ಇಂದಿನ ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಕ್ರೆಡಿಟ್ ಕಾರ್ಡ್‌ಗಳು(Credit card) ಕೇವಲ ಖರ್ಚು ಮಾಡುವ ಸಾಧನವಲ್ಲ. ಅವುಗಳು, ವ್ಯಕ್ತಿಯ ಕ್ರೆಡಿಟ್ ಇತಿಹಾಸ, ಫೈನಾನ್ಷಿಯಲ್ ಭದ್ರತೆ ಮತ್ತು ಭವಿಷ್ಯದ ಸಾಲ ಹೊಂದುವ ಸಾಮರ್ಥ್ಯದ ಪ್ರಮುಖ ಸೂಚಕಗಳಾಗಿವೆ. ಆದರೆ, ಹಲವರು ಕ್ರೆಡಿಟ್ ಕಾರ್ಡ್ ಪಡೆದಿದ್ದರೂ ಕೂಡ ಅದನ್ನು ಬಳಸದೆ ಬದಿಗೆ ಇಡುತ್ತಾರೆ. “ನನಗೆ ಡೆಬಿಟ್ ಕಾರ್ಡ್(Debit card) ಇದ್ದರೆ ಸಾಕು, ಕ್ರೆಡಿಟ್ ಕಾರ್ಡ್ ಏಕೆ ಬೇಕು?” ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ ಇಂತಹ ನಿರ್ಲಕ್ಷ್ಯದಿಂದ ಉಂಟಾಗುವ ಪರಿಣಾಮಗಳು ಹೆಚ್ಚು ಗಂಭೀರವಾಗಿರಬಹುದು ಎಂಬುದು ಜನರಿಗೆ ತಿಳಿದಿಲ್ಲ. ಹಾಗಿದ್ದರೆ ಕ್ರೆಡಿಟ್ ಕಾರ್ಡ್ ಏಕೆ ಬಳಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಳಕೆಯಿಲ್ಲದ ಕ್ರೆಡಿಟ್ ಕಾರ್ಡ್, ನಿಷ್ಕ್ರಿಯತೆಯ ಅಪಾಯಗಳು:
ಕ್ರೆಡಿಟ್ ಕಾರ್ಡ್ ಇದ್ದರೆ ಸಾಕು, ಯಾವಾಗಾದರೂ ಅದನ್ನು ಬಳಸಿಕೊಳ್ಳಬಹುದು ಎನ್ನುವುದು ತಪ್ಪು ಕಲ್ಪನೆ. ನೀವು ಅದನ್ನು ಬಳಸದೇ ಇದ್ದರೆ, issuing bank ಅದನ್ನು ನಿಮ್ಮ ಅನುಮತಿಯಿಲ್ಲದೆ ನಿಷ್ಕ್ರಿಯಗೊಳಿಸಬಹುದು ಅಥವಾ ಮುಚ್ಚಬಹುದು. ಇದು ನಿಮ್ಮ ಕ್ರೆಡಿಟ್ ಇತಿಹಾಸದಲ್ಲಿ “Account Closed by Issuer” ಎಂಬ ಟ್ಯಾಗ್ ಮೂಲಕ ನೊಂದಾಯಿತವಾಗುತ್ತದೆ.
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ:
ಒಟ್ಟು ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡುವ ಈ ಮುಚ್ಚುವಿಕೆಯಿಂದಾಗಿ, ನಿಮ್ಮ ಕ್ರೆಡಿಟ್ ಬಳಕೆಯ ಪ್ರಮಾಣ (Credit Utilization Ratio) ಹೆಚ್ಚಾಗುತ್ತದೆ. ಉದಾಹರಣೆಗೆ,
ಮೊದಲು: ₹1 ಲಕ್ಷ ಕ್ರೆಡಿಟ್ ಮಿತಿ ಇದ್ದರೆ ಮತ್ತು ₹20,000 ವ್ಯವಹಾರ ಮಾಡಿದರೆ – ಬಳಕೆ ಪ್ರಮಾಣ 20%.
ಆದರೆ ₹50,000 ಮಿತಿಯ ಇನ್ನೊಂದು ಕಾರ್ಡ್ ಮುಚ್ಚಿದರೆ, ಒಟ್ಟು ಮಿತಿ ₹50,000 ಮಾತ್ರ ಉಳಿಯುತ್ತದೆ.
ಈಗ ₹20,000 ಬಳಸಿದರೆ ಬಳಕೆ ಪ್ರಮಾಣ 40% ಆಗುತ್ತದೆ.
ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಕ್ಷಣವೇ ಇಳಿಸಬಹುದು. ಹೆಚ್ಚಿನ ಬಳಕೆ ಪ್ರಮಾಣವು ‘ಹೆಚ್ಚು ಸಾಲದ ಅವಲಂಬನೆ’ ಎಂದು ಅರ್ಥೈಸಲ್ಪಡುತ್ತದೆ.
Annual Fee ಸಮಸ್ಯೆ:
ಹಲವಾರು ಕ್ರೆಡಿಟ್ ಕಾರ್ಡ್‌ಗಳಿಗೆ ವಾರ್ಷಿಕ ಶುಲ್ಕ (Annual Fee) ಇರುತ್ತದೆ. ನೀವು ಕಾರ್ಡ್ ಬಳಸದಿದ್ದರೆ ಆ ಬಿಲ್‌ಗಳತ್ತ ಗಮನ ಹರಿಸುವ ಸಂಭವ ಕಡಿಮೆಯಾಗುತ್ತದೆ. ಈ ಶುಲ್ಕ ಬಾಕಿಯಾಗುತ್ತದೆ, ಅದಕ್ಕೆ ಬಡ್ಡಿ, ದಂಡ ಸೇರಿ ದೊಡ್ಡ ಮೊತ್ತವಾಗಿ ಮಾರ್ಪಡಬಹುದು. ಅನೇಕರು ಈ ಬಗ್ಗೆ ಸಮಯಕ್ಕೆ ಅರಿಯದೇ, ತಮ್ಮ ಕ್ರೆಡಿಟ್ ವರ್ತಮಾನದಲ್ಲಿ ಏನೇನೋ ಆಗುತ್ತಿದೆ ಎಂಬುದನ್ನೂ ಅರ್ಥಮಾಡಿಕೊಳ್ಳಲಾಗದು.
ಹೇಳಿ ಮುಚ್ಚುವುದು ಶ್ರೇಯಸ್ಕರ,ಹಾಗಿದ್ದರೆ ಬುದ್ಧಿವಂತಿಕೆಯಿಂದ ನಿರ್ವಹಣೆ ಹೇಗೆ?:
1. ಉಪಯೋಗವಿಲ್ಲದ ಕಾರ್ಡ್‌ಗಳ ಮುಚ್ಚುವಿಕೆ:
ನೀವು ಆ ಕಾರ್ಡ್ ಉಪಯೋಗಿಸಲ್ಲವೆಂದು ನಿಶ್ಚಯಿಸಿದ್ದರೆ, ಅದನ್ನು ಹಾಗೆ ಬಿಡಬಾರದು. ಬ್ಯಾಂಕ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿ, ಅಧಿಕೃತವಾಗಿ ಮುಚ್ಚಿಸಿ. ಮುಚ್ಚಿದ ಮಾಹಿತಿ – ಇಮೇಲ್, ಕರೆ ದಾಖಲೆ, ರಶೀದಿಗಳನ್ನು ಉಳಿಸಿಕೊಳ್ಳಿ.
2. ಸಕ್ರಿಯವಾಗಿರಿಸಲು ಸಣ್ಣ ವ್ಯವಹಾರ ಮಾಡಿ:
ಕಾರ್ಡ್ ಸಕ್ರಿಯವಾಗಿರಿಸಲು ತಿಂಗಳಿಗೆ ಕನಿಷ್ಠ ₹100-₹200 ಖರ್ಚು ಮಾಡಿ. ಉದಾ: ಮೊಬೈಲ್ ರೀಚಾರ್ಜ್ ಅಥವಾ OTT ಸಬ್‌ಸ್ಕ್ರಿಪ್ಶನ್. ನಂತರ ಬಿಲ್ ಪಾವತಿಸಿ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ.
3. ಕಾರ್ಡ್‌ನ ಲಾಭಗಳನ್ನು ಉಪಯೋಗಿಸಿ:
ರಿವಾರ್ಡ್ ಪಾಯಿಂಟ್ಸ್, ಲೌಂಜ್ ಪ್ರವೇಶ, ವಿಮೆ, ಕ್ಯಾಶ್‌ಬ್ಯಾಕ್ ಮುಂತಾದ ಪ್ರಯೋಜನಗಳನ್ನು ಪರಿಗಣಿಸಿ. ಬಳಸದೇ ಬಿಟ್ಟು ಈ ಸೌಲಭ್ಯಗಳನ್ನು ಕಳೆದುಕೊಳ್ಳಬೇಡಿ.
ಒಟ್ಟಾರೆಯಾಗಿ, ಬಳಸದ ಕ್ರೆಡಿಟ್ ಕಾರ್ಡ್‌ನಿಂದ ಯಾವುದೇ ಅಪಾಯವಿಲ್ಲ ಎನ್ನುವುದು ಪೂರ್ತಿಯಾಗಿ ತಪ್ಪು ಕಲ್ಪನೆ. ನಿಷ್ಕ್ರಿಯತೆ, ಬ್ಯಾಂಕ್ ಮುಚ್ಚುವಿಕೆ, ಕ್ರೆಡಿಟ್ ಸ್ಕೋರ್ ಇಳಿಕೆ, ಬಾಕಿ ಬಿಲ್, ದಂಡ ಹಾಗೂ ಹಣಕಾಸಿನ ನಷ್ಟ ಇವುಗಳಿಂದಾಗಬಹುದು. ಆದ್ದರಿಂದ ನೀವು ಆ ಕಾರ್ಡ್ ಬೇಕು ಎಂಬ ದೃಢ ನಿಲುವಿಲ್ಲದಿದ್ದರೆ ಅದನ್ನು ಸರಿಯಾದ ಪ್ರಕ್ರಿಯೆಯ ಮೂಲಕ ಮುಚ್ಚಿ. ಇಲ್ಲವೇ, ಸಣ್ಣ ಮಟ್ಟದಲ್ಲಿ ಸರಿಯಾದ ಬಳಕೆಯ ಮೂಲಕ ಸಕ್ರಿಯವಾಗಿ ಇರಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.