ಈ ವಿದ್ಯಾರ್ಥಿಗಳಿಗೆ ಬರೋಬ್ಬರಿ 5.5 ಲಕ್ಷ ರೂಪಾಯಿ ಸ್ಕಾಲರ್ಶಿಪ್, ಈಗಲೇ ಅಪ್ಲೈ ಮಾಡಿ

WhatsApp Image 2025 06 16 at 7.16.58 PM

WhatsApp Group Telegram Group

(Raman Kant Munjal Foundation Scholarship for Finance Students)

ಹೀರೋ ಗ್ರೂಪ್‌ನ “ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್” ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣಕಾಸು ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಹಾಯವನ್ನು ನೀಡುತ್ತದೆ. 2025-26 ಶೈಕ್ಷಣಿಕ ವರ್ಷದಲ್ಲಿ ಫೈನಾನ್ಸ್ ಸಂಬಂಧಿತ ಪದವಿ ಕೋರ್ಸ್‌ಗಳಲ್ಲಿ (ಬಿಬಿಎ, ಬಿಎಫ್ಐಎ, ಬಿ.ಕಾಂ, ಬಿಎಮ್ಎಸ್, ಇತ್ಯಾದಿ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವು ಲಭ್ಯವಿದೆ. ಅರ್ಜಿಗಳನ್ನು 30 ಜುಲೈ 2025 ರೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿವೇತನದ ಪ್ರಮಾಣ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹40,000 ರಿಂದ ₹5,50,000 ರವರೆಗೆ ಮೂರು ವರ್ಷಗಳವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಅರ್ಹತೆಗಳು

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಶೈಕ್ಷಣಿಕ ಅರ್ಹತೆ:

    • 10 ಮತ್ತು 12ನೇ ತರಗತಿಯಲ್ಲಿ ಕನಿಷ್ಠ 80% ಅಂಕಗಳು (ಅಂಗವೈಕಲ್ಯ ವಿದ್ಯಾರ್ಥಿಗಳಿಗೆ 70%).
    • ಹಣಕಾಸು ಸಂಬಂಧಿತ ಪದವಿ ಕೋರ್ಸ್‌ಗಳಲ್ಲಿ (ಬಿಬಿಎ, ಬಿಎಫ್ಐಎ, ಬಿ.ಕಾಂ, ಬಿಎಮ್ಎಸ್, ಇತ್ಯಾದಿ) ಪ್ರವೇಶ ಪಡೆದಿರಬೇಕು.

    ಕುಟುಂಬದ ಆದಾಯ: ವಾರ್ಷಿಕ ಆದಾಯ ₹6 ಲಕ್ಷಕ್ಕಿಂತ ಕಡಿಮೆ ಇರಬೇಕು.

    ಮುಖ್ಯ ನಿಬಂಧನೆ: ಹೀರೋ ಫಿನ್‌ಕಾರ್ಪ್ ಅಥವಾ ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್ ನೊಂದಿಗೆ ಸಂಬಂಧಿಸಿದ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

      ಅರ್ಜಿ ಸಲ್ಲಿಸುವ ವಿಧಾನ

      1. ಆನ್‌ಲೈನ್ ಅರ್ಜಿ: ಅಧಿಕೃತ ವೆಬ್‌ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು.  “Apply Now
      2. ದಾಖಲೆಗಳು: 10ನೇ, 12ನೇ ಮಾರ್ಕ್‌ಶೀಟ್, ಪ್ರವೇಶ ಪತ್ರ, ಆದಾಯ ಪ್ರಮಾಣಪತ್ರ ಮತ್ತು ಇತರೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
      3. ಕೊನೆಯ ದಿನಾಂಕ: 30 ಜುಲೈ 2025.

      ಆಯ್ಕೆ ಪ್ರಕ್ರಿಯೆ

      ಮೊದಲ ಹಂತದಲ್ಲಿ ಶೈಕ್ಷಣಿಕ ಮಾನದಂಡಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಶೋಧಿಸಲಾಗುತ್ತದೆ. ನಂತರ, ವ್ಯಕ್ತಿತ್ವ ಮೌಲ್ಯಮಾಪನ ಮತ್ತು ಸಂದರ್ಶನದ ಮೂಲಕ ಅಂತಿಮ ಆಯ್ಕೆ ನಡೆಯುತ್ತದೆ. ಕೆಲವು ನಿಗದಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. Collage List

      ಈ ವಿದ್ಯಾರ್ಥಿವೇತನವು ಹಣಕಾಸು ವಿಭಾಗದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ವೃತ್ತಿ ಕನಸುಗಳನ್ನು ನನಸು ಮಾಡಲು ಸಹಾಯ ಮಾಡುತ್ತದೆ. ಅರ್ಹ ವಿದ್ಯಾರ್ಥಿಗಳು ತಡಮಾಡದೆ ಅರ್ಜಿ ಸಲ್ಲಿಸಿ!

      ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

      ಈ ಮಾಹಿತಿಗಳನ್ನು ಓದಿ

      ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

       

      WhatsApp Group Join Now
      Telegram Group Join Now

      Related Posts

      Editor in Chief

      Editor in Chief

      Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

      Leave a Reply

      Your email address will not be published. Required fields are marked *

      error: Content is protected !!