ಗಮನಿಸಿ! SBI ಯಲ್ಲಿ 3,323 ಹುದ್ದೆಗಳು ನಿಮ್ಮದಾಗಿಸಿಕೊಳ್ಳಲು ಕಾಯುತ್ತಿವೆ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಹೊಸ ನೇಮಕಾತಿ ಘೋಷಣೆಯ ಮೂಲಕ ಸಾವಿರಾರು ಉದ್ಯೋಗಾಸಕ್ತ ಯುವಕರಿಗೆ ಹಸಿರೆಲೆ ತೋರಿಸಿದೆ. 2025ನೇ ಸಾಲಿನ Circle Based Officers (CBO) ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಬಾರಿ 3,323 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವನ್ನು ಅರಸುತ್ತಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವಿವರ(Job Description:):
ಈ ನೇಮಕಾತಿ ಮೂಲಕ ವಿವಿಧ ಸರ್ಕಲ್ಗಳಲ್ಲಿ 3,323 CBO ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ರಾಜ್ಯದ ಅಥವಾ ಭಾಷಾ ಪ್ರಾವೀಣ್ಯತೆ ಹೊಂದಿರುವ ವಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ಅರ್ಹತಾ ಮಾನದಂಡಗಳು(Eligibility criteria):
ಶೈಕ್ಷಣಿಕ ಅರ್ಹತೆ(Educational Qualification:):
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ(Any Degree Holder) ಹೊಂದಿರಬೇಕು.
ವೈದ್ಯಕೀಯ, ಎಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆನ್ಸಿ(Chartered accountancy) ಅಥವಾ ವೆಚ್ಚ ಅಕೌಂಟೆನ್ಸಿ ಪದವಿಧರರೂ ಸಹ ಅರ್ಹರು.
ವಯೋಮಿತಿ(Age limit):
ಅಭ್ಯರ್ಥಿಯು ಮೇ 1, 1995 ಮತ್ತು ಏಪ್ರಿಲ್ 30, 2004 ರ ನಡುವಿನ ದಿನಾಂಕಗಳಲ್ಲಿ ಜನಿಸಿದ್ದವರಾಗಿರಬೇಕು (21 ರಿಂದ 30 ವರ್ಷದೊಳಗಿನವರು).
ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲತೆ ಇರುವಂತಿದೆ.
ಅರ್ಜಿ ಶುಲ್ಕ(Application fee):
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್: ₹750
SC/ST/PwBD: ಶುಲ್ಕವಿಲ್ಲ
ಪಾವತಿ ವಿಧಾನ: ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ
ಅರ್ಜಿ ಸಲ್ಲಿಸುವ ವಿಧಾನ(How to apply):
ಎಸ್ಬಿಐ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: sbi.co.in
“Careers” ವಿಭಾಗದಲ್ಲಿ SBI CBO 2025 ಲಿಂಕ್ ಕ್ಲಿಕ್ ಮಾಡಿ
ಹೊಸದಾಗಿ ನೋಂದಾಯಿಸಿ ಅಥವಾ ಲಾಗಿನ್ ಆಗಿ
ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ (ಛಾಯಾಚಿತ್ರ ಮತ್ತು ಸಹಿ)
ಅರ್ಜಿ ಶುಲ್ಕ ಪಾವತಿಸಿ
ಅರ್ಜಿಯನ್ನು ಸಲ್ಲಿಸಿ ಮತ್ತು ದೃಢೀಕರಣ ಪ್ರತಿಯನ್ನು ಉಳಿಸಿ
ಆಯ್ಕೆ ಪ್ರಕ್ರಿಯೆ(Selection Process):
ಆನ್ಲೈನ್ ಪರೀಕ್ಷೆ
ಇಂಗ್ಲಿಷ್, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಅರಿವು, ಕಂಪ್ಯೂಟರ್ ಆಪ್ಟಿಟ್ಯೂಡ್
ಸ್ಕ್ರೀನಿಂಗ್
ವೈಯಕ್ತಿಕ ಸಂದರ್ಶನ(Personal Interview)
ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ
ಆನ್ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳೇ ಮುಂದಿನ ಹಂತಗಳಿಗೆ ಒಳಪಡುವರು. ಇದು ಬಹು ಹಂತದ ಪರಿಶೀಲನೆಯ ಮೂಲಕ ನಿಸ್ಪಕ್ಷಪಾತ ಆಯ್ಕೆ ವ್ಯವಸ್ಥೆಯಾಗಿದೆ.
ವೇತನ ಶ್ರೇಣಿ(Salary Range):
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭಿಕ ಮೂಲ ವೇತನ ₹48,480/- ಇರುತ್ತದೆ.
ಇತರ ಭತ್ಯೆಗಳು ಸೇರಿ, ಒಟ್ಟು ವೇತನ ಉತ್ತಮವಾಗಿರುತ್ತದೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೆಮ್ಮದಿಯ ಜೀವನ ನಿರ್ವಹಣೆಗೆ ಇದು ಉತ್ತಮ ಆಯ್ಕೆಯಾಗಿದೆ.
ನೇಮಕಾತಿಯ ಪ್ರಮುಖ ದಿನಾಂಕಗಳು(Important dates for recruitment):
ಅರ್ಜಿಯ ಪ್ರಾರಂಭ ದಿನಾಂಕ: ಈಗಾಗಲೇ ಪ್ರಾರಂಭವಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 29, 2025
ಆಧಿಕೃತ ವೆಬ್ಸೈಟ್: https://www.sbi.co.in
SBI CBO ನೇಮಕಾತಿ 2025 ಯುವ ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಬ್ಯಾಂಕಿಂಗ್ ವೃತ್ತಿಪರನಾಗಿ ಪ್ರಗತಿಪಥದಲ್ಲಿ ಸಾಗಲು ಬಯಸುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಮೇ 29ರೊಳಗೆ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.