1000339725

ಸರ್ಕಾರಿ ನೌಕರರೇ ಗಮನಿಸಿ, ನಿವೃತ್ತಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

WhatsApp Group Telegram Group
ರಾಜ್ಯ ಸರ್ಕಾರಿ ನೌಕರರಿಗಾಗಿ(Government employees) ನಿವೃತ್ತಿ ವೇತನ ಅರ್ಜಿ ಪ್ರಕ್ರಿಯೆ: ಕಡ್ಡಾಯ ದಾಖಲೆಗಳ ಮಾಹಿತಿ.!

ರಾಜ್ಯ ಸರ್ಕಾರಿ ನೌಕರರು ಸೇವೆಯಿಂದ ನಿವೃತ್ತಿಯಾದ ನಂತರವು ನಿವೃತ್ತಿ ವೇತನವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಕೆಲವು ದಾಖಲೆಗಳನ್ನು (Documents) ಸಲ್ಲಿಸಬೇಕಾಗಿದೆ. ಕರ್ನಾಟಕ ಸರ್ಕಾರ ಇತ್ತೀಚೆಗೆ ಈ ಸಂಬಂಧ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಮಾರ್ಗಸೂಚಿಗಳನ್ನು ಅನುಸರಿಸಿ, ನಿವೃತ್ತಿ ವೇತನ ಪಡೆಯುವ ನೌಕರರು ತಮ್ಮ ಅರ್ಜಿಗಳನ್ನು ಪ್ರಸ್ತುತಪಡಿಸಬೇಕು. ನಿವೃತ್ತಿ ವೇತನ(Retirement Salary)ಕ್ಕೆ ಅರ್ಜಿ ಸಲ್ಲಿಸಲು ಕೆಲವು ಕಡ್ಡಾಯ ದಾಖಲೆಗಳು ಬೇಕು. ಹಾಗಾದರೆ ಈ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖೆಲೆಗಳು ಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಿವೃತ್ತಿ ವೇತನ ಎಂದರೆ  ನಿವೃತ್ತಿ ವೇತನವು ನಿವೃತ್ತಿ ಹೊಂದಿದ ಸರ್ಕಾರಿ ನೌಕರರ (Government employees) ಆರ್ಥಿಕ ಸುರಕ್ಷತೆಗಾಗಿ ಅತ್ಯಂತ ಮುಖ್ಯವಾಗಿದೆ. ಈ ಪಿಂಚಣಿಯು, ನಿವೃತ್ತಿ ಜೀವನದಲ್ಲಿ ನೌಕರರ ಪರಿವಾರದ ಭವಿಷ್ಯಕ್ಕೆ ಸಹಾಯವಾಗುತ್ತದೆ. ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಒಳ್ಳೆಯ ನಡತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು (Documents) :

ಯಥಾವಿಧಿ ಪೂರ್ತಿ ಆಗಿರುವ ಸೇವಾ ಪುಸ್ತಕ
ನಮೂನೆ-1
ಅಶಕ್ತತಾ ಪ್ರಮಾಣಪತ್ರ
ಸೇವಾ ವಿವರಣೆಗಳ ತಃಖ್ಯೆ ನಮೂನೆ-7
ಪಿಂಚಣಿ ಲೆಕ್ಕಾಚಾರ ತಃಖ್ಯೆ
ಸರಾಸರಿ ಉಪಲಬ್ದಗಳ ವಿವರ
ಕೊನೆಯ ವೇತನ ಪ್ರಮಾಣ ಪತ್ರ
ಕುಟುಂಬದ ಸದಸ್ಯರ ವಿವರ ತಃಖ್ಯೆ
ಖಾಯಂ ವಿಳಾಸ
ಖಜಾನೆ ವಿಳಾಸ
ಯಾವುದೇ ಉಪದಾನ ಸ್ವೀಕರಿಸಿಲ್ಲದಿರುವ ಬಗ್ಗೆ ಘೋಷಣೆ
ವಸೂಲಾತಿಗಾಗಿ ಒಪ್ಪಿಗೆ ಪತ್ರ
ಬೇಬಾಕಿ ಪ್ರಮಾಣ ಪತ್ರ

ಗಮನಿಸಿ (Notice) :

ನಿವೃತ್ತಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ಸಂಶಯಗಳಿದ್ದಲ್ಲಿ, ರಾಜ್ಯ ಸರ್ಕಾರ (state government) ದ ಪಿಂಚಣಿ(pension) ಇಲಾಖೆಯನ್ನು ಸಂಪರ್ಕಿಸುವುದು ಉತ್ತಮ. ಇಂತಹ ಮಾರ್ಗಸೂಚಿಗಳನ್ನು ಪಾಲಿಸಿ, ನಿವೃತ್ತ ನೌಕರರು ತಮ್ಮ ನಿವೃತ್ತಿ ಜೀವನವನ್ನು ಸುಖಕರವಾಗಿ ನಡೆಸಬಹುದು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories