new vande bharat train

Vande Bharat: ರಾಜ್ಯದಿಂದ ಮತ್ತೊಂದು ರೈಲು ಸಂಚಾರ; ಸಮಯ, ನಿಲ್ದಾಣ ವಿವರ ಇಲ್ಲಿದೆ.

WhatsApp Group Telegram Group

ಮೈಸೂರು-ಚೆನ್ನೈ ನಡುವೆ “ಮತ್ತೊಂದು” ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Another Vande Bharat Express train): ಏಪ್ರಿಲ್‌ 5ರಿಂದ ಪ್ರಾರಂಭ. ಈ ರೈಲು ಯಾವ ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಮತ್ತು ರೈಲು ಸಂಚಾರ ಮಾಡುವ ಸಮಯ ಎಷ್ಟು ಎಂಬುದನ್ನು ತಿಳಿಯಲು ವರದಿಯನ್ನು ಕೊನೆಯವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೈಲು ಸಾರಿಗೆ ವ್ಯವಸ್ಥೆ ಈಗಾಗಲೇ ಜಗತ್ತಿನ ಬಹುತೇಕ ಎಲ್ಲಾ ಭಾಗಗಳಲ್ಲಿ ಪ್ರಸಿದ್ಧವಾಗಿದೆ. ಇತ್ತೀಚೆಗೆ ಪ್ರಾರಂಭವಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಭಾರತದ ಹಲವಾರು ನಗರಗಳನ್ನು ಸಂಪರ್ಕಿಸುತ್ತಿದೆ. ಉದ್ಯೋಗಕ್ಕಾಗಿ ಪ್ರಯಾಣಿಸುವವರಿಗೂ ವಿದ್ಯಾರ್ಥಿಗಳಿಗೂ ಈ ರೈಲು ಒಂದು ವರದಾನವಾಗಿದೆ. ಹೀಗೆಯೇ, ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ, ಕೇಂದ್ರ ರೈಲ್ವೆ ಇಲಾಖೆ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ.(Mysore and Puruchi Thalaivar Dr. ) ಎಂಜಿಆರ್ ಚೆನ್ನೈ ಸೆಂಟ್ರಲ್ (MGR Chennai Central) ನಡುವೆ ಮತ್ತೊಂದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು(Vande Bharat Express train) ಸೇವೆ ಒದಗಿಸಲು ಮುಂದಾಗಿದೆ. 2024ರ ಏಪ್ರಿಲ್ 5(April,5 2024) ರಿಂದ ಈ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಿಗೆ ಖುಷಿಯ ಸುದ್ದಿಯಾಗಿದೆ.

ಮೈಸೂರು-ಚೆನ್ನೈ ನಡುವೆ ವೇಗದ ಓಟ:

ಮೈಸೂರು ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 20663, ಬುಧವಾರವನ್ನು ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಓಡಲಿದೆ. ಈ ರೈಲು ಮೈಸೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 12:20ಕ್ಕೆ ಚೆನ್ನೈ ಸೇರಲಿದೆ. ಚೆನ್ನೈನಿಂದ ಸಂಜೆ 5 ಗಂಟೆಗೆ ಹೊರಡುವ ಈ ರೈಲು ರಾತ್ರಿ 11:20ಕ್ಕೆ ಮೈಸೂರು ತಲುಪಲಿದೆ.

whatss

ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಓಡಾಡಲಿರುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 5 ರಿಂದ ಪ್ರಾರಂಭವಾಗಲಿದೆ. ಮಂಡ್ಯ, ಬೆಂಗಳೂರು, ಕೃಷ್ಣರಾಜಪುರಂ ಮತ್ತು ಕಟಪಾಡಿಗಳಲ್ಲಿ ನಿಲುಗಡೆ ಹೊಂದಿರುವ ಈ ರೈಲು ಪ್ರಯಾಣಿಕರಿಗೆ ಒಂದು ಅದ್ಭುತ ಅವಕಾಶ.

ಈ ಹೊಸ ವಂದೇ ಭಾರತ್‌ ರೈಲನ್ನು ಬೆಂಗಳೂರಿನಿಂದ ಚೆನ್ನೈಗೆ ಓಡಿಸಲು ನಿರ್ಧರಿಸಲಾಗಿತ್ತು. ಆದರೆ, ಮೈಸೂರಿನಿಂದ ಬೆಳಗ್ಗೆ ಚೆನ್ನೈಗೆ ಹೋಗಿ ಸಂಜೆ ವಾಪಸ್‌ ಬರುವಂತಹ ರೈಲು ಬೇಕೆಂಬ ಕಾರಣಕ್ಕೆ ಮೈಸೂರಿನವರೆಗೂ ವಂದೇ ಭಾರತ್‌ ರೈಲನ್ನು ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಮೈಸೂರು – ಕೊಡಗು ಸಂಸದ ಪ್ರತಾಪ್‌ ಸಿಂಹ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರು ನಿಲ್ದಾಣದಲ್ಲಿ ಪ್ರಾಥಮಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಹೊಸ ರೈಲು ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿಕೊಂಡಿದ್ದಾರೆ.

ಇದಲ್ಲದೆ, ಕಲ್ಯಾಣ ಕರ್ನಾಟಕದ ಕಲಬುರಗಿ ಯಿಂದ ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗಿಂನಂತಿದೆ.

ಕಲ್ಯಾಣ ಕರ್ನಾಟಕದ ಕನಸು ನನಸು:

ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ (Kalaburagi-Bangalore Vande Bharat Express )ಮಾರ್ಚ್‌ 12ರಿಂದ ಆರಂಭ. ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ಕಲ್ಯಾಣ ಕರ್ನಾಟಕವನ್ನು ರಾಜಧಾನಿ ಬೆಂಗಳೂರಿಗೆ ಜೋಡಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಮಾರ್ಚ್ 12(March 12, 2024) ರಿಂದ ಚಾಲನೆಗೆ ಸಿದ್ಧವಾಗಿದೆ. ಈ ರೈಲು ಸಂಚಾರದಿಂದ ಕಲಬುರಗಿ ಸೇರಿದಂತೆ ಈ ಭಾಗದ ಜನರಿಗೆ ತ್ವರಿತ ಮತ್ತು ಅನುಕೂಲಕರ ಸಂಪರ್ಕ ಒದಗಲಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಒಪ್ಪಿಗೆಯೊಂದಿಗೆ, ಈ ರೈಲು ಚಾಲನೆಗೆ ಚಾಲನೆ ಸಿಕ್ಕಿದೆ. ಮಾರ್ಚ್ 12ರಂದು ಕಲಬುರಗಿ ರೈಲು ನಿಲ್ದಾಣದಲ್ಲಿ ಭವ್ಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವರ್ಚುವಲ್‌(Video conference) ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.

ಈ ರೈಲು ಚಾಲನೆಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರ್ಥಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಉತ್ತಮ ಸಂಪರ್ಕ ಒದಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

WhatsApp Group Join Now
Telegram Group Join Now

Popular Categories