ಕೆಎಸ್ಆರ್ಟಿಸಿ ಡ್ರೈವರ್ ಹುದ್ದೆ(KSRTC driver job) :
ಇದೀಗ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ತಮ್ಮ ಕಾರ್ಯನಿರ್ವಹಿಸಬೇಕು ಎನ್ನುವವರಿಗೆ ಒಂದು ಉಪಯುಕ್ತ ಮಾಹಿತಿ ಇಲ್ಲಿದೆ. ಹೌದು, ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ(Ksrtc driver) ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ವರದಿಯಲ್ಲಿ ತಿಳಿಸಿದ ಮಾಹಿತಿಗಳನ್ನು ತಿಳಿದುಕೊಂಡು ಅಗತ್ಯವಿರುವ ದಾಖಲೆಗಳೊಂದಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೊದಲಿಗೆ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ತಿಳಿಯುವುದಾದರೆ:
ಧಾರವಾಡ ವಿಭಾಗ : ಈ ವಿಭಾಗದಲ್ಲಿ (ಧಾರವಾಡ, ಸೌದತ್ತಿ, ರಾಮದುರ್ಗ, ಹಳಿಯಾಳ ,ದಾಂಡೇಲಿ) ಡಿಪೋಗಳಿಗೆ – 30 ಹುದ್ದೆಗಳು
ಖಾಲಿಯಿವೆ.
ಚಿಕ್ಕೋಡಿ ವಿಭಾಗ : ಈ ವಿಭಾಗದಲ್ಲಿ (ಚಿಕ್ಕೋಡಿ, ಸಂಕೇಶ್ವರ, ಗೋಕಾಕ್, ನಿಪ್ಪಾಣಿ , ರಾಯಭಾಗ, ಅಥಣಿ , ಹುಕ್ಕೇರಿ ) ಡಿಪೋಗಳಿಗೆ – 40 ಹುದ್ದೆಗಳು
ಖಾಲಿಯಿವೆ.
ಹಾವೇರಿ ವಿಭಾಗ : ಈ ವಿಭಾಗದಲ್ಲಿ (ಹಾವೇರಿ ಹಿರೇಕೆರೂರು ,ರಾಣೆಬೆನ್ನೂರು ,ಹಾನಗಲ್ ,ಬ್ಯಾಡಗಿ, ಸವಣೂರು) ಡಿಪೋಗಳಿಗೆ – 50 ಹುದ್ದೆಗಳು ಖಾಲಿಯಿವೆ.
ಸಿರಿಸಿ ವಿಭಾಗ 🙁 ಸಿರಸಿ ,ಕುಮುಟಾ , ಕಾರವಾರ, ಭಟ್ಕಲ್, ಯಲ್ಲಾಪುರ ,ಅಂಕೋಲ ) ಡಿಪೋಗಳಿಗೆ – 60 ಹುದ್ದೆಗಳು ಖಾಲಿಯಿವೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳು :
ಆಧಾರ್ ಕಾರ್ಡ್ (Adhar card)
ಡ್ರೈವಿಂಗ್ ಲೈಸೆನ್ಸ್ (Driving License)
ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ (Medical fittness certificate)
ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ (Police verification certificate)
ಎರಡು ಫೋಟೋಗಳು (Photos)
ಮಾರ್ಕ್ಸ್ ಕಾರ್ಡ್ (marks card from 7th std and above)
ಟಿ ಸಿ (Transfer certificate)
ಬ್ಯಾಂಕ್ ಡಿಟೇಲ್ಸ್(Bank detials)
ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಯುವುದಾದರೆ, ಈ ಹುದ್ದೆಗೆ ಅರ್ಹವಿರುವ ಆಸಕ್ತ ಅಭ್ಯರ್ಥಿಗಳು ತಿಳಿಸಿರುವ ದಾಖಲೆಗಳೊಂದಿಗೆ, ನಿಮ್ಮ ಹತ್ತಿರದ KSRTC ಸಾರಿಗೆ ನಿಗಮದ ಡಿಪೋ ಅನ್ನು ಬೇಟಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮತ್ತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು , ಅಭ್ಯರ್ಥಿಗಳು ದೂರವಾಣಿ ಸಂಖ್ಯೆಯಾದ : 08213588801 ಅಥವಾ 8618943513 ಅಥವಾ 7259382467 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ(Ksrtc) ಅಧಿಕೃತ ವೆಬ್ ಸೈಟ್ (Official website): https://nwkrtc.karnataka.gov.in/
ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಗ್ರಾಮ ಪಂಚಾಯತಿಯಲ್ಲಿ ಸೂಪರ್ವೈಸರ್ ಹುದ್ದೆಗಳ ನೇಮಕಾತಿ, ಈಗಲೇ ಅರ್ಜಿ ಸಲ್ಲಿಸಿ
- ಸರ್ಕಾರಿ ಹುದ್ದೆಗಳ ನೇಮಕಾತಿ, ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






