Picsart 25 10 18 22 32 16 872 scaled

ರಾಜ್ಯಾದ್ಯಂತ 1200 ಚದರ ಅಡಿ ಮನೆಗಳಿಗೆ OC ವಿನಾಯಿತಿ: ಸಣ್ಣ ಮನೆ ಮಾಲೀಕರಿಗೆ ಸರ್ಕಾರದಿಂದ ದೊಡ್ಡ ಶಿಫಾರಸು 

Categories:
WhatsApp Group Telegram Group

ಮನೆ ನಿರ್ಮಾಣದ ನಂತರ ವಿದ್ಯುತ್‌, ನೀರು, ಒಳಚರಂಡಿ ಮುಂತಾದ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಕಟ್ಟಡ ಮಾಲೀಕರು ಎದುರಿಸಬೇಕಾಗಿದ್ದ ಪ್ರಮುಖ ಅಡೆತಡೆಗಳಲ್ಲಿ ಒಂದಾಗಿರುವುದು ಆಕ್ಯುಪೆನ್ಸಿ ಸರ್ಟಿಫಿಕೇಟ್‌ (OC) ಪಡೆಯುವುದು. ಈ ಪ್ರಮಾಣಪತ್ರವನ್ನು ಪಡೆಯುವ ಪ್ರಕ್ರಿಯೆ ಸಾಕಷ್ಟು ಸಮಯ ತಿನ್ನುವಂತದ್ದಾಗಿದ್ದು, ಅನೇಕ ಸಣ್ಣ ಮನೆ ನಿರ್ಮಾಣದ ಮಾಲೀಕರಿಗೆ ಕಾನೂನು-ತಾಂತ್ರಿಕ ಅಡೆತಡೆಗಳನ್ನು ಉಂಟುಮಾಡುತ್ತಿತ್ತು. ಇದೀಗ, ಈ ಸಮಸ್ಯೆಗೆ ಸರ್ಕಾರದಿಂದ ದೊಡ್ಡ ಪರಿಹಾರ ಸಿಕ್ಕಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ರಾಜ್ಯ ಸರ್ಕಾರವು ಬೆಂಗಳೂರು ನಗರದಲ್ಲಿ ಈಗಾಗಲೇ ಜಾರಿಗೆ ಬಂದಿದ್ದ 1200 ಚದರ ಅಡಿ ವಿಸ್ತೀರ್ಣದ ಮನೆಗಳಿಗೆ OC ವಿನಾಯಿತಿ ನೀತಿಯನ್ನು ರಾಜ್ಯದ ಇತರೆ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಗೂ ವಿಸ್ತರಿಸಲು ನಿರ್ಧರಿಸಿದೆ. ಈ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಯಾವ ಮನೆಗಳಿಗೆ ಅನ್ವಯ?:

ವಿಸ್ತೀರ್ಣ: 1,200 ಚದರ ಅಡಿ (ಸುಮಾರು 30×40 ಅಡಿ ಗಾತ್ರದ ನಿವೇಶನ) ವರೆಗಿನ ಮನೆಗಳು.
ಕಟ್ಟಡದ ಸ್ವರೂಪ:
ನೆಲಮಹಡಿ + 2 ಅಂತಸ್ತುಗಳು
ಸ್ಟಿಲ್ಟ್ (parking) + 3 ಅಂತಸ್ತಿನ ವಸತಿ ಕಟ್ಟಡಗಳು
ನಕ್ಷೆ ಮಂಜೂರಾತಿ ಇಲ್ಲದ ಮನೆಗಳು:
ನಿವೇಶನಗಳಲ್ಲಿ ನಕ್ಷೆ ಅನುಮೋದನೆ ಪಡೆಯದೇ ನಿರ್ಮಿಸಿರುವ ಮನೆಗಳಿಗೆಲೂ ವಿನಾಯಿತಿ ಅನ್ವಯಿಸುತ್ತದೆ.

ನಿರ್ಧಾರದ ಹಿಂದಿನ ಕಾರಣವೇನು?:

ಇತ್ತೀಚೆಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇದೇ ರೀತಿಯ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ, ನಿರ್ದಿಷ್ಟ ಗಾತ್ರದ ಮನೆಗಳಿಗೆ ನಕ್ಷೆ ಮಂಜೂರಾತಿ ಇಲ್ಲದಿದ್ದರೂ ಸ್ವಾಧೀನಾನುಭವ ಪತ್ರದ (OC) ಅಗತ್ಯವಿಲ್ಲದೆ ವಿದ್ಯುತ್‌, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದೀಗ, ಈ ನೀತಿಯನ್ನು ರಾಜ್ಯದ ಇತರೆ ನಗರ ಪ್ರದೇಶಗಳಿಗೂ ವಿಸ್ತರಿಸುವ ಮೂಲಕ ಸರ್ಕಾರವು ಸಾವಿರಾರು ಸಣ್ಣಮಟ್ಟದ ಮನೆ ಮಾಲೀಕರಿಗೆ ದೊಡ್ಡ ಮಟ್ಟದ ಸಹಾಯ ಮಾಡಿದೆ.

ಇನ್ನು, ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದ ಹಿನ್ನೆಲೆಯಲ್ಲಿ, ಸಚಿವ ಸಂಪುಟವು ಈ ವಿನಾಯಿತಿಯನ್ನು ಜಾರಿಗೆ ತರಲು ನಿರ್ಧಾರ ಕೈಗೊಂಡಿದೆ. ಅನುಷ್ಠಾನ ಹಂತದಲ್ಲಿ ಅಥವಾ ಸರ್ಕಾರಿ ಆದೇಶ ಹೊರಡಿಸುವ ವೇಳೆಯಲ್ಲಿ ನಕ್ಷೆ ಮಂಜೂರಾತಿ ಇಲ್ಲದ ಕೆಲವು ನಿರ್ದಿಷ್ಟ ಕಟ್ಟಡಗಳಿಗೂ ವಿನಾಯಿತಿ ನೀಡುವ ಕ್ರಮ ಕೈಗೊಳ್ಳಬಹುದೆಂಬ ಅಭಿಪ್ರಾಯ ಸಂಪುಟದಲ್ಲಿ ವ್ಯಕ್ತವಾಯಿತು. ಅದರಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಒಟ್ಟಾರೆಯಾಗಿ, ಈ ನಿರ್ಧಾರದಿಂದ ರಾಜ್ಯದ ವಿವಿಧ ನಗರ ಪ್ರದೇಶಗಳಲ್ಲಿ ಸಣ್ಣ ನಿವೇಶನಗಳಲ್ಲಿ ಮನೆ ನಿರ್ಮಿಸಿರುವ ಸಾವಿರಾರು ಕುಟುಂಬಗಳು ನೇರ ಪ್ರಯೋಜನ ಪಡೆಯಲಿವೆ. ವಿದ್ಯುತ್‌, ನೀರು ಮತ್ತು ಇತರೆ ನಾಗರಿಕ ಸೌಲಭ್ಯಗಳ ಸಂಪರ್ಕ ಪಡೆಯುವ ಪ್ರಕ್ರಿಯೆ ಸರಳಗೊಳ್ಳಲಿದ್ದು, ಕಾನೂನುಬದ್ಧ ಅಡೆತಡೆಗಳಿಲ್ಲದೆ ತಮ್ಮ ಮನೆಗಳಲ್ಲೇ ನೆಲೆಸಲು ಮನೆಮಾಲೀಕರಿಗೆ ಸಾಧ್ಯವಾಗಲಿದೆ.

This image has an empty alt attribute; its file name is WhatsApp-Image-2025-09-05-at-11.51.16-AM-12-1024x330.jpeg

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories