ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದು, ಸಾರ್ವತ್ರಿಕ ಖಾತೆ ಸಂಖ್ಯೆ (UAN) ಸಕ್ರಿಯಗೊಳಿಸುವ ಮತ್ತು ಬ್ಯಾಂಕ್ ಖಾತೆ ಆಧಾರ್ ಜೊತೆ ಲಿಂಕ್ (Aadhar link with bank account) ಮಾಡುವ ಗಡುವನ್ನು ಮಾರ್ಚ್ 15ರ ತನಕ ವಿಸ್ತರಿಸಿದೆ.
ಹಿಂದಿನಂತೆ ಫೆಬ್ರವರಿ 15ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಅನೇಕ ಉದ್ಯೋಗಿಗಳು ಇದನ್ನು ಇನ್ನೂ ಮಾಡಿರದ ಕಾರಣ, EPFO ಗಡುವು ವಿಸ್ತರಿಸಿ, ಮಾರ್ಚ್ 15ರೊಳಗೆ ಪೂರ್ಣಗೊಳಿಸಲು ಅವಕಾಶ ನೀಡಿದೆ. ಈ ಮಾಹಿತಿ EPFO ನ ಅಧಿಕೃತ ಎಕ್ಸ್ (ಹಳೆ ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಯುಎಎನ್ ಸಕ್ರಿಯಗೊಳಿಸುವ ಮಹತ್ವ ಮತ್ತು ಲಾಭಗಳು:
ಯುಎಎನ್ (Universal Account Number) 12 ಅಂಕೆಗಳ ವಿಶಿಷ್ಟ ಸಂಖ್ಯೆಯಾಗಿದ್ದು, ಇದು ಉದ್ಯೋಗಿಗಳ ಪಿಎಫ್ ಖಾತೆಯನ್ನು (PF account) ನಿಭಾಯಿಸಲು ಸಹಾಯ ಮಾಡುತ್ತದೆ. ಇದನ್ನು ಸಕ್ರಿಯಗೊಳಿಸಿದರೆ, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯ ಸಮಗ್ರ ಮಾಹಿತಿ ಆನ್ಲೈನ್ ಮೂಲಕ ಪಡೆಯಲು, ಪಾಸ್ ಬುಕ್ ಡೌನ್‌ಲೋಡ್ ಮಾಡಿಕೊಳ್ಳಲು, ಪಿಎಫ್ ಹಣ ವಿತ್‌ಡ್ರಾ(PF ammount withdraw) ಮಾಡಿಕೊಳ್ಳಲು ಅಥವಾ ಖಾತೆ ವರ್ಗಾಯಿಸಲು ಅನುಕೂಲವಾಗುತ್ತದೆ.
ಇದು EPFO ನ ಡಿಜಿಟಲ್ ಸೇವೆಗಳಿಗೆ ಪ್ರವೇಶ ಪಡೆಯಲು ಅವಶ್ಯಕವಾಗಿದ್ದು, ಯುಎಎನ್ ಸಕ್ರಿಯಗೊಳಿಸದೆ ಇದ್ದರೆ (If UAN is not enabled) EPFO ಸೇವೆಗಳನ್ನು ಬಳಸಲು ಸಾಧ್ಯವಿಲ್ಲ. ಹಾಗಾಗಿ, ಯುಎಎನ್ ಸಕ್ರಿಯಗೊಳಿಸುವುದರಿಂದ ಉದ್ಯೋಗಿಗಳಿಗೆ ಸಾಕಷ್ಟು ಅನುಕೂಲತೆಗಳು ದೊರಕುತ್ತವೆ.
ಯುಎಎನ್ ಸಕ್ರಿಯಗೊಳಿಸುವ ಮತ್ತು ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ:
ಈ ಪ್ರಕ್ರಿಯೆಯನ್ನು EPFO ನ ಅಧಿಕೃತ ವೆಬ್‌ಸೈಟ್ epfindia.gov.in ಮೂಲಕ ಸರಳವಾಗಿ ಮುಗಿಸಬಹುದು.
EPFO ವೆಬ್‌ಸೈಟ್ ಗೆ ಹೋಗಿ.
“For Employees” ಆಯ್ಕೆಯನ್ನು ಕ್ಲಿಕ್ ಮಾಡಿ.
“Member UAN Online Service” ಮೇಲೆ ಕ್ಲಿಕ್ ಮಾಡಿ.
“Activate UAN” ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಿಮಗೆ ಬೇಕಾದ ಮಾಹಿತಿ (ಯುಎಎನ್, ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ) ನಮೂದಿಸಿ.
“Get Authorization Pin” ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ, ಅದನ್ನು ನಮೂದಿಸಿ “Submit” ಮಾಡಿ.
ಯಶಸ್ವಿಯಾಗಿ ಸಕ್ರಿಯಗೊಳಿಸಿದ ನಂತರ, ನಿಮಗೆ ಲಾಗಿನ್ ಮಾಡಲು ಪಾಸ್ವರ್ಡ್ ಸಿಗುತ್ತದೆ.
ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, EPFO ಪೋರ್ಟಲ್ ಗೆ ಲಾಗಿನ್ ಮಾಡಿ, ನಿಮ್ಮ ಪಿಎಫ್ ಖಾತೆಯ ಮಾಹಿತಿಯನ್ನು ಪರಿಶೀಲಿಸಬಹುದು.
ಯುವ ಉದ್ಯೋಗಿಗಳಿಗೆ ಪ್ರೋತ್ಸಾಹಕ ಯೋಜನೆ – ELI ಯೋಜನೆ :
ಯುಎಎನ್ ಸಕ್ರಿಯಗೊಳಿಸಿ, ಆಧಾರ್ ಲಿಂಕ್ ಮಾಡಿದವರಿಗೆ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ (ELI – Employment Linked Incentive) ಯ ಲಾಭ ದೊರಕಬಹುದು. ಈ ಯೋಜನೆಯಡಿ ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲು ಕೆಲವು ವಿಶೇಷ ಇನ್ಸೆಂಟಿವ್ (Incentive) ಕಾರ್ಯಕ್ರಮಗಳಿವೆ.
ಕೊನೆಯದಾಗಿ ಹೇಳುವುದಾದರೆ, EPFO ನ ಈ ಮಹತ್ವದ ಸೂಚನೆ ಮರೆಯಬೇಡಿ. EPFO ತನ್ನ ಎಕ್ಸ್ (Twitter) ಖಾತೆಯಲ್ಲಿ “ಮರೆಯಬೇಡಿ” ಎಂಬ ಶೀರ್ಷಿಕೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಉದ್ಯೋಗಿಗಳು ಕೊನೆಯ ಕ್ಷಣದವರೆಗೆ ಕಾಯದೆ, ಶೀಘ್ರವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದೆ.
ಮಾರ್ಚ್ 15ರೊಳಗೆ UAN ಸಕ್ರಿಯಗೊಳಿಸಿ, ಆಧಾರ್ ಲಿಂಕ್ ಮಾಡಿ ಮತ್ತು EPFO ಯ ಡಿಜಿಟಲ್ ಸೇವೆಗಳ (digital service) ಲಾಭ ಪಡೆಯಿರಿ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




