ಸವಣೂರು: ಸಾಮಾಜಿಕ ಕಳಕಳಿ ಹಾಗೂ ಸಮಾಜಮುಖಿ ಚಿಂತನೆ ಹೊಂದಿರುವವರು ಮಾತ್ರ ಇಂತಹ ಸೇವಾ ಸಂಸ್ಥೆಗಳ ನಿರ್ಮಾಣದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯ ಕುರಿತು ಚಿಂತಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಸಿಆರ್‌ಪಿ (CRP) ನಾಗರಾಜ ಬಂಡಿವಡ್ಡರ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನೂತನ ‘ಭುದೀಕ್ಷಾ ಸೇವಾ ಸಂಸ್ಥೆ’ ಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸುವ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರನ್ನು ಗೌರವಿಸುವ ಮೂಲಕ ಈ ಸಂಸ್ಥೆಯನ್ನು ಉದ್ಘಾಟಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ,” ಎಂದು ನಾಗರಾಜ ಬಂಡಿವಡ್ಡರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತಮ ಉದ್ದೇಶದೊಂದಿಗೆ ಸಂಸ್ಥೆ ಸ್ಥಾಪನೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಕಾಪುರ ಗ್ರಾಮದ ಡಿಪಿಪಿ ಸಹಕಾರ ಸಂಘದ ಅಧ್ಯಕ್ಷ ಮೇಘರಾಜ್ ಕೂಲಿ ಅವರು ಮಾತನಾಡಿ, “ಭುದೀಕ್ಷಾ ಸೇವಾ ಸಂಸ್ಥೆಯು ಅತ್ಯುತ್ತಮ ಉದ್ದೇಶದೊಂದಿಗೆ ನಿರ್ಮಾಣಗೊಂಡಿದೆ. ಈ ಸಂಸ್ಥೆಯ ಪದಾಧಿಕಾರಿಗಳು ಈ ಹಿಂದೆಯೂ ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇಂದಿನಿಂದ ಅವರ ಸಮಾಜ ಸೇವಾ ಕಾರ್ಯಗಳಿಗೆ ಈ ಸಂಸ್ಥೆಯ ಮೂಲಕ ಇನ್ನಷ್ಟು ಬಲ ಬಂದಿದೆ,” ಎಂದು ತಿಳಿಸಿದರು.
ಭುದೀಕ್ಷಾ ಸೇವಾ ಸಂಸ್ಥೆಯ ಕಾರ್ಯದರ್ಶಿ ವೀಣಾ ವೀರನಗೌಡ್ರ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷೆ ಸುಮಾ ನಿರಂಜನ ಹಾವಣಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಸ್ಥೆ ರಚನೆಯ ಹಿಂದಿರುವ ಪ್ರಮುಖ ಉದ್ದೇಶಗಳು ಹಾಗೂ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಸಾಮಾಜಿಕ ಕಾರ್ಯವೈಖರಿ ಕುರಿತು ಸಭೆಗೆ ವಿವರಿಸಿದರು.
ಪತ್ರಕರ್ತರಿಗೆ ವಿಶೇಷ ಸನ್ಮಾನ
ಇದೇ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಪತ್ರಕರ್ತರಾದ ಶಂಕ್ರಯ್ಯ ಹಿರೇಮಠ, ಅಶೋಕ ಕಾಳಶೆಟ್ಟಿ, ಯೋಗೇಂದ್ರ ಜಂಬಗಿ, ರಾಜಶೇಖಯ್ಯ ಗುರುಸ್ವಾಮಿಮಠ, ಅಶೋಕ ಉಳ್ಳಟ್ಟಿ, ಅನಿಲಕುಮಾರ ಹೊಂಬಳದ, ಪರಶುರಾಮ ಹೊಳಲ, ಹಾಗೂ ಆನಂದ ಮತ್ತಿಗಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಳಲಕೊಂಡ ಗ್ರಾಮದ ಸ್ಫೂರ್ತಿ ಎಫ್‌ಪಿಒ (FPO) ಸಿಇಒ ಖಂಡೆಪ್ಪ ನೆಗಳೂರ, ಬಿಜೆಪಿ ಪ್ರಮುಖರಾದ ಮಹಾಂತೇಶ ಹಾವಣಗಿ, ನಿರಂಜನ ಹಾವಣಗಿ, ಮಂಜುನಾಥ ಬೆಣ್ಣಿ, ಗಂಗಮ್ಮ ಗೌಡಣ್ಣವರ, ಶಾಲೆಯ ಎಸ್‌ಡಿಎಂಸಿ (SDMC) ಅಧ್ಯಕ್ಷ ಲಕ್ಷ್ಮಣ ಗುಂಜಳ, ಹಾಗೂ ಶಾಲೆಯ ಮುಖ್ಯಗುರು ವಿ.ಎಸ್. ಮಾಡಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇನ್ನರ್ ವೀಲ್ ಕ್ಲಬ್ ಉಪಾಧ್ಯಕ್ಷೆ ಸರೋಜಾ ರಾಯ್ಕರ್ ಹಾಗೂ ಶಿಕ್ಷಕಿ ಎಲ್.ವೈ. ರಸಾಳಕರ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ: ಮಾರುತಿ ತಳವಾರ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಮಾರುತಿ ತಳವಾರ್ ಅವರು ‘Needs of Public’ ಜಾಲತಾಣದ ಹಾವೇರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಬಿಎ, ಬಿ.ಎಡ್ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಮೊದಲು ಸುಮಾರು ಐದು ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಮಾಜಮುಖಿ ವಿಚಾರಗಳು ಮತ್ತು ಜನಪರ ಸಮಸ್ಯೆಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ.
ಸ್ಥಳೀಯ ಆಡಳಿತ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಆಧರಿಸಿದ ವರದಿಗಳನ್ನು ಸಿದ್ಧಪಡಿಸುವಲ್ಲಿ ಅನುಭವ ಹೊಂದಿರುವ ಇವರು, ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಓದುಗರಿಗೆ ತಲುಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳವಣಿಗೆಗಳು, ಜನಸಮಸ್ಯೆಗಳು ಹಾಗೂ ನೆಲಮಟ್ಟದ ಸುದ್ದಿಗಳನ್ನು ವರದಿ ಮಾಡುವಲ್ಲಿ ವಿಶೇಷ ಒಲವು ಹೊಂದಿದ್ದಾರೆ.


WhatsApp Group




Leave a Reply