Picsart 25 07 20 00 49 02 146 scaled

ಬಡವರ ಕನಸು ನನಸು ಮಾಡುವ ಉಚಿತ ಮನೆ ಯೋಜನೆ — ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಅಗತ್ಯ ದಾಖಲೆಗಳು.

WhatsApp Group Telegram Group

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY): ಬಡವರ ಕನಸು ನನಸು ಮಾಡುವ ಉಚಿತ ಮನೆ ಯೋಜನೆ — ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಅಗತ್ಯ ದಾಖಲೆಗಳು

ಭಾರತದ ಅದೆಷ್ಟೋ ಕುಟುಂಬಗಳ ಕನಸು ಎಂದರೆ ಒಂದು ಸುರಕ್ಷಿತ, ಪಕ್ಕಾ, ಸ್ವಂತ ಮನೆ. ಆದರೆ ಜೀವನ ನಿರ್ವಹಣೆಯ ಒತ್ತಡದ ನಡುವೆ, ಬಡವರ್ಗ ಹಾಗೂ ಮಧ್ಯಮ ವರ್ಗದ ಅನೇಕ ಜನರ ಕನಸು ಕೇವಲ ಕನಸಾಗಿಯೇ ಉಳಿಯುತ್ತದೆ. ಇಂತಹ ಜನರ ಆಸೆಗೆ ಭದ್ರ ತಳಹದಿ ನೀಡಲು, ಕೇಂದ್ರ ಸರ್ಕಾರವು “ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)” ಎಂಬ ಮಹತ್ವದ ಸಾರ್ವಜನಿಕ ವಸತಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಿದ್ದರೆ ಈ PMAY ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಯೋಜನೆಯ ಲಾಭಗಳ ಕುರಿತು ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಭಾರತದಲ್ಲಿ ‘ಸ್ವಂತ ಮನೆ’ ಎಂದರೆ ಜೀವಿತಾವಧಿಯ ಕನಸು. ಕೇವಲ ಒಂದು ಬಡ್ತಿ, ಅಥವಾ ನಿವೃತ್ತಿ ಹೊತ್ತಿಗೆ ಮನೆಯ ಕನಸು ನನಸು ಆಗುತ್ತದೆ ಎಂಬುದು ಮಧ್ಯಮ ವರ್ಗದ ಭಾವನೆ. ಆದರೆ ಬಡ ಜನರ ಪಾಲಿಗೆ ಇದು ಇನ್ನೂ ಕಷ್ಟದ ವಿಚಾರ. ಈ ನಿಟ್ಟಿನಲ್ಲಿ, ಸರ್ಕಾರ ಬಡವರ ಆಶಯಗಳಿಗೆ ಪುಷ್ಟಿ ನೀಡಲು “ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)” ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯ ಇತಿಹಾಸ :


ಈ ಪ್ರಯತ್ನ 1975ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರಿಂದ ಪ್ರಾರಂಭವಾದ ಇಂದಿರಾ ಆವಾಸ್ ಯೋಜನೆ ಮೂಲಕ ಆರಂಭವಾಯಿತು. ಪ್ರಾರಂಭದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ   ಗ್ರಾಮೀಣ ವಸತಿ ಕಾರ್ಯಕ್ರಮ (rural housing programme) ಆಗಿತ್ತು.

ಈ ಯೋಜನೆಯನ್ನ ಬದಲಿ ಮಾಡಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ “ಪ್ರಧಾನ ಮಂತ್ರಿ ಆವಾಸ್ ಯೋಜನೆ” ಎಂಬ ಹೊಸ ರೂಪದಲ್ಲಿ ಜಾರಿಗೆ ತರುವ ಮೂಲಕ, ಎಲ್ಲ ಬಡವರಿಗೂ ಗ್ರಾಮೀಣ ಹಾಗೂ ನಗರ  ಗುಣಮಟ್ಟದ ಮನೆ ದೊರಕಿಸುವ ಮಹತ್ವದ ಹೆಜ್ಜೆ ಇಟ್ಟರು. ಗುರಿ ಒಂದೇ  2022ರ ಒಳಗಾಗಿ ‘ಇಲ್ಲದವರಿಗೆ ಮನೆ’ (Housing for All) ದೊರಕಿಸಿ ಕೊಡುವುದು.

ಯೋಜನೆಯ ಸಾಧನೆ (ಜುಲೈ 2025ರವರೆಗೆ):
ನಗರ ಪ್ರದೇಶ: 118.14 ಲಕ್ಷ ಮನೆಗಳ ಮಂಜೂರು, 84.7 ಲಕ್ಷ ಮನೆಗಳ ನಿರ್ಮಾಣ ಪೂರ್ಣ.
ಗ್ರಾಮೀಣ ಪ್ರದೇಶ: 2.94 ಕೋಟಿಗೂ ಅಧಿಕ ಮನೆಗಳ ಮಂಜೂರು, 2.63 ಕೋಟಿ ಮನೆಗಳ ನಿರ್ಮಾಣ ಪೂರ್ಣ.

PMAY – ನಗರ ಹಾಗೂ ಗ್ರಾಮೀಣ ವಿಭಾಗದ ವಿಶೇಷತೆಗಳು:

1. ನಗರ ವಿಭಾಗ (PMAY-Urban):
ನಗರ ಪ್ರದೇಶಗಳಲ್ಲಿ ಕೊಳಗೇರಿಗಳ ಪುನರ್ವ್ಯವಸ್ಥೆ, ಕ್ರೆಡಿಟ್ ಲಿಂಕ್‌ಡ್ ಸಬ್ಸಿಡಿ, ಅಂತರಗತ ಗೃಹ ನಿರ್ಮಾಣ ಮತ್ತು ಲಾಭಾರ್ಥಿಗಳ ಆಪ್ತ ನಿರ್ಮಾಣ ಎಂಬ ನಾಲ್ಕು ಅಂಶಗಳ ಮೂಲಕ, ಬಡ ಕುಟುಂಬಗಳಿಗೆ ಮನೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

2. ಗ್ರಾಮೀಣ ವಿಭಾಗ (PMAY-Gramin):
ಮನೆ ಇಲ್ಲದ ಮನೆಯುಳ್ಳ ಗ್ರಾಮೀಣ ಬಡವರ್ಗದ ಜನರಿಗೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್, ಕುಡಿಯುವ ನೀರು ಮುಂತಾದ ಅಗತ್ಯ ಸೌಲಭ್ಯಗಳೊಂದಿಗೆ ಮನೆ ನಿರ್ಮಿಸಲು ಹಣಕಾಸಿನ ನೆರವು ನೀಡಲಾಗುತ್ತದೆ.

ಪ್ರಧಾನಮಂತ್ರಿ ಅವಾಸ್ ಯೋಜನೆಯ ಪ್ರಯೋಜನಗಳು :

ಸ್ವಂತ ಮನೆ :
ಪ್ರಧಾನಮಂತ್ರಿಯ ಅವಾಸ್ ಯೋಜನೆ ಗ್ರಾಮೀಣ ಅಡಿಯಲ್ಲಿ ಫಲಾನುಭವಿಗಳಿಗೆ ಖಚಿತ 25 ಚದುರ ಮೀಟರ್ ಗಾತ್ರದ ಸ್ವಂತ ಮನೆ ಸಿಗುತ್ತದೆ. ಪ್ರಧಾನಮಂತ್ರಿ ಅವಾಸ್ ಯೋಜನೆ ನಗರದ ಅಡಿಯಲ್ಲಿ ಫಲಾನುಭವಿಗಳ ವರ್ಗವನ್ನು ಅವಲಂಬಿಸಿ 30 ಚದುರ ಮೀಟರ್ ನಿಂದ 200 ಚದುರ ಮೀಟರ್ ನಷ್ಟು ಕಾರ್ಪೊರೇಟ್ ಪ್ರದೇಶದ ಸ್ವಂತ ಮನೆಯನ್ನ ಪಡೆಯುತ್ತಾರೆ. ಹಾಗೆ ಎಲ್ಲಾ ಮೂಲಭೂತ ಸೌಕರ್ಯಗಳು ಸಿಗಲಿವೆ.

ಆರ್ಥಿಕ ನೆರವು:
ಪ್ರಧಾನಮಂತ್ರಿ ಅವಾಸ್ ಯೋಜನೆ ಗ್ರಾಮೀಣ ವಿಭಾಗದ ಫಲಾನುಭವಿಯ ಪಕ್ಕಾ ಮನೆ ನಿರ್ಮಿಸಲು ಆರ್ಥಿಕ ವರ್ಗ ಹಾಗೂ ಪ್ರದೇಶವನ್ನು ಆಧರಿಸಿ 1.3  ಲಕ್ಷ ರೂಪಾಯಿವರೆಗಿನ ಹಣಕಾಸು ನೆರವನ್ನು ಪಡೆಯಬಹುದು. ಫಲಾನುಭವಿಗಳು ಸ್ವಚ್ಛ ಭಾರತ್ ಮಿಷನ್ ಶೌಚಾಲಯ ನಿರ್ಮಾಣಕ್ಕಾಗಿ 12,000 ಸಹಾಯಧನವನ್ನೂ ಪಡೆಯುತ್ತಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ ನಗರ ವಿಭಾಗದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಫಲಾನುಭವಿಗಳ ಮನೆಗೆ ಕೇಂದ್ರ ಸರ್ಕಾರದಿಂದ 1. 5 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ.

ಭೂ ಮಾಲಿಕತ್ವ :
ಈ ಯೋಜನೆ ಅಡಿಯಲ್ಲಿ ಭೂ ರಹಿತ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸರ್ಕಾರವು ಸರ್ಕಾರಿ ಭೂಮಿ ಅಥವಾ ಯಾವುದೇ ಇತರ ಭೂಮಿಯನ್ನು ಸಾರ್ವಜನಿಕರಿಗೆ ಒದಗಿಸುತ್ತದೆ.

ಮಹಿಳಾ ಸಬಲೀಕರಣ:
ಮನೆಗಳು ಭೂಮಿಯನ್ನ ಮಹಿಳಾ ಸದಸ್ಯರ ಹೆಸರಿನಲ್ಲಿ  ಅಥವಾ ಕುಟುಂಬದ ಪತಿ ಮತ್ತು ಪತ್ನಿಯ ಹೆಸರಿನಲ್ಲಿ ಜಂಟಿಯಾಗಿ ಹಂಚಲಾಗುತ್ತದೆ. ಈ ಮೂಲಕ ಮಹಿಳೆಯರನ್ನ ಸಬಲೀಕರಣ ಮಾಡುವುದು ಇದರ ಮೂಲ ಉದ್ದೇಶವಾಗಿದೆ.

ಬಡ್ಡಿ ಸಬ್ಸಿಡಿ :
ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳು ಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳಿಂದ ಮನೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅಥವಾ ಹೊಸ ನಿರ್ಮಾಣಕ್ಕಾಗಿ ವಸತಿ ಸಾಲಗಳ ಮೇಲಿನ ಬಡ್ಡಿ ಸಬ್ಸಿಡಿ ಯನ್ನು ಪಡೆಯುತ್ತಾರೆ. PMAY ನಗರ ಸಾಲ ಆಧಾರಿತ ಸಬ್ಸಿಡಿ ಪಡೆಯಲು ಯಾವುದೇ ಮಾನ್ಯತೆ ಪಡೆದ ಬ್ಯಾಂಕ್ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಯಿಂದ ಗೃಹ ಸಾಲವನ್ನು ಪಡೆಯಬಹುದು. ಈ ಯೋಜನೆ ಗ್ರಾಮೀಣ ಅನುದಾನಕ್ಕೆ ರಾಜ್ಯ ಸರ್ಕಾರವು ನೇರವಾಗಿ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸುತ್ತದೆ.

ಸುಧಾರಿತ ಸಾಮಾಜಿಕ ಆರ್ಥಿಕ ಸ್ಥಿತಿ :
ಮನೆ ಇಲ್ಲದ ಕುಟುಂಬಗಳಿಗೆ ನೀಡಿದ ಮನೆಗಳು ಅವರ ಸಾಮಾಜಿಕ ಆರ್ಥಿಕ ಸ್ಥಿತಿ ಮತ್ತು ಅವರ ಜೀವನದ ಗುಣಮಟ್ಟವನ್ನ ಸುಧಾರಿಸುತ್ತದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮನೆಯು ಉತ್ತಮ ಶಿಕ್ಷಣ ಆರೋಗ್ಯ ಮಟ್ಟವನ್ನ ಸುಧಾರಿಸುತ್ತೆ.

ಕೊಳಗೇರಿ ನಿವಾರಣೆ :
ಪ್ರಧಾನಮಂತ್ರಿ ಅವಾಸ್ ಯೋಜನೆ  ನಗರ ಕೊಳಗೇರಿ ನಿವಾಸಿಗಳಿಗೆ ಪಕ್ಕಾ ಮನೆಯನ್ನ ಒದಗಿಸುವ ಮೂಲಕ ಪಟ್ಟಣಗಳು ಮತ್ತು ನಗರಗಳ ಸ್ಲಂ ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೊಳಗೇರಿ ನಿವಾಸಿಗಳನ್ನು ಔಪಚಾರಿಕ ಹೊಸಹಾತು ಪ್ರದೇಶಗಳಿಗೆ ತರಲು ಸಹಾಯವನ್ನು ಮಾಡುತ್ತದೆ.

ನೇರವಾಗಿ ವರ್ಗಾವಣೆ :
ಯೋಜನೆ ಅಡಿಯಲ್ಲಿ ಹಣಕಾಸಿನ ಸಹಾಯವನ್ನು ನೇರವಾಗಿ ಫಲಾನುಭವಿಗಳಿಗೆ ಎಲೆಕ್ಟ್ರಾನಿಕ್ ಮೂಲಕ ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳಿಗೆ ಆಧಾರ್ ಗೆ ಸಂಯೋಜಿಸಲಾಗಿದೆ. ಹೀಗಾಗಿ, ಇದು ವಂಚನೆಯ ಸಾಧನೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ಫಲಾನುಭವಿಗಳು ಹಣವನ್ನ ಪಡೆಯುವುದನ್ನು ಖಚಿತಪಡಿಸುತ್ತದೆ.

ಅರ್ಜಿ ಸಲ್ಲಿಸಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು (Qualifications) ಹೊಂದಿರಬೇಕು:

ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು.
ಅರ್ಜಿದಾರರು ಶಾಶ್ವತ ಮನೆ ಹೊಂದಿರಬಾರದು.
ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಅರ್ಜಿದಾರರ ವಾರ್ಷಿಕ ಆದಾಯ ರೂ.03 ಲಕ್ಷದಿಂದ ರೂ.06 ಲಕ್ಷದ ನಡುವೆ ಇರಬೇಕು.
ಅರ್ಜಿದಾರರ ಹೆಸರು ಪಡಿತರ ಚೀಟಿ ಅಥವಾ ಪಿಬಿಎಲ್ ಪಟ್ಟಿಯಲ್ಲಿರಬೇಕು.
ಅರ್ಜಿದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.
ಅಲ್ಲದೆ ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಗತ್ಯ ದಾಖಲೆಗಳು (Documents) :

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.
ಆಧಾ‌ರ್ ಕಾರ್ಡ್‌(Aadhar Card)ಅಥವಾ ಆಧಾರ್ ಸಂಖ್ಯೆ(Aadhar number).
ಫೋಟೋ.
ಫಲಾನುಭವಿಯ ಜಾಬ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಸಂಖ್ಯೆ(Job card or Job card number).
ಬ್ಯಾಂಕ್ ಪಾಸ್ ಬುಕ್(Bank Passbook).
ಸ್ವಚ್ಛ ಭಾರತ್‌ ಮಿಷನ್‌ (SBM) ನೋಂದಣಿ ಸಂಖ್ಯೆ
ಮೊಬೈಲ್ ನಂಬ‌ರ್.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? :
ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಸುವುದು ಹೇಗೆ,
ಈ ಯೋಜನೆ ನಗರ ವಿಭಾಗಕ್ಕೆ ಖುದ್ದಾಗಿ ಅರ್ಜಿ ಸಲ್ಲಿಸಲು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಪುರಸಭೆಯ ಕಚೇರಿಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ PMAY ಅರ್ಜಿ ನಮೂನೆಯನ್ನ ಭರ್ತಿ ಮಾಡಿ ಅನ್ವಯಿಸಿದರೆ ಅರ್ಜಿ ಶುಲ್ಕವನ್ನು ಪಾವತಿಸಿ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ (PMAY)  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಈ ಹಂತಗಳನ್ನು ಅನುಸರಿಸಿ:

ಅಧಿಕೃತ PMAY ವೆಬ್‌ಸೈಟ್‌ಗೆ ಭೇಟಿ ನೀಡಿ: https://pmay.gov.in/
ಮುಖಪುಟದಲ್ಲಿ “ನಾಗರಿಕರ ಮೌಲ್ಯಮಾಪನ” ಆಯ್ಕೆಯನ್ನು ಆರಿಸಿ.
“ಆನ್‌ಲೈನ್‌ನಲ್ಲಿ ಅನ್ವಯಿಸು” ಆಯ್ಕೆಯನ್ನು ಹುಡುಕಲು ಕೆಳಗೆ ಸ್ಮಾಲ್ ಮಾಡಿ, ಅದರ ಮೇಲೆ ಮಾಡಿ, ತದನಂತರ “ಇನ್-ಸಿಟು ಸ್ಲಂ ರಿಡೆವಲಪ್‌ಮೆಂಟ್ (ISSR)” ಆಯ್ಕೆಮಾಡಿ.
ಒದಗಿಸಿದ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಮತ್ತು ಆಧಾ‌ರ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ಆಧಾ‌ರ್ ಅನ್ನು ಪರಿಶೀಲಿಸಲು “ಚೆಕ್” ಕ್ಲಿಕ್ ಮಾಡಿ. ಪರಿಶೀಲಿಸಿದರೆ, ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಕುಟುಂಬದ ಹೆಸರು, ನಗರ ಮತ್ತು ರಾಜ್ಯ ತಂದೆಯ ಹೆಸರು ಮತ್ತು ಪ್ರಸ್ತುತ ವಸತಿ ವಿಳಾಸದಂತಹ ವಿವರವಾದ ಮಾಹಿತಿಯೊಂದಿಗೆ ಫಾರ್ಮ್ ಅನ್ನು ಪೂರ್ಣಗೊಳಿಸಿ.
ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಗಾಗಿ ನಿಮ್ಮ ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಲು “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.

(PMAY) ಗ್ರಾಮೀಣ ವಿಭಾಗದ ಅರ್ಜಿ ಪ್ರಕ್ರಿಯೆ :

ಅರ್ಹ ಫಲಾನುಭವಿಗಳು ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಪಂಚಾಯತ್ ಕಾಯ್ದೆಯಿಂದ ಗುರುತಿಸಲ್ಪಟ್ಟಂತಹ ಸ್ಥಳೀಯ ಗ್ರಾಮ ಪಂಚಾಯತ್ ಗ್ರಾಮ ಸಭೆ ಅಥವಾ PMAY ಗ್ರಾಮೀಣ ವಿಭಾಗದ ಅಡಿ, ದಾಖಲೆಗಳು ನಿಮ್ಮ ವಿವರಗಳನ್ನು ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಸಭಾ ಅಧಿಕಾರಿಗಳಿಗೆ ಸಲ್ಲಿಸಬಹುದು.

ಒಟ್ಟಾರೆಯಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂಬದು ಕೇವಲ ಮನೆಯ ಯೋಜನೆಯಷ್ಟೇ ಅಲ್ಲ. ಇದು ಬಡ ಕುಟುಂಬಗಳ ಬದುಕಿಗೆ ಸ್ಥಿರತೆ, ಗೌರವ ಮತ್ತು ಭದ್ರತೆಯ ತಳಹದಿಯಾಗಿದೆ. PMAY ಯೋಜನೆಯು ಜಾತಿ, ಧರ್ಮ, ಲಿಂಗ, ವಯಸ್ಸು ಎನ್ನದೆ ಎಲ್ಲರಿಗೂ ಸಮಾನವಾಗಿ ಹಕ್ಕು ನೀಡುವ ಸಮಾನತೆಯ ಯೋಜನೆಯಾಗಿದೆ.

ಈ ಯೋಜನೆಯ ಲಾಭ ಪಡೆಯಲು ಅರ್ಹತೆಯುಳ್ಳ ಕುಟುಂಬಗಳು ತಕ್ಷಣವೇ ದಾಖಲೆಗಳನ್ನು ತಯಾರಿಸಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ಹತ್ತಿರದ ನಗರ ಪ್ರದೇಶದ ಪುರಸಭೆ ಅಥವಾ ಗ್ರಾಮೀಣ ಪ್ರದೇಶದ ಪಂಚಾಯತ್ ಕಚೇರಿಗೆ ಸಂಪರ್ಕಿಸಿ.

ಗಮನಿಸಿ :
ಪ್ರಧಾನಮಂತ್ರಿ ಅವಾಸ್ ಯೋಜನೆಯ ಗ್ರಾಮೀಣ ಮತ್ತು ನಗರ ಪ್ರದೇಶದ ನೋಂದಣಿ ದಿನಾಂಕವನ್ನು ಡಿಸೆಂಬರ್ 2025ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಅದಿಸೂಚನೆಯನ್ನು ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://pmay.gov.in

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories