ನಾಡಪ್ರಭು ಕೆಂಪೇಗೌಡ ಮತ್ತು ಡಾ. ಶಿವರಾಮ ಕಾರಂತ ಬಡಾವಣೆಗಳ ಅಭಿವೃದ್ಧಿ ಚುರುಕು: ಸಂಪರ್ಕ ಮತ್ತು ವಸತಿ ವ್ಯವಸ್ಥೆಯಲ್ಲಿ ನೂತನ ಚಲನಶೀಲತೆ
ಬೆಂಗಳೂರು ನಗರವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಕಾಸ್ಮೋ ಪಾಲಿಟನ್ ನಗರದಾಗಿದ್ದು(cosmopolitan city), ಈ ವೇಗದ ನಗರೀಕರಣಕ್ಕೆ ತಕ್ಕಂತೆ ಮೂಲಸೌಕರ್ಯ ಹಾಗೂ ಯೋಜಿತ ವಸತಿ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಬಹುಮುಖ್ಯವಾಗಿದೆ. ಈ ಹಿನ್ನೆಲೆಗಾಗಿ ಬೆಂಗಳೂರಿನ ಪ್ರಮುಖ ಯೋಜನಾ ಸಂಸ್ಥೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನವೀನ ಗತಿಯೊಂದಿಗೆ ಮುಂದೆ ಸಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ವಿವಿಧ ಅಡೆತಡೆಗಳಿಂದ ಹಿನ್ನಡೆಯಾಗಿದ್ದ ಹಲವು ಅಭಿವೃದ್ಧಿ ಯೋಜನೆಗಳು ಇದೀಗ ಚುರುಕು ಪಡೆದು, ನಗರ ಸೌಕರ್ಯ ಹಾಗೂ ವಾಸಸ್ಥಳಗಳ ವಿನ್ಯಾಸದಲ್ಲಿ ನೂತನ ಚಲನೆಯನ್ನು ತಂದಿವೆ. ಯಾವೆಲ್ಲ ಪ್ರಗತಿಗಳು ಆಗುತ್ತಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆಗೆ ಹೊಸ ಉಜ್ವಲ:
ಅನೇಕ ವರ್ಷಗಳಿಂದ ತಲೆ ಎತ್ತಿದ್ದ ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆ ಇದೀಗ ಅಂತಿಮವಾಗಿ ಪ್ರಾರಂಭಗೊಂಡಿದೆ. 2006ರಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ರೂಪಿಸಲ್ಪಟ್ಟ ಈ ಯೋಜನೆಯು ಭೂ ವಿವಾದ, ಪರಿಹಾರ ಸಮಸ್ಯೆ, ಪರಿಸರ ಅನುಮತಿ ಹಾಗೂ ಆರ್ಥಿಕ ಮೂಲಸೌಕರ್ಯಗಳ (Economic infrastructure) ಕೊರತೆಗಳಿಂದ ಹಿಂದೆ ಉಳಿದುಕೊಂಡಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ PRR-1 ಮತ್ತು PRR-2 ಯೋಜನೆಗಳಿಗೆ ಹೊಸ ಉಸಿರು ಸಿಕ್ಕಂತಾಗಿದೆ.
PRR ಯೋಜನೆಯ ಭಾಗವಾಗಿ ಆರು ಹೊಸ ಬಡಾವಣೆಗಳು:
BDA ಪ್ರಸ್ತುತ PRR-2 ಯೋಜನೆಯಲ್ಲಿನ ಭೂವಲಯಗಳಲ್ಲಿ ಆರು ಹೊಸ ಬಡಾವಣೆಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ (Land acquisition process) ಆರಂಭವಾಗಿದ್ದು, ಜಮೀನು ಮಾಲೀಕರಿಗೆ ನೋಟಿಸ್‌ಗಳು ಜಾರಿಗೆ ಬಂದಿವೆ. 40:60ರ ಅನುಪಾತದಲ್ಲಿ ಪರಿಹಾರ ವ್ಯವಸ್ಥೆ ಅನುಸರಿಸುವ ಯೋಜನೆಯು ರೈತರು ಮತ್ತು ಭೂ ಮಾಲೀಕರಿಗೆ ಸಹ ಸಹಕಾರಿಯಾಗಲಿದೆ. BDA, ಪ್ರಸ್ತುತ 50 ಸಾವಿರ ಹೊಸ ನಿವೇಶನಗಳ ಅಭಿವೃದ್ಧಿ ಗುರಿ ಹೊಂದಿದ್ದು, ಬೇಡಿಕೆ ಹೆಚ್ಚಾಗಿರುವ ಬಡಾವಣೆಗಳ ಅಗತ್ಯವನ್ನು ಈ ಮೂಲಕ ಪೂರೈಸಲು ತುದಿಗಾಲಿನಲ್ಲಿ ನಿಂತಿದೆ.
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ (Bangalore business corridor scheme):
PRR ಅನ್ನು ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಯೋಜನೆಗೆ ಪರಿವರ್ತನೆ ಮಾಡಲಾಗಿದ್ದು, ಎರಡು ಹಂತಗಳಲ್ಲಿ ₹27,000 ಕೋಟಿ ವೆಚ್ಚದಲ್ಲಿ 73 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. HUDCO ಬ್ಯಾಂಕ್ ಸಹಕಾರದಲ್ಲಿ (Bank support) ಈ ಯೋಜನೆಯು ಬೆಂಗಳೂರು-ತುಮಕೂರು ರಸ್ತೆ ಮತ್ತು ಬೆಂಗಳೂರು-ಹೊಸರು, ಬೆಂಗಳೂರು-ಮೈಸೂರು ರಸ್ತೆಗಳ ನಡುವೆ ಸಂಪರ್ಕ ಕಲ್ಪಿಸಲಿದೆ. PRR-2 ಭಾಗ ಬನ್ನೇರುಘಟ್ಟ ಹಾಗೂ ಕನಕಪುರ ರಸ್ತೆ ಮಾರ್ಗವಾಗಿ ಸಾಗಲಿದ್ದು, 100 ಮೀಟರ್ ಅಗಲದ, 30 ಕಿ.ಮೀ ಉದ್ದದ ರಸ್ತೆ ನಿರ್ಮಾಣ ನಡೆಯಲಿದೆ. ಈ ರಸ್ತೆಯ ಎರಡೂ ಬದಿಗಳಲ್ಲಿ 24 ಮೀಟರ್ ಉದ್ದದ ವಾಣಿಜ್ಯ ನಿವೇಶನಗಳನ್ನೂ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ದಶ ಪಥ ಎಕ್ಸ್‌ಪ್ರೆಸ್ ರಸ್ತೆ:
ಇನ್ನೊಂದು ಮಹತ್ವದ ಯೋಜನೆಯಾದ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಕ ಹಾದು ಹೋಗುವ ದಶಪಥ ಟೋಲ್-ರಹಿತ ಎಕ್ಸ್‌ಪ್ರೆಸ್ ಹೈವೇ (Toll free express highway) ಕಾಮಗಾರಿಗೂ ಈಗ ವೇಗ ಸಿಕ್ಕಿದೆ. 10.5 ಕಿ.ಮೀ ಉದ್ದದ ಈ ರಸ್ತೆ ನೈಸ್ ರಸ್ತೆಗೆ ಸಮಾನಾಂತರವಾಗಿ ಸಾಗಲಿದ್ದು, ಚಲ್ಲಘಟ್ಟ ಬಳಿ 250 ಮೀಟರ್ ಉದ್ದದ ಸುರಂಗ ರಸ್ತೆ ಮತ್ತು ರೈಲ್ವೆ ಅಂಡರ್‌ಪಾಸ್ ನಿರ್ಮಾಣವೂ ಇದರಲ್ಲಿ ಸೇರಿದೆ. ಈ ರಸ್ತೆ ಕಾಮಗಾರಿ ಪುನರಾರಂಭದೊಂದಿಗೆ ಸಂಪರ್ಕ ಸುಧಾರಣೆಗೆ ಬಲ ಸಿಕ್ಕಿದೆ.
ಡಾ. ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿ ಕಾರ್ಯ ಭರದಿಂದ:
2,782 ಎಕರೆಯಲ್ಲಿ ನಿರ್ಮಿಸಲಾಗುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಸದ್ಯ 30,000ಕ್ಕೂ ಹೆಚ್ಚು ನಿವೇಶನಗಳ ಅಭಿವೃದ್ಧಿ ಕಾರ್ಯ (Development work) ನಡೆಯುತ್ತಿದೆ. ಸುಮಾರು 16-17 ಸಾವಿರ ನಿವೇಶನಗಳನ್ನು ರೈತರಿಗೆ ನೀಡಲಾಗುತ್ತಿದ್ದು, 7-8 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಲಾಗಲಿದೆ. ಪ್ರತಿ ಚದರ ಅಡಿಗೆ ₹4,900 ದರ ನಿಗದಿಪಡಿಸಲಾಗಿದೆ. BDA ಮೂರು ತಿಂಗಳ ಗಡುವಿನಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದೆ.
ಆಯುಕ್ತರಿಂದ ಭರವಸೆ:
BDA ಆಯುಕ್ತ ಎನ್. ಜಯರಾಮ ಅವರು, “ಭೂ ವ್ಯಾಜ್ಯಗಳ ಹಿನ್ನೆಲೆಯಲ್ಲಿ ಕೆಲವೊಂದು ಯೋಜನೆಗಳು ವಿಳಂಬವಾಗಿದ್ದರೂ, ಇದೀಗ ನ್ಯಾಯಾಲಯದಿಂದ ಬಂದ ಆದೇಶಗಳ ನಂತರ ಭೂಸ್ವಾಧೀನ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ. ಕೆಂಪೇಗೌಡ ಹಾಗೂ ಶಿವರಾಮ ಕಾರಂತ ಬಡಾವಣೆಗಳ ಅಭಿವೃದ್ಧಿ ಕಾರ್ಯ (Development work of Kempegowda and Shivarama Karantha Layouts) ಪ್ರಗತಿಯಲ್ಲಿ ಇದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಇನ್ನೂ ಹೆಚ್ಚಿನ ವೇಗದೊಂದಿಗೆ ಯೋಜನೆಗಳನ್ನು ಮುನ್ನಡೆಸಬಹುದು” ಎಂದು ತಿಳಿಸಿದರು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.