ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ವಿರುದ್ಧ ಆಹಾರ ಇಲಾಖೆ ಅಧಿಕಾರಿಗಳ ಸಮರ. ಅನರ್ಹರ ಪಟ್ಟಿಗೆ ಯಾರೆಲ್ಲಾ ಸೇರಿದ್ದಾರೆ.
ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಾಗುತ್ತಿವೆ. ಅದರಲ್ಲೂ ರಾಜ್ಯ ಸರ್ಕಾರದ (State government) 5 ಗ್ಯಾರಂಟಿ ಯೋಜನೆಗಳು(guarantee schemes) ಜಾರಿಯಾದ ನಂತರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಹಲವು ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳಲು ಜನ ಮುಗಿದಿದ್ದರು. ಅದರಲ್ಲೂ ಹಲವು ಯೋಜನೆಗಳಿಗೆ ರೇಷನ್ ಕಾರ್ಡ್ (Ration card) ಬಹಳ ಮುಖ್ಯವಾಗಿ ಬೇಕಾಗುತ್ತದೆ. ಆದ್ದರಿಂದ ಜನರು ಅಡ್ಡದಾರಿಯಲ್ಲಿ ರೇಷನ್ ಕಾರ್ಡ್ ಮಾಡಿಸುಕೊಳ್ಳುವ ಅನಿವಾರ್ಯತೆಗೆ ಮುಂದಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಇಲಾಖೆಯು ಬಿಪಿಎಲ್ (BPL)ಕಾರ್ಡ್ ಅನ್ನು ನೀಡುತ್ತದೆ. ಆದರೆ ಇತ್ತೀಚಿಗೆ ಆರ್ಥಿಕವಾಗಿ ಸದೃಢರಾಗಿರುವ ಎಷ್ಟೋ ಮಂದಿ ಸುಳ್ಳು ದಾಖಲೆಯನ್ನು ನೀಡಿ ಪಡಿತರ ಚೀಟಿಯನ್ನು (Illegal BPL Ration Cards) ಪಡೆದುಕೊಂಡಿದ್ದಾರೆ. ಅಂತವರನ್ನು ಪತ್ತೆ ಮಾಡಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆಹಾರ ಇಲಾಖೆಯು 10 ಲಕ್ಷ ಅಕ್ರಮ ರೇಷನ್ ಕಾರ್ಡ್‌ಗಳನ್ನು ಪತ್ತೆ ಮಾಡಿದೆ. ಯಾರೆಲ್ಲ ಅನರ್ಹರ ಪಟ್ಟಿಗೆ ಸೇರಿಕೊಂಡಿದ್ದಾರೆ? ಇವರಿಗೆ ಎಷ್ಟು ದಂಡ ವಿಧಿಸಲಾಗುತ್ತದೆ? ಅನರ್ಹರ ಪಟ್ಟಿಯಲ್ಲಿ ಹೆಸರನ್ನು ನೋಡುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರ ಅಕ್ರಮ ಬಿಪಿಎಲ್ ಕಾರ್ಡ್ ಗಳ ಪತ್ತೆಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ಪತ್ತೆ ಕಾರ್ಯ ಕೈಗೊಂಡಿದ್ದರು, ಇನ್ನು ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ (BPL Card) ಪತ್ತೆಯಾಗಿದ್ದು, ಈ ಪೈಕಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ, 10,04,716 ಮಂದಿ 1.20 ಲಕ್ಷ ರೂ.ಗೂ ಅಧಿಕ ಆದಾಯ ಹೊಂದಿರುವವರು, 4036 ಸರ್ಕಾರಿ ನೌಕರರು (Government employees) ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಗೊತ್ತಾಗಿದೆ.
ಯಾರೆಲ್ಲ ಬಿಪಿಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಹರಲ್ಲ?
ಸರ್ಕಾರ ನೀಡಿರುವ ನಿಯಮಗಳ ಪ್ರಕಾರ ಕುಟುಂಬ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಆಗಿದ್ದಲ್ಲಿ, ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ, 4 ಚಕ್ರದ ಬಿಳಿ ಬೋರ್ಡ್ ವಾಹನ ಹೊಂದಿದವರು, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದರೆ, 7.5 ಎಕರೆ ಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿಯನ್ನು ಹೊಂದಿದ್ದರೆ, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿದವರು, ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿರುವುದಿಲ್ಲ.
ಯಾವ ಜಿಲ್ಲೆ ಹೆಚ್ಚು ಅಕ್ರಮ ಬಿಪಿಲ್ ಕಾರ್ಡ್ ಗಳನ್ನು ಪಡೆದುಕೊಂಡಿದೆ :
ರಾಜ್ಯದಲ್ಲಿ ಅಕ್ರಮ ಬಿಪಿಲ್ ಕಾರ್ಡ್ ಹೆಚ್ಚಾಗಿದ್ದು, ಅದರಲ್ಲೂ ಕಲಬುರಗಿಯಲ್ಲಿ ಅತಿ ಹೆಚ್ಚು ಅನರ್ಹ ಬಿಪಿಲ್ ಕಾರ್ಡ್ (BPL Card) ಗಳನ್ನು ಮಾಡಿಸಿಕೊಂಡಿದ್ದು ಒಟ್ಟಾರೆಯಾಗಿ 78,058 ಬಿಪಿಲ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದಾರೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಅತೀ ಕಡಿಮೆ ಅನರ್ಹ ಬಿಪಿಲ್ ಕಾರ್ಡ್ ಗಳನ್ನು ಪಡೆದುಕೊಡಿದ್ದು ಒಟ್ಟು 8,346 ಬಿಪಿಲ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದಾರೆ. ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಲಬುರಗಿ, ಕೋಲಾರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಅಧಿಕ ಅಕ್ರಮ ಬಿಪಿಎಲ್ ಕಾರ್ಡ್ ಗಳು ಪತ್ತೆಯಾಗಿವೆ. ಇನ್ನು ಬೆಂಗಳೂರು ಪೂರ್ವ, ಚಿಕ್ಕಬಳ್ಳಾಪುರ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ 10 ಸಾವಿರಕ್ಕಿಂತ ಕಡಿಮೆ ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ.
ಸರ್ಕಾರಿ ಉದ್ಯೋಗಿಗಳೂ ಕೂಡ ಅಕ್ರಮ ಬಿಪಿಲ್ ಕಾರ್ಡ್ ಗಳನ್ನು ಹೊಂದಿದ್ದಾರೆ :
ಒಟ್ಟಾರೆಯಾಗಿ ಅಕ್ರಮ ಬಿಪಿಲ್ ಕಾರ್ಡ್ ಪಡೆದವರಲ್ಲಿ 4,036 ಮಂದಿ ಸರ್ಕಾರಿ ಉದ್ಯೋಗಿಗಳಿದ್ದಾರೆ. ಇನ್ನು ವಿಜಯಪುರ ಜಿಲ್ಲೆಯಲ್ಲಿ 369 ಸರ್ಕಾರಿ ಉದ್ಯೋಗಿಗಳು ಅಕ್ರಮವಾಗಿ ಬಿಪಿಎಲ್ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮಂದಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಕಲಬುರಗಿ, ರಾಯಚೂರು, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಂದೊಂದು ಜಿಲ್ಲೆಯಲ್ಲೂ 150ಕ್ಕೂ ಅಧಿಕ ಸರ್ಕಾರಿ ಉದ್ಯೋಗಿಗಳು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ.
ಐಷಾರಾಮಿ ಕಾರುಗಳನ್ನು ಹೊಂದಿರುವವರೂ ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ:
ಸ್ವಿಫ್ಟ್ ರಿಟ್ಸ್ ಬಲೆನೋ, ಇಕೊ, ರೆನಾಲ್ಟ್, ಸೆಲೆರಿಯೋ, ಅಲ್ಲೋ, ವ್ಯಾಗನರ್, ಟಾಟಾ ಟಿಯಾಗೋ, ಇಯಾನ್, ಎಸ್-ಕ್ರಾಸ್ ಸ್ಮಾರ್ಟ್ ಹೈಬ್ರಿಡ್, ಬಲೆನೋ ಡೆಲ್ಟ್ ಇನೋವಾ ಕ್ರಿಸ್ಟಾ, ಇಗ್ನಿಸ್ ಡೆಲ್ಟಾ, ಟೊಯೊಟಾ ಯಾರಿಸ್, ಬ್ರೆಝಾ, ಇತಿಯೋಸ್ ಲಿವಾ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿರುವವರೂ ಕೂಡ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವುದು ಪತ್ತೆಯಾಗಿದೆ.
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು ಸೇರಿದಂತೆ ಸರ್ಕಾರದ ಹಲವು ಮಾನದಂಡಗಳನ್ನು ಉಲ್ಲಂಘಿಸಿ ಸುಳ್ಳು ದಾಖಲೆಯನ್ನು ನೀಡಿ ಅಕ್ರಮ BPL ಕಾರ್ಡ್ (Illegal BPL Ration Cards) ಗಳನ್ನು ಪಡೆದುಕೊಂಡಿದ್ದಾರೆ.ಅಂತವರನ್ನು ಪತ್ತೆ ಮಾಡಿ ದಂಡ ವಿಧಿಸಲು ಸರಕಾರ ತೀರ್ಮಾನಿಸಿದೆ. ಒಟ್ಟಾರೆಯಾಗಿ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡದುಕೊಂಡ ದಿನಾಂಕದಿಂದ kg ಗೆ 34 ರೂ. ಅಂತೆ ದಂಡ ವಿಧಿಸಲು ಇಲಾಖೆ ನಿರ್ದೇಶನ ನೀಡಿದೆ. ಒಟ್ಟಾರೆಯಾಗಿ 10 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ದಾರರಿಂದ ದಂಡ ವಸೂಲಿಗೆ ಮುಂದಾದ ರಾಜ್ಯ ಸರ್ಕಾರ, ಅನರ್ಹ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅನರ್ಹರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವುದು ಹೇಗೆ?
ಮೊದಲಿಗೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ.
ಕೆಳಗಡೆ e- Ration card ಮೇಲೆ ಕ್ಲಿಕ್ ಮಾಡಬೇಕು.
ನಂತರ show cancelled/suspended list ಮೇಲೆ ಕ್ಲಿಕ್ ಮಾಡಿ.
ಇದಾದ ಬಳಿಕ ನಿಮ್ಮ ಜಿಲ್ಲೆ, ತಾಲೂಕು, ಹುಟ್ಟಿದ ವರ್ಷ, ದಿನಾಂಕ ಸೆಲೆಕ್ಟ್ ಮಾಡಿ go ಮೇಲೆ ಕ್ಲಿಕ್ ಮಾಡಿ.
ನಂತರ ಅನರ್ಹರ ಪಟ್ಟಿ ಸಿಗುತ್ತದೆ. ಈ ಪಟ್ಟಿಯಲ್ಲಿ ಇರುವವರಿಗೆ ಅನ್ನಭಾಗ್ಯ(Annabhagya) ಹಾಗೂ ಗೃಹಲಕ್ಷ್ಮಿ ಹಣ(Gruhalakshmi money) ಸಿಗುವುದಿಲ್ಲ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




