Picsart 25 09 29 23 52 11 206 scaled

ಅಕ್ಟೋಬರ್ 1ರಿಂದ ರೈಲು ಟಿಕೆಟ್‌ಗ ಬುಕಿಂಗ್ ಮಾಡಲು; ಪ್ರಯಾಣಿಕರಿಗೆ ಹೊಸ ನಿಯಮ ಜಾರಿ

Categories:
WhatsApp Group Telegram Group

ಭಾರತೀಯ ರೈಲ್ವೆ ಭಾರತದ ಸಾರಿಗೆ ವ್ಯವಸ್ಥೆಯ ಜೀವನಾಡಿಯಂತಿದೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟಿಕೆಟ್ ಬುಕ್ಕಿಂಗ್(Ticket booking) ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಸುರಕ್ಷತೆ ಅತ್ಯಂತ ಮುಖ್ಯವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಆನ್‌ಲೈನ್ ಬುಕ್ಕಿಂಗ್‌ಗಳಲ್ಲಿ ವಂಚನೆ, ನಕಲಿ ಖಾತೆಗಳು ಹಾಗೂ ಕೃತಕ ಬಿಕ್ಕಟ್ಟು ಸೃಷ್ಟಿ ಮಾಡುವ ಪ್ರಕರಣಗಳು ಬೆಳಕಿಗೆ ಬಂದವು. ಇಂತಹ ಅವ್ಯವಹಾರಗಳನ್ನು ತಡೆಯಲು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ನ್ಯಾಯಸಮ್ಮತವಾದ ಸೇವೆಯನ್ನು ಒದಗಿಸಲು ರೈಲ್ವೆ ಇಲಾಖೆ ನಿರ್ಧಾರ ಕೈಗೊಂಡಿದೆ. ಅದೇ ಕಾರಣದಿಂದ ಅಕ್ಟೋಬರ್ 1ರಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಮಹತ್ತರ ಬದಲಾವಣೆ ಜಾರಿಯಾಗಲಿದೆ. ಯಾವೆಲ್ಲ ಬದಲಾವಣೆಗಳು ಆಗಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ನಿಯಮದ ಮುಖ್ಯ ಅಂಶಗಳು ಹೀಗಿವೆ:

ಈಗಾಗಲೇ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ಲಿಂಕ್ ಕಡ್ಡಾಯವಾಗಿತ್ತು.
ಆದರೆ ಅಕ್ಟೋಬರ್ 1ರಿಂದ ಸಾಮಾನ್ಯ (General) ಟಿಕೆಟ್‌ಗಳಿಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ.
IRCTC ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರು ತಮ್ಮ ಖಾತೆಯನ್ನು ಆಧಾರ್ KYC ಮೂಲಕ ಪರಿಶೀಲಿಸಿಕೊಳ್ಳಬೇಕು.
ಕೌಂಟರ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಹಳೆಯ ನಿಯಮವೇ ಮುಂದುವರಿಯಲಿದೆ. ಅವರಿಗೆ ಯಾವುದೇ ಬದಲಾವಣೆ ಇರುವುದಿಲ್ಲ.

IRCTC ಖಾತೆ ಆಧಾರ್ ಲಿಂಕ್ ಮಾಡುವ ವಿಧಾನ:

ಮೊದಲು IRCTC ವೆಬ್‌ಸೈಟ್/ಆಪ್‌ಗೆ ಯುಸರ್‌ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
“My Account” ಮೇಲೆ ಕ್ಲಿಕ್ ಮಾಡಿ, Aadhaar KYC Link ಆಯ್ಕೆಮಾಡಿ.
ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ Send OTP ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್‌ಗೆ ಬಂದ OTP ನಮೂದಿಸಿ.
ಪ್ರಕ್ರಿಯೆ ಪೂರ್ಣಗೊಂಡ ನಂತರ “Aadhaar Successfully Linked” ಎಂಬ ಸಂದೇಶ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ.

ಬದಲಾವಣೆಗೆ ಕಾರಣವೇನು?:

ರೈಲ್ವೆ ಅಧಿಕಾರಿಗಳ ಪ್ರಕಾರ, ಕೆಲವು ಏಜೆಂಟ್‌ಗಳು ನಕಲಿ ಖಾತೆಗಳ ಮೂಲಕ ಹೆಚ್ಚಿನ ಟಿಕೆಟ್‌ಗಳನ್ನು ಬುಕ್ ಮಾಡಿ, ನಂತರ ಅದನ್ನು ಕಪ್ಪುಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಸಾಮಾನ್ಯ ಜನರಿಗೆ ಟಿಕೆಟ್ ದೊರೆಯದೆ ತೊಂದರೆ ಆಗುತ್ತಿತ್ತು. ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ಪ್ರಯಾಣಿಕರಿಗೆ ಸುಗಮ ಸೇವೆಯನ್ನು ಒದಗಿಸಲು ಆಧಾರ್ ಲಿಂಕ್ ಕಡ್ಡಾಯ ಮಾಡಲಾಗಿದೆ.

ಒಟ್ಟಾರೆಯಾಗಿ, ಪ್ರಯಾಣಿಕರು ಇನ್ನು ಮುಂದೆ ರೈಲು ಟಿಕೆಟ್ ಬುಕ್ ಮಾಡುವಾಗ ತಮ್ಮ IRCTC ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲೇಬೇಕು. ಈ ಕ್ರಮವು ವಂಚನೆ ತಡೆಯುವುದರ ಜೊತೆಗೆ ಪ್ರಯಾಣಿಕರಿಗೆ ನಿಷ್ಪಕ್ಷಪಾತ ಮತ್ತು ಸುಗಮ ಸೇವೆಯನ್ನು ನೀಡಲಿದೆ. ಆದ್ದರಿಂದ ಪ್ರತಿಯೊಬ್ಬರೂ ಅಕ್ಟೋಬರ್ 1ರೊಳಗೆ ತಮ್ಮ IRCTC ಖಾತೆಗೆ ಆಧಾರ್ ಲಿಂಕ್ ಮಾಡುವುದು ಅಗತ್ಯ.

WhatsApp Image 2025 09 05 at 10.22.29 AM 2 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories