ಕಾರು ಖರೀದಿಸುವವರಿಗೆ ಒಂದು ಖುಷಿಯ ಸುದ್ದಿ! ಟಾಟಾ ಮೋಟಾರ್ಸ್(Tata Motors) ಮತ್ತೊಮ್ಮೆ ಗ್ರಾಹಕರ ಮನ ಗೆದ್ದಿದೆ!
ಕಡಿಮೆ ಬೆಲೆಯಲ್ಲೇ ಸುಸಜ್ಜಿತ ಹವಾನಿಯಂತ್ರಿತ (Ventilated) ಸೀಟ್‌ಗಳುಳ್ಳ ಹೊಸ ಕಾರನ್ನು ಟಾಟಾ ಮಾರುಕಟ್ಟೆಗೆ ಪರಿಚಯಿಸಿದೆ. ಹೌದು, ನೀವು ಓದಿದ್ದು ನಿಜ! ಈಗ ಕೈಗೆಟುಕುವ ದರದಲ್ಲಿ ಟಾಟಾ ಕಾರುಗಳಲ್ಲಿ ವೆಂಟಿಲೇಟೆಡ್ ಸೀಟ್(Ventilated Seat) ಗಳ ಐಷಾರಾಮಿ ಅನುಭವವನ್ನು ಪಡೆಯಬಹುದು. ಈ ಫೀಚರ್ ಯಾವ ಕಾರಿನಲ್ಲಿ ಲಭ್ಯವಿದೆ ಮತ್ತು ಅದರ ಬೆಲೆ ಎಷ್ಟು ಎಂದು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಗ್ರಾಹಕರಿಗೆ ಕಾರುಗಳಲ್ಲಿ ಯಾವ ಫೀಚರ್‌ಗಳು ಇಷ್ಟ ಎಂದು ನಿಮಗೆ ತಿಳಿದಿದೆಯೇ? ಸನ್‌ರೂಫ್(sunroof) ಖಂಡಿತ ಒಂದು! ಇತ್ತೀಚೆಗೆ ಸನ್‌ರೂಫ್ ಇಲ್ಲದ ಕಾರುಗಳನ್ನು ಖರೀದಿಸಲು ಭಾರತೀಯರು ಹಿಂಜರಿಯುತ್ತಿದ್ದಾರೆ. ಅದೇ ರೀತಿ, ವೆಂಟಿಲೇಟೆಡ್ ಸೀಟ್‌ಗಳು ಕೂಡ ಭಾರೀ ಬೇಡಿಕೆಯಲ್ಲಿದೆ. ದುಬಾರಿ ಕಾರುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಫೀಚರ್ ಈಗ ಮಧ್ಯಮ ವರ್ಗದ ಕಾರುಗಳಲ್ಲಿಯೂ ಲಭ್ಯವಾಗುತ್ತಿದೆ.
ಈಗ ಅತೀ ಕಡಿಮೆ ಬೆಲೆಯಲ್ಲಿ ವೆಂಟಿಲೇಟೆಡ್ ಸೀಟ್‌ಗಳೊಂದಿಗೆ ಕಾರು ಲಭ್ಯವಾಗಿದೆ. ಇದು ಕಾರು ಖರೀದಿಸುವವರಿಗೆ ಒಂದು ಉತ್ತಮ ಉಡುಗೊರೆ ಎನ್ನಬಹುದು.

ಇತ್ತೀಚಿಗೆ, ಟಾಟಾ ಮೋಟಾರ್ಸ್(Tata Motors) ಟಾಟಾ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್(Tata Altroz hatchback)ನ ಒಂದು ಉತ್ಸಾಹಭರಿತ ಆವೃತ್ತಿಯಾದ ರೇಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ. ಈ ಕಾರು ಕೇವಲ ಹೆಚ್ಚಿನ ಶಕ್ತಿಯನ್ನು ಮಾತ್ರವಲ್ಲ, ಒಳಾಂಗಣದಲ್ಲಿಯೂ ಹಲವಾರು ಉನ್ನತ ವೈಶಿಷ್ಟ್ಯಗಳನ್ನು ಹೊಂದಿದೆ, ಅದು ಖಂಡಿತವಾಗಿಯೂ ನಿಮ್ಮ ಗಮನ ಸೆಳೆಯುತ್ತದೆ. ಈ ಕಾರು ತನ್ನ ವಿಭಾಗದಲ್ಲಿ ಮೊದಲ ಬಾರಿಗೆ ವೆಂಟಿಲೇಟೆಡ್ ಸೀಟ್‌ಗಳನ್ನು ಪಡೆದುಕೊಂಡಿದೆ. ಬಿಸಿಲಿನ ದಿನಗಳಲ್ಲಿ ಚಾಲನೆ ಮಾಡುವಾಗ ಚಳಿ ತುಂಬಿಸುವ ಅನುಭವವನ್ನು ನೀಡುವ ಈ ವೈಶಿಷ್ಟ್ಯ ಪ್ರಮುಖ ಆಕರ್ಷಣೆಯನ್ನು ನೀಡುತ್ತದೆ.
ಟಾಟಾ ಮೋಟಾರ್ಸ್‌ನಿಂದ ಹೊಸ ಟಾಟಾ ಆಲ್ಟ್ರೋಜ್ ರೇಸರ್: ವೇಗ, ಶೈಲಿ, ಮತ್ತು ವಿಶೇಷ ವೈಶಿಷ್ಟ್ಯಗಳ ಜೊತೆಗೆ ಮಾರುಕಟ್ಟೆಗೆ
ಇತ್ತೀಚೆಗಷ್ಟೇ ಟಾಟಾ ಮೋಟಾರ್ಸ್ ತನ್ನ ಹೆಸರಾಂತ ಆಲ್ಟ್ರೋಜ್ ಮಾದರಿಯ ರೇಸರ್(Racer) ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪವರ್ ಮತ್ತು ಪ್ರೀಮಿಯಂ ಫೀಚರ್‌ಗಳಲ್ಲಿ ಸಾಮಾನ್ಯ ಆಲ್ಟ್ರೋಜ್ ಕಾರಿಗಿಂತ ಮುಂದಿರುವ ಈ ಹೊಸ ಆಲ್ಟ್ರೋಜ್ ರೇಸರ್ ಕಾರು, ಆಧುನಿಕ ಕಾರು ಪ್ರಿಯರ ಗಮನ ಸೆಳೆಯುತ್ತಿದೆ. ಹೊಸ ಆವೃತ್ತಿಯ ಪ್ರಮುಖ ಅಂಶವೆಂದರೆ, ಇದು ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ವೆಂಟಿಲೇಟೆಡ್ ಸೀಟ್‌ಗಳನ್ನು ಹೊಂದಿದೆ.
ವಿಶೇಷತೆಯ ಟಾಪ್ ಫೀಚರ್‌ಗಳು
ಟಾಟಾ ಆಲ್ಟ್ರೋಜ್ ರೇಸರ್(Tata Altroz Racer) ಅತ್ಯಾಧುನಿಕ ರೇಸ್ ಪ್ರೇರಿತ ಸ್ಟೈಲಿಂಗ್, ಪವರ್‌ಫುಲ್ ಪರ್ಫಾಮೆನ್ಸ್ ಜೊತೆಗೆ ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 9,49,000 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಲಭ್ಯವಿರುವ ಈ ಕಾರಿನ ಟಾಪ್ ಎಂಡ್ ಮಾಡಲ್ 9,98,900 ರೂ. ಬೆಲೆಯಿದೆ.
ಈ ಹೊಸ ಆಲ್ಟ್ರೋಜ್ ರೇಸರ್ ಕಾರು ವಿಶೇಷ ಬಣ್ಣ ಆಯ್ಕೆಯಲ್ಲಿ ಲಭ್ಯವಿದೆ. ಆಕರ್ಷಕ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಥೀಮ್, ಬಾನೆಟ್ ಮತ್ತು ರೂಫ್ ಮೇಲಿನ ವೈಟ್ ರೇಸಿಂಗ್ ಪಟ್ಟಿಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.
ಬಣ್ಣ ಮತ್ತು ರೂಪಾಂತರಗಳ ಆಯ್ಕೆ
ಟಾಟಾ ಆಲ್ಟ್ರೋಜ್ ರೇಸರ್ 3 ರೂಪಾಂತರಗಳಲ್ಲಿ (R1, R2 ಮತ್ತು R3) ಲಭ್ಯವಿದೆ. ಆಲ್ಟ್ರೋಜ್ ರೇಸರ್ ಪ್ಯೂರ್ ಗ್ರೇ(Pure grey), ಅಟಾಮಿಕ್ ಆರೆಂಜ್(Atomic Orange), ಮತ್ತು ಅವೆನ್ಯೂ ವೈಟ್(Avenue White)ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದಲ್ಲದೆ, ಟಾಟಾ ಮೋಟಾರ್ಸ್ ಹೊಸದಾಗಿ ಎರಡು ರೂಪಾಂತರಗಳನ್ನು (XZ LUX ಮತ್ತು XZ+S LUX) ಪರಿಚಯಿಸಿದೆ ಮತ್ತು Altroz ಶ್ರೇಣಿಯ ಒಂದು ರೂಪಾಂತರವನ್ನು (XZ+OS) ನವೀಕರಿಸಿದೆ.
ಪವರ್‌ಟ್ರೇನ್‌ಗಳ ವೈವಿಧ್ಯತೆ
ಇವು ಎಲ್ಲಾ ಪೆಟ್ರೋಲ್ ಮ್ಯಾನುಯಲ್, ಪೆಟ್ರೋಲ್ DCA, ಡೀಸೆಲ್ ಮತ್ತು CNG ಪವರ್‌ಟ್ರೇನ್‌ಗಳ ಆಯ್ಕೆಯಲ್ಲಿ ಲಭ್ಯವಿದೆ.
ಮುಖ್ಯ ಸ್ಪರ್ಧಿಗಳು
ಮಾರುತಿ ಸುಜುಕಿ ಬಲೆನೊ(Maruti Suzuki Baleno, ಟೊಯೊಟಾ ಗ್ಲಾಂಝಾ(Toyota Glanza), ಮತ್ತು ಹ್ಯುಂಡೈ i20(Hyundai i20) ಎನ್‌ಲೈನ್ ಮಾದರಿಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಟಾಟಾ ಆಲ್ಟ್ರೋಜ್ ರೇಸರ್ ಬಿಡುಗಡೆಗೊಂಡಿದೆ.
ಟಾಟಾ ಆಲ್ಟ್ರೋಜ್ ರೇಸರ್ ಹೊಸದಾಗಿ ಪರಿಚಯಿಸಿರುವ ಆಕರ್ಷಕ ಬಣ್ಣಗಳು, ವೇಗ, ಶೈಲಿ, ಮತ್ತು ವಿಶೇಷ ವೈಶಿಷ್ಟ್ಯಗಳ ಜೊತೆಗೆ, ಕಾರು ಪ್ರಿಯರ ಗಮನ ಸೆಳೆಯುತ್ತಿದೆ. ಹೊಸ ಆಲ್ಟ್ರೋಜ್ ರೇಸರ್ ಕಾರು ವೆಂಟಿಲೇಟೆಡ್ ಸೀಟ್‌ಗಳು, ಸ್ಪೋರ್ಟಿ ಲುಕ್ ಮತ್ತು ವಿವಿಧ ಪವರ್‌ಟ್ರೇನ್‌ಗಳ ಆಯ್ಕೆಯೊಂದಿಗೆ ಕಾರು ಪ್ರಿಯರಿಗೆ ವಿಶಿಷ್ಟ ಅನುಭವವನ್ನು ನೀಡಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




