ಗ್ರಾಮೀಣ ಪ್ರದೇಶದ ಅನಧಿಕೃತ ನಿವಾಸಗಳಿಗೆ ಮಾನ್ಯತೆ: ಜೂನ್ 30ರೊಳಗೆ ಕಂದಾಯ ಗ್ರಾಮಗಳ ಪರಿಷ್ಕರಣೆಗೆ ತುರ್ತು ಸೂಚನೆ
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ (Rural Area) ಅನಧಿಕೃತವಾಗಿ ನಿರ್ಮಿತಗೊಂಡಿರುವ ನಿವಾಸಗಳು ಹಾಗೂ ಆಸ್ತಿಗಳಿಗೆ ಈಗ ಸಮರ್ಥತೆ ದೊರಕಲಿದ್ದು, ಈ ಮೂಲಕ ಅನೇಕ ಕುಟುಂಬಗಳ ಬದುಕಿಗೆ ಹೊಸ ಅಡೆಚಣೆ ಉಂಟಾಗಲಿದೆ. ಬಾಕಿ ಇರುವ ಕಂದಾಯ ಗ್ರಾಮಗಳ ರಚನೆ, ದಾಖಲೆಯಿಲ್ಲದ ವಸತಿ ಪ್ರದೇಶಗಳಿಗೆ ಅಧಿಕೃತ ದಾಖಲಾತಿ ಕಲ್ಪಿಸುವ ಕಾರ್ಯ, ಹಾಗೂ ‘ಬಿ ಖಾತಾ’ ವಿತರಣೆ ಈ ಎಲ್ಲವನ್ನು ಒಂದು ನಿರ್ಧಿಷ್ಟ ಗಡುವಿನೊಳಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರವು ತೀರ್ಮಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda)ಅವರು ಬಹುಮುಖ್ಯ ಮಾಹಿತಿ ನೀಡಿದ್ದು, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ಗ್ರಾಮ, ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾರ್ಯವನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರೆ, ಇನ್ನೊಂದು ಕಡೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ನಿವಾಸಗಳಿಗೆ ಬಿ ಖಾತಾ (B-Khata) ವಿತರಣೆ ಆರಂಭವಾಗಿದೆ. ಇದೇ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಅನಧಿಕೃತ ನಿವಾಸಗಳಿಗೆ ‘ಬಿ ಖಾತಾ’ ನೀಡಲು ಸರ್ಕಾರ ಮುಂದಾಗಿದೆ.
ಕಂದಾಯ ಗ್ರಾಮಗಳ ರಚನೆಗೆ ತುರ್ತು ಸೂಚನೆ:
ಚಿತ್ರದುರ್ಗ ಜಿಲ್ಲೆಯಲ್ಲಿ (Chithradurga District) ಈವರೆಗೆ 316 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಗುರುತಿಸಲಾಗಿದ್ದು, 296 ಗ್ರಾಮಗಳಿಗೆ ಪ್ರಾಥಮಿಕ ಸೂಚನೆ ಮತ್ತು 206 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ನೀಡಲಾಗಿದೆ. ಇನ್ನೂ 61 ಗ್ರಾಮಗಳು ಅಂತಿಮ ಅಧಿಸೂಚನೆಗೆ ಬಾಕಿಯಿದ್ದು, ಜೂನ್ 30ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಹೆಚ್ಚು ಮನೆಗಳಿರುವ ಹಟ್ಟಿ ಹಾಗೂ ತಾಂಡಾಗಳನ್ನು ಕೂಡಲೇ ಕಂದಾಯ ಗ್ರಾಮಗಳಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ. ಇದೇ ವೇಳೆ, ದಾಖಲೆ ಇಲ್ಲದ ವಸತಿ ಪ್ರದೇಶಗಳಿಗೂ ದಾಖಲಾತಿ (Admission) ಕಲ್ಪಿಸಿ, ಅವರಿಗೆ ಬಿ ಖಾತಾ ವಿತರಣೆ ಮಾಡುವ ಮೂಲಕ ಸರ್ಕಾರ ಅವರ ಬದುಕಿಗೆ ನಂಬಿಕೆಯನ್ನು ನೀಡಲಿದೆ.
ಹಕ್ಕುಪತ್ರ ವಿತರಣಾ ಪ್ರಗತಿ:
ಜಿಲ್ಲೆಯಲ್ಲಿ ಒಟ್ಟು 6393 ಕುಟುಂಬಗಳಿಗೆ ಹಕ್ಕುಪತ್ರ ತಯಾರಿಸಲಾಗಿದ್ದು, 4305 ಡೀಡ್‌ಗಳಿಗೆ ತಹಸಿಲ್ದಾರ ರಿಂದ (Tahsildar) ಸಹಿ ಆಗಿದೆ. ಈವರೆಗೆ 2888 ಫಲಾನುಭವಿಗಳಿಗೆ ಕಾವೇರಿ ತಂತ್ರಾಂಶದ ಮೂಲಕ ನೊಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದೆ. 2403 ಫಲಾನುಭವಿಗಳಿಗೆ ಇ-ಸ್ವತ್ತು ನೋಟಿಸ್ (E-Property Notice) ಸಿದ್ಧಗೊಂಡಿದ್ದು, ಇಡೀ ಪ್ರಕ್ರಿಯೆ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ.
ಭೂ ಸುರಕ್ಷಾ ಯೋಜನೆಗೆ ಒತ್ತು:
ಭೂ ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಿಸುವ (Digitalization) ಭೂ ಸುರಕ್ಷಾ ಯೋಜನೆಗೆ ಹೆಚ್ಚಿನ ವೇಗ ನೀಡಲಾಗುತ್ತಿದೆ. ಜಿಲ್ಲೆಯ ಚಳ್ಳಕೆರೆ, ಹಿರಿಯೂರು ಮತ್ತು ಹೊಳಲ್ಕೆರೆ ತಾಲ್ಲೂಕುಗಳು ಈ ಭಾಗದಲ್ಲಿ ಉತ್ತಮ ಸಾಧನೆ ತೋರಿದ್ದು, ಉಳಿದ ತಾಲ್ಲೂಕುಗಳು (Taluk) ಕೂಡಾ ಸ್ಪರ್ಧಾತ್ಮಕವಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ಮೇ 20: ಹಕ್ಕುಪತ್ರ ವಿತರಣಾ ಮಹಾಕಾರ್ಯಕ್ರಮ:
ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ (State Government) ಎರಡು ವರ್ಷದ ಸಾಧನೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ, ದಾಖಲೆ ಹಾಗೂ ಸವಲತ್ತುಗಳನ್ನು ವಿತರಣೆ ಮಾಡುವ ಮೂಲಕ, ಈ ಆಡಳಿತ ಬಡಜನಪರ ಸರ್ಕಾರವೆಂದು ಸಾಬೀತುಪಡಿಸಲಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಜಿಲ್ಲೆಗಳಿಂದ (All Districts) ಫಲಾನುಭವಿಗಳನ್ನು ಸಮರ್ಪಕವಾಗಿ ಕಾರ್ಯಕ್ರಮಕ್ಕೆ ಕರೆತರುವ ವ್ಯವಸ್ಥೆ ನಡೆಸಲು ಸೂಚಿಸಲಾಗಿದೆ.
ಒಟ್ಟಾರೆಯಾಗಿ, ಈ ಮಹತ್ವದ ಕಾರ್ಯಕ್ರಮಗಳು ಹಾಗೂ ತೀರ್ಮಾನಗಳು ಗ್ರಾಮೀಣ ಜನತೆಗೆ ಕೇವಲ ದಾಖಲೆ ಮಾತ್ರವಲ್ಲ, ಜೀವನದಲ್ಲಿ ನಂಬಿಕೆ, ಸ್ಥಿರತೆ ಮತ್ತು ಸರ್ಕಾರದ ಪ್ರಾಮಾಣಿಕತೆ (Honesty of Govt) ಎಂಬ ಭರವಸೆಯ ಚಿಹ್ನೆಯಾಗಿವೆ. ಗ್ರಾಮೀಣ ಪ್ರಜೆಯ ಅಭಿವೃದ್ಧಿಗೆ ನೂತನ ದಿಕ್ಕು ನೀಡುವ ಈ ಕ್ರಮಗಳು ಗ್ರಾಮೀಣ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಆರಂಭಿಸಲಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.