Engineering: ಬಿ.ಇ ಪ್ರವೇಶಕ್ಕೆ ಹೊಸ ರೂಲ್ಸ್, ಕಂಪ್ಯೂಟರ್ ಸೈನ್ಸ್ & ಇತರ ಬೇಡಿಕೆ ಸೀಟುಗಳಿಗೆ ಮಿತಿ.

Picsart 25 05 16 23 29 36 505

WhatsApp Group Telegram Group

ಕಂಪ್ಯೂಟರ್ ಸೈನ್ಸ್ ಮತ್ತು AI ಕೋರ್ಸ್‌ಗಳ ಸೀಟು ಮಿತಿ ಬಗ್ಗೆ ಕ್ರಮಕೈಗೊಳ್ಳಲು ಸರ್ಕಾರ ತಯಾರಿ

ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ(Technology filed) ವೇಗವಾಗಿ ಬೆಳವಣಿಗೆ ಸಂಭವಿಸುತ್ತಿರುವುದರಿಂದ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಹಾಗೂ ಯಂತ್ರ ಅಧ್ಯಯನ ಮುಂತಾದ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ (Engineer course) ವಿದ್ಯಾರ್ಥಿಗಳ ಆಸಕ್ತಿ ದಿನೇದಿನೆ ಹೆಚ್ಚುತ್ತಿದೆ. ಉದ್ಯೋಗ ಮಾರುಕಟ್ಟೆಯಲ್ಲೂ ಈ ಕ್ಷೇತ್ರಗಳೇ ಮುಂಚೂಣಿಯಲ್ಲಿರುವುದರಿಂದ ಈ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಈ ಕಾರಣದಿಂದಾಗಿ ಎಂಜಿನಿಯರಿಂಗ್ ಕಾಲೇಜುಗಳು ಬೇಡಿಕೆ ಇರುವ ಕೋರ್ಸ್‌ಗಳ ಸೀಟುಗಳನ್ನು ಹೆಚ್ಚಿಸಿ, ಬೇಡಿಕೆ ಕಡಿಮೆ ಇರುವ ಕೋರ್ಸ್‌ಗಳನ್ನು ಮುಚ್ಚುವ ಪ್ರವೃತ್ತಿಯು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಇತರ ತಾಂತ್ರಿಕ ವಿಭಾಗಗಳ (Technical course) ಅಭಿವೃದ್ಧಿಗೆ ಅಡ್ಡಿಯಾಗುವ ಅಸಮತೋಲನದ ಪರಿಸ್ಥಿತಿ ಉಂಟಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಹಿನ್ನಲೆಯಲ್ಲಿ, ಸರ್ಕಾರವು (Government) ಎಂಜಿನಿಯರಿಂಗ್ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಸೇರಿದಂತೆ ಹೆಚ್ಚು ಬೇಡಿಕೆ ಇರುವ ಕೋರ್ಸ್‌ಗಳ ಸೀಟು ಹೆಚ್ಚಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಸೀಟುಗಳ ಮೇಲಿನ ಮಿತಿಯನ್ನು ತೆಗೆದು ಹಾಕಿದ ನಂತರ ಹಲವಾರು ಎಂಜಿನಿಯರಿಂಗ್ ಕಾಲೇಜುಗಳು ತಮ್ಮ ಪಾಠ್ಯಕ್ರಮದಲ್ಲಿ ಜನಪ್ರಿಯ ಕೋರ್ಸ್‌ಗಳಿಗೆ ಹೆಚ್ಚಿನ ಸೀಟುಗಳನ್ನು ಸೇರಿಸಿಕೊಂಡಿವೆ. ಆದರೆ ಇದು ಉಳಿದ ಕೋರ್ಸ್‌ಗಳಿಗೆ ಹಾನಿಯಾಗಿದೆ ಎಂಬ ಅಂಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

2024-25ನೇ ಸಾಲಿನಲ್ಲಿ ತೆಲಂಗಾಣ ಸರ್ಕಾರ (Thelangana Government) ಇದೇ ರೀತಿಯ ಕ್ರಮ ಕೈಗೊಂಡಿತ್ತು. ಸೀಟು ಹೆಚ್ಚಳಕ್ಕೆ ನಿರ್ಬಂಧ ಹೇರಿದ ಈ ನಿರ್ಧಾರವನ್ನು ಕೆಲ ಎಂಜಿನಿಯರಿಂಗ್ ಕಾಲೇಜುಗಳು ಪ್ರಶ್ನಿಸಿ ನ್ಯಾಯಾಲಯಕ್ಕೆ ಶರಣಾಗಿದ್ದರೂ, ನ್ಯಾಯಾಲಯವು ಸರ್ಕಾರದ ಕ್ರಮಕ್ಕೆ ಬೆಂಬಲ ನೀಡಿದೆ.

ಈ ಸಂಬಂಧ ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, “AICTEಗೆ ಈಗಾಗಲೇ ಪತ್ರ ಬರೆದಿದ್ದು, ತೆಲಂಗಾಣದ ಪ್ರಕರಣದ ತೀರ್ಪಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಸಮಾಜದ ಹಾಗೂ ವಿದ್ಯಾರ್ಥಿಗಳ ಭವಿಷ್ಯ (Students future) ದೃಷ್ಟಿಯಿಂದ ಕೋರ್ಸ್‌ಗಳ ಮಧ್ಯೆ ಸಮತೋಲನ ಉಳಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ,” ಎಂದು ತಿಳಿಸಿದ್ದಾರೆ.

ಬೇಡಿಕೆ ಇರುವ ಕೋರ್ಸ್‌ಗಳ ಪ್ರಮಾಣ (2024-25):

ಕಂಪ್ಯೂಟರ್ ಸೈನ್ಸ್: 108
ಕೃತಕ ಬುದ್ಧಿಮತ್ತೆ: 101
ಯಂತ್ರ ಅಧ್ಯಯನ: 101
ದತ್ತಾಂಶ ವಿಜ್ಞಾನ: 100
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್: 97

ಈ ಕ್ರಮದಿಂದ ಮುಂಬರುವ ದಿನಗಳಲ್ಲಿ ತಾಂತ್ರಿಕ ಶಿಕ್ಷಣದಲ್ಲಿ (Technical Education) ಸಮತೋಲನ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಾಧ್ಯತೆ ಇದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!