VAO recruitment 2026 apply now

VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯಡಿ ಖಾಲಿ ಇರುವ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ (PUC) ಉತ್ತೀರ್ಣ ಅಭ್ಯರ್ಥಿಗಳು ಜುಲೈ 30, 2026ರೊಳಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.,

Highlights:

  • ಕಂದಾಯ ಇಲಾಖೆಯಲ್ಲಿ 572 VAO ಹುದ್ದೆಗಳ ಭರ್ಜರಿ ನೇಮಕಾತಿ.
  • ಪಿಯುಸಿ (PUC) ಅಥವಾ ಡಿಪ್ಲೊಮಾ ಪಾಸಾದವರಿಗೆ ಸುವರ್ಣಾವಕಾಶ.

ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ಭರ್ತಿ

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ದ್ವಿತೀಯ ಪಿಯುಸಿ (PUC) ಉತ್ತೀರ್ಣ ಯುವಜನತೆಗೆ ಕರ್ನಾಟಕ ಸರ್ಕಾರವು ಭರ್ಜರಿ ಉದ್ಯೋಗಾವಕಾಶ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ‘ಗ್ರಾಮ ಆಡಳಿತ ಅಧಿಕಾರಿ (Village Administrative Officer – VAO)’ ಹುದ್ದೆಗಳ ನೇರ ನೇಮಕಾತಿಗಾಗಿ ಎರಡು ಪ್ರತ್ಯೇಕ (RPC & KK) ಅಧಿಕೃತ ಅಧಿಸೂಚನೆಗಳನ್ನು ಪ್ರಕಟಿಸಿದೆ.

vao 1

ಈ ನೇಮಕಾತಿಯಡಿ ಉಳಿಕೆ ಮೂಲ ವೃಂದ (RPC) ವ್ಯಾಪ್ತಿಯಲ್ಲಿ 505 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ (KK) ಸ್ಥಳೀಯ ವೃಂದದಲ್ಲಿ 67 ಹುದ್ದೆಗಳು ಸೇರಿದಂತೆ ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ಮಾದರಿ, ಪಠ್ಯಕ್ರಮ, ಪ್ರಮುಖ ದಿನಾಂಕಗಳು ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

VAO ನೇಮಕಾತಿ 2026: ಸಂಕ್ಷಿಪ್ತ ವಿವರಣೆ

ವಿವರಗಳುಮಾಹಿತಿ
ನೇಮಕಾತಿ ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಬಳಕೆದಾರ ಇಲಾಖೆಕಂದಾಯ ಇಲಾಖೆ (Revenue Department)
ಹುದ್ದೆಯ ಹೆಸರುಗ್ರಾಮ ಆಡಳಿತ ಅಧಿಕಾರಿ (VAO) – ಗ್ರೂಪ್ ‘ಸಿ’
ಒಟ್ಟು ಹುದ್ದೆಗಳು572 ಹುದ್ದೆಗಳು (505 RPC + 67 KK)
ಮಾಸಿಕ ವೇತನ ಶ್ರೇಣಿ₹34,100 ರಿಂದ ₹67,600/-
ಅರ್ಜಿ ಸಲ್ಲಿಸುವ ವಿಧಾನಆನ್‌ಲೈನ್ (Online) ಮಾತ್ರ
ಅಧಿಕೃತ ಜಾಲತಾಣhttps://cetonline.karnataka.gov.in/kea/

(ಗಮನಿಸಿ: ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಖಾಯಂಪೂರ್ವ (Probationary) ಅವಧಿಯಲ್ಲಿರುತ್ತಾರೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯಕ್ಕೆ ಒಳಪಡುತ್ತಾರೆ.)

ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ (Vacancy Details)

1. ಉಳಿಕೆ ಮೂಲ ವೃಂದ (RPC / Non-HK) – ಒಟ್ಟು 505 ಹುದ್ದೆಗಳು

ಕ್ರ.ಸಂ.ಜಿಲ್ಲೆಯ ಹೆಸರುಹುದ್ದೆಗಳ ಸಂಖ್ಯೆ
1ತುಮಕೂರು50
2ಮಂಡ್ಯ50
3ಬೆಳಗಾವಿ48
4ಮೈಸೂರು45
5ಹಾಸನ35
6ಚಾಮರಾಜನಗರ31
7ಬೆಂಗಳೂರು ದಕ್ಷಿಣ30
8ಬೆಂಗಳೂರು ಗ್ರಾಮಾಂತರ29
9ಕೋಲಾರ22
10ಚಿಕ್ಕಬಳ್ಳಾಪುರ21
11ಬೆಂಗಳೂರು ನಗರ20
12ದಕ್ಷಿಣ ಕನ್ನಡ20
13ಶಿವಮೊಗ್ಗ18
14ಬಾಗಲಕೋಟೆ16
15ಚಿತ್ರದುರ್ಗ15
16ಹಾವೇರಿ15
17ಗದಗ14
18ಉಡುಪಿ10
19ಚಿಕ್ಕಮಗಳೂರು10
20ಬೀದರ್04
21ರಾಯಚೂರು02
ಒಟ್ಟು505

2. ಕಲ್ಯಾಣ ಕರ್ನಾಟಕ ವೃಂದ (HK) – ಒಟ್ಟು 67 ಹುದ್ದೆಗಳು

ಕ್ರ.ಸಂ.ಜಿಲ್ಲೆಯ ಹೆಸರುಹುದ್ದೆಗಳ ಸಂಖ್ಯೆ
1ಕಲಬುರಗಿ40
2ಬೀದರ್17
3ರಾಯಚೂರು10
ಒಟ್ಟು67

ಶೈಕ್ಷಣಿಕ ವಿದ್ಯಾರ್ಹತೆ (Educational Qualification)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಈ ಕೆಳಗಿನ ಯಾವುದಾದರೂ ಒಂದು ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು:

  • ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ದ್ವಿತೀಯ ಪಿ.ಯು.ಸಿ. (PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಅಥವಾ ತತ್ಸಮಾನ ವಿದ್ಯಾರ್ಹತೆಗಳು: ಸಿ.ಬಿ.ಎಸ್.ಇ (CBSE) ಅಥವಾ ಐ.ಸಿ.ಎಸ್.ಇ (ICSE) ಮಂಡಳಿಯ 12ನೇ ತರಗತಿ, ಎನ್.ಐ.ಓ.ಎಸ್ (NIOS) ನ ಉನ್ನತ ಪ್ರೌಢ ಶಿಕ್ಷಣ, 3 ವರ್ಷಗಳ ಡಿಪ್ಲೊಮಾ (Diploma), ಜೆ.ಓ.ಸಿ (JOC), ಅಥವಾ ಭಾಷಾ ವಿಷಯದ ಷರತ್ತುಗಳೊಂದಿಗೆ 2 ವರ್ಷಗಳ ಐ.ಟಿ.ಐ (ITI) ಕೋರ್ಸ್.

ವಯೋಮಿತಿ ಮತ್ತು ಸಡಿಲಿಕೆ (Age Limit)

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು (30.07.2026) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಸರ್ಕಾರದ ಆದೇಶದನ್ವಯ ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು, ಅದರಂತೆ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:

  • ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು.
  • ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷಗಳು.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 (SC/ST/Cat-1) ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು.

(ವಿಶೇಷ ಚೇತನರಿಗೆ 10 ವರ್ಷ, ವಿಧವೆಯರಿಗೆ 10 ವರ್ಷ ಮತ್ತು ಮಾಜಿ ಸೈನಿಕರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರಲಿದೆ.)

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕ

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11 ಜುಲೈ 2026.
  • ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 31 ಜುಲೈ 2026.

ಅರ್ಜಿ ಶುಲ್ಕದ ವಿವರ (ಆನ್‌ಲೈನ್ ಮೂಲಕ ಪಾವತಿಸಬೇಕು):

  • ಸಾಮಾನ್ಯ ಅರ್ಹತೆ (GM) ಮತ್ತು ಹಿಂದುಳಿದ ವರ್ಗಗಳು (2A, 2B, 3A, 3B): ₹750/- (ಅರ್ಜಿ ಶುಲ್ಕ 500 + ಪ್ರಕ್ರಿಯೆ ಶುಲ್ಕ 250).
  • SC, ST, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯಲಿಂಗದ ಅಭ್ಯರ್ಥಿಗಳು: ₹500/- (ಅರ್ಜಿ ಶುಲ್ಕ 250 + ಪ್ರಕ್ರಿಯೆ ಶುಲ್ಕ 250).
  • ವಿಶೇಷ ಚೇತನ (PWD) ಅಭ್ಯರ್ಥಿಗಳಿಗೆ: ₹250/- (ಕೇವಲ ಪ್ರಕ್ರಿಯೆ ಶುಲ್ಕ).

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ ಮತ್ತು ದಿನಾಂಕ (Exam Pattern & Dates)

ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ 200 ಅಂಕಗಳ ಆಫ್‌ಲೈನ್-ಒಎಂಆರ್ (Offline-OMR) ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ನಡೆಯಲಿದೆ.

ಪರೀಕ್ಷಾ ಪಠ್ಯಕ್ರಮ (Syllabus):

  1. ಪತ್ರಿಕೆ-1 (ಸಾಮಾನ್ಯ ಜ್ಞಾನ): ಪ್ರಚಲಿತ ಘಟನೆಗಳು, ಸಂವಿಧಾನ, ಇತಿಹಾಸ, ಕರ್ನಾಟಕದ ಭೂಗೋಳ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಮತ್ತು ಪರಿಸರ ಸಮಸ್ಯೆಗಳು (100 ಪ್ರಶ್ನೆಗಳು, 100 ಅಂಕಗಳು, 2 ಗಂಟೆ ಅವಧಿ).
  2. ಪತ್ರಿಕೆ-2: ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ (100 ಪ್ರಶ್ನೆಗಳು, 100 ಅಂಕಗಳು, 2 ಗಂಟೆ ಅವಧಿ).

ಋಣಾತ್ಮಕ ಮೌಲ್ಯಮಾಪನ (Negative Marking): ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು. ಯಾವುದೇ ವೃತ್ತವನ್ನು ಶೇಡ್ ಮಾಡದಿದ್ದರೂ 0.25 ಅಂಕ ಕಡಿತಗೊಳಿಸಲಾಗುತ್ತದೆ (ಇದಕ್ಕಾಗಿ 5ನೇ ಆಯ್ಕೆಯನ್ನು ನೀಡಲಾಗಿರುತ್ತದೆ). ಅರ್ಹತೆಗಾಗಿ ಕನಿಷ್ಠ 35% ಅಂಕ ಗಳಿಸುವುದು ಕಡ್ಡಾಯ.

ಪರೀಕ್ಷಾ ದಿನಾಂಕಗಳ ವಿವರ (Exam Dates)

ವೃಂದದ ಹೆಸರುಪತ್ರಿಕೆ-1 (ದಿನಾಂಕ ಮತ್ತು ಸಮಯ)ಪತ್ರಿಕೆ-2 (ದಿನಾಂಕ ಮತ್ತು ಸಮಯ)
ಉಳಿಕೆ ಮೂಲ ವೃಂದ (RPC)04 ಅಕ್ಟೋಬರ್ 2026 (ಬೆಳಿಗ್ಗೆ 10:30)04 ಅಕ್ಟೋಬರ್ 2026 (ಮಧ್ಯಾಹ್ನ 2:30)
ಕಲ್ಯಾಣ ಕರ್ನಾಟಕ ವೃಂದ (HK)25 ಅಕ್ಟೋಬರ್ 2026 (ಬೆಳಿಗ್ಗೆ 10:30)25 ಅಕ್ಟೋಬರ್ 2026 (ಮಧ್ಯಾಹ್ನ 2:30)

(ಸೂಚನೆ: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ದಿನಾಂಕವನ್ನು ಪ್ರಾಧಿಕಾರವು ನಂತರ ಪ್ರಕಟಿಸಲಿದೆ.)

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (How to Apply)

Step 1: ಮೊದಲು ಕೆಇಎ (KEA) ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.

vao

Step 2: ಮುಖಪುಟದಲ್ಲಿರುವ ‘ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ’ ಲಿಂಕ್ ಮೇಲೆ ಕ್ಲಿಕ್ ಮಾಡಿ.

Step 3: ಕೇವಲ ಒಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು, ನಿಮ್ಮ ವೈಯಕ್ತಿಕ ವಿವರಗಳು ಮತ್ತು ಮೀಸಲಾತಿ ಮಾಹಿತಿಯನ್ನು ಭರ್ತಿ ಮಾಡಿ.

Step 4: ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (50KB-200KB) ಮತ್ತು ಸಹಿಯನ್ನು (50KB-70KB) ಜೆಪಿಇಜಿ (JPEG) ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಿ.

Step 5: ಆನ್‌ಲೈನ್ ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ.

Step 6: ಅಂತಿಮವಾಗಿ ಅರ್ಜಿಯನ್ನು ಸಬ್‌ಮಿಟ್ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟೌಟ್ (Application Printout) ಮತ್ತು ಶುಲ್ಕ ಪಾವತಿ ಚಲನ್ ಅನ್ನು ಕಾಯ್ದಿರಿಸಿಕೊಳ್ಳಿ.

Karnataka Revenue Department VAO Recruitment 2026 : Important Links

New VAO Exam Pattern

Paper-1 (100 Marks) & 2 Hours Time

  1. a) General Knowledge – 25
  2. b) Computer Knowledge – 25
  3. c) General Kannada – 25
  4. d) General English – 25

Paper-2 (100 Marks) & 2 Hour’s Time

  1. a) Arithmetic – 25
  2. b) Statistics – 25
  3. c) Logical Reasoning – 25
  4. d) Revenue Law – 25

VAO Exam Old Question Papers as Mentioned Below:

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್

WhatsApp Group Join Now
Telegram Group Join Now

One response to “VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ”

  1. Vedini A Avatar
    Vedini A

    Devinagara haballa Bangalore 560094

Leave a Reply

Your email address will not be published. Required fields are marked *


Popular Categories