ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳಿಗಾಗಿ 2025ರ KCET (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶವನ್ನು ಇಂದು (ಮೇ 24, 2025) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಲಿದೆ. ಉನ್ನತ ಶಿಕ್ಷಣ ಮಂತ್ರಿ ಡಾ. ಎಂ.ಸಿ. ಸುಧಾಕರ್ ಅವರು ಬೆಳಿಗ್ಗೆ 11:30ಕ್ಕೆ KEA ಕಚೇರಿಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫಲಿತಾಂಶ ನೋಡುವುದು ಹೇಗೆ?
ವಿದ್ಯಾರ್ಥಿಗಳು ಮಧ್ಯಾಹ್ನ 2:00ರ ನಂತರ ಈ ಕೆಳಗಿನ ವೆಬ್ಸೈಟ್ಗಳಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು:
- ಮೊದಲು KEA ಅಧಿಕೃತ ವೆಬ್ಸೈಟ್ kea.kar.nic.in ಅಥವಾ cetonline.karnataka.gov.in/kea/ cetonline.karnataka.gov.in ಭೇಟಿ ನೀಡಿ.
- “UGCET 2025 Result” ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ.
- “ಸಬ್ಮಿಟ್” ಬಟನ್ ಕ್ಲಿಕ್ ಮಾಡಿ.
- ನಿಮ್ಮ KCET ಫಲಿತಾಂಶ ತೆರೆಯುತ್ತದೆ. ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಫಲಿತಾಂಶದ ನಂತರದ ಪ್ರಕ್ರಿಯೆಗಳು
ಅಂಕಗಳ ಪರಿಶೀಲನೆ : ಫಲಿತಾಂಶದಲ್ಲಿ ತಪ್ಪು ಇದ್ದರೆ, KEAಗೆ ತಿದ್ದುಪಡಿ ಅರ್ಜಿ ಸಲ್ಲಿಸಬೇಕು.
ಆಯ್ಕೆ ನಮೂದು (Option Entry) ಮೇ 27ರಿಂದ ಕೋರ್ಸ್ ಮತ್ತು ಕಾಲೇಜು ಆಯ್ಕೆ ಮಾಡಲು ಅವಕಾಶ. ಸರಿಯಾದ ಆದ್ಯತೆಗಳನ್ನು ಗಮನಿಸಿ.
ದಾಖಲೆ ಪರಿಶೀಲನೆ: ಜೂನ್ 1ರಿಂದ ಪ್ರಾರಂಭ. ಇದಕ್ಕಾಗಿ ಈ ದಾಖಲೆಗಳು ಅಗತ್ಯ:
- 2ನೇ PUC Marks Sheet
- KCET ಹಾಲ್ ಟಿಕೆಟ್
- ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣಪತ್ರ (ಅಗತ್ಯಿದ್ದರೆ)
ಸೀಟ್ ಹಂಚಿಕೆ ಮತ್ತು ಕೌನ್ಸೆಲಿಂಗ್
- ಜೂನ್ 15ರಂದು ಮೊದಲ ಹಂತದ ಸೀಟ್ ಅಲೋಟ್‌ಮೆಂಟ್.
- ಸೀಟ್ ಸ್ವೀಕರಿಸಿದ ನಂತರ ಫೀ ಪಾವತಿಸಿ.
ಮುಖ್ಯ ದಿನಾಂಕಗಳು
- ಫಲಿತಾಂಶ: ಮೇ 24, 2025
- ಆಯ್ಕೆ ನಮೂದು: ಮೇ 27, 2025
- ದಾಖಲೆ ಪರಿಶೀಲನೆ: ಜೂನ್ 1 ರಿಂದ
- ಕೊನೆಯ ಹಂತದ ಪ್ರವೇಶ: ಜುಲೈ 2025 ಅಂತ್ಯದೊಳಗೆ
ಸೂಚನೆ: ಯಾವುದೇ ಸಂದೇಹಗಳಿದ್ದರೆ, KEA ಹೆಲ್ಪ್‌ಲೈನ್‌ಗೆ ಸಂಪರ್ಕಿಸಿ. ಫಲಿತಾಂಶದ ನಂತರ ಶಾಂತವಾಗಿ ಮುಂದಿನ ಹಂತಗಳನ್ನು ಪೂರೈಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.