7th pay 2

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2000/- ಹಣ ಜಮಾ ಆಗಿದೆ. ನಿಮ್ಮ ಖಾತೆಗೆ ಬರದೇ ಇದ್ರೆ ಹೀಗೆ ಮಾಡಿ!

WhatsApp Group Telegram Group

ಕೊನೆಗೂ ಫೆಬ್ರುವರಿ ತಿಂಗಳ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಬಂದು ತಲುಪಿದೆ, ರಾಜ್ಯದಲ್ಲಿ ಒಟ್ಟು 1.2 ಕೋಟಿ ಜನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದರಿಂದ ಒಂದೇ ಸಾರಿ ಎಲ್ಲರ ಖಾತೆಗೆ ಬರಲು ಸಾಧ್ಯ ಇರುವುದಿಲ್ಲ. ಅದಕ್ಕೆ ಆರ್‌ಬಿಐನ ಕೆಲವು ನಿಯಮಗಳು ತಡೆಯೊಡ್ದುತ್ತವೆ. ಹಾಗಾಗಿ 7ನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದ್ದು ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಮಹಿಳೆಯರ ಖಾತೆಗೆ ಬರುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕಳೆದು ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಹ್ಮೀ 2000 ಹಣ ಖಾತೆಗೆ ಜಮಾ ಆಗದೇ ಇರಲು ಕಾರಣ ಏನು ?

– ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ಒಂದೇ ತರನಾಗಿ ಹೆಸರು ಮತ್ತು ಅಡ್ರೆಸ್ ಇಲ್ಲದೆ ಇರುವುದು.

– ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡದೆ ಇರುವುದು.

– ಬ್ಯಾಂಕ್ ಖಾತೆಗೆ ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಿಸದೇ ಇರುವುದು.

– ಬ್ಯಾಂಕ್ ಖಾತೆಗೆ ಈ ಕೆವೈಸಿ ಮಾಡದೇ ಇರುವುದು

– ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇರುವುದು

–    ಅರ್ಜಿ ಸಲ್ಲಿಸುವಾಗ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಕೆ ಆಗದೆ ಇರುವುದು

ಅದೆಷ್ಟೋ ಮಹಿಳೆಯರ ಖಾತೆಗೆ ಇನ್ನು ಒಂದು ಕಂತಿನ ಹಣವೂ ಬಂದಿಲ್ಲ. ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಯಾಕೆ ಹಣ (Money Deposit) ಬಂದಿಲ್ಲ ಎನ್ನುವ ಮಾಹಿತಿಯನ್ನು ಪಡೆಯಿರಿ. ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎನ್ನುವುದನ್ನು ತಿಳಿಸುತ್ತಾರೆ. ಅದರ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುವ ಹಾಗೆ ಮಾಡಬಹುದು.

whatss

ಸಿ ಡಿ ಪಿ ಓ ಕಚೇರಿಯಲ್ಲಿ ( CDPO Office ) ನಿಮ್ಮ ಅರ್ಜಿ ಅನುಮೋದನೆ ಬಾಕಿ ಇದ್ದರೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಖಾತೆಗೆ ಕೆವೈಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರೆ ಪೆಂಡಿಂಗ್ ಇರುವ ಹಣ ಕೂಡ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯಾಕಂದ್ರೆ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರುತ್ತದೆ.

ಪೆಂಡಿಂಗ್ ಹಣ ಪಡೆಯಲು ಇಲ್ಲಿದೆ ಪರಿಹಾರ

ಇದುವರೆಗೂ ಒಂದು ಕಂತಿನ ಹಣ ಬಂದೇ ಇಲ್ಲ ಎನ್ನುವ ಮಹಿಳೆಯರ ಬ್ಯಾಂಕ್ ಖಾತೆಯೇ ಕಾರಣ ಎನ್ನಬಹುದು, ಆದ್ದರಿಂದ ಅಂತಹ ಮಹಿಳೆಯರು ಕೂಡಲೇ ಬ್ಯಾಂಕಿಗೆ ಭೇಟಿ ನೀಡಿ ಖಾತೆಗೆ ಅಗತ್ಯ ಇರುವ ಎಲ್ಲಾ ಅಪ್ಡೇಟ್ಸ್ ಗಳನ್ನು ಮಾಡಿಸಿ, ಅದರಲ್ಲೂ ಮುಖ್ಯವಾಗಿ ಎನ್ಪಿಸಿಐ ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಲೇಬೇಕು.

ಆಧಾರ್ ಕಾರ್ಡ್ ಹತ್ತು ವರ್ಷಗಳಷ್ಟು ಹಳೆಯದಾಗಿದ್ದರೆ ತಕ್ಷಣ ಅದನ್ನು ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದಲ್ಲಿ ತಪ್ಪದೇ ಅಪ್ಡೇಟ್ ಮಾಡಿಸಿ. ಆಧಾರ್ ಕಾರ್ಡ್ ನಲ್ಲಿ ಹೆಸರು, ಅಡ್ರೆಸ್, ಲಿಂಗ, ಜನ್ಮ ದಿನಾಂಕ ಮೊದಲಾದ ವಿವರಗಳನ್ನು ನವೀಕರಣಗೊಳಿಸಬಹುದು.

ನಿಮ್ಮ ಮೊಬೈಲ್ ಮೂಲಕ ಆನ್ ಲೈನ್ ನಲ್ಲಿಯೂ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶವಿದೆ. ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಗೆ ಸರ್ಕಾರ ಅವಕಾಶ ಕೊಟ್ಟಿದೆ. ಇದು ಸಂಪೂರ್ಣ ಉಚಿತವಾಗಿದ್ದು ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ನಿಮಗೆ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

7ನೇ ಕಂತಿನ ಹಣ ಬಿಡುಗಡೆ!

ಈಗಾಗಲೇ 12,000 ಪಡೆದಿರುವ ಎಲ್ಲಾ ಮಹಿಳೆಯರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ, 7ನೇ ಕಂತಿನ ಹಣ ಮಾರ್ಚ್ 15 ರಂದು ಬಿಡುಗಡೆಯಾಗಿದ್ದು. ಹಂತ ಹಂತ ವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಹಣ ಬರುತ್ತದೆ. ಆರು ಕಂತಿನ ಹಣ ಪಡೆದ ಮಹಿಳೆಯರು 7ನೇ ಕಂತಿನ ಹಣ ಬಂದಿಲ್ಲ ಎಂದು ಚಿಂತೆ ಮಾಡುವ ಅಗತ್ಯ ಇಲ್ಲ, ದೊಡ್ಡ ಮೊತ್ತದ ಹಣ ಆಗಿರುವುದರಿಂದ ಮಾರ್ಚ್ 31ರ ಒಳಗೆ ಎಲ್ಲಾ ಖಾತೆಗೆ ಬಂದು ತಲುಪುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories