ಭಾರತೀಯ ಹಿಂದು ಸಂಸ್ಕೃತಿಯಲ್ಲಿ ಋತುಚಕ್ರದ ಪ್ರಕಾರ ಆಚರಿಸಲ್ಪಡುವ ಪ್ರತಿ ಮಾಸಕ್ಕೂ ತನ್ನದೇ ಆದ ಪವಿತ್ರತೆ, ಭಕ್ತಿ, ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಈ ಹಿನ್ನೆಲೆಯಲ್ಲಿ, ಶ್ರಾವಣ ಮಾಸವನ್ನು (ಜ್ಯೋತಿಷ್ಯ ಪ್ರಕಾರ ಚಾಂದ್ರ ಮಾಸಗಳಲ್ಲಿ ಒಂದು) ಶಿವನಿಗೆ ಅತ್ಯಂತ ಪ್ರಿಯವಾದ ಮಾಸವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ, ಶ್ರಾವಣ ಮಾಸವು ಭಕ್ತರಿಗೆ ಆತ್ಮಿಕ ಶುದ್ಧಿ, ಆರೋಗ್ಯ, ಸಮೃದ್ಧಿ ಮತ್ತು ದೈವೀಕ ಅನುಗ್ರಹವನ್ನು ನೀಡುತ್ತದೆ ಎಂಬ ನಂಬಿಕೆಯಿದೆ.
2025ರಲ್ಲಿ ಶ್ರಾವಣ ಮಾಸವು ಜುಲೈ 26 ರಿಂದ ಪ್ರಾರಂಭಗೊಂಡಿದ್ದು, ದೇಶದಾದ್ಯಾಂತ ಲಕ್ಷಾಂತರ ಭಕ್ತರು ಈ ಮಾಸವನ್ನು ಭಕ್ತಿ, ಉಪವಾಸ, ಜಪ, ಧ್ಯಾನ ಮತ್ತು ಪುಣ್ಯಕಾರ್ಯಗಳಿಂದ ಆಚರಿಸುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಶ್ರಾವಣ ಮಾಸದ ವೈಶಿಷ್ಟ್ಯತೆ ಮತ್ತು ಶಿವಪೂಜೆ:
ಈ ಮಾಸದಲ್ಲಿ ಭಕ್ತರು ದೇವಾದಿದೇವ ಮಹಾದೇವನಾದ ಶಿವನನ್ನು ವಿಶೇಷವಾಗಿ ಪೂಜಿಸುವ ಸಂಪ್ರದಾಯವಿದೆ. ಶಿವನಿಗೆ ಈ ಮಾಸದಲ್ಲಿ ಬಿಲ್ವಪತ್ರೆ, ಧಾತೂರ, ಎಕ್ಕದ ಹೂವು, ಭಾಂಗ್, ಹಣ್ಣುಗಳು, ಜೇನುತುಪ್ಪ, ಗಂಗಾಜಲ, ಧೂಪದೀಪ ಮತ್ತು ವಿವಿಧ ಪವಿತ್ರ ವಸ್ತುಗಳು ಅರ್ಪಿಸಲಾಗುತ್ತವೆ.
ಭಕ್ತರು ಶಿವನಿಗೆ ನಿತ್ಯ ಅಭಿಷೇಕ, ಮಂತ್ರಪಠಣ, ರುದ್ರಾಭಿಷೇಕ, ಶಿವಚರಿತ್ರೆಯ ಪಠಣ ಮುಂತಾದ ಕ್ರಮಗಳಲ್ಲಿ ತೊಡಗಿಸಿಕೊಂಡು ದೇವರ ಅನುಗ್ರಹವನ್ನು ಗಳಿಸುತ್ತಾರೆ.
ಶ್ರಾವಣ ಮಾಸದಲ್ಲಿ ಪಠಿಸಬೇಕಾದ ಪ್ರಮುಖ ಶಿವ ಮಂತ್ರಗಳು ಹೀಗಿವೆ:
ಶಿವನ ಮಂತ್ರಗಳನ್ನು ಶ್ರದ್ಧೆಯಿಂದ ಪಠಿಸುವ ಮೂಲಕ ವ್ಯಕ್ತಿಯು ದೈಹಿಕ, ಮಾನಸಿಕ ಮತ್ತು ಆತ್ಮಿಕ ಶಕ್ತಿ ಪಡೆದುಕೊಳ್ಳುತ್ತಾನೆ. ಈ ಮಾಸದಲ್ಲಿ ಬಹುಪಾಲು ಜನರು ವಿಶೇಷವಾಗಿ ಈ ಕೆಳಗಿನ ಮಂತ್ರಗಳನ್ನು ಪಠಿಸುತ್ತಾರೆ,
1. ಶಿವ ಪಂಚಾಕ್ಷರಿ ಮಂತ್ರ:
“ಓಂ ನಮಃ ಶಿವಾಯ”
(ಪಂಚತತ್ವಗಳ ಶುದ್ಧೀಕರಣಕ್ಕೆ ಸಹಾಯಕ)
2. ಮಹಾಮೃತ್ಯುಂಜಯ ಮಂತ್ರ:
“ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್.”
(ಅಕಾಲಿಕ ಮರಣ, ರೋಗಗಳಿಂದ ರಕ್ಷಣೆಗಾಗಿ)
3. ಸರಳ ಮೃತ್ಯುಂಜಯ ಮಂತ್ರ:
“ಓಂ ಜುಂ ಸ ಮಾಮ್ ಪಾಲಯ ಪಾಲಯ ಸಃ ಜೂಂ ಓಂ.”
(ಅಭಯ, ಆರೋಗ್ಯಕ್ಕಾಗಿ)
4. ವಿಜಯ ಮಂತ್ರ:
“ಓಂ ಮನ್ ಶಿವ ಸ್ವರೂಪಾಯ ಫಟ್.”
(ಶತ್ರು ಜಯ, ನಿರ್ಭೀತಿಗಾಗಿ)
5. ಶಿವ ಗಾಯತ್ರಿ ಮಂತ್ರ:
“ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ
ತನ್ನೋ ರುದ್ರಃ ಪ್ರಚೋದಯಾತ್.”
(ಜ್ಞಾನದ ಬೆಳಕಿಗೆ)
6. ಸಂಪತ್ತಿಗಾಗಿ ಶಿವ ಮಂತ್ರ:
“ಓಂ ಹೌಂ ಶಿವಾಯ ಶಿವಪರಾಯ ಫಟ್.”
(ಆರ್ಥಿಕ ಸುಸ್ಥಿರತೆಗೆ)
7. ಶಿವ ಪಂಚಾಕ್ಷರ ಸ್ತೋತ್ರ ಮಂತ್ರ:
“ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ ನ’ ಕಾರಾಯ ನಮಃ ಶಿವಾಯ.”
(ಸರ್ವತೋಮುಖ ಕೃಪೆಗೆ)
ರಾಶಿಯ ಪ್ರಕಾರ ಶ್ರಾವಣ ಮಾಸದ ಶಿವ ಮಂತ್ರಗಳು ಹೀಗಿವೆ:
ರಾಶಿಚಕ್ರದ ಪ್ರಕಾರ ನಿರ್ದಿಷ್ಟ ಮಂತ್ರಗಳನ್ನು ಪಠಿಸುವುದರಿಂದ ವಿಭಿನ್ನ ರೀತಿಯ ಲಾಭಗಳಾಗುತ್ತವೆ ಎಂಬ ನಂಬಿಕೆಯಿದೆ. ಶ್ರಾವಣ ಮಾಸದಲ್ಲಿ ನಿಮ್ಮ ಜಾತಕರಾಶಿಗೆ ತಕ್ಕಂತೆ ಈ ಮಂತ್ರಗಳನ್ನು ಪಠಿಸಿ,
ಮೇಷ: ಓಂ ನಮಃ ಶಿವಾಯ ಶಂಕರಾಯ ಸೋಮಾಯ ನಮಃ
ವೃಷಭ: ಓಂ ನಮಃ ಶಿವಾಯ ಶುಭಾಯ ಶಂಕರಾಯ ನಮಃ
ಮಿಥುನ: ಓಂ ನಮಃ ಶಿವಾಯ ಅರ್ಧನಾರೀಶ್ವರಾಯ ನಮಃ
ಕಟಕ: ಓಂ ನಮಃ ಶಿವಾಯ ಚಂದ್ರಾರ್ಧಾಯ ನಮಃ
ಸಿಂಹ: ಓಂ ನಮಃ ಶಿವಾಯ ರುದ್ರಾಯ ನಮಃ
ಕನ್ಯಾ: ಓಂ ನಮಃ ಶಿವಾಯ ವಾಚಸ್ಪತ್ಯೇ ನಮಃ
ತುಲಾ : ಓಂ ನಮಃ ಶಿವಾಯ ತ್ರೈಲೋಕೇಶ್ವರಾಯ ನಮಃ
ವೃಶ್ಚಿಕ : ಓಂ ನಮಃ ಶಿವಾಯ ಮೃತ್ಯುಂಜಯಾಯ ನಮಃ
ಧನು: ಓಂ ನಮಃ ಶಿವಾಯ ವಿಶ್ವೇಶ್ವರಾಯ ನಮಃ
ಮಕರ: ಓಂ ನಮಃ ಶಿವಾಯ ಕಾಲಭೈರವಾಯ ನಮಃ
ಕುಂಭ: ಓಂ ನಮಃ ಶಿವಾಯ ಮಹಾದೇವಾಯ ನಮಃ
ಮೀನ: ಓಂ ನಮಃ ಶಿವಾಯ ಸದಾಶಿವಾಯ ನಮಃ
ಒಟ್ಟಾರೆಯಾಗಿ, ಶ್ರಾವಣ ಮಾಸವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ನಮ್ಮ ಜೀವನವನ್ನು ಶುದ್ಧಗೊಳಿಸುವ, ಆತ್ಮಶಕ್ತಿಯನ್ನು ಬೆಳೆಸುವ, ಮತ್ತು ದೇವರ ಕೃಪೆಗೆ ಪಾತ್ರರಾಗುವ ಒಂದು ಅಮೂಲ್ಯ ಅವಕಾಶವಾಗಿದೆ. ಈ ಪವಿತ್ರ ಕಾಲಘಟ್ಟದಲ್ಲಿ ನಾವು ಮಂತ್ರಪಠಣದ ಮೂಲಕ ಶಿವನ ಧ್ಯಾನ ಮಾಡಿ, ನಮ್ಮ ಜೀವನದಲ್ಲಿ ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಮೋಕ್ಷದ ಮಾರ್ಗವನ್ನು ಸೇರಿಸಿಕೊಳ್ಳಬಹುದು ಎಂಬುದು ನಂಬಿಕೆಯಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.