ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ, ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ವರ್ಗಾಯಿಸಲಾಗುತ್ತಿದೆ. ಈ ಯೋಜನೆಯ ಮೂಲಕ ಕರ್ನಾಟಕದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಗುರಿಯನ್ನು ಸಾಧಿಸಲಾಗುತ್ತಿದೆ. ಈ ಲೇಖನದಲ್ಲಿ, ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ, ಇದುವರೆಗೆ ಜಮಾ ಆಗಿರುವ ಕಂತಿನ ಹಣವನ್ನು ಹೇಗೆ ಪರಿಶೀಲಿಸಬೇಕು, ಮುಂಬರುವ ಕಂತುಗಳ ಬಿಡುಗಡೆ ವಿವರಗಳು ಮತ್ತು ಈ ಯೋಜನೆಯ ಲಾಭವನ್ನು ಪಡೆಯಲು ಅಗತ್ಯವಾದ ಮಾಹಿತಿಯನ್ನು ವಿವರವಾಗಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮೀ ಯೋಜನೆ: ಒಂದು ಅವಲೋಕನ
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಾರಿಗೊಳಿಸಲಾದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಪ್ರಮುಖವಾದದ್ದು. ಈ ಯೋಜನೆಯ ಉದ್ದೇಶವು ಮನೆಯ ಯಜಮಾನಿಯರಿಗೆ ಆರ್ಥಿಕ ಬೆಂಬಲವನ್ನು ಒದಗಿಸುವುದು. ಈ ಯೋಜನೆಯಡಿ, ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೇರವಾಗಿ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್) ಮೂಲಕ ಜಮಾ ಮಾಡಲಾಗುತ್ತದೆ. ಈ ಯೋಜನೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದು, ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತಿದೆ.
ಇದುವರೆಗೆ ಜಮಾ ಆಗಿರುವ ಕಂತುಗಳ ವಿವರ
ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ 21 ಕಂತುಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಇದರಲ್ಲಿ ಬಾಕಿ ಉಳಿದಿರುವುದು 3 ಕಂತುಗಳು ಅಂದರೇ ಮೇ,ಜೂನ್,ಜುಲೈ ಹಣವು ಇನ್ನೂ ಬಾಕಿ ಇದೆ .ಇತ್ತೀಚಿಗೆ, ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ 21ನೇ ಕಂತಿನ ಹಣವನ್ನು ವರ್ಗಾಯಿಸಲಾಗಿತ್ತು. ಸಚಿವರ ಹೇಳಿಕೆಯ ಪ್ರಕಾರ, 22ನೇ ಕಂತಿನ ಹಣವನ್ನು ಆಗಸ್ಟ್ 27, 2025ರಂದು ಗಣೇಶ ಚತುರ್ಥಿಯ ಶುಭ ದಿನದಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ವಾರದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಮಹಿಳೆಯರ ಖಾತೆಗೆ ಈ ಹಣ ಜಮಾ ಆಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಹಾಗೆಯೇ ಇನ್ನುಳಿದ 22ನೇ ಕಂತಿನ ಬಾಕಿ ₹2000ಹಣ ಇದೇ ಕೊನೆಯ ವಾರದಲ್ಲಿ ಅಂದರೇ ಗಣೇಶ ಚತುರ್ಥಿ ಮುಗಿದ 2 ಅಥವಾ 3 ದಿನಕ್ಕೆ ಮಹೀಳೆಯರ ಬ್ಯಾಂಕ್ ಖಾತೆಗೆ ಸೇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕೆಳಗಂಡಂತೆ ವಿವರಣೆ ಹೀಗಿದೆ
ಕಂತು | ಸಂಬಂಧಿಸಿದ ತಿಂಗಳು | ಸ್ಥಿತಿ | ಬಿಡುಗಡೆ ದಿನಾಂಕ |
---|---|---|---|
24ನೇ ಕಂತು | ಜುಲೈ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
23ನೇ ಕಂತು | ಜೂನ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
22ನೇ ಕಂತು | ಮೇ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
21ನೇ ಕಂತು | ಏಪ್ರಿಲ್ 2025 | ಬಿಡುಗಡೆಯಾಗಿದೆ | 08-08-2025 |
20ನೇ ಕಂತು | ಮಾರ್ಚ್ 2025 | ಪೂರ್ಣಗೊಂಡಿದೆ | 05-06-2025 |
19ನೇ ಕಂತು | ಫೆಬ್ರವರಿ 2025 | ಪೂರ್ಣಗೊಂಡಿದೆ | 17-05-2025 |
18ನೇ ಕಂತು | ಜನವರಿ 2025 | ಪೂರ್ಣಗೊಂಡಿದೆ | 30-03-2025 |
17ನೇ ಕಂತು | ಡಿಸೆಂಬರ್ 2024 | ಪೂರ್ಣಗೊಂಡಿದೆ | 11-03-2025 |
16ನೇ ಕಂತು | ನವೆಂಬರ್ 2024 | ಪೂರ್ಣಗೊಂಡಿದೆ | 26-02-2025 |
23 ಮತ್ತು 24ನೇ ಕಂತುಗಳ ಬಿಡುಗಡೆಯ ದಿನಾಂಕವನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಈ ಯೋಜನೆಯ ಫಲಾನುಭವಿಗಳಿಗೆ ತಡವಾಗಿ ಹಣವನ್ನು ಜಮಾ ಮಾಡಲಾಗುತ್ತಿದ್ದು, ಇದು ಉಳಿದ 3 ಕಂತುಗಳನ್ನು ಯೆತ್ತಿ ತೋರಿಸುತ್ತದೆ ..
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೊನೆಗೂ ಜೂನ್ ತಿಂಗಳ ಗೃಹಲಕ್ಷ್ಮಿ ₹2000 ಹಣ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಚೆಕ್ ಮಾಡ್ಕೊಳ್ಳಿ | GruhaLakshmi June Credited
- ಗೃಹಲಕ್ಷ್ಮಿ ಯೋಜನೆ: ಹಣದ ಸ್ಥಿತಿಯನ್ನು ಮೊಬೈಲ್ನಿಂದಲೇ ಹೇಗೆ ಪರಿಶೀಲಿಸುವುದು?
- ಸರ್ಕಾರದಿಂದ `ನಿರುದ್ಯೋಗಿಗಳಿಗೆ ಬಂಪರ್ ಗಿಫ್ಟ್’ : ಎಲೆಕ್ಟ್ರಿಕ್ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ ಸೇರಿ 17 ಬಿಲ್ ಗೆ ಸಂಪುಟ ಒಪ್ಪಿಗೆ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.