ಹೊಸ ಸಿಮ್ ಪಡೆಯಲು ಯೋಚಿಸುತ್ತಿದ್ದೀರಾ? ಈಗಲೇ ಈ ಹೊಸ ನಿಯಮ(New rules)ಗಳನ್ನು ತಿಳಿದುಕೊಳ್ಳಿ!
ಸಿಮ್ ಕಾರ್ಡ್(SIM card)ಖರೀದಿಯ ಮೇಲಿನ ನಿಯಮಗಳು ಬದಲಾಗಿದೆ! ಇನ್ಮುಂದೆ ಹೊಸ ಸಿಮ್ ಪಡೆಯುವುದು ಹಿಂದೆಷ್ಟರಷ್ಟು ಸುಲಭವಿರಲಿಕ್ಕಿಲ್ಲ. ಹೊಸ ರೂಲ್ಸ್ ಏನೆಂದು ತಿಳಿದುಕೊಳ್ಳಿ ಮತ್ತು ಅನಾವಶ್ಯಕ ತೊಂದರೆ ತಪ್ಪಿಸಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಿಮ್ ಕಾರ್ಡ್ ಪಡೆಯೋದು ಈಗ ಸುಲಭವಲ್ಲ! ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮತ್ತು ಕೇಂದ್ರ ಸರ್ಕಾರದ ಹೊಸ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಇನ್ನುಮುಂದೆ ಹೊಸ ಸಿಮ್ ಕಾರ್ಡ್ ಪಡೆಯಲು ಆಧಾರ್ ಬಯೋಮೆಟ್ರಿಕ್ ವೆರಿಫಿಕೇಶನ್ ಕಡ್ಡಾಯ. ಮೊದಲು ಯಾವುದೇ ಒಂದು ಐಡಿ ಕಾರ್ಡ್ ತೋರಿಸಿ ಸಿಮ್ ಪಡೆಯಬಹುದಾಗಿದ್ದರೆ, ಈಗ ಆಧಾರ್ ಕಾರ್ಡ್ ಜೊತೆಗೆ ಬಯೋಮೆಟ್ರಿಕ್ ದೃಢೀಕರಣ(Biometric authentication) ಮಾಡಲೇಬೇಕು.
ನಕಲಿ ಸಿಮ್ಗಳಿಂದ ಸೈಬರ್ ವಂಚನೆ – ಇದೀಗ ಅಸಾಧ್ಯ!
ಸೈಬರ್ ಕ್ರೈಂ(Cybercrime) ಮತ್ತು ಆರ್ಥಿಕ ವಂಚನೆ(Financial fraud)ಗಳನ್ನು ತಡೆಗಟ್ಟಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದುವರೆಗೆ, ನಕಲಿ ಡಾಕ್ಯುಮೆಂಟ್ಗಳ ಸಹಾಯದಿಂದ ಸಿಮ್ ಕಾರ್ಡ್ಗಳನ್ನು ಪಡೆದು ಅಪರಾಧಿಗಳು ಮೋಸಗೊಳಿಸುತ್ತಿದ್ದರು. ಆಧಾರ್ ಬಯೋಮೆಟ್ರಿಕ್ ವೆರಿಫಿಕೇಶನ್ ನಿಯಮ ಇದನ್ನು ಸಂಪೂರ್ಣವಾಗಿ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಹೊಸ ನಿಯಮಗಳ ಮುಖ್ಯ ಅಂಶಗಳು)Key points of the new rules):
ಆಧಾರ್ ಬಯೋಮೆಟ್ರಿಕ್ ಕಡ್ಡಾಯ(Aadhaar biometric mandatory) – ಹೊಸ ಸಿಮ್ ಪಡೆಯಲು ಆಧಾರ್ ಕಾರ್ಡ್ ಮತ್ತು ಬೆರಳಚ್ಚು ದೃಢೀಕರಣ ಅಗತ್ಯ.
ಫೋಟೋ ವೆರಿಫಿಕೇಶನ್(Photo Verification) – ಗ್ರಾಹಕರ ಫೋಟೋವನ್ನು 10 ವಿಭಿನ್ನ ದೃಷ್ಟಿಕೋನಗಳಲ್ಲಿ ಸೆರೆಹಿಡಿಯಬೇಕು.
ಕಡಿವಾಣ ಇಲ್ಲದ ಸಿಮ್ ಮಾರಾಟಕ್ಕೆ ತಡೆ – ಆಧಾರ್ ವೆರಿಫಿಕೇಶನ್ ಇಲ್ಲದೆ ಸಿಮ್ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(Artificial Intelligence) ಬಳಕೆ – ನಕಲಿ ದಾಖಲೆಗಳ ಸಿಮ್ ಪತ್ತೆಹಚ್ಚಲು ಹೊಸ ತಂತ್ರಜ್ಞಾನ.
ಸೈಬರ್ ಭದ್ರತೆ(Cyber Security) – ಪ್ರತಿಯೊಬ್ಬರಿಗೂ ಸುರಕ್ಷತೆ
ಈ ಹೊಸ ನಿಯಮಗಳ ಜಾರಿ, ದೇಶದ ಸೈಬರ್ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ. ಅಪರಿಚಿತ ಕರೆಗಳ ಮೂಲಕ ಬರುವ ವಂಚನೆ, ಬ್ಯಾಂಕ್ ಡೇಟಾ ಹ್ಯಾಕ್, ಸೈಬರ್ ಕ್ರೈಂ ಇತ್ಯಾದಿಗಳನ್ನು ತಡೆಯಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಸಿಮ್ ಪಡೆಯೋದು ಹೇಗೆ?How to get a SIM?
ಹೊಸ ಸಿಮ್ ಖರೀದಿಸಲು ಈ ಹಂತಗಳನ್ನು ಅನುಸರಿಸಬೇಕು:
ನಿಮ್ಮ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ವೆರಿಫಿಕೇಶನ್ ಮಾಡಿಸಿ.
ವಿವಿಧ ದೃಷ್ಟಿಕೋನಗಳಲ್ಲಿ ನಿಮ್ಮ ಫೋಟೋ ತೆಗೆದುಕೊಳ್ಳಬೇಕು.
ನಿಮ್ಮ ಭೌತಿಕ ವಿಳಾಸದ ದೃಢೀಕರಣ ಮಾಡಬೇಕು.
ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾತ್ರ ಸಿಮ್ ಕಾರ್ಡ್ ಸಕ್ರಿಯಗೊಳ್ಳುತ್ತದೆ.
ಡಿಜಿಟಲ್ ಭಾರತಕ್ಕೆ ಹೊಸ ಅಧ್ಯಾಯ
ಇದು ಡಿಜಿಟಲ್ ಭದ್ರತೆಗೆ ಪ್ರಮುಖ ಹೆಜ್ಜೆ. ವಂಚಕರು ಸುಲಭವಾಗಿ ಸಿಮ್ ಕಾರ್ಡ್ ಪಡೆದು ಅವುಗಳನ್ನು ಅಪರಾಧಗಳಿಗೆ ಬಳಸುವುದು ಕಠಿಣವಾಗಲಿದೆ. ಇಂತಹ ಕಟ್ಟುನಿಟ್ಟಿನ ನಿಯಮಗಳು ಭಾರತದ ಡಿಜಿಟಲ್ ಸೌಕರ್ಯವನ್ನು ಮತ್ತಷ್ಟು ಸುರಕ್ಷಿತಗೊಳಿಸಲಿವೆ.
ಇನ್ನು ಸಿಮ್ ಕಾರ್ಡ್ ಪಡೆಯಲು ಶಾಪ್ಗೆ ಹೋದರೆ, ನೀವು ಆಧಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣ ಮಾಡಲೇಬೇಕು! ಈ ನಿಯಮ ನಿಜವಾದ ಬಳಕೆದಾರರಿಗೆ ಅನುಕೂಲ ಮತ್ತು ವಂಚಕರಿಗೆ ಬ್ರೇಕ್ ಕೊಡಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




