ಬೆಂಗಳೂರು: ರಾಜ್ಯ ಸರ್ಕಾರವು ದಂಡದ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಒಂದು ಒಳ್ಳೆಯ ಸುದ್ದಿ ನೀಡಿದೆ. ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬರುವ ದಂಡವನ್ನು ಮತ್ತೊಮ್ಮೆ 50 ಶೇಕಡಾ ರಿಯಾಯಿತಿಯಲ್ಲಿ ಪಾವತಿಸಲು ಅವಕಾಶ ನೀಡುವಂತೆ ಸರ್ಕಾರವು ಆದೇಶಿಸಿದೆ.
ಇದಕ್ಕೂ ಮುಂಚೆಯೂ ಸರ್ಕಾರವು 50% ರಿಯಾಯಿತಿ ನೀಡಿ ದೊಡ್ಡ ಮೊತ್ತದ ದಂಡವನ್ನು ಸಂಗ್ರಹಿಸಿತ್ತು. ಈಗ ಮತ್ತೆ ಅಂತಹ ರಿಯಾಯಿತಿ ಘೋಷಿಸಲಾಗಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 9ರ ವರೆಗೆ ದಂಡದ ಅರ್ಧದಷ್ಟು ಹಣವನ್ನು ಮಾತ್ರ ಪಾವತಿಸುವ ಮೂಲಕ ವಾಹನ ಮಾಲೀಕರು ತಮ್ಮ ಬಾಕಿಯನ್ನು ತೀರಿಸಿಕೊಳ್ಳಲು ಸಾಧ್ಯವಿದೆ.
ಈ ವಿಚಾರದ ಮೇಲೆ ರಾಜ್ಯ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರ ವರೆಗೆ 50% ರಿಯಾಯಿತಿಯಲ್ಲಿ ದಂಡ ಪಾವತಿ ಮಾಡಲು ಅವಕಾಶವಿರುವುದಾಗಿ ತಿಳಿಸಲಾಗಿದೆ.
ಈ ರಿಯಾಯಿತಿ ಯೋಜನೆಯು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ 2023ರ ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಹಲವು ವರ್ಷಗಳಿಂದ ದಂಡವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಗೆ ಈ ಅವಕಾಶ ನೀಡಲಾಗಿದೆ. 2023ರ ಫೆಬ್ರವರಿ 12ರ ನಂತರ ದಾಖಲಾದ ಪ್ರಕರಣಗಳಿಗೆ ಮುಂದಿನ ವರ್ಷ ಇಂತಹ ರಿಯಾಯಿತಿ ಅವಕಾಶಗಳು ಲಭ್ಯವಿರಬಹುದು.


ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply