ದೊಡ್ಡಮನೆಯಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಅಂದರೆ, ಮುನಿಸು, ಕಿತ್ತಾಟಗಳ ನಡುವೆ ಟಾಸ್ಕ್‌ಗಳೂ ನಡೆಯುತ್ತಿವೆ. ಸಮರ್ಥರು, ಅಸಮರ್ಥರಲ್ಲಿನ ಭಿನ್ನಾಭಿಪ್ರಾಯಗಳೂ, ಊಟದ ವಿಚಾರಕ್ಕೂ ಮಾತು, ಕ್ಲಿನಿಂಗ್ ವಿಚಾರಕ್ಕೂ ಮಾತುಗಳನ್ನಾಡುತ್ತಿದ್ದ ಈ ದೊಡ್ಡ ಮನೆಗೆ ಅದರಲ್ಲೂ ನಾಯಕನಿಲ್ಲದ ಮನೆಗೆ ಟಾಸ್ಕ್ ಗೆದ್ದು ಸ್ನೇಹಿತ್, ಸೀಸನ್ 10ರ ಮೊದಲ ನಾಯಕನಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲಿಯೇ ಇದೇ ಮನೆಗೆ ಲಾರ್ಡ್ ಆಗಮನವಾಗಿದೆ! ಈ ವೇಳೆ ರಕ್ಷಕ್ ಬುಲೆಟ್‌ಗೆ ಪ್ರಥಮ್ ಹಿತವಚನಮಾಡಿದ್ದಾರೆ. ರಕ್ಷಕ್ ಬುಲೆಟ್ ಬಂದ ಉದ್ದೇಶವೇನು ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಬಿಗ್ ಬಾಸ್ ಕನ್ನಡ ಸೀಸನ್ 10(BigBoss kannada season 10) ರಲ್ಲಿ ಮೊದಲ ಅತಿಥಿಯಾಗಿ ಪ್ರದೀಪ್ ಈಶ್ವರ್ ಬಂದಿದ್ದುರು. ಇದೀಗ ಎರೆಡನೇ ಅತಿಥಿಯಾಗಿ ಪ್ರಥಮ್ ಆಗಮಿಸಿದ್ದಾರೆ. ಮುಂಚಿನಹಾಗೆಯೇ ತಮ್ಮ ವಿಶಿಷ್ಟ ಮಾತುಗಾರಿಕೆಯಿಂದಲೇ ಎಲ್ಲರ ಗಮನ ಸೆಳೆದ ಪ್ರಥಮ್, ಕೆಲ ಗಂಟೆಗಳ ಕಾಲ ಹೊಸ ಮನೆಯ ಜತೆಗೆ ಹೊಸ ಸ್ಪರ್ಧಿಗಳ ಜತೆಗೂ ಸಮಯ ಕಳೆದರು.
ವೀಕ್ಷಕರ ಧ್ವನಿಯಾಗಿ ಬಂದ ಪ್ರಥಮ್ ಮಾಡಿದ್ದೇನು?
ಪ್ರಥಮ್ ನಿನ್ನೆ ಬಿಗ್ ಬಾಸ್ ಮನೆಗೆ ಬಂದ ಉದ್ದೇಶ:
ವೀಕ್ಷಕರ ಧ್ವನಿಯಾಗಿ ಬಂದಿದ್ದು
ಸ್ಪರ್ಧಿಗಳ ಬಗ್ಗೆ ತಮಗಿದ್ದ ಅಭಿಪ್ರಾಯ ತಿಳಿಸಲು
ಈ ವೇಳೆ ಪ್ರತಿಯೊಬ್ಬರಿಗೂ ಪ್ರಥಮ್ ಕ್ಲಾಸ್ ತೆಗೆದುಕೊಳ್ಳುವ ಜೊತೆಗೆ ಕೆಲವರನ್ನು ಹೊಗಳಿದರು. ಮತ್ತೆ ಕೆಲವರಿಗೆ ಅವರ ಸಾಮರ್ಥ್ಯದ ಬಗ್ಗೆ ನೆನಪಿಸಿದರು. ಎಲ್ಲ ಸ್ಪರ್ಧಿಗಳಿಗೂ ಅವರವರ ವೀಕ್ನೆಸ್, ಪಾಸಿಟಿವ್ ಅಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಹೀಗೆ ಪ್ರತಿಯೊಬ್ಬರಿಗೂ, ಅವರು ನೆಡುದುಕೊಳ್ಳವ ರೀತಿ, ಹೇಗೆ ಇರಬೇಕು, ನೀವು ಬಂದ ಉದ್ದೇಶ ಏನು,ನಿಮ್ಮಲ್ಲಿರುವ ಯಾವ ಸಾಮರ್ಥ್ಯದಿಂದ ಈ ಮನೆಗೆ ಕಾಲಿಡುವ ಅವಕಾಶ ಸಿಕ್ಕಿದೆ ಎನ್ನುವ ಬಗ್ಗೆ ಪ್ರತಿಯೊಬ್ಬರನ್ನೂ ಮಾತನಾಡಿಸಿದ ಲಾರ್ಡ್ ಪ್ರಥಮ್ ರಕ್ಷಕ್ ಬುಲೆಟ್ ಬಗ್ಗೆ ಹೇಳಿದ್ದೇನು ನೋಡಣ ಬನ್ನಿ.
– ಅರ್ಹ ವ್ಯಕ್ತಿ ಎಂದು ಈಶಾನಿಗೆ ಚಪ್ಪಾಳೆಯನ್ನೂ ಹೊಡೆಸಿದ್ದಾರೆ.
– ನಿರೂಪಕ ಗೌರೀಶ್ ಅಕ್ಕಿ ಅವರನ್ನೂ ಕರೆಸಿ ನೀವು ಮಾತನಾಡಬೇಕು, ಆದರೆ, ಈ ಮನೆಯಲ್ಲಿ ನಿಮ್ಮ ಧ್ವನಿಯೇ ಅಡಗಿದೆ.
ಪ್ರಥಮ್ ಮುಂದೆ ಮನೆಗೆ ಬಂದ ಉದ್ದೇಶವನ್ನು ಬಾಯಿಬಿಟ್ಟ ರಕ್ಷಕ್ :
ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ಅವರವರ ಮೈನಸ್ ಪಾಯಿಂಟ್‌ಗಳನ್ನು ತಿಳಿಸುತ್ತಿದ್ದ ಪ್ರಥಮ್ ರಕ್ಷಕ್ ಬುಲೆಟ್ ಅವರಿಗೆ ಹೇಳಿದ್ದೇನು? ನೋಡೋಣ ಬನ್ನಿ,
ರಕ್ಷಕ್ ಬುಲೆಟ್‌ಗೆ ಪ್ರಥಮ್ ಹಿತವಚನ ಮಾಡಿದರು. ರಕ್ಷಕ್ ಇಲ್ಲಿಯವರೆಗೆ ಎಷ್ಟಾಯಿತು ಎಂದು ಪ್ರಥಮ್ ಕೇಳಿದ್ದಾರೆ. ಅದಕ್ಕೆ ರಕ್ಷಕ್ ಅಂದ್ರೆ? ಎಂದು ಉತ್ತರಿಸಿದ್ದಾರೆ. ಪ್ರಥಮ್ – ಮಾಸ್ ಡೈಲಾಗ್ ಎಷ್ಟಾಯಿತು? ಮತ್ತು ಎನರ್ಜಿ?
ರಕ್ಷಕ್ – ಇನ್ನೂ ಇಲ್ಲ.
ಪ್ರಥಮ್ – ಮಾಸ್ ಡೈಲಾಗ್ ಹೊಡೀತಾಯಿರಬೇಕು. ಅದೇ ನಿಮ್ಮ ಎನರ್ಜಿ. ಬುಲೆಟ್ ಫೈಯರ್ ಆಗ್ತಿದ್ರೇನೇ ಗನ್‌ಗೆ ಬೆಲೆ. ಸುಮ್ಮನೆ ಕೂತುಬಿಟ್ಟರೆ ಯಾವುದೇ ಗನ್ ಆದರೂ ತುಕ್ಕು ಹಿಡಿಯುತ್ತೆ.
ಈ ರೀತಿ ರಕ್ಷಕ್ ಬುಲೆಟ್ ಅವರಿಗೆ ಮಾಸ್ ಡೈಲಾಗ್ ಬಗ್ಗೆ ಹೇಳಿದ ನಂತರ, ಮಾಸ್ ಡೈಲಾಗ್ ಗಳಿಂದಲೇ ಫೇಮಸ್ ಆಗಿರುವ ರಕ್ಷಕ್ ಬಿಗ್ ಬಾಸ್ ಮನೆಯಲ್ಲಿಯೂ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಈ ವೇಳೆ ಪ್ರಥಮ್ ಅವರ ಎದುರು ಬಹದ್ದೂರ್ ಡೈಲಾಗ್ ಹೊಡೆದಿದ್ದಾರೆ. ನಂತರ ಪತ್ರಕರ್ತ ಗೌರೀಶ್ ಅಕ್ಕಿ ಅವರನ್ನು ಕರೆದ ಪ್ರಥಮ್, ಇವರ ಎದುರು ಡೈಲಾಗ್ ಹೇಳಿ ಎಂದಿದ್ದಾರೆ. ಆಗ ನೀವು ಸುದ್ದಿ ಆಗ್ಬಿಡ್ತೀರಾ ಎಂದು ಹೇಳಿದ್ದಕ್ಕೆ ರಕ್ಷಕ್ ನಾನು ಸುದ್ದಿ ಆಗ್ಬೇಕು ಅಂತಾನೆ ಬಿಗ್ ಬಾಸ್ ಮನೆಗೆ ಬಂದಿದ್ದು ಎಂದು ಹೇಳಿದ್ದಾರೆ.
ಮೊದಲವಾರ ಸಾಮನ್ಯರಂತೆ ಇದ್ದ ರಕ್ಷಕ್ ಮುಂದಿನದಿನಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಾರ! ತಮ್ಮ ಅಭಿಮಾನಿಗಳನ್ನ ಖುಷಿ ಪಡಿಸುತ್ತಾರ? ಕಾದು ನೋಡಬೇಕಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ