡ್ಮನೆಯಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಮೊದಲ ದಿನದಿಂದಲೂ ತುಕಾಲಿ ಸಂತೋಷ್ ಅವರು ಪ್ರತಾಪ್ ಅವರಿಗೆ ಟೀಕಿಸುತ್ತಲೇ ಇದ್ದರು. ಕೇವಲ ತುಕಾಲಿ ಸಂತೋಷ್ ಮಾತ್ರವಲ್ಲದೆ ಸ್ನೇಹಿತ್, ವಿನಯ್, ಹಳ್ಳಿಕಾರ್ ಸಂತೋಶ್, ವಿನಯ್, ಭಾಗ್ಯಶ್ರೀ ಇನ್ನೂ ಹಲವರು ಡ್ರೋನ್ ಪ್ರತಾಪ್ ಅವರನ್ನು ಆಡಿಕೊಳ್ಳುವುದು, ಟೀಕೆ ಮಾಡುತ್ತಾ ಡ್ರೋನ್ ಪ್ರತಾಪ್ ವಿರುದ್ಧ ಜಗಳ ಮಾಡುತ್ತಿದ್ದರು.
ಇದನ್ನೇಲ್ಲವನ್ನೂ ಗಮನಿಸಿದ್ದ ಬಿಗ್‌ಬಾಸ್ ಕಿಚ್ಚ ಸುದೀಪ್ ವಿಕೇಂಡ್ ನ ಮುಖಾಮುಖಿ ಶೋ ನಲ್ಲಿ ಇದಕ್ಕೆಲ ಬ್ರೇಕ್ ಹಾಕಿದ್ದಾರೆ. ಈ ಶೋನಲ್ಲಿ ಮನೆಯಲ್ಲಿ ಇದ್ದ ಎಲ್ಲ ಸ್ಪರ್ಧಿಗಳಿಗೆ ನೀತಿ ಪಾಠ ಹೇಳಿದ್ದಾರೆ. ಅಷ್ಟೇ ಅಲ್ಲದೆ ಡ್ರೋನ್ ಪ್ರತಾಪ್ ಮುಖದಲ್ಲಿ ನಗುವರಳಿಸಿದ್ದಾರೆ. ಇದನ್ನ ವೀಕ್ಷಿಸಿದ ಪ್ರೇಕ್ಷಕರು ಡ್ರೋನ್ ಪ್ರತಾಪ್ ರವರರಿಗೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಪೋಸ್ಟ್ ಗಳು ಮತ್ತು ಕಾಮೆಂಟ್ ಗಳ ಮೂಲಕ ಬೆಂಬಲ ಸೂಚಿಸಿದ್ದಾರೆ.
ಅಷ್ಟೇ ಅಲ್ಲದೇ ಇನ್ನೂ ಕೆಲವರು ಪ್ರತಾಪ್ ರವರಿಗೆ ಬೆಂಬಲ ನೀಡುವುದರ ಮೂಲಕ ನಿಮ್ಮ ಜೊತೆ ನಾವಿದ್ದಿವಿ ನೀವು ಧೈರ್ಯದಿಂದ ಆಟವಾಡಿ ಅಂತ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಮುಂದಿನ ಸಲ ಪ್ರತಾಪ್ ಅವರ ವಿಷಯದಲ್ಲಿ ಓಟಿಂಗ್ ವಿಚಾರ ಬಂದಾಗ ಅವರು ಗೆಲ್ಲೋದು ಪಕ್ಕಾ ಎಂದು ಹೇಳಬಹುದಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಮನೆಯಿಂದ ಹೊರ ಬಂದ ಶ್ಯಾಮ್ :
ಬಿಗ್ ಬಾಸ್ ಮನೆಯಿಂದ ಇಂದು ಸ್ನೇಕ್ ಶ್ಯಾಮ್ ಅವರು ಹೊರ ನಡೆದಿದ್ದಾರೆ. ಮನೆಯ ಅನೇಕ ಮಂದಿ ಶಾಮ್ ಅವರನ್ನು ಕಾಲಿಡಬ್ಬ ಎಂದು ವೋಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪ್ರೇಕ್ಷಕರ ಕಡೆಯಿಂದನೂ ಕೂಡ ಅಷ್ಟೇನೂ ಅವರಿಗೆ ವೋಟುಗಳು ಬಂದಿಲ್ಲ. ಹಾಗಾಗಿ ಎಲ್ಲರ ನಿರ್ಣಯಗಳ ಪ್ರಕಾರ ಶಾನ್ ಅವರು ಹೊರ ನಡೆದಿದ್ದಾರೆ. ಸಿರಿ ಹಾಗೂ ಮೈಕಲ್ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ.
ಇದನ್ನೂ ಓದಿ: BSNL Offers : ಕೇವಲ 99 ರೂ.ಗೆ ಹೊಸ ಭರ್ಜರಿ ಆಫರ್ ಘೋಷಣೆ ಮಾಡಿದ BSNL
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







