WhatsApp ಬಳಕೆ ಉಚಿತವಿಲ್ಲವೇ? ಮೆಟಾ ಹೊಸ ನೀತಿಗೆ ಚಾಲನೆ – ಜುಲೈ 1ರಿಂದ ಪ್ರತಿ ಮೆಸೇಜ್‌ಗೆ ಶುಲ್ಕ!
ವಾಟ್ಸಾಪ್ ಬಳಕೆದಾರರಿಗೆ ದೊಡ್ಡ ಬದಲಾವಣೆಯೊಂದು ಎದುರಾಗಲಿದೆ. ಸಾಮಾಜಿಕ ಮಾಧ್ಯಮದ ದಿಗ್ಗಜ ಕಂಪನಿಯಾದ ಮೆಟಾ, ತನ್ನ ವಾಟ್ಸಾಪ್ ಪ್ಲಾಟ್‌ಫಾರ್ಮ್‌ಗಾಗಿ ಹೊಸ ಶುಲ್ಕ ನೀತಿಯನ್ನು ಜಾರಿ ಮಾಡಲು ಸಜ್ಜಾಗಿದೆ. ಇದರಿಂದಾಗಿ ಕೆಲವು ಸಂದರ್ಭದಲ್ಲಿ ವಾಟ್ಸಾಪ್ ಮೆಸೇಜ್‌ಗಳಿಗಾಗಿ ಬಳಕೆದಾರರು ಪಾವತಿಸಬೇಕಾದೀತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
ಈ ಹೊಸ ನೀತಿ ಸಾರ್ವಜನಿಕ ಬಳಕೆದಾರರಿಗೆ ತಕ್ಷಣಕ್ಕೆ ಪರಿಣಾಮ ಬೀರುವುದಿಲ್ಲವಾದರೂ, ವ್ಯವಹಾರಿಕ ಬಳಕೆದಾರರಿಗೆ, ವಿಶೇಷವಾಗಿ WhatsApp Business ಖಾತೆಗಳನ್ನು ಬಳಸುವವರಿಗೆ ಇದು ಪ್ರಮುಖ ಬದಲಾವಣೆಯಾಗಿದೆ. ಜುಲೈ 1, 2025ರಿಂದ ಜಾರಿಗೆ ಬರುವ ಈ ಹೊಸ ನೀತಿಯು ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಸಿನೆಸ್ ಖಾತೆಗಳಿಂದ ಕಳುಹಿಸಲಾದ ಕೆಲವು ಪ್ರಕಾರದ ಮೆಸೇಜ್‌ಗಳಿಗೆ ನಿಗದಿತ ಶುಲ್ಕವನ್ನು ವಿಧಿಸುತ್ತದೆ. ಈ ಹೊಸ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಯಾಕೆ ಈ ಬದಲಾವಣೆ?:
ಮೆಟಾ ಕಂಪನಿಯು(meta company) ಈ ಬದಲಾವಣೆಯನ್ನು ಅನಾವಶ್ಯಕ ಭದ್ರತಾ ಉಲ್ಲಂಘನೆಗಳನ್ನು ನಿಯಂತ್ರಿಸಲು, ವ್ಯವಹಾರಿಕ ಮಾದರಿಯನ್ನು ಸುಧಾರಿಸಲು ಹಾಗೂ ಮೆಸೇಜಿಂಗ್ ಉದ್ಯಮದಲ್ಲಿ ಮಾನದಂಡಿತ ವ್ಯವಸ್ಥೆ ರೂಪಿಸಲು ತೆಗೆದುಕೊಂಡಿದೆ. ಬಿಸಿನೆಸ್ ಖಾತೆಗಳ ಮೂಲಕ ಗ್ರಾಹಕರಿಗೆ ತಲುಪುವ ಮಾರ್ಕೆಟಿಂಗ್ ಅಥವಾ ಸೇವಾ ಮೆಸೇಜ್‌ಗಳಿಗೆ ಇದರ ಪರಿಣಾಮ ಬೀಳಲಿದೆ.
ಯಾವೆಲ್ಲ ವಿಭಾಗಗಳಿಗೆ ಶುಲ್ಕ ವಿಧಿಸಲಾಗುತ್ತದೆ?:
WhatsApp Business ಖಾತೆಗಳಿಂದ ಗ್ರಾಹಕರಿಗೆ ಕಳುಹಿಸಲಾಗುವ ಮೆಸೇಜ್‌ಗಳನ್ನು ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅವುಗಳಲ್ಲಿ,
1. ಮಾರ್ಕೆಟಿಂಗ್ ಮೆಸೇಜ್‌ಗಳು (Marketing Templates):
ನೇರವಾಗಿ ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತು, ಡಿಸ್ಕೌಂಟ್‌ಗಳು ಅಥವಾ ಪ್ರಚಾರಾತ್ಮಕ ವಿಷಯಗಳಿರುವ ಮೆಸೇಜ್‌ಗಳು.
ಈ ರೀತಿಯ ಮೆಸೇಜ್‌ಗಳಿಗೆ ಯಾವಾಗಲೂ ಶುಲ್ಕ ವಿಧಿಸಲಾಗುತ್ತದೆ.
2. ಯುಟಿಲಿಟಿ ಮೆಸೇಜ್‌ಗಳು (Utility Templates):
ಆದೇಶ ದೃಢೀಕರಣ, ರಸೀದಿಗಳು, ಅಥವಾ ತಾಂತ್ರಿಕ ಮಾಹಿತಿಯಂತಹ ಸೇವಾ ಸಂಬಂಧಿತ ಮೆಸೇಜ್‌ಗಳು.
ಈ ಮೆಸೇಜ್‌ಗಳು customer service window ಅನ್ನು ಮೀರಿ ಕಳುಹಿಸಿದಾಗ ಮಾತ್ರ ಶುಲ್ಕ ಬಾಧ್ಯತೆ ಇರುತ್ತದೆ.
3. ದೃಢೀಕರಣ ಮೆಸೇಜ್‌ಗಳು (Authentication Templates):
OTP, ಲಾಗಿನ್ ದೃಢೀಕರಣ ಅಥವಾ ಖಾತೆ ಸಂರಕ್ಷಣೆಗಾಗಿ ಕಳುಹಿಸುವ ಸಂದೇಶಗಳು.
Customer Service Window ಎಂದರೆ ಏನು?:
WhatsApp Businessನಲ್ಲಿ ಗ್ರಾಹಕರು ಸಂದೇಶ ಕಳುಹಿಸಿದ 24 ಗಂಟೆಗಳ ಒಳಗೆ, ಬಿಸಿನೆಸ್ ಖಾತೆ ಉಚಿತವಾಗಿ ಪ್ರತಿಕ್ರಿಯಿಸಬಹುದಾದ ಅವಧಿಯೇ “Customer Service Window.” ಈ ವಿಂಡೋ ಒಳಗೆ ಕಳುಹಿಸುವ ಯುಟಿಲಿಟಿ ಮೆಸೇಜ್‌ಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ 24 ಗಂಟೆಗಳ ಬಳಿಕ ಕಳುಹಿಸಿದರೆ, ಪ್ರತಿ ಮೆಸೇಜ್‌ಗೆ ನಿಗದಿತ ಶುಲ್ಕ ಅನ್ವಯಿಸುತ್ತದೆ.
ಯಾರು ಇದರಿಂದ ಪ್ರಭಾವಿತರಾಗುತ್ತಾರೆ?:
ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರು.
ಇ-ಕಾಮರ್ಸ್ ಕಂಪನಿಗಳು.
ಸೇವಾ ಒದಗಿಸುವ ಸಂಸ್ಥೆಗಳು.
ಗ್ರಾಹಕರಿಗೆ ನಿತ್ಯವಾಗಿ ಸಂದೇಶ ಕಳುಹಿಸುವ ಸಂಸ್ಥೆಗಳು.
ಸಾಮಾನ್ಯ ಬಳಕೆದಾರರು, ಅಂದರೆ ನಿಜವಾದ WhatsApp ಯೂಸರ್ಸ್ ನಡುವಿನ ವೈಯಕ್ತಿಕ ಸಂದೇಶಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ ಎಂಬುದನ್ನು ಮೆಟಾ ಸ್ಪಷ್ಟಪಡಿಸಿದೆ.
ಶುಲ್ಕ ಎಷ್ಟು? ಯಾವಾಗ ಜಾರಿಗೆ ಬರುತ್ತದೆ?:
ಶುಲ್ಕದ ಪ್ರಮಾಣವು ಹಲವಾರು ಅಂಶಗಳ ಆಧಾರದಲ್ಲಿ ನಿರ್ಧಾರವಾಗುತ್ತದೆ, ಉದಾಹರಣೆಗೆ, ಭಾರತದಲ್ಲಿ ಪ್ರತೀ ಮಾರ್ಕೆಟಿಂಗ್ ಮೆಸೇಜ್‌ಗೆ ₹0.80 ರಿಂದ ₹1.30 ವರೆಗೆ ಶುಲ್ಕ ವಿಧಿಸಬಹುದೆಂದು ತಾತ್ಕಾಲಿಕವಾಗಿ ಅಂದಾಜಿಸಲಾಗಿದೆ. ಆದರೆ ಅಧಿಕೃತ ಘೋಷಣೆಗೆ ನಿರೀಕ್ಷೆಯಿದೆ.
ಗ್ರಾಹಕರ ಫೋನ್ ನಂಬರ್‌ನ ದೇಶಕೋಡ್.
ಮೆಸೇಜ್‌ನ ವಿಭಾಗ (Marketing, Utility, Authentication).
ಸಂದೇಶ ಕಳುಹಿಸುವ ಸಮಯ customer service window ಒಳಗೇನಾ ಅಥವಾ ಹೊರಗೇನಾ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶುಲ್ಕವನ್ನು ಏರಿಕೆ ಮಾಡಲಾಗುತ್ತದೆ.
ಮೆಟಾ ಈ ಹೊಸ ಶುಲ್ಕ ಪದ್ಧತಿಯನ್ನು ಜುಲೈ 1, 2025 ರಿಂದ ಜಾರಿಗೆ ತರಲು ಯೋಜಿಸಿದೆ.
ಒಟ್ಟಾರೆಯಾಗಿ, WhatsApp Business ಬಳಕೆದಾರರಿಗೆ ಇದು ಮಹತ್ವದ ಬದಲಾವಣೆ. ಸಾಧಾರಣ ಬಳಕೆದಾರರಿಗೆ ಯಾವುದೇ ಶುಲ್ಕ ಬಾಧ್ಯತೆ ಇಲ್ಲವಾದರೂ, ವ್ಯವಹಾರಿಕ ಉದ್ದೇಶಗಳಿಗಾಗಿ ಈ ಪ್ಲಾಟ್‌ಫಾರ್ಮ್ ಬಳಸುವವರು ಈಗಿನಿಂದ ಹೆಚ್ಚಿನ ಜವಾಬ್ದಾರಿಯಿಂದ ಮೆಸೇಜ್ ಕಳುಹಿಸಬೇಕು. ಬಳಕೆದಾರರನ್ನು ಸ್ಪ್ಯಾಮ್‌ಗಳಿಂದ(Scam) ರಕ್ಷಿಸುವುದು, ವ್ಯವಹಾರಿಕ ಸಂವಹನದ ಗುಣಮಟ್ಟವನ್ನು ಹೆಚ್ಚಿಸುವುದು ಈ ಬದಲಾವಣೆಯ ಹಿನ್ನಲೆಯಲ್ಲಿ ಮೆಟಾ ನೀಡಿರುವ ಪ್ರಮುಖ ಕಾರಣಗಳಾಗಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.