Gold Rate Today : ಚಿನ್ನದ ಬೆಲೆಯಲ್ಲಿ ದಿಡೀರ್ ಏರಿಕೆ.! ಇಂದು ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ.?

IMG 20250522 WA0001

WhatsApp Group Telegram Group

ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ: ಮೇ 22ರಂದು ಗ್ರಾಂಗೆ ₹9,743 ತಲುಪಿದ 24 ಕ್ಯಾರೆಟ್ ದರ

ಇಂದಿನ ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು(Gold and Silver rate) ಜನರ ನಿದ್ದೆ ಕದಿಯುವ ಮಟ್ಟಕ್ಕೆ ಏರಿಕೆ ಕಂಡಿದ್ದು, ವಿಶೇಷವಾಗಿ ಆಭರಣ ಪ್ರಿಯರು ಹಾಗೂ ಚಿನ್ನವನ್ನು ಹೂಡಿಕೆಯ(Investment) ರೂಪದಲ್ಲಿ ಕಾಯುತ್ತಿದ್ದವರಿಗೆ ಆತಂಕದ ವಿಷಯವಾಗಿದೆ. ಚಿನ್ನವು ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿಯೂ ಗಂಭೀರ ಪಾತ್ರ ವಹಿಸುತ್ತಿರುವ ಸಮಯದಲ್ಲಿ ಇಂತಹ ಬೆಲೆ ಏರಿಕೆ (Increased rate) ಒಂದು ದೊಡ್ಡ ಚರ್ಚೆಯ ವಿಷಯವಾಗಿದೆ. ಏಕೆಂದರೆ ಭಾರತ, ವಿಶ್ವದ ಅತಿಹೆಚ್ಚು ಚಿನ್ನ ಖರೀದಿಸುವ ದೇಶವೆಂದು ಗುರುತಿಸಿಕೊಂಡಿದೆ. ಮದುವೆ, ಹಬ್ಬ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಚಿನ್ನ ಖರೀದಿಯು ಒಂದು ಸಂಪ್ರದಾಯವಾಗಿದ್ದು, ಇದರಿಂದ ದೇಶೀಯ ಬೇಡಿಕೆಯು ಸದಾ ಹೆಚ್ಚಾಗಿ ಇರುತ್ತದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 22, 2025: Gold Price Today

ಕಳೆದ ಮೂರು ನಾಲ್ಕು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದಂತಹ ಚಿನ್ನದ ದರ ನೆನ್ನೆಯಿಂದ ಏರಿಕೆ ಕಡೆ ದಾಪುಗಾಲು ಇಡುತ್ತಿದೆ. ಹೌದು, ನಿನ್ನೆ ಬೆಳಗ್ಗೆ ಇಳಿಕೆಯನ್ನು ಕಂಡಿದ್ದಂತಹ ಚಿನ್ನದ ದರ ಸಂಜೆಯೊಳಗೆ ಭಾರಿ ಪ್ರಮಾಣದ ಏರಿಕೆಯನ್ನು ಕಂಡಿದೆ. ಈ ಏರಿಕೆಯಿಂದ ಗ್ರಾಹಕರಲ್ಲಿ (Buyers) ನಿರಾಸೆ ವ್ಯಕ್ತವಾಗುತ್ತಿದ್ದು ಚಿನ್ನ ಖರೀದಿಸುವುದನ್ನು ಮುಂದೂಡುತ್ತಿದ್ದಾರೆ. ಹಾಗಿದ್ದರೆ, ಮೇ 22, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,931 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,743 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,308 ಆಗಿದೆ. ಒಟ್ಟಾರೆಯಾಗಿ, 242 ರೂ. ನಷ್ಟು ಏರಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:,1,00,100 ರೂ. ನಷ್ಟಿದೆ.

ಮೇ 21, 2025 ರಂದು ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರದ ಸ್ಥಿತಿ ಈ ಕೆಳಗಿನಂತಿದೆ:

ಚಿನ್ನದ ದರದ ವಿವರ (Bengaluru Gold Rate),
22 ಕ್ಯಾರೆಟ್ ಚಿನ್ನ (10 ಗ್ರಾಂ):
₹89,300 (₹2,200ರ ಏರಿಕೆ).
100 ಗ್ರಾಂಗೆ ₹8,93,000

24 ಕ್ಯಾರೆಟ್ ಚಿನ್ನ (10 ಗ್ರಾಂ):
₹97,420 (₹2,400ರಷ್ಟು ಏರಿಕೆ).
100 ಗ್ರಾಂಗೆ ₹9,74,200

18 ಕ್ಯಾರೆಟ್ ಚಿನ್ನ (10 ಗ್ರಾಂ):
₹73,070
1 ಗ್ರಾಂಗೆ ₹7,307
100 ಗ್ರಾಂಗೆ ₹7,30,700

ಈ ಏರಿಕೆಯು ಕೇವಲ ನಗರದ ಮಟ್ಟದಲ್ಲಿ ಅಲ್ಲದೆ, ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ ಸೇರಿದಂತೆ ಕರ್ನಾಟಕದ(Karnataka) ಪ್ರಮುಖ ನಗರಗಳಲ್ಲಿಯೂ ಕೂಡ 18K, 22K ಹಾಗೂ 24K ದರಗಳು ಇದೇ ಪ್ರಮಾಣದಲ್ಲಿ ಇದ್ದು, ಸ್ಥಳೀಯ ದರದ ತಾರತಮ್ಯ ಬಹಳ ಕಡಿಮೆ ಇದೆ ಎಂದು ಹೇಳಬಹುದು.

ಬೆಳ್ಳಿಯ ದರ (Silver Rate):
1 ಕಿಲೋ ಬೆಳ್ಳಿ: ₹1,00,000 (₹3,000ರಷ್ಟು ಏರಿಕೆ).
1 ಗ್ರಾಂ ಬೆಳ್ಳಿ: ₹100
10 ಗ್ರಾಂ: ₹1,000
100 ಗ್ರಾಂ: ₹10,000

ಚಿನ್ನದ ದರ ಏರಿಕೆಯ ಹಿಂದಿನ ಕಾರಣಗಳೇನು?:

1. ಅಂತರಾಷ್ಟ್ರೀಯ ಮಾರುಕಟ್ಟೆ (International market) ಪ್ರಭಾವದಿಂದ
ಯುಎಸ್ ಚಿನ್ನದ ಪ್ಯೂಚರ್ಸ್ $3,307.30 ತಲುಪಿದ್ದು, ಸ್ಪಾಟ್ ಚಿನ್ನವು $3,305.39ಗೆ ಏರಿಕೆಯಾಗಿದೆ.
2. ವಿನಿಮಯ ದರಗಳ ಬದಲಾವಣೆ:
3. ಗದ್ದಲದ ಆರ್ಥಿಕ ಸ್ಥಿತಿಗತಿಯಲ್ಲಿಯೂ ಚಿನ್ನ ಭದ್ರ ಹೂಡಿಕೆಯಾದ್ದರಿಂದ ಹೆಚ್ಚು ಒಲವು ತೋರಿಸುತ್ತಿದ್ದಾರೆ.
4. ಯುದ್ಧ ಭೀತಿಗಳು, ಸುಂಕ ವಿವಾದಗಳು, ಡಾಲರ್ ಬಲವರ್ಧನೆ ಇವೆಲ್ಲ ಕಾರಣಗಳೆಂದು ವಿಶ್ಲೇಷಕರು (Specialist) ಹೇಳಿದ್ದಾರೆ.
5. ಮದುವೆ/ಹಬ್ಬಗಳ ಕಾಲದಲ್ಲಿನ ಆಭರಣ ಖರೀದಿ ಬೇಡಿಕೆಯನ್ನು ಹೆಚ್ಚಿಸುತ್ತದೆ.

ಮೇ ತಿಂಗಳ ಮೊದಲ ದಿನಗಳಿಂದ ಚಿನ್ನದ ಬೆಲೆ ಏರಿಕೆ ಯಥಾಸ್ಥಿತಿಯಲ್ಲಿ ಇತ್ತು, ಆದರೆ 21ರ ಮಧ್ಯದ ವೇಳೆಗೆ ದಿಟ್ಟ ಏರಿಕೆಗೆ ಕಾರಣವಾಯಿತು. ಮುಂದಿನ ದಿನಗಳಲ್ಲಿ ಜಾಗತಿಕ ತಿರುವುಗಳು, ದೇಶೀಯ ನೀತಿಗಳಿಂದಾಗಿ ದರದ ಚಲನೆಯು ಮುಂದುವರೆಯಲಿದೆ.

ಒಟ್ಟಾರೆಯಾಗಿ ನೋಡುವುದಾದರೆ, ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಭಾರತೀಯ ಆರ್ಥಿಕ ವ್ಯವಸ್ಥೆಯೊಡನೆ (Indian economic system) ಬಿಗಿಯಾಗಿ ಸಂಬಂಧ ಹೊಂದಿದ್ದು, ಸಣ್ಣ ಬದಲಾವಣೆ ಕೂಡ ಸಾಮಾನ್ಯ ಜನರ ಖರೀದಿ ಶಕ್ತಿಗೆ ಪ್ರಭಾವ ಬೀರುತ್ತದೆ. ಇಂತಹ ಬೆಲೆ ಏರಿಕೆಗಳು ಜನರಲ್ಲಿ ಆತಂಕ ಹುಟ್ಟಿಸಬಹುದಾದರೂ, ತಜ್ಞರ ಅಭಿಪ್ರಾಯದಂತೆ, ಚಿನ್ನದ ಹೂಡಿಕೆಗೆ ಇತಿಹಾಸಿಕವಾಗಿ ಸದಾ ಮೌಲ್ಯವಿತವಾಗಿರುತ್ತವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!