ಇದೀಗ ಕರ್ನಾಟಕದಲ್ಲಿ ಬಿಪಿಎಲ್ (Below Poverty Line) ಕಾರ್ಡ್ಗಳ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಬಿಪಿಎಲ್ ಕಾರ್ಡ್ ಎಂದರೆ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಕ್ಕಿ, ಗೋಧಿ, ಸಕ್ಕರೆ, ಕೆರೋಸಿನ್ ಹೀಗೆ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವ ಸರ್ಕಾರದ ಮಹತ್ವದ ಯೋಜನೆ. ಆದರೆ ಹಲವು ವರ್ಷಗಳಿಂದ ಅನರ್ಹರು, ಅಂದರೆ ಆರ್ಥಿಕವಾಗಿ ಶ್ರೀಮಂತರು, ಎರೆಡೆರಡು ರಾಜ್ಯಗಳಲ್ಲಿ ಕಾರ್ಡ್ ಹೊಂದಿರುವವರು, ಆದಾಯ ತೆರಿಗೆ ರಿಟರ್ನ್ಸ್(Return Tax) ಸಲ್ಲಿಸುವವರು ಕೂಡ ಈ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದರ ಪರಿಣಾಮವಾಗಿ ನಿಜವಾಗಿಯೂ ಅರ್ಹ ಕುಟುಂಬಗಳು ವಂಚಿತವಾಗುತ್ತಿದ್ದು, ಪಡಿತರ ವಿತರಣೆ ವ್ಯವಸ್ಥೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಎದ್ದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವೇ ಈಗ “ಆಪರೇಷನ್ ಅನರ್ಹ ಬಿಪಿಎಲ್ ಕಾರ್ಡ್” (Operation Ineligible BPL Card”) ಎಂಬ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಇತ್ತೀಚೆಗೆ ಕೇಂದ್ರ ಸರ್ಕಾರವು(Central government) ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಶಂಕಾಸ್ಪದ ಪಡಿತರ ಚೀಟಿದಾರರ ಪಟ್ಟಿಯನ್ನು ಕಳುಹಿಸಿದೆ. ಇದರಲ್ಲಿ ಡುಪ್ಲಿಕೇಟ್ ಕಾರ್ಡ್ ಹೊಂದಿರುವವರು, ತೆರಿಗೆ ಪಾವತಿಸುವವರು ಹಾಗೂ ವಿವಿಧ ಮಾನದಂಡಗಳಿಗೆ ಸರಿಯಾಗದ ಕುಟುಂಬಗಳ ಹೆಸರುಗಳಿವೆ. ಇದರ ಜೊತೆಗೆ, ರಾಜ್ಯ ಸರ್ಕಾರವು ತಾವು ನಡೆಸುತ್ತಿರುವ ಪರಿಶೀಲನೆಗೂ ವೇಗ ನೀಡಿದ್ದು, ಬಿಪಿಎಲ್ ಕಾರ್ಡ್(BPL Card) ಪಟ್ಟಿಯನ್ನು ಶುದ್ಧಗೊಳಿಸುವ ಗುರಿ ಹೊಂದಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ (Food and Civil Supplies Minister K.H. Muniyappa) ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ 20,473 ನ್ಯಾಯಬೆಲೆ ಅಂಗಡಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಕನಿಷ್ಠ 10 ಮಂದಿ ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಗುರುತಿಸಿ ಪಟ್ಟಿಯನ್ನು ಸಲ್ಲಿಸುವಂತೆ ಗುರಿ ನೀಡಲಾಗಿದೆ. ಈ ಮೂಲಕ ಕನಿಷ್ಠ 2 ಲಕ್ಷ ಅನರ್ಹ ಕಾರ್ಡ್ಗಳನ್ನು (Uneligible Cards) ರದ್ದುಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ನ್ಯಾಯಬೆಲೆ ಅಂಗಡಿಗಳಿಗೆ ತಮ್ಮ ವ್ಯಾಪ್ತಿಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಮಾಹಿತಿ ಇರುವುದರಿಂದ, ಅವರ ಸಹಕಾರದ ಆಧಾರದಲ್ಲಿ ಪ್ರಾಥಮಿಕ ಪಟ್ಟಿ(Primary Lists) ತಯಾರಿಸಲಾಗುವುದು. ನಂತರ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಅಂತಿಮ ಕ್ರಮ ಕೈಗೊಳ್ಳಲಿದ್ದಾರೆ.
ಈ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ, ವರ್ಷಗಳಿಂದ ಕಾಯುತ್ತಿರುವ ನಿಜವಾದ ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸುವ ಯೋಜನೆ ಇದೆ. ಸರ್ಕಾರವು ಬರುವ ಅಕ್ಟೋಬರ್ 2ರಂದು ಹೊಸ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು(New BPL Card Distribution Process) ಆರಂಭಿಸಲು ಚಿಂತನೆ ನಡೆಸಿದೆ.
ಅಧಿಕಾರಿಗಳು ಶ್ರೀಮಂತ ಪಡಿತರ ಚೀಟಿದಾರರ ಆಸ್ತಿ-ಪಾಸ್ತಿ ಹಾಗೂ ಆದಾಯದ ಮಾಹಿತಿಯನ್ನು ಕೂಡ ಸಂಗ್ರಹಿಸುತ್ತಿದ್ದಾರೆ. ಇದರಿಂದ ಕಾರ್ಡ್ ವಂಚನೆ ಮಾಡಿದವರು ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಗುರಿಯ ಪ್ರಮುಖ ಅಂಶಗಳು ಹೀಗಿವೆ:
ರಾಜ್ಯದಲ್ಲಿ ಸಾಕಷ್ಟು ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಶಂಕೆ.
ಕೇಂದ್ರ ಸರ್ಕಾರದಿಂದ ಶಂಕಾಸ್ಪದ ಕಾರ್ಡ್ಗಳ ಪಟ್ಟಿ ರಾಜ್ಯಕ್ಕೆ ಬಂದಿದೆ.
ರಾಜ್ಯ ಸರ್ಕಾರವೂ ಬಿಪಿಎಲ್ ಪತ್ತೆಗೆ ತುರ್ತು ಕ್ರಮಕ್ಕೆ (State government also takes urgent action to identify BPL) ಮುಂದಾಗಿದೆ.
ಬಿಪಿಎಲ್ ಕಾರ್ಡ್ ಪಟ್ಟಿಯನ್ನು ಶುದ್ಧಗೊಳಿಸಲು ಹೊಸ ಯೋಜನೆ.
ಪ್ರತೀ ನ್ಯಾಯಬೆಲೆ ಅಂಗಡಿಗೆ ಕನಿಷ್ಠ 10 ಅನರ್ಹ ಕಾರ್ಡ್ದಾರರನ್ನು ಗುರುತಿಸುವ ಗುರಿ.
ಗುರುತಿಸಲಾದವರ ಆಸ್ತಿ-ಪಾಸ್ತಿ ಪರಿಶೀಲನೆ ನಡೆಯಲಿದೆ.
ನಿಜವಾದ ಅರ್ಹರಿಗೆ ಹೊಸ ಕಾರ್ಡ್ ವಿತರಣೆಯ ಯೋಜನೆ ಅಕ್ಟೋಬರ್ 2ರಿಂದ ಆರಂಭವಾಗಲಿದೆ.
ಒಟ್ಟಾರೆಯಾಗಿ, ಸರ್ಕಾರದ ಈ ಹೊಸ ಕಾರ್ಯಾಚರಣೆ (A new operation) ಬಿಪಿಎಲ್ ಕಾರ್ಡ್ಗಳಲ್ಲಿ ಇರುವ ಅಕ್ರಮ ಮತ್ತು ಅನರ್ಹರನ್ನು ತೆಗೆದುಹಾಕಿ, ನಿಜವಾದ ಹಕ್ಕುದಾರರಿಗೆ ಹಕ್ಕು ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.