WhatsApp Image 2025 06 19 at 1.03.14 PM scaled

ಕೇಕ್ ತಿಂದು ಮಗು ಸಾವು ಪ್ರಕರಣಕ್ಕೆ ಹೊಸ ತಿರುವು.! ಫ್ರಿಡ್ಜ್ ನಲ್ಲಿರುವ ಆಹಾರ ತಿನ್ನೋದು ಈ ಸ್ಟೋರಿ ತಪ್ಪದೇ ಓದಿ.!

Categories:
WhatsApp Group Telegram Group

ಬೆಂಗಳೂರು: ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿ ನಡೆದ ಮಗು ಸಾವಿನ ಪ್ರಕರಣದಲ್ಲಿ ಆಶ್ಚರ್ಯಕರವಾದ ಹೊಸ ಮಾಹಿತಿ ಬಂದಿದೆ. ಮೊದಲು ಕೇಕ್ ತಿಂದು ಮಗು ಸತ್ತಿದೆ ಎಂದು ವರದಿಯಾಗಿತ್ತು. ಆದರೆ, ಇತ್ತೀಚಿನ ತನಿಖೆಯಲ್ಲಿ ವಿಭಿನ್ನ ಸತ್ಯ ಬೆಳಕಿಗೆ ಬಂದಿದೆ.

2024ರ ಅಕ್ಟೋಬರ್ 7ರಂದು, 5 ವರ್ಷದ ಮಗು ಆಹಾರ ವಿಷವೇರಿಕೆ (ಫುಡ್ ಪಾಯ್ಸನಿಂಗ್)ಗೆ ತುತ್ತಾಗಿ ಮರಣ ಹೊಂದಿತ್ತು. ಮಗುವಿನ ತಂದೆ-ತಾಯಿಯೂ ಗಂಭೀರ ಸ್ಥಿತಿಯಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್‌ನಿಂದ ವಿಷವೇರಿಕೆಯಾಗಿದೆ ಎಂನ ಸುದ್ದಿ ಹರಡಿತ್ತು.

ಆದರೆ, ಈಗ ಆಹಾರ ಸುರಕ್ಷತೆ ಇಲಾಖೆ ಮತ್ತು ಎಫ್‌ಎಸ್‌ಎಲ್ ತನಿಖೆಯಲ್ಲಿ ಬೇರೆ ವಿಷಯ ಬಂದಿದೆ. ಮಗು ಮನೆಯ ಫ್ರಿಜ್‌ನಲ್ಲಿ ಇಟ್ಟು ಹಳೆಯದಾದ ವಾಂಗಿಬಾತ್ (ಬದನೆಕಾಯಿ ರೈಸ್) ತಿಂದಿದ್ದು ದೃಢಪಟ್ಟಿದೆ. ಇದೇ ವಿಷದ ಮೂಲವಾಗಿರಬಹುದು ಎಂದು ತಜ್ಞರು ನಂಬುತ್ತಾರೆ.

ಈ ಹೊಸ ಮಾಹಿತಿಯೊಂದಿಗೆ, ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಿದ್ಧರಾಗಿದ್ದಾರೆ. ಮೊದಲು ಕೇಕ್‌ನಿಂದ ಮಗು ಸತ್ತಿದೆ ಎಂಬ ಸುದ್ದಿ ಹರಡಿ, ಅನೇಕರು ಕೇಕ್ ತಿನ್ನುವುದರ ಬಗ್ಗೆ ಹೆದರಿಕೆ ಹೊಂದಿದ್ದರು. ಆದರೆ, ಈಗ ತನಿಖೆಯ ಸತ್ಯಾಂಶ ಬೇರೆಯದು ಎಂದು ತಿಳಿದುಬಂದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories