ಕಾರ್ಮಿಕರ ಜೀವನಮಟ್ಟ ಸುಧಾರಿಸಲು ನೂತನ ಹೆಜ್ಜೆ : ಅನ್ನಪೂರ್ಣ ಯೋಜನೆ ಅಡಿ ಉಪಹಾರ ಭತ್ಯೆ ನೇರ ವರ್ಗಾವಣೆ
ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ (In urban development and infrastructure development) ತಮ್ಮ ಶ್ರಮವನ್ನು ಅರ್ಪಿಸುತ್ತಿರುವ ನೈರ್ಮಲೀಕರಣ ಕಾರ್ಮಿಕರ ಬದುಕು ಸಾಮಾನ್ಯವಾಗಿ ಕಷ್ಟಸಾಧ್ಯ ಪರಿಸ್ಥಿತಿಗಳಲ್ಲೇ ಸಾಗುತ್ತದೆ. ಇಂತಹ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸಲು ಹಾಗೂ ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ಬೆಂಗಳೂರು ಜಲಮಂಡಳಿ (Bangalore Water Board) ಮಹತ್ವದ ಹೆಜ್ಜೆ ಇಟ್ಟಿದೆ. ಕಾರ್ಮಿಕರ ಆರೋಗ್ಯ ಮತ್ತು ಪೌಷ್ಠಿಕಾಂಶದ ಕಡೆಗೆ ಗಮನ ಹರಿಸುವ ಉದ್ದೇಶದಿಂದ, “ಅನ್ನಪೂರ್ಣ ಯೋಜನೆ” ಅಡಿಯಲ್ಲಿ ಹೊಸ ರೀತಿಯ ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯಡಿ, ಜಲಮಂಡಳಿ ನೈರ್ಮಲೀಕರಣದಲ್ಲಿ ತೊಡಗಿಸಿಕೊಂಡಿರುವ 700ಕ್ಕೂ ಹೆಚ್ಚು ಕಾರ್ಮಿಕರಿಗೆ ವಿಶೇಷ ಸ್ಮಾರ್ಟ್ ಕಾರ್ಡ್‌ಗಳನ್ನು (Special smart cards) ವಿತರಿಸಲಾಗಿದೆ. ಇದರ ಮೂಲಕ, ಪ್ರತಿ ಕಾರ್ಮಿಕನಿಗೂ ದಿನಕ್ಕೆ ₹50ರಂತೆ, ತಿಂಗಳಿಗೆ ಒಟ್ಟು ₹1,500 ಉಪಹಾರ ಭತ್ಯೆ ನೇರವಾಗಿ ಕಾರ್ಡ್‌ಗೆ ಜಮೆಯಾಗಲಿದೆ.
ಯೋಜನೆಯ ವೈಶಿಷ್ಟ್ಯಗಳು(Sceme feature) ಏನು?:
ಸ್ಮಾರ್ಟ್ ಕಾರ್ಡ್‌ಗಳ ವಿತರಣೆ: ಎಕ್ಸಿಸ್ ಬ್ಯಾಂಕ್‌ನ ಸಹಯೋಗದಲ್ಲಿ ಕಾರ್ಮಿಕರಿಗೆ ಕಾರ್ಡ್‌ಗಳನ್ನು ಹಂಚಲಾಗಿದೆ.
ನೇರ ಹಣ ವರ್ಗಾವಣೆ(Direct amount transformation) : ಕಾರ್ಮಿಕರು ಯಾವುದೇ ಮಧ್ಯವರ್ತಿ ಇಲ್ಲದೆ ನೇರವಾಗಿ ಹಣವನ್ನು ಪಡೆಯುವ ವ್ಯವಸ್ಥೆ.
ವೆಚ್ಚದ ಅಂದಾಜು: ಪ್ರತಿ ತಿಂಗಳು ಯೋಜನೆಗೆ ಸುಮಾರು ₹10.50 ಲಕ್ಷ ಮತ್ತು ವರ್ಷಕ್ಕೆ ಸುಮಾರು ₹1.26 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ.
ಅಪೂರ್ವ ತಂತ್ರಜ್ಞಾನ ಬಳಕೆ(Use of unique technology) : ದೇಶದಲ್ಲಿಯೇ ಇದೇ ಮೊದಲ ಬಾರಿಗೆ ನೈರ್ಮಲೀಕರಣ ಕಾರ್ಮಿಕರಿಗಾಗಿ ತಂತ್ರಜ್ಞಾನ ಆಧಾರಿತ ನೇರ ಹಣ ವರ್ಗಾವಣೆ ವ್ಯವಸ್ಥೆ ಜಾರಿಯಾಗಿದೆ.
ಒಟ್ಟಾರೆಯಾಗಿ, ಈ ಕ್ರಮವು ಕಾರ್ಮಿಕರ ದಿನನಿತ್ಯದ ಪೌಷ್ಟಿಕ ಆಹಾರ (Daily nutritious food of workers) ಲಭ್ಯತೆಯನ್ನು ಖಚಿತಪಡಿಸುವುದರ ಜೊತೆಗೆ, ಅವರ ಆರೋಗ್ಯ ಸುಧಾರಣೆಗೆ ಸಹಕಾರಿ ಆಗಲಿದೆ. ಜೊತೆಗೆ, ನೈರ್ಮಲೀಕರಣ ಕಾರ್ಮಿಕರ ಜೀವನಮಟ್ಟ ಏರಿಕೆಗೆ ಸಹಾಯ ಮಾಡುವ ಮೂಲಕ, ಸಾಮಾಜಿಕ ಭದ್ರತೆ ಮತ್ತು ಗೌರವದ ಭಾವನೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಮಾದರಿಯಾಗಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.