gas subsidy update

LPG Gas – ಸಬ್ಸಿಡಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ e-kyc ಬಗ್ಗೆ ಸ್ಪಷ್ಟನೆ ಕೊಟ್ಟ ಸರ್ಕಾರ, ತಪ್ಪದೇ ತಿಳಿದುಕೊಳ್ಳಿ

WhatsApp Group Telegram Group

ಈಗಾಗಲೇ ಬಂದ ಸುದ್ದಿಯ ಪ್ರಕಾರ ಎಲ್ ಪಿ ಜಿ ಗ್ಯಾಸ್ ( LPG Gas ) ಬಳಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ ಎಂದು ಶೋಷಿಯಲ್ ಮೀಡಿಯಾಗಳಲ್ಲಿ ( Social Media ) ಹರಿದಾಡುತ್ತಿದ್ದು ಸಾರ್ವಜನಿಕರು ಈ ಮಾಹಿತಿ ನಿಜ ಎಂದು ಗ್ಯಾಸ್ ಏಜೆನ್ಸಿಗಳ ಸ್ಟೋರ್ ಗಳ ಮುಂದೆ ಸಾಲು ಸಾಲಾಗಿ ನಿಂತು ಹೊಸ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಗೃಹಬಳಕೆಗೆ ಅನಿಲ ಸಂಪರ್ಕ ಪಡೆಯಲು ಇ-ಕೆವೈಸಿ ( EKYC ) ಮಾಡಿಸಿಕೊಳ್ಳುವುದು ಡಿಸೆಂಬರ್ 31 ಕೊನೆಯ ದಿನಾಂಕ ಆಗಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೇಳಗಿಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಧಾರ್ ದೃಡೀಕರಣ ಕಡ್ಡಾಯ( Adhar Card link is Compulsory ) ಹಾಗೂ ಯಾರಿಗೆ ಕಡ್ಡಾಯ ಎಂಬುದರ ಬಗ್ಗೆ ಮಾಹಿತಿ :

Picsart 23 12 29 12 53 11 390

ಆಧಾರ್ ಲಿಂಕ್ ಮಾಡಿಸಲು ಈ ಹಿಂದೆಯೇ ಸೂಚನೆ ಬಂದಿದೆ. ಹಾಗಾಗಿ ಅದರ ಜೊತೆಗೆ ಇ-ಕೆವೈಸಿ ಮಾಡುತ್ತಿದ್ದಾರೆ. ಆದರೆ ಈ ಒಂದು ಬದಲಾವಣೆಗೆ ಡಿಸೆಂಬರ್ 31 ಕೊನೆಯ ದಿನಾಂಕವಲ್ಲ.

ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ( Ujwal Gas ) ಪಡೆದಿರುವವರಿಗೆ ಮಾತ್ರವಷ್ಟೇ ಕಡ್ಡಾಯ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಕುರಿತು ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಹೆಚ್ಚುವರಿ ಸಂಪರ್ಕ ಗುರುತಿಸುವ ಸಲುವಾಗಿ ಕೆವೈಸಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಗ್ರಾಹಕರು ಗಲಿಬಿಲಿಗೊಳಗಾಗುವ ಅಗತ್ಯವಿಲ್ಲ ಎಂದು ಅಡುಗೆ ಅನಿಲ ವಿತರಕರು ತಿಳಿಸಿದ್ದಾರೆ.

whatss

ಈಗಾಗಲೇ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂದೇಶ ಹೀಗಿದೆ :

ಗ್ಯಾಸ್ ಸಂಪರ್ಕ ಹೊಂದಿದವರು ಡಿಸೆಂಬರ್ 31ರೊಳಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜನ್ಸಿ ( Gas Agency ) ನೀಡಿರುವ ಪುಸ್ತಕ ಅಥವಾ ಕಾರ್ಡ್ ಜೊತೆ ಏಜನ್ಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಿದರೆ, ಜನರಿ 1ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರೂ ಇದ್ದು, ಸಬ್ಸಿಡಿಯ ಬಳಿಕ 500 ರೂಗಳಿಗೆ ದೊರಕುತ್ತದೆ. ಕೆವೈಸಿ ಮಾಡದೇ ಇದ್ದರೆ, ಸಬ್ಸಿಡಿರಹಿತವಾಗಿ ಗ್ಯಾಸ್ ಸಂಪರ್ಕವು ಕಮರ್ಷಿಯಲ್ ಆಗಿ ಮಾರ್ಪಾಡಾಗುತ್ತದೆ. ಆಗ ಗ್ಯಾಸ್ ಗೆ 1,400 ರೂ ಕೊಡಬೇಕು ಎಂಬ ಸಂದೇಶ ಹರಿದಾಡುತ್ತಿದೆ.

ಸುಳ್ಳು ಸಂದೇಶ ಕೇಳಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾರ್ವಜನಿಕರ ಕೂಗಾಟ :

ಹೌದು, ಇದೊಂದು ಸುಳ್ಳು ಸಂದೇಶ ಆಗಿದ್ದು. ಮೊಬೈಲ್ ಜಾಲತಾಣದಲ್ಲಿ ಕಳೆದೊಂದು ವಾರದಿಂದ ಈ ಸುಳ್ಳು ಸಂದೇಶ ( Fake News ) ಹರಿದಾಡುತ್ತಿದೆ. ಗ್ರಾಹಕರು ಇದನ್ನು ನಂಬಿ ಗೊಂದಲಕ್ಕೆ ಒಳಗಾಗಿ ಸಾಲು ಸಾಲಾಗಿ ನೇರವಾಗಿ ಗ್ಯಾಸ್ ಏಜನ್ಸಿಗಳ ಮುಂದೆ ಬಂದು ಕೂಡಲೇ ಮಾಡಿಕೊಡಿ ಎಂದು ಕೂಗಾಡುತ್ತಿದ್ದರೆ. ಅವರು ಯಾರ ಮಾತನ್ನು ಕೇಳುತ್ತಿಲ್ಲ.

ದಕ್ಷಿಣ ಕನ್ನಡ ( Dakshina Kannada ) ಮತ್ತು ಉಡುಪಿ ( Udupi ) ಜಿಲ್ಲೆಗಳಲ್ಲಿ ಉಜ್ವಲ ಗ್ಯಾಸ್ ಸಂಪರ್ಕ ಪಡೆಯುತ್ತಿರುವವರ ಸಂಖ್ಯೆ :

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಜ್ವಲ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದಂತೆ 70 ಸಾವಿರದಷ್ಟು ಫಲಾನುಭವಿಗಳು ಇದ್ದಾರೆ. ಅವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಉಳಿದಂತೆ ಆಧಾರ್ ಒದಗಿಸಿದ ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದುಕೊಳ್ಳಬೇಕಾಗುತ್ತದೆ ಎಂದು ಉಜ್ವಲ ಯೋಜನೆ ನೋಡಲ್ ಅಧಿಕಾರಿ ತಿಳಿಸಿದ್ದಾರೆ.


tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories