ಪಡಿತರ ಚೀಟಿ ತಿದ್ದುಪಡಿಗೆ ಈ ಹೊಸ ದಾಖಲೆಗಳು ಕಡ್ಡಾಯ.! ತಪ್ಪದೇ ತಿಳಿದುಕೊಳ್ಳಿ

WhatsApp Image 2025 06 19 at 1.22.48 PM

WhatsApp Group Telegram Group

ಬೆಂಗಳೂರು: ರೇಷನ್ ಕಾರ್ಡ್‌ನಲ್ಲಿನ ಮಾಹಿತಿ ತಪ್ಪಾಗಿದ್ದರೆ, ಸರ್ಕಾರದಿಂದ ಸಿಗುವ ರೇಷನ್ ಸೌಲಭ್ಯಗಳು ಮತ್ತು ಇತರ ಯೋಜನೆಗಳ ಲಾಭ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು, ಸರ್ಕಾರವು ರೇಷನ್ ಕಾರ್ಡ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳುವ ಸುಲಭ ವ್ಯವಸ್ಥೆ ಮಾಡಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ತಿದ್ದುಪಡಿ ಮಾಡಲು ಹೇಗೆ ಅರ್ಜಿ ಸಲ್ಲಿಸಬೇಕು?

ಆನ್‌ಲೈನ್ ಮೂಲಕ: https://ahara.kar.nic.in ಅಥವಾ ‘Karnataka Ration Card’ ಮೊಬೈಲ್ ಅಪ್ಲಿಕೇಶನ್ ಬಳಸಿ.

ಆಫ್‌ಲೈನ್ ಮೂಲಕ: ಗ್ರಾಮ ಒನ್ ಸೆಂಟರ್, ಅಟಲ್ ಜನಸೇವಾ ಕೇಂದ್ರ, ಅಥವಾ ಬೆಂಗಳೂರು ಒನ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಯಾವ ದಾಖಲೆಗಳು ಬೇಕು?

ಹೆಸರು ತಿದ್ದುಪಡಿಗೆ: ಜನ್ಮ ಪ್ರಮಾಣಪತ್ರ ಅಥವಾ ಶಾಲಾ ಪ್ರಮಾಣಪತ್ರ .

ವಿಳಾಸ ಬದಲಾವಣೆಗೆ: ವಿದ್ಯುತ್ ಬಿಲ್, ಬಾಡಿಗೆ ಒಪ್ಪಂದ (ರೆಂಟ್ ಅಗ್ರಿಮೆಂಟ್), ನಿವಾಸ ಪ್ರಮಾಣಪತ್ರ

ಹೊಸ ಸದಸ್ಯರನ್ನು ಸೇರಿಸಲು: ಆಧಾರ್ ಕಾರ್ಡ್, ಜನ್ಮ ಪ್ರಮಾಣಪತ್ರ, ಸಂಬಂಧ ದೃಢೀಕರಣ ಪತ್ರ

ಸದಸ್ಯರನ್ನು ತೆಗೆದುಹಾಕಲು:

ಮರಣ ಪ್ರಮಾಣಪತ್ರ (ಸಾವಿನ ಸಂದರ್ಭದಲ್ಲಿ), ಇತರ ಅಧಿಕೃತ ದಾಖಲೆಗಳು

APL/BPL ವರ್ಗ ಬದಲಾವಣೆಗೆ:

  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ

ಅರ್ಜಿಯ ಸ್ಥಿತಿ ಪರಿಶೀಲಿಸುವುದು ಹೇಗೆ?

ಅರ್ಜಿ ಸಲ್ಲಿಸಿದ ನಂತರ, ವೆಬ್‌ಸೈಟ್‌ನಲ್ಲಿ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಪ್ರಗತಿಯನ್ನು ನೋಡಬಹುದು. ಸಾಮಾನ್ಯವಾಗಿ ತಿದ್ದುಪಡಿ ಪ್ರಕ್ರಿಯೆಗೆ 15 ರಿಂದ 30 ದಿನಗಳು ಬೇಕಾಗುತ್ತದೆ.

ಗಮನಿಸಬೇಕಾದ ಅಂಶಗಳು:

ಅರ್ಜಿ ಸಲ್ಲಿಸುವಾಗ, ಆಧಾರ್‌ಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಬಳಸಿ OTP ಪಡೆಯಬೇಕು. ಪಾಸ್‌ಪೋರ್ಟ್ ಗಾತ್ರದ ಫೋಟೋ, ವಿಳಾಸದ ಪುರಾವೆ ಮತ್ತು ID ಪ್ರೂಫ್ ಅಗತ್ಯವಿರಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!