ಮೇ 15, 2025: ಚಿನ್ನದ ಬೆಲೆಯಲ್ಲಿ ಇಳಿಕೆ – ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ ಸಿಹಿ ಸುದ್ದಿ!
ಭಾರತದಲ್ಲಿ ಚಿನ್ನ (Gold) ಎನ್ನುವುದು ಕೇವಲ ಆಭರಣವಷ್ಟೇ ಅಲ್ಲ, ಅದು ಸಂಸ್ಕೃತಿ, ಸಂಪ್ರದಾಯ ಮತ್ತು ಭದ್ರ ಹೂಡಿಕೆಯ (Investment) ಸಂಕೇತವೂ ಹೌದು. ತಲೆಮಾರಿಗೆ ತಲೆಮಾರಾಗಿ ಸಾಗುತ್ತಿರುವ ಈ ಚಿನ್ನದ ಪ್ರೀತಿ ಇಂದಿಗೂ ಅದೇ ರೀತಿ ಉಳಿದಿದೆ. ಆದ್ದರಿಂದ ಪ್ರತಿದಿನದ ಚಿನ್ನದ ಬೆಲೆಯ ಏರಿಳಿತವು ಲಕ್ಷಾಂತರ ಜನರ ಗಮನ ಸೆಳೆಯುತ್ತದೆ. ವಿಶೇಷವಾಗಿ ಹಬ್ಬ, ಮದುವೆ, ಉಪನಯನ ಅಥವಾ ಇತರೆ ಆಧ್ಯಾತ್ಮಿಕ ಸಂಧರ್ಭಗಳಲ್ಲಿ ಚಿನ್ನದ ಮಹತ್ವವು ಅಪಾರವಾಗಿದ್ದು, ಇದರ ಬೆಲೆಯ ಸ್ವಲ್ಪ ಬದಲಾವಣೆಯಾದರೂ ಗ್ರಾಹಕರ ನಿರ್ಧಾರದಲ್ಲಿ ಭಾರೀ ಪ್ರಭಾವ ಬೀರುತ್ತದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 15, 2025: Gold Price Today
ಹೌದು, ಮೇ 14 ರಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗೆ ಭಾರಿ ಕುಸಿತ (Decrease) ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ದರಗಳು ಹಾವು-ಏಣಿ ಆಟ ಆಡುತ್ತಿದ್ದರೂ, ಇತ್ತೀಚಿನ ಇಳಿಕೆಯ ಪ್ರಮಾಣ ಗಮನಾರ್ಹವಾಗಿದೆ. ಹಾಗಿದ್ದರೆ, ಮೇ 15, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,804 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,605 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,203 ಆಗಿದೆ. ಒಟ್ಟಾರೆಯಾಗಿ, 52 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97,800 ರೂ. ನಷ್ಟಿದೆ.
ಇಂತಹ ಸಂದರ್ಭದಲ್ಲಿ, ಮೇ 14ರಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ (Indian Local market) ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದು, ಇದು ಹೂಡಿಕೆದಾರರಿಗೆ ಹಾಗೂ ಗ್ರಾಹಕರಿಗೆ ಸಿಹಿ ಸುದ್ದಿಯಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರವು ಹಾವು-ಏಣಿ ಆಟ ಆಡುತ್ತಿದ್ದು, ಪ್ರತಿದಿನವೂ ಇಳಿಕೆ ಮತ್ತು ಏರಿಕೆಯ ನಡುವೆ ಆಟವಾಡುತ್ತಿದೆ.
ಮೇ 14ರಂದು ಚಿನ್ನದ ದರ ಯಾವರೀತಿಯಿದೆ?:
22 ಕ್ಯಾರಟ್ ಚಿನ್ನ,
1 ಗ್ರಾಂ – ₹8,805 (₹50 ಇಳಿಕೆ)
10 ಗ್ರಾಂ – ₹88,050 (₹500 ಇಳಿಕೆ)
100 ಗ್ರಾಂ – ₹8,80,500 (₹5,000 ಇಳಿಕೆ)
24 ಕ್ಯಾರಟ್ ಚಿನ್ನ:
1 ಗ್ರಾಂ – ₹9,606 (₹54 ಇಳಿಕೆ)
10 ಗ್ರಾಂ – ₹96,060 (₹540 ಇಳಿಕೆ)
100 ಗ್ರಾಂ – ₹9,60,600 (₹5,400 ಇಳಿಕೆ)
18 ಕ್ಯಾರಟ್ ಚಿನ್ನ:
1 ಗ್ರಾಂ – ₹7,204 (₹41 ಇಳಿಕೆ)
10 ಗ್ರಾಂ – ₹72,040 (₹410 ಇಳಿಕೆ)
100 ಗ್ರಾಂ – ₹7,20,400 (₹4,100 ಇಳಿಕೆ)
ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ಬೆಲೆಗಳು ಹೀಗಿವೆ:
ಬೆಂಗಳೂರು:
22K – ₹8,805 | 24K – ₹9,606 | 18K – ₹7,204
ಮುಂಬೈ:
22K – ₹8,805 | 24K – ₹9,606 | 18K – ₹7,204
ದೆಹಲಿ:
22K – ₹8,820 | 24K – ₹9,621 | 18K – ₹7,210
ಚೆನ್ನೈ:
22K – ₹8,805 | 24K – ₹9,606 | 18K – ₹7,255
ಅಹಮದಾಬಾದ್, ಬರೋಡಾ:
22K – ₹8,810 | 24K – ₹9,611 | 18K – ₹7,208
ಬೆಳ್ಳಿ ಬೆಲೆಯಲ್ಲಿ (Silver rate) ಸ್ಥಿರತೆ:
ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಸಂಭವಿಸಿಲ್ಲ.
1 ಗ್ರಾಂ ಬೆಳ್ಳಿ – ₹97.90
10 ಗ್ರಾಂ – ₹979
100 ಗ್ರಾಂ – ₹9,790
1 ಕೆಜಿ – ₹97,900
ಸ್ಪಾಟ್ ಗೋಲ್ಡ್ (Spot Gold) ವಿವರ (ಅಂತಾರಾಷ್ಟ್ರೀಯ ಮಾರುಕಟ್ಟೆ):
ಮೇ 14ರಂದು ಸ್ಪಾಟ್ ಗೋಲ್ಡ್ ದರ 0.7% ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,226.11ರಲ್ಲಿ ವ್ಯವಹಾರ ನಡೆದಿದೆ.
ಚಿನ್ನದ ದರ ಇಳಿಕೆಗೆ ಕಾರಣವೇನು(Causes)?:
ಚಿನ್ನದ ದರ ಏರಿಳಿತಕ್ಕೆ ಹಲವು ಆಂತರರಾಷ್ಟ್ರೀಯ ಹಾಗೂ ದೇಶೀಯ ಅಂಶಗಳು ಕಾರಣವಾಗುತ್ತವೆ,
ಆರ್ಥಿಕ ಅಸ್ಥಿರತೆ (Economic Instability) ಮತ್ತು ರಾಜಕೀಯ ಉದ್ವಿಗ್ನತೆ ಚಿನ್ನದ ಮೇಲೆ ನೇರ ಪರಿಣಾಮ ಬೀರುತ್ತವೆ.
ಭದ್ರ ಹೂಡಿಕೆ ಎಂಬ ನಂಬಿಕೆಯಿಂದ ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ.
ಅಮೆರಿಕದ ಫೆಡ್ ಅಥವಾ RBI ಬಡ್ಡಿದರ ಇಳಿಕೆ, ಕರೆನ್ಸಿ ದುರ್ಲಭತೆ, ಹಾಗೂ ಚಿನ್ನದ ಉತ್ಪಾದನೆ ಕಡಿಮೆ ಆಗುವುದು ಸಹ ಬೆಲೆ ಇಳಿಕೆಗೆ ಕಾರಣಗಳಾಗಬಹುದು.
ಈ ದಿನದ ಚಿನ್ನದ ಬೆಲೆ ಇಳಿಕೆಯು ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ (Buyer’s and investers) ತಾತ್ಕಾಲಿಕವಾಗಿ ಒಳ್ಳೆಯ ಅವಕಾಶವನ್ನೇ ಒದಗಿಸುತ್ತಿದೆ. ಬರುವ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿಗತಿ (Market situation) ಹೇಗಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಹೂಡಿಕೆ ಮಾಡುವುದು ಉತ್ತಮ. ಚಿನ್ನದ ಹೂಡಿಕೆ ಹಳೆಯ ಕಾಲದಿಂದಲೂ ಬದಲಾಗದ ಭದ್ರ ಪಥವಾಗಿದ್ದು, ಇಂದಿನ ಇಳಿಕೆಯು ನಿಖರವಾಗಿ ಬಳಸಿಕೊಳ್ಳುವಂತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.