43 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ! ಕಡಿಮೆ ಬಜೆಟ್ ನ ಒಂದು ಉತ್ತಮ ಸ್ಮಾರ್ಟ್ ಟಿವಿ ಇಲ್ಲಿದೆ..!
ಇಂದಿನ ಡಿಜಿಟಲ್ ಯುಗದಲ್ಲಿ ಮನರಂಜನೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಧನವೆಂದರೆ ಸ್ಮಾರ್ಟ್ ಟಿವಿಗಳು. ವಿಶಾಲ ಪರದೆ, ತೀಕ್ಷ್ಣ ಚಿತ್ರ ಗುಣಮಟ್ಟ, ಸ್ಪಷ್ಟ ಶಬ್ದ ಪ್ರಪಂಚ, ಮತ್ತು ಇಂಟರ್ನೆಟ್ ಜೋಡಣೆ ಮೂಲಕ ಒಟ್ಟಾರೆ ‘ಥಿಯೇಟರ್’ (Theater) ಅನುಭವವನ್ನು ಮನೆಯಲ್ಲಿಯೇ ನೀಡುತ್ತವೆ. ಆದರೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕೆಂದರೆ ಹೆಚ್ಚಿನ ಹಣ ಖರ್ಚು ಮಾಡಬೇಕು ಎಂಬ ನಂಬಿಕೆ ಇಂದಿಗೂ ಹಲವರಲ್ಲಿದೆ. ಆದರೆ ಈಗ ನೀವು ಆ ನಂಬಿಕೆಯನ್ನು ಬದಿಗಿಟ್ಟು, 30,000 ರೂಪಾಯಿಗಿಂತಲೂ ಕಡಿಮೆ ವೆಚ್ಚದಲ್ಲಿ 43 ಇಂಚಿನ ಅತ್ಯುತ್ತಮ ಗುಣಮಟ್ಟದ ಟಿವಿಗಳನ್ನು ಖರೀದಿಸಬಹುದಾಗಿದೆ.
ನಾನಾ ಕಂಪನಿಗಳಿಂದ ಲಭ್ಯವಿರುವ ಈ ಟಿವಿಗಳು ಕೇವಲ ಕಡಿಮೆ ಬೆಲೆಯಲ್ಲಿ ಸಿಗುವುದಷ್ಟೇ ಅಲ್ಲದೆ, ಉತ್ತಮ ತಂತ್ರಜ್ಞಾನ(Technology), ಶ್ರೇಷ್ಠ ಡಿಸ್ಪ್ಲೇ ಗುಣಮಟ್ಟ, ಮತ್ತು ಪ್ರಬಲ ಶಬ್ದ ವ್ಯವಸ್ಥೆಯನ್ನೂ ಹೊಂದಿವೆ. ಹಾಗಿದ್ದರೆ ಕೆಲವು ಪ್ರಮುಖ ಬ್ರ್ಯಾಂಡ್‌ಗಳ ಟಿವಿ ಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸ್ಯಾಮ್‌ಸಂಗ್ 43 ಇಂಚಿನ 4ಕೆ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಎಲ್‌ಇಡಿ ಟಿವಿ (Samsung 43-Inch 4K Ultra HD Smart LED TV):

ಸ್ಯಾಮ್‌ಸಂಗ್ ಕಂಪನಿಯ ಈ ಮಾದರಿಯ ಟಿವಿಯು ₹30,790 ರೂಪಾಯಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಯ್ದ ಬ್ಯಾಂಕ್‌ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Debit or credit card) ಮೂಲಕ ಖರೀದಿಸಿದರೆ ₹2,000 ರಿಯಾಯಿತಿ ಲಭಿಸುತ್ತದೆ. ಇದರ ಫಲವಾಗಿ ಒಟ್ಟು ಬೆಲೆ ₹30,000 ಕ್ಕಿಂತ ಕಡಿಮೆಯಾಗುತ್ತದೆ. ಈ ಟಿವಿಯು 4ಕೆ ತಂತ್ರಜ್ಞಾನ ಹೊಂದಿರುವ ಪರದೆ ಮತ್ತು 20 ವಾಟ್ ಶಬ್ದ ಔಟ್‌ಪುಟ್ ಹೊಂದಿದೆ.
ಈ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಟಿಸಿಎಲ್ 43 ಇಂಚಿನ 4ಕೆ ಕ್ಯೂಎಲ್‌ಇಡಿ ಗೂಗಲ್ ಸ್ಮಾರ್ಟ್ ಟಿವಿ (TCL 43-Inch 4K QLED Google Smart TV) :

ಈ ಮಾದರಿ ₹26,990 ರಲ್ಲಿ ಅಮೆಜಾನ್‌ನಲ್ಲಿ (Amezon) ಲಭ್ಯವಿದೆ. ಬ್ಯಾಂಕ್ ರಿಯಾಯಿತಿಯ ಮೂಲಕ ₹2,000 ಕಡಿತ ಬೆಲೆಯೂ ಸಿಗಬಹುದು. ಇದರಲ್ಲಿ 30 ವಾಟ್ ಶಬ್ದ ಶಕ್ತಿ, 2 ಜಿಬಿ RAM ಮತ್ತು 32 ಜಿಬಿ ಆಂತರಿಕ ಸಂಗ್ರಹಣೆಯ ವ್ಯವಸ್ಥೆ ಇದೆ. ಗೂಗಲ್ ಟಿವಿ (Google TV) ಸೌಲಭ್ಯದಿಂದಾಗಿ ಬಳಕೆದಾರರು ಬಹುಪಾಲು OTT ಸೇವೆಗಳನ್ನು ಸುಲಭವಾಗಿ ಬಳಸಬಹುದು.
ಈ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ರೆಡ್ಮಿ 43 ಇಂಚಿನ ಎಫ್ ಸೀರೀಸ್ 4ಕೆ ಫೈರ್ ಎಲ್‌ಇಡಿ ಟಿವಿ (Redmi 43-Inch F Series 4K Fire LED TV) :

ರೆಡ್ಮಿಯ ಈ ಟಿವಿಯು ₹25,999 ರ ರಿಯಾಯಿತಿಯ ಬೆಲೆಯಲ್ಲಿ ಲಭ್ಯವಿದೆ. ಜೊತೆಗೆ ಬ್ಯಾಂಕ್ ಕಾರ್ಡ್‌ಗಳ ಮೂಲಕ ₹2,000 ರಿಯಾಯಿತಿ ಸಿಗುತ್ತದೆ. 24 ವಾಟ್ ಶಬ್ದ ವ್ಯವಸ್ಥೆ ಮತ್ತು ವಿಶಾಲ 4ಕೆ ಪರದೆ ಇದರ ಪ್ರಮುಖ ಆಕರ್ಷಣೆಗಳು.
ಈ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಶಿಯೋಮಿ 43 ಇಂಚಿನ ಎಫ್‌ಎಕ್ಸ್ ಪ್ರೊ ಸರಣಿ 4ಕೆ ಕ್ಯೂಎಲ್‌ಇಡಿ ಸ್ಮಾರ್ಟ್ ಫೈರ್ ಟಿವಿ (Xiaomi 43-Inch X Pro Series 4K QLED Smart Fire TV) :

ಶಿಯೋಮಿಯ ಈ ಪ್ರೀಮಿಯಂ ಮಾದರಿ ₹27,999 ಕ್ಕೆ ಲಭ್ಯವಿದೆ. ಇದು ಅನೇಕ OTT ಅಪ್ಲಿಕೇಶನ್‌ಗಳಿಗೆ ಬೆಂಬಲ ನೀಡುತ್ತದೆ ಮತ್ತು 30 ವಾಟ್ ಶಕ್ತಿಯ ಆಡಿಯೋ ಸಿಸ್ಟಂ ಹೊಂದಿದೆ. ಬ್ಯಾಂಕ್ ರಿಯಾಯಿತಿ ಇದರ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.
ಈ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5. ತೋಶಿಬಾ 43 ಇಂಚಿನ ಸಿ450ಎಂಇ ಸರಣಿ 4ಕೆ ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿ (Toshiba 43-Inch C450ME Series 4K QLED Smart TV) :

ಅಮೆಜಾನ್‌ನಲ್ಲಿ ₹25,999 ರ ರಿಯಾಯಿತಿಯ ಬೆಲೆಯಲ್ಲಿ ದೊರೆಯುವ ಈ ಟಿವಿಯು 24 ವಾಟ್ ಶಬ್ದ ಔಟ್‌ಪುಟ್(Output) ನ್ನು ಹೊಂದಿದೆ. ಜೊತೆಗೆ ಬ್ಯಾಂಕ್ ಕಾರ್ಡ್ ಬಳಸಿದರೆ ₹2,000 ರಿಯಾಯಿತಿಯೂ ಲಭ್ಯವಿದೆ. ಉತ್ತಮ ದೃಶ್ಯ ಅನುಭವಕ್ಕೆ ಇದು ಯೋಗ್ಯ ಆಯ್ಕೆಯಾಗಿದೆ.
ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಬೇಕೆಂದರೆ ಹೆಚ್ಚು ಹಣ ಬೇಕೆಂದು ಭಾವಿಸುವ ಕಾಲ ಕಳೆದಿದೆ. ಕಡಿಮೆ ಬಜೆಟ್‌ನಲ್ಲೇ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್ ಟಿವಿಗಳನ್ನು ಖರೀದಿಸಲು ಈಗ ಉತ್ತಮ ಅವಕಾಶ ಸಿಕ್ಕಿದೆ. ನಿಮ್ಮ ಬಳಿಯಿರುವ ಹಣವನ್ನು ಸೂಕ್ತವಾಗಿ ಉಪಯೋಗಿಸಿ, ದೊಡ್ಡ ಪರದೆ ಮತ್ತು ಶ್ರೇಷ್ಠ ಅನುಭವ (Good experience) ಹೊಂದಿರುವ ಟಿವಿಗಳನ್ನು ನಿಮ್ಮ ಮನೆಗೆ ತಂದುಕೊಳ್ಳಿ.
ಈ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.