Picsart 25 08 14 23 28 51 156 scaled

ಮನೆಯಲ್ಲಿ ಹಲ್ಲಿ ಕಾಟದಿಂದ ಮುಕ್ತಿ ಬೇಕಾ? ಈ ಸಿಂಪಲ್​ ಮನೆಮದ್ದು ಟ್ರೈ ಮಾಡಿ.

Categories:
WhatsApp Group Telegram Group

ರಾಸಾಯನಿಕರಹಿತ ಸುಲಭ ಟಿಪ್ಸ್: ಹಲ್ಲಿಗಳನ್ನು ದೂರವಿಡುವ ಪರಿಸರ ಸ್ನೇಹಿ ವಿಧಾನಗಳು

ಮಳೆಗಾಲ ಆರಂಭವಾದಾಗ ಪ್ರಕೃತಿ (Nature) ಹಸಿರಿನಿಂದ ತುಂಬಿ ಕಂಗೊಳಿಸಿದರೂ, ಮನೆಮಂದಿಗೆ ಹಲ್ಲಿಗಳ ದಾಳಿಯಿಂದ ಒಂದಿಷ್ಟು ತಲೆನೋವು ಉಂಟಾಗುತ್ತದೆ. ಹಲ್ಲಿಗಳ ದಾಳಿಯಿಂದ ಕೇವಲ ಜನರು ಭಯ ಬೀಳುವುದಿಲ್ಲ ಇದರ ಜೊತೆಗೆ ಆರೋಗ್ಯದ ಮೇಲೂ ಕೂಡ ಗಂಭೀರ ಪರಿಣಾಮವನ್ನು ಬೀರಬಹುದು. ಹಲ್ಲಿಗಳ ಮಲ(droppings), ಲಾಲಾರಸ ಮತ್ತು ಚರ್ಮದ ಕಣಗಳಲ್ಲಿ ಇರುವ ಬ್ಯಾಕ್ಟೀರಿಯಾಗಳು ಆಹಾರ ವಿಷಕಾರಿ (Food Poisoning) ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳ ಮತ್ತು ವೃದ್ಧರ ಆರೋಗ್ಯಕ್ಕೆ ಇದು ಹೆಚ್ಚಿನ ಅಪಾಯ. ಹಲವರು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕಗಳನ್ನು ಬಳಸಿದರೂ, ಅವುಗಳಲ್ಲಿ ಇರುವ ವಿಷಕಾರಿ ಅಂಶಗಳು ಉಸಿರಾಟ ಸಮಸ್ಯೆ, ತಲೆನೋವು ಅಥವಾ ಅಲರ್ಜಿ ಉಂಟುಮಾಡಬಹುದು. ಆದ್ದರಿಂದ, ರಾಸಾಯನಿಕರಹಿತ ನೈಸರ್ಗಿಕ ಮನೆಮದ್ದುಗಳು (Chemical-free natural home remedies) ಸುರಕ್ಷಿತ, ಅಲ್ಪ ವೆಚ್ಚದ ಮತ್ತು ಪರಿಸರ ಸ್ನೇಹಿ ಪರಿಹಾರವಾಗುತ್ತವೆ. ಇಲ್ಲಿ, ಮಳೆಗಾಲದಲ್ಲಿ ಹಲ್ಲಿಗಳನ್ನು ತೊಡೆದು ಹಾಕಲು ಸಹಾಯಕವಾಗುವ, ಸುಲಭವಾಗಿ ಲಭ್ಯವಾಗುವ ಪದಾರ್ಥಗಳಿಂದ ತಯಾರಿಸಬಹುದಾದ ಕೆಲವು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಲ್ಮಾನ್ ಸರ್ಫ್ (Salman Surf) ನೀಡಿರುವ ನೈಸರ್ಗಿಕವಾಗಿ ಹಲ್ಲಿ ಓಡಿಸುವ ಸ್ಪ್ರೇ ರೆಸಿಪಿ ಮಾಹಿತಿ ಹೀಗಿದೆ:

1. ಈರುಳ್ಳಿ–ಬೆಳ್ಳುಳ್ಳಿ–ಲವಂಗ ಸ್ಪ್ರೇ,
ಬೇಕಾಗುವ ಪದಾರ್ಥಗಳು
ಮಧ್ಯಮ ಗಾತ್ರದ ಈರುಳ್ಳಿ – 1
ಬೆಳ್ಳುಳ್ಳಿ – 4 ರಿಂದ 5 ಎಸಳು
ಲವಂಗ – 3 ಅಥವಾ 4
ಕರಿಮೆಣಸು – ಸ್ವಲ್ಪ
ಅಡುಗೆಸೋಡಾ – ಸ್ವಲ್ಪ
ಅರ್ಧ ನಿಂಬೆಹಣ್ಣು ರಸ
ನೀರು – ಬೇಕಾದಷ್ಟು

ಮಾಡುವ ವಿಧಾನ ಹೇಗೆ?:

1. ಈರುಳ್ಳಿ, ಬೆಳ್ಳುಳ್ಳಿ ಮತ್ತು ಲವಂಗಗಳನ್ನು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ.
2. ಪೇಸ್ಟ್‌ಗೆ ಕರಿಮೆಣಸು, ಅಡುಗೆಸೋಡಾ ಮತ್ತು ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ.
3. ಸ್ವಲ್ಪ ನೀರು ಹಾಕಿ ದ್ರವ ರೂಪಕ್ಕೆ ತರಬೇಕು.
4. ಮಿಶ್ರಣವನ್ನು ಫಿಲ್ಟರ್ (Filter) ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿಕೊಳ್ಳಿ.
5. ಮನೆಯ ಮೂಲೆಗಳು, ಅಡುಗೆಮನೆ, ಬಾತ್‌ರೂಮ್, ಕಿಟಕಿಯ ಚೌಕಟ್ಟುಗಳಲ್ಲಿ ಸಿಂಪಡಿಸಿ.

ಗಮನಿಸಿ(Notice) : ವಾರ್ಡ್ರೋಬ್ ಒಳಗೆ ಈ ಸ್ಪ್ರೇ ಬಳಸಬೇಡಿ. ಬಟ್ಟೆಗಳಲ್ಲಿ ದುರ್ವಾಸನೆ ಉಳಿಯಬಹುದು.

2. ನ್ಯಾಫಲೀನ್ ಮಾತ್ರೆಗಳು(Naflin tablates):
ನ್ಯಾಫಲೀನ್ ವಾಸನೆ ಹಲ್ಲಿಗಳಿಗೆ ತೀವ್ರ ಅಸಹ್ಯವನ್ನು ಉಂಟುಮಾಡುತ್ತದೆ. ಅಡುಗೆಮನೆಯ ಕ್ಯಾಬಿನೆಟ್, ಸಿಂಕ್ ಕೆಳಭಾಗದಲ್ಲಿ ಇಟ್ಟರೆ ಹಲ್ಲಿಗಳು ಹತ್ತಿರ ಬರವುದು ಕಡಿಮೆ.
ಎಚ್ಚರಿಕೆ: ಆಹಾರದ ಬಳಿ ಇರಿಸಬೇಡಿ. ಮಕ್ಕಳಿರುವ ಮನೆಗಳಲ್ಲಿ ಜಾಗ್ರತೆಯಿಂದ ಬಳಸಿ.

3. ಪೆಪ್ಪರ್ ಸ್ಪ್ರೇ(Pepper spray) :
ಮೆಣಸಿನ ಪುಡಿ ಮತ್ತು ನೀರನ್ನು ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿ. ಹಲ್ಲಿಗಳು ಕಾಣುವ ಸ್ಥಳಗಳಲ್ಲಿ ಸಿಂಪಡಿಸಿದರೆ ಅವು ತಕ್ಷಣ ಓಡಿಹೋಗುತ್ತವೆ.

4. ಮೊಟ್ಟೆಯ ಚಿಪ್ಪುಗಳು(Eggshells) :
ಶುದ್ಧಗೊಳಿಸಿದ ಮೊಟ್ಟೆಯ ಚಿಪ್ಪುಗಳ ವಾಸನೆ ಹಲ್ಲಿಗಳನ್ನು ದೂರವಿಡುತ್ತದೆ. ಹಲ್ಲಿಗಳು ಹೆಚ್ಚಾಗಿ ಕಾಣುವ ಮೂಲೆಗಳಲ್ಲಿ ಇಡಿ.

5. ಕಾಫಿ–ತಂಬಾಕು ಮಿಶ್ರಣ(Coffee-tobacco mixture) :
ಕಾಫಿ ಪುಡಿಯನ್ನು ತಂಬಾಕು ಪುಡಿಯೊಂದಿಗೆ ಮಿಶ್ರಣ ಮಾಡಿ ಹಲ್ಲಿಗಳು ಕಾಣುವ ಸ್ಥಳಗಳಲ್ಲಿ ಇಡಿ. ಈ ವಾಸನೆ ಹಲ್ಲಿಗಳನ್ನು ಹೊರಹಾಕುತ್ತದೆ.

6. ಬೇವಿನ ಎಲೆಗಳ ಸ್ಪ್ರೇ ( Neem leaf spray):
ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಲು ಬಿಡಿ. ಈ ದ್ರವವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿ ಗೋಡೆ ಮತ್ತು ನೆಲಕ್ಕೆ ಹಚ್ಚಿ. ಬೇವಿನ ತೀವ್ರ ವಾಸನೆ ಹಲ್ಲಿಗಳನ್ನು ಹಿಮ್ಮೆಟ್ಟಿಸುತ್ತದೆ.

7. ಕರ್ಪೂರ:
ಮನೆಯ ಎಲ್ಲ ಮೂಲೆಗಳಲ್ಲಿ ಕರ್ಪೂರವನ್ನು ಇಡುವುದರಿಂದ ಹಲ್ಲಿಗಳು ದೂರವಿರುತ್ತವೆ.

8. ನವಿಲು ಗರಿಗಳು(Peacock feathers) :
ನವಿಲುಗಳು ಹಲ್ಲಿಗಳನ್ನು ತಿನ್ನುವ ಕಾರಣ, ಅವುಗಳ ಗರಿಗಳ ವಾಸನೆ ಕೂಡ ಹಲ್ಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಕೆಲವರಿಗೆ ಈ ವಿಧಾನ ಹೆಚ್ಚು ದಿನ ಪರಿಣಾಮಕಾರಿ ಎಂದು ಅನ್ನಿಸದಿದ್ದರೂ, ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ.

ಒಟ್ಟಾರೆಯಾಗಿ, ಹಲ್ಲಿಗಳ ನಿಯಂತ್ರಣಕ್ಕೆ ಶುದ್ಧತೆ ಕಾಪಾಡುವುದು ಅತ್ಯಂತ ಮುಖ್ಯ. ಆಹಾರದ ಅವಶೇಷಗಳು, ತೇವಾಂಶ, ಕಸ ಇವು ಹಲ್ಲಿಗಳಿಗೆ ಆಹ್ವಾನ ಪತ್ರಿಕೆ ಕೊಟ್ಟಂತೆ. ಹೀಗಾಗಿ, ಈ ನೈಸರ್ಗಿಕ ಮನೆಮದ್ದುಗಳನ್ನು (Natural home remedies) ನಿಯಮಿತವಾಗಿ ಅನುಸರಿಸಿದರೆ, ಮಳೆಗಾಲದಲ್ಲೂ ಮನೆಯನ್ನು ಹಲ್ಲಿಗಳಿಂದ ರಕ್ಷಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories