ಜನಪ್ರಿಯ ಕಂಪೆನಿಯಾದ ಸ್ಯಾಮ್ ಸಂಗ್, ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ F55 (Samsung Galaxy F55) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಗೊಳಿಸಿದ.
ಸ್ಮಾರ್ಟ್ ಫೋನ್ ಇಲ್ಲದೆ ನಮ್ಮ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಯಾಕೆಂದರೆ ಇಂದು ಸ್ಮಾರ್ಟ್ ಫೋನ್ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಇಂದು ಸ್ಮಾರ್ಟ್ ಫೋನ್ ಎಂಬುದು ಯಾರ ಬಳಿ ಇಲ್ಲ ಹೇಳಿ ಎಲ್ಲರ ಬಳಿ ಇದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸ್ಮಾರ್ಟ್ ಫೋನ್ ಬಳಸುತ್ತಾರೆ. ಹಾಗೆ ನೋಡುವುದಾದರೆ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ ಗಳ (Brand) ಸ್ಮಾರ್ಟ್ ಫೋನ್ ಗಳು ಉತ್ತಮ ಬೆಲೆಗೆ ದೊರೆಯುತ್ತವೆ. ಉತ್ತಮ ಫೀಚರ್ಸ್ ಗಳ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಳಸುವುದು ಇಂದಿನ ಯುವಜನತೆಯ ಕ್ರೇಜ್ ಆಗಿದೆ. ಅದರಲ್ಲಂತೂ ಜನಪ್ರಿಯವಾಗಿರುವ ಸ್ಮಾರ್ಟ್ ಫೋನ್ ಬ್ರ್ಯಾಂಡ್ ನನ್ನ ಬಳಿ ಇದೆ ಎಂದು ಹೇಳಿಕೊಳ್ಳುವುದು ಹೆಮ್ಮೆಯ ವಿಷಯವಾಗಿ ಬಿಟ್ಟಿದೆ. ಹಾಗೆ ಇದೀಗ ನೀವೇನಾದರೂ ಸ್ಯಾಮ್ಸಂಗ್ ಗ್ಯಾಲಕ್ಸಿಯ ಪ್ರಿಯರಾಗಿದ್ದರೆ ಸ್ಯಾಮ್ಸಂಗ್ ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನನ್ನು ಲಾಂಚ್ (launch) ಮಾಡಿದೆ. ಈ ಒಂದು ಮೊಬೈಲ್ ನ ಫೀಚರ್ಸ್‌ಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತನ್ನ ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಿದ ಸ್ಯಾಮ್ಸಂಗ್ ಗ್ಯಾಲಕ್ಸಿ (Samsung Galaxy) :

ಸ್ಯಾಮ್‌ಸಂಗ್ ಗ್ಯಾಲಕ್ಸಿ ತನ್ನ ಬಹುನಿರೀಕ್ಷಿತ F55 5Gಯನ್ನು ಇಂದು ಭಾರತದಲ್ಲಿ ಲಾಂಚ್ ಮಾಡಿದೆ. ಹಲವಾರು ಕಾರಣಗಳಿಂದ ಸ್ವಲ್ಪ ದಿನಗಳ ಹಿಂದೆ ಲಾಂಚ್ ಮಾಡಬೇಕಾಗಿದ್ದ ಸ್ಮಾರ್ಟ್ ಫೋನ್ ಅನ್ನು ಇಂದು ಲಾಂಚ್ ಮಾಡಲಾಗಿದೆ. ಜನಪ್ರಿಯ ಇ-ಮಾರ್ಕೆಟ್ (e market) ಸಂಸ್ಥೆಯಾಗಿರುವ ಫ್ಲಿಪ್‌ಕಾರ್ಟ್ (flifkart) ಮೂಲಕ ಮಾರಾಟ ಆರಂಭಿಸಲಿದೆ. ಇನ್ನೂ ಈ ಮೊಬೈಲ್‌ನ ಮಾರಾಟ ಇಂದಿನಿಂದ ಪ್ರಾರಂಭವಾಗಿದೆ.
ಹಾಗೆಯೇ ಅದರ ಬೆಲೆ? ಅದರ ಫೀಚರ್ಸ್ ಗಳೇನು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಹಗುರಾದ ಅನುಭವ (weight less feel) ನೀಡಲಿದೆ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ F55 :
ಗ್ಯಾಲಕ್ಸಿ F55 5G ಮೊಬೈಲ್‌ನ ದೊಡ್ಡ ಹೈಲೈಟ್ (highlight) ಅಂದರೆ ಅದರ ವೇಗನ್ ಲೆದರ್ ಬ್ಯಾಕ್ ಪ್ಯಾನೆಲ್ (vegan leather back panel). ಈ ಮೊಬೈಲ್ ಅನ್ನು 2024ರ ಅತ್ಯಂತ ಹಗುರವಾದ ವೇಗನ್ ಲೆದರ್ ಸ್ಮಾರ್ಟ್‌ಫೋನ್ (vegan leather smartphone) ಎಂದು ಕೂಡ ಕರೆಯಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಿರುವ ಗ್ಯಾಲಕ್ಸಿ C55 5Gಯ ಮುಂದುವರೆದ ವರ್ಶನ್ ನಂತೆ ಕಂಡು ಬಂದಿದೆ.
ಹೊಸ ಆಫರ್ಸ್ ಗಳೊಂದಿಗೆ (new offers) ಹೊಸ ಸ್ಮಾರ್ಟ್ ಫೋನ್ :
ಸ್ಯಾಮ್ ಸಂಗ್ ಕಂಪೆನಿಯು ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡಲಿದ್ದು, ಮಾರಾಟದ ಸಮಯದಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸುವ ಗ್ರಾಹಕರು ಕೇವಲ 1,999 ರೂಗಳಿಗೆ ಗ್ಯಾಲಕ್ಸಿ Fit 3 ಹಾಗೂ 45W ಟ್ರಾವೆಲ್ ಅಡಾಪ್ಟರ್ (travel adaptor) ಅನ್ನು 499 ರೂ. ಗಳಿಗೆ ಖರೀದಿಸಬಹುದು. ಹಾಗೆಯೇ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ ರೂ. 30,000 ಗಳಿಂದ ಪ್ರಾರಂಭವಾಗಲಿದೆ.
ಸ್ಯಾಮ್ಸ್‌ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್ ಫೋನ್ ನ ಫೀಚರ್ಸ್‌ಗಳು (features) :
ಡಿಸ್ಪ್ಲೇ (display) :
ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್, ಫುಲ್‌ಹೆಚ್‌ಡಿ+ ರೆಸಲ್ಯೂಶನ್ ಮತ್ತು 1,000 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.7 ಇಂಚಿನ ಸೂಪರ್ ಅಮೋಲೆಡ್ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ.
ಪ್ರೊಸೆಸರ್ (processor) :
ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ (camera) :
ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಮತ್ತು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿದೆ.
ಬ್ಯಾಟರಿ (battery) :
ಈ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಸ್ಟೋರೇಜ್ (storage) :
ಸ್ಯಾಮ್ಸ್‌ಸಂಗ್ ಗ್ಯಾಲಕ್ಸಿ F55 5G ಮೊಬೈಲ್ 8GB RAM ಮತ್ತು 256GB ಸ್ಟೋರೆಜ್ ಸಾಮರ್ಥ್ಯ ಹೊಂದಿದ್ದು, ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಅವಕಾಶವನ್ನು ಕೂಡ ನೀಡಲಾಗಿದೆ.
ಇತರ ಫಿಚರ್ಸ್ ಗಳು (other features) :
ಕನೆಕ್ಟಿವಿಟಿ ಆಯ್ಕೆಗಳನ್ನು ನೋಡುವುದಾದರೆ ಈ ಮೊಬೈಲ್ Wi-Fi, ಬ್ಲೂಟೂತ್, 4G LTE ಆಯ್ಕೆ ಹೊಂದಿದೆ, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯ ಪಡೆದುಕೊಂಡಿದೆ, USB ಟೈಪ್-C ಪೋರ್ಟ್ ಸೇರಿದಂತೆ ಇನ್ನೂ ಅನೇಕ ಅಂಶಗಳನ್ನು ಒಳಗೊಂಡಿದೆ. ಈ ಫೋನ್ ಆಂಡ್ರಾಯ್ಡ್-14 ಆಧಾರಿತ One UI 6.1ನಲ್ಲಿ ಚಾಲನೆ ಪಡೆದುಕೊಳ್ಳಲಿದೆ. ಸ್ಯಾಮ್‌ಸಂಗ್ 4 ವರ್ಷಗಳ ಆಂಡ್ರಾಯ್ಡ್ ಓಎಸ್ ನವೀಕರಣಗಳು ಮತ್ತು 5 ವರ್ಷಗಳ ನಿಯಮಿತ ಸೆಕ್ಯೂರಿಟಿ ಪ್ಯಾಚ್‌ಗಳನ್ನು ಹೊಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




