ಮಾರುಕಟ್ಟೆಯಲ್ಲಿ ಹೊಸ ಹ್ಯುಂಡೈ ಕ್ರೆಟಾದ ಫುಲ್ ಡಿಮ್ಯಾಂಡ್.! ಖರೀದಿಗೆ ಮುಗಿಬಿದ್ದ ಗ್ರಾಹಕರು 

Picsart 25 04 04 22 36 35 646

WhatsApp Group Telegram Group

ಹ್ಯುಂಡೈ ಕ್ರೆಟಾ 2025: ಎಸ್‌ಯುವಿ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾದ ಅಪಾರ ಯಶಸ್ಸು!

ಇಂದು ಎಲ್ಲವೂ ತಂತ್ರಜ್ಞಾನ (Technology) ಅಳವಡಿತ ಕ್ಷೇತ್ರವಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವಾಹನಗಳು ಬಿಡುಗಡೆ ಆಗುತ್ತಲೇ ಇವೆ. ವಾಹನ ತಯಾರಿಕ ಕಂಪನಿಗಳ ಪೈಪೋಟಿ (Competition) ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗೆಯೇ ನೋಡುವುದಾದರೆ, ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಬ್ರಾಂಡ್ ಆರಂಭದಿಂದಲೇ ಭಾರೀ ಬೇಡಿಕೆಯನ್ನು ಹೊಂದಿತ್ತು. ವಿಶೇಷವಾಗಿ 2015 ರಲ್ಲಿ ಹ್ಯುಂಡೈ ಕ್ರೆಟಾ ಬಿಡುಗಡೆಗೊಳ್ಳುವ ಮೂಲಕ ಈ ಬೇಡಿಕೆ ಇನ್ನಷ್ಟು ಹೆಚ್ಚಿಸಿತು. ಇದರೊಂದಿಗೆ ಹ್ಯುಂಡೈ ಕ್ರೆಟಾ ಎಲ್ಲಾ ಎಸ್‌ಯುವಿಗಳನ್ನು ಹಿಂದಿಕ್ಕಿ ಪ್ರಗತಿಯನ್ನು ಸಾಧಿಸಿತು. ಹ್ಯುಂಡೈ ಕ್ರೆಟಾ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕ್ರೆಟಾ ಕಾರುಗಳು (Creta cars) ದೇಶಾದ್ಯಾಂತ ಜನಪ್ರಿಯವಾಗಿರುವುದರಿಂದ, ಹ್ಯುಂಡೈ ಕಂಪನಿಯು ಭಾರತದಲ್ಲಿ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಪ್ರಾರಂಭದಿಂದಲೇ ಕ್ರೆಟಾ ಮಾರಾಟವು (ದೇಶೀಯ ಮತ್ತು ರಫ್ತು) ಆಕರ್ಷಕವಾಗಿದ್ದು, ಇದೊಂದು ಭಾರೀ ಮಟ್ಟದ ವ್ಯಾಪಾರವನ್ನು ಸಾಧಿಸಿದೆ. ಕ್ರೆಟಾ ಕಾರು ಕಳೆದ 10 ವರ್ಷಗಳಲ್ಲಿ 15,00,000 ಯುನಿಟ್ ಗಳಷ್ಟು ಮಾರಾಟವಾಗಿವೆ.

ಈಗಾಗಲೇ ಮಧ್ಯಮ ಗಾತ್ರದ ಎಸ್‌ಯುವಿ (SUV) ವಿಭಾಗದಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಟಾಟಾ ಕರ್ವ್ ಮುಂತಾದ ಕಾರುಗಳು ವಿವಿಧ ಕಂಪನಿಗಳಿಗೆ ಸವಾಲು ಹಾಕುತ್ತಿವೆ. ಆದರೂ, ಹ್ಯುಂಡೈ ಕ್ರೆಟಾ ತನ್ನ  ಸ್ಪರ್ಧಿಗಳನ್ನು ಹಿಂದಿಕ್ಕಿದೆ.

2025 ರ ಆರ್ಥಿಕ ವರ್ಷದಲ್ಲಿ, ಕ್ರೆಟಾ ದೇಶೀಯ ಮಾರುಕಟ್ಟೆಯಲ್ಲಿ 1,94,871 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಇದನ್ನು ಮುನ್ನಡೆಸಿದ ಮಧ್ಯಮ ಗಾತ್ರದ ಎಸ್‌ಯುವಿಯಾಗಿ ಪರಿಗಣಿಸಲಾಗಿದೆ. ಕ್ರೆಟಾ ನಂತರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 1,23,946 ಯುನಿಟ್ (Unit) ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ, ಮತ್ತು ಕಿಯಾ ಸೆಲ್ಟೋಸ್ 72,618 ಯುನಿಟ್ ಮಾರಾಟದೊಂದಿಗೆ ಮೂರನೇ ಸ್ಥಾನವನ್ನು ಪಡೆದಿದೆ.

creta
ಹ್ಯುಂಡೈ ಕ್ರೆಟಾ ವಿಶೇಷತೆಗಳು (Features) ಏನು? :

ಈ ಕಾರಿನ ಬೆಲೆ ರೂ. 11 ಲಕ್ಷದಿಂದ ರೂ. 20.42 ಲಕ್ಷ (ಎಕ್ಸ್-ಶೋರೂಂ) ನಡುವೆ ಇದೆ. ಜೊತೆಗೆ, ಕ್ರೆಟಾ ಎಲೆಕ್ಟ್ರಿಕ್ ಆವೃತ್ತಿಯು ರೂ. 17,99,000 ರಿಂದ 23,49,900 (ಎಕ್ಸ್-ಶೋರೂಂ) ರೇಂಜ್ ನಲ್ಲಿ (Range) ದೊರಕುತ್ತದೆ. ಈ ಎಲೆಕ್ಟ್ರಿಕ್ ಆವೃತ್ತಿಯಲ್ಲಿ 42 ಕಿಲೋವ್ಯಾಟ್ ಮತ್ತು 51.4 ಕಿಲೋವ್ಯಾಟ್ ಬ್ಯಾಟರಿ ಆಯ್ಕೆಗಳು ಲಭ್ಯವಿವೆ.

ಇಂಧನ ಚಾಲಿತ ಕ್ರೆಟಾ ಬಗ್ಗೆ ಹೇಳುವುದಾದರೆ, ಇದರಲ್ಲಿ 1.5-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ (115 ಪಿಎಸ್ ಮತ್ತು 144 ಎನ್‌ಎಂ) 6-ಸ್ಪೀಡ್ ಎಂಟಿ ಮತ್ತು ಐವಿಟಿ ಆಟೋಮ್ಯಾಟಿಕ್ ಆಯ್ಕೆಗಳು ಲಭ್ಯವಿವೆ. ಜೊತೆಗೆ, 1.5-ಲೀಟರ್ ಕಪ್ಪಾ ಟರ್ಬೋ ಜಿಡಿಐ ಪೆಟ್ರೋಲ್ ಎಂಜಿನ್ (Petrol Engine) (160 ಪಿಎಸ್ ಮತ್ತು 253 ಎನ್‌ಎಂ) 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಆಯ್ಕೆಯಲ್ಲಿ ಬರಲಿದೆ.

ಅದೇ ರೀತಿಯಲ್ಲಿ, 1.5-ಲೀಟರ್ ಯು 2 ಸಿಆರ್ ಡಿಐ ಡೀಸೆಲ್ ಎಂಜಿನ್ (116 ಪಿಎಸ್ ಮತ್ತು 250 ಎನ್‌ಎಂ) 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿ ಆಯ್ಕೆಗಳೊಂದಿಗೆ ಲಭ್ಯವಿದ್ದು, ಕ್ರೆಟಾ ಎನ್‌ಲೈನ್‌ನಲ್ಲಿ 1.5-ಲೀಟರ್ ಕಪ್ಪಾ ಟರ್ಬೋ ಜಿಡಿಐ ಪೆಟ್ರೋಲ್ ಎಂಜಿನ್ 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಯ್ಕೆಗಳನ್ನು ಹೊಂದಿದೆ.

ಕಾರಿನ ಇತರ ವೈಶಿಷ್ಟ್ಯಗಳು (Other features) :

ಹೊಸ ಕ್ರೆಟಾ 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಡುಯಲ್ ಡಿಸ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್-ಝೋನ್ ಎಸಿ, ಸನ್‌ರೂಫ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (Advanced Driver Assistance Systems) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್‌ಗಳನ್ನು ಒಳಗೊಂಡಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!