ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಅಪ್ಡೇಟ್: 3 ತಿಂಗಳ ಹಣ ಒಂದೇ ಸಾರಿಗೆ!
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಡಿಯಲ್ಲಿ ಫಲಾನುಭವಿಗಳಿಗೆ ಒಂದು ದೊಡ್ಡ ಸುದ್ದಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರು ಪ್ರಕಟಿಸಿದ ಪ್ರಕಾರ, ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣವನ್ನು ಮೇ5 2025ರಲ್ಲಿ ಒಮ್ಮೆಗೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಸಾದ್ಯತೆ ಇದೆ. ಇದರಿಂದಾಗಿ ಪ್ರತಿ ತಿಂಗಳು ₹2,000 ಬದಲಿಗೆ ಒಟ್ಟು ₹6,000 ನೇರವಾಗಿ ಖಾತೆಗೆ ಬರುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಹಣ ಚೆಕ್ ಮಾಡುವ ವಿಧಾನ
- ಬ್ಯಾಂಕ್ ಮಿಸ್ಡ್ ಕಾಲ್ ಮೂಲಕ:
- ನಿಮ್ಮ ಬ್ಯಾಂಕ್ನ ಕಸ್ಟಮರ್ ಕೇರ್ ನಂಬರ್ಗೆ ಮಿಸ್ಡ್ ಕಾಲ್ ಮಾಡಿ.
- SMS ಅಥವಾ IVR ಮೂಲಕ ಬ್ಯಾಲೆನ್ಸ್ ತಿಳಿಯಿರಿ.
- DBT ಕರ್ನಾಟಕ ಅಪ್ಲಿಕೇಶನ್ ಮೂಲಕ:
- DBT Karnataka ಆ್ಯಪ್ ಡೌನ್ಲೋಡ್ ಮಾಡಿ.
- ಆಧಾರ್ ನಂಬರ್ ಮತ್ತು OTP ನಮೂದಿಸಿ ಲಾಗಿನ್ ಆಗಿ.
- “Payment Status” ಆಯ್ಕೆಯಲ್ಲಿ ಹಣ ಜಮೆಯ ವಿವರ ಪಡೆಯಿರಿ.
ಹಣ ಬರದಿದ್ದರೆ ಈ ಕಾರಣಗಳಿರಬಹುದು:
- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿರುವುದು.
- ರೇಶನ್ ಕಾರ್ಡ್ನಲ್ಲಿ ಹೆಡ್ ಆಫ್ ಫ್ಯಾಮಿಲಿ ಹೆಸರು ತಪ್ಪಾಗಿರುವುದು.
- ಆದಾಯ ತೆರಿಗೆ ಅಥವಾ GST ಪಾವತಿದಾರರಾಗಿರುವುದು.
ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಅತ್ಯಂತ ಜನಪ್ರಿಯವಾಗಿದೆ. ಹಣದ ವಿತರಣೆ, ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ Karnataka Govt ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.
📌 ನೆನಪಿಡಿ: ಮೇ ತಿಂಗಳಲ್ಲಿ 3 ತಿಂಗಳ ಹಣ ಒಟ್ಟಿಗೆ ಬರುವುದರಿಂದ, ನಿಮ್ಮ ಬ್ಯಾಂಕ್ ಖಾತೆ ಮತ್ತು ದಾಖಲೆಗಳನ್ನು ಮುಂಚಿತವಾಗಿ ಪರಿಶೀಲಿಸಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.