ಚಿನ್ನದ ದರ ಜೂನ್ 2, 2025: 24K ದರ ₹9,730, ಬೆಳ್ಳಿಗೆ ₹99,800
ಭಾರತೀಯ ಆರ್ಥಿಕ ಸಂಸ್ಕೃತಿಯಲ್ಲಿ ಚಿನ್ನವು ಶಾಶ್ವತ ಹೂಡಿಕೆಯ ಸಾಧನವಾಗಿ ಮಾತ್ರವಲ್ಲದೇ, ಸಂಸ್ಕೃತಿಯ ಸಂಕೇತವಾಗಿ, ಹೆಮ್ಮೆಯ ಆಭರಣವಾಗಿ ಬಿಂಬಿಸಿದೆ. ಮನೆಯ ಪುಟ್ಟ ಉತ್ಸವದಿಂದ ಆರಂಭಿಸಿ ದೇಶದ ಆರ್ಥಿಕ ನೀತಿಯವರೆಗೆ ಚಿನ್ನದ ಪಾತ್ರ ನಿರ್ಣಾಯಕವಾಗಿದೆ. ಅಂತಹ ಮಹತ್ವದ ಲೋಹವಾದ ಚಿನ್ನದ ಬೆಲೆಯಲ್ಲಿ ಸಂಭವಿಸುವ ಯಾವುದೇ ಸಣ್ಣ ಬದಲಾವಣೆ ಕೂಡ ಭಾರತೀಯ ಹೂಡಿಕೆದಾರರ ಮನಸ್ಸಿನಲ್ಲಿ ಬೃಹತ್ ಪ್ರಭಾವ ಬೀರಬಹುದು. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಜೂನ್ 2, 2025: Gold Price
ಮೇ ತಿಂಗಳಲ್ಲಿ ದಾಖಲಾತಿಯ ಮಟ್ಟದಲ್ಲಿ ಏರಿಕೆ ಮತ್ತು ಇಳಿಕೆ ಕಂಡಿದ್ದ ಚಿನ್ನದ ದರ, ಜೂನ್ 1ರಂದು ಸ್ಥಿರತೆ ಕಂಡು ಬಂದಿದೆ. ಇದು ಚಿನ್ನದ ಹೂಡಿಕೆದಾರರಲ್ಲಿ ಆತಂಕವನ್ನು ಕಡಿಮೆಮಾಡಿದ್ದು, ಮಾರುಕಟ್ಟೆಯಲ್ಲಿ ಒಂದು ನಿರ್ಣಾಯಕ ತಿರುವು ನೀಡಿದೆ. ಆದರೆ ಚಿನ್ನದ ದರ ಪ್ರತಿನಿತ್ಯವೂ ಬದಲಾಗುವ ಕಾರಣ ಆ ಕ್ಷಣದ ದರ ಪರಿಶೀಲನೆ ಮಾಡಿ ತದನಂತರ ಚಿನ್ನ ಖರೀದಿಸುವುದು ಸೂಕ್ತ. ಇಂದು ಚಿನ್ನದ ದರದಲ್ಲಿ ಸಣ್ಣ ಮಟ್ಟದ ಇಳಿಕೆಯನ್ನು ನಾವು ಕಾಣಬಹುದು. ಹಾಗಿದ್ದರೆ, ಜೂನ್ 2, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,919 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,730 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,298 ಆಗಿದೆ. ಒಟ್ಟಾರೆಯಾಗಿ, 1ರೂ. ನಷ್ಟು ಇಳಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,800 ರೂ. ನಷ್ಟಿದೆ. 100 ರೂ. ನಷ್ಟು ಇಳಿಕೆಯಾಗಿದೆ.
ಜೂನ್ 1, 2025ರಂದು ಚಿನ್ನದ ದರ ಸ್ಥಿತಿ:
ಮಾರಾಟದ ಹಂಗು, ಜಾಗತಿಕ ಆರ್ಥಿಕ ಬೆಳವಣಿಗೆಗಳು, ಡಾಲರ್ ಬಲ, ದೇಶೀಯ ಬೇಡಿಕೆ ಹಾಗೂ ಇತರ ಅಂಶಗಳಿಂದ ಚಿನ್ನದ ಬೆಲೆ ಬದಲಾಗುತ್ತಾ ಇರುತ್ತದೆ. ಆದರೆ ನಿನ್ನೆ, ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ 24K, 22K ಮತ್ತು 18K ಚಿನ್ನದ ದರಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದವು.
24 ಕ್ಯಾರಟ್ ಚಿನ್ನದ ದರ:
ಪ್ರತಿ ಗ್ರಾಂ: ₹9,731
10 ಗ್ರಾಂ: ₹97,310
100 ಗ್ರಾಂ: ₹9,73,100
22 ಕ್ಯಾರಟ್ ಚಿನ್ನದ ದರ:
ಪ್ರತಿ ಗ್ರಾಂ: ₹8,920
10 ಗ್ರಾಂ: ₹89,200
100 ಗ್ರಾಂ: ₹8,92,000
18 ಕ್ಯಾರಟ್ ಚಿನ್ನದ ದರ:
ಪ್ರತಿ ಗ್ರಾಂ: ₹7,299
10 ಗ್ರಾಂ: ₹72,990
100 ಗ್ರಾಂ: ₹7,29,900
ನಗರವಾರು ಚಿನ್ನದ ದರಗಳು (ಪ್ರತಿ ಗ್ರಾಂಗೆ):
24K (₹)ಚಿನ್ನದ ದರ:
ಚೆನ್ನೈ: 9,731
ಮುಂಬೈ: 9,731
ದೆಹಲಿ :9,746
ಕೋಲ್ಕತಾ: 9,731
ಬೆಂಗಳೂರು : 9,731
ಹೈದರಾಬಾದ್ :9,731
ಕೇರಳ: 9,731
ಪುಣೆ :9,731
ಬರೋಡಾ :9,736
ಅಹಮದಾಬಾದ್: 9,736
22K (₹)ಚಿನ್ನದ ದರ:
ಚೆನ್ನೈ: 8,920
ಮುಂಬೈ:8,920
ದೆಹಲಿ :8,935
ಕೋಲ್ಕತಾ: 8,920
ಬೆಂಗಳೂರು : 8,920
ಹೈದರಾಬಾದ್ :8,920
ಕೇರಳ:8,920
ಪುಣೆ :8,920
ಬರೋಡಾ :8,925
ಅಹಮದಾಬಾದ್:8,925
18K (₹) ಚಿನ್ನದ ದರ:
ಚೆನ್ನೈ: 7,345
ಮುಂಬೈ: 7,299
ದೆಹಲಿ :7,311
ಕೋಲ್ಕತಾ:7,299
ಬೆಂಗಳೂರು : 7,299
ಹೈದರಾಬಾದ್ :7,299
ಕೇರಳ: 7,299
ಪುಣೆ :7,299
ಬರೋಡಾ :7,303
ಅಹಮದಾಬಾದ್: 7,303
ಬೆಳ್ಳಿಯ ದರ (₹):
ನಿನ್ನೆ ಬೆಳ್ಳಿ ದರವೂ ಸ್ಥಿರವಾಗಿತ್ತು,
ಪ್ರತಿ ಗ್ರಾಂ: ₹99.90
10 ಗ್ರಾಂ: ₹999
100 ಗ್ರಾಂ: ₹9,990
1 ಕೆ.ಜಿ: ₹99,900
ಜಾಗತಿಕ ಸ್ಪಾಟ್ ಗೋಲ್ಡ್ ವರದಿ :
ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್ಗೆ $3,296.05ರಷ್ಟಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಸುಮಾರು 0.60%ರಷ್ಟು ಇಳಿಕೆಯಾಗಿದೆ. ಈ ಇಳಿಕೆಗೆ ಪ್ರಾಥಮಿಕ ಕಾರಣವೆಂದರೆ ಯುಎಸ್ನ ಆರ್ಥಿಕ ಅಸ್ಥಿರತೆ, ಡಾಲರ್ ಬಲ, ಮತ್ತು ಬಡ್ಡಿದರ ನಿರೀಕ್ಷೆಗಳು. ಇದರ ಜೊತೆಗೆ ರೂಪಾಯಿ ಮೌಲ್ಯ ಮತ್ತು ಅಂತಾರಾಷ್ಟ್ರೀಯ ಚಿನ್ನದ ಪೂರೈಕೆ, ಬೇಡಿಕೆ ತಾರತಮ್ಯದಿಂದ ಭಾರತದಲ್ಲೂ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ.
ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆಗೆ ಕಾರಣಗಳೇನು?:
1. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು.
2. USD-INR ವಿನಿಮಯ ದರದ ತಾರತಮ್ಯ.
3. ಫೆಡರಲ್ ರಿಸರ್ವ್ ಮತ್ತು RBI ಬಡ್ಡಿದರ ನೀತಿಗಳು.
4. ಯುದ್ಧ, ರಾಜಕೀಯ ಸಮಸ್ಯೆಗಳು, ಜಾಗತಿಕ ಹಂಗಾಮಿ ಅಶಾಂತಿ.
5. ಚಿನ್ನದ ಉತ್ಪಾದನೆ ಮತ್ತು ಸರಬರಾಜಿನಲ್ಲಿ ವ್ಯತ್ಯಾಸ.
6. ಬಂಡವಾಳ ಹೂಡಿಕೆದಾರರ ಮನೋಭಾವ ಮತ್ತು ಭರವಸೆ.
ಹೂಡಿಕೆದಾರರಿಗೆ ಸೂಚನೆ:
ಚಿನ್ನವು ಕ್ಷಣಿಕ ಲಾಭಕ್ಕಿಂತಲೂ ದೀರ್ಘಾವಧಿಯ ಭದ್ರತೆಗಾಗಿ ಹೆಚ್ಚು ಸೂಕ್ತವಾದ ಹೂಡಿಕೆ ಸಾಧನವಾಗಿದೆ. ಇಂದಿನ ಇಳಿಕೆಯೇ ಮುಂದಿನ ದಿನಗಳಲ್ಲಿ ಏರಿಕೆಗೆ ದಾರಿ ಮಾಡಿಕೊಡಬಹುದೆಂಬ ನಿರೀಕ್ಷೆಯೂ ಇದೆ. ಚಿನ್ನದ ದರಗಳು ಈ ಮಟ್ಟದಲ್ಲಿ ಇಳಿಕೆಯಾದಗ ದೀರ್ಘಾವಧಿಯ ಹೂಡಿಕೆಗೆ ತಯಾರಿ ಮಾಡಿಕೊಳ್ಳುವುದು ಸೂಕ್ತವಾಗಬಹುದು.
ಒಟ್ಟಾರೆಯಾಗಿ, ಭಾರತದಲ್ಲಿ ಚಿನ್ನವು ಎಷ್ಟು ಪ್ರಿಯವಾಗಿದೆಯೆಂದರೆ, ಪ್ರತಿ ತಾರತಮ್ಯದ ಮಧ್ಯೆ ತನ್ನ ಮೌಲ್ಯವನ್ನು ಕಳೆದುಕೊಳ್ಳದೆ ತನ್ನ ಸಾಮರ್ಥ್ಯವನ್ನು ನಂಬಿಸಿಕೊಡುತ್ತದೆ. ಇಂದಿನ ಇಳಿಕೆ, ಭವಿಷ್ಯದಲ್ಲಿ ಏನಾಗಬಹುದು ಎಂಬ ಕುತೂಹಲವನ್ನು ಹುಟ್ಟಿಸುತ್ತಿದೆ. ಹೀಗಾಗಿ, ಚಿನ್ನದಲ್ಲಿ ಹೂಡಿಕೆ ಮಾಡುವ ಮುನ್ನ ಆರ್ಥಿಕ ಪರಿಸ್ಥಿತಿಗಳನ್ನು, ಬಡ್ಡಿದರಗಳ ಪರಿವರ್ತನೆ, ಚಿನ್ನದ ಚರಿತ್ರಾತ್ಮಕ ಟ್ರೆಂಡ್ಸ್ಗಳನ್ನು ಗಮನದಲ್ಲಿಡುವುದು ಹೆಚ್ಚು ಸೂಕ್ತವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




