WhatsApp Image 2025 10 15 at 10.13.01 AM

BREAKING NEWS: ಜಾತಿ ಗಣತಿಯ ಮಾಹಿತಿ ನೀಡದವರಿಗೆ ಹೊಸ ರೂಲ್ಸ್ ಜಾರಿ.?

WhatsApp Group Telegram Group

ರಾಜ್ಯ ಸರ್ಕಾರ ಕೈಗೊಂಡಿರುವ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಪ್ರಕ್ರಿಯೆಯಲ್ಲಿ ಕೆಲವು ನಾಗರಿಕರು ಭಾಗವಹಿಸಿಲ್ಲ. ಇಂತಹವರಿಗೆ ಶೀಘ್ರದಲ್ಲೇ ಒಂದು ಹೊಸ ಕಡ್ಡಾಯ ನಿಯಮವನ್ನು ಸರ್ಕಾರ ಜಾರಿಗೆ ತರಲು ಚಿಂತಿಸುತ್ತಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಾತಿ ಗಣತಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಎಂದು ಹಿಂದೆ ಹೈಕೋರ್ಟ್ ಆದೇಶ ನೀಡಿತ್ತು. ಇದರ ಅನ್ವಯ, ಕೆಲವರು ತಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲು ಇಚ್ಛಿಸದೆ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.

ಆದರೆ, ಸಮೀಕ್ಷೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿಯುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಹಿಂದುಳಿದ ವರ್ಗಗಳ ಆಯೋಗವು ಈಗ ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದೆ. ಇನ್ನು ಮುಂದೆ, ಗಣತಿಯಲ್ಲಿ ಮಾಹಿತಿ ನೀಡಲು ನಿರಾಕರಿಸುವವರಿಗೆ ‘ದೃಢೀಕರಣ ಪತ್ರ’ವನ್ನು ಕಡ್ಡಾಯಗೊಳಿಸಲು ಆಯೋಗ ನಿರ್ಧರಿಸಿದೆ.

ಹೀಗಾಗಿ, ಸಮೀಕ್ಷೆಗೆ ಮಾಹಿತಿ ನೀಡಲು ಇಷ್ಟಪಡದವರು, ಅದಕ್ಕೆ ಸಂಬಂಧಿಸಿದ ಒಂದು ‘ಮುಚ್ಚಳಿಕೆ ಪತ್ರ’ (Undertaking) ಬರೆದು ಸಹಿ ಹಾಕುವುದು ಕಡ್ಡಾಯವಾಗುವ ಸಾಧ್ಯತೆ ಇದೆ.

ಸಮೀಕ್ಷೆಯಲ್ಲಿ ಭಾಗವಹಿಸದವರ ಸಂಖ್ಯೆ ಹೆಚ್ಚಾದರೆ, ಈ ಸಂಪೂರ್ಣ ಗಣತಿ ಅಪೂರ್ಣವಾಗಿದೆ ಅಥವಾ ವಿಫಲವಾಗಿದೆ ಎಂದು ಬಿಂಬಿತವಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ, ಎಲ್ಲರೂ ಸಮೀಕ್ಷೆಯ ವ್ಯಾಪ್ತಿಗೆ ಬಂದಿದ್ದಾರೆ ಅಥವಾ ಏಕೆ ಭಾಗವಹಿಸಲಿಲ್ಲ ಎಂಬುದಕ್ಕೆ ದೃಢೀಕರಣ ದೊರೆಯಲು ಈ ಮುಚ್ಚಳಿಕೆ ಪತ್ರವನ್ನು ಬರೆಸಿ ಸಹಿ ಪಡೆಯುವ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories