image 1200x675 2

BCM Hostel Admission 2026-27: ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆರಂಭ, ದಿನಾಂಕ ವಿಸ್ತರಣೆ

2026-27ನೇ ಶೈಕ್ಷಣಿಕ ಸಾಲಿನ ಮೆಟ್ರಿಕ್ ನಂತರದ BCM ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. PUC, ಡಿಪ್ಲೊಮಾ, ಐಟಿಐ ಹಾಗೂ ಪದವಿ (BA, BSc, BCom ಸೇರಿದಂತೆ) ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ, ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.,,

ಮುಖ್ಯಾಂಶಗಳು:

  • ಪದವಿ ವಿದ್ಯಾರ್ಥಿಗಳಿಗೂ ಅವಕಾಶ: ಕೇವಲ ಪಿಯುಸಿ ಮಾತ್ರವಲ್ಲದೆ, ಸಾಮಾನ್ಯ ಪದವಿ ಕೋರ್ಸ್‌ಗಳಾದ ಬಿ.ಎ (B.A), ಬಿ.ಎಸ್ಸಿ (B.Sc), ಬಿ.ಕಾಂ (B.Com), ಬಿ.ಬಿ.ಎ (BBA), ಮತ್ತು ಬಿ.ಸಿ.ಎ (BCA) ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  • ಕೊನೆಯ ದಿನಾಂಕ: ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು 20-07-2026 (ಜುಲೈ 20) ರವರೆಗೆ ವಿಸ್ತರಿಸಲಾಗಿದೆ.

ಮೆಟ್ರಿಕ್-ನಂತರದ ಉಚಿತ BCM ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ (2026-27)

ಗ್ರಾಮೀಣ ಭಾಗದಿಂದ ಬಂದು ಪಟ್ಟಣಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (BCWD) 2026-27ನೇ ಶೈಕ್ಷಣಿಕ ಸಾಲಿನ ಮೆಟ್ರಿಕ್-ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಹೊಸ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಹಿಂದೆ ಕೇವಲ ಪಿಯುಸಿ, ಐ.ಟಿ.ಐ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತಿದ್ದ ಈ ಪ್ರವೇಶಾತಿಯನ್ನು ಇದೀಗ ಪದವಿ (Degree) ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.

Postmatric BCM Hostel Application 2026-27 ಸಂಕ್ಷಿಪ್ತ ವಿವರ:

  • ಇಲಾಖೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD).
  • ಸೌಲಭ್ಯ: ಮೆಟ್ರಿಕ್-ನಂತರದ ಉಚಿತ ವಿದ್ಯಾರ್ಥಿನಿಲಯಗಳು (ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್).
  • ಶೈಕ್ಷಣಿಕ ಸಾಲು: 2026-27 ನೇ ಸಾಲಿಗೆ.
  • ಯಾರಿಗೆ ಅನ್ವಯ: 1ನೇ ಮತ್ತು 2ನೇ ಪಿಯುಸಿ (PUC), ಡಿಪ್ಲೋಮಾ, ಐ.ಟಿ.ಐ, ಹಾಗೂ ಪದವಿ ಕೋರ್ಸ್‌ಗಳಾದ BA, BSc, BCom, BBA, BCA ಓದುತ್ತಿರುವ ವಿದ್ಯಾರ್ಥಿಗಳಿಗೆ.

ಅರ್ಹತೆಗಳು ಮತ್ತು ಆದಾಯ ಮಿತಿ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಹಾಸ್ಟೆಲ್‌ಗಳಿಗೆ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ಈ ಕೆಳಕಂಡ ಮಿತಿಯೊಳಗಿರಬೇಕು:

  • ಪ್ರವರ್ಗ-1, ಎಸ್.ಸಿ (SC) & ಎಸ್.ಟಿ (ST) ವಿದ್ಯಾರ್ಥಿಗಳಿಗೆ: ವಾರ್ಷಿಕ ಆದಾಯ ಮಿತಿ ರೂ. 2.50 ಲಕ್ಷ.
  • ಪ್ರವರ್ಗ-2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳಿಗೆ: ವಾರ್ಷಿಕ ಆದಾಯ ಮಿತಿ ರೂ. 1.00 ಲಕ್ಷ.

ಪ್ರಮುಖ ದಿನಾಂಕಗಳು (ಹೊಸ ಅಪ್ಡೇಟ್‌ನಂತೆ)

  • ಹೊಸ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ: 30-06-2026
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-07-2026 (ಜುಲೈ 20, 2026)

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿಯೇ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಮೊದಲಿಗೆ ಅಧಿಕೃತ ವೆಬ್‌ಸೈಟ್ https://shp.karnataka.gov.in/bcwd ಗೆ ಭೇಟಿ ನೀಡಿ. ಮುಖಪುಟದಲ್ಲಿ ಕಾಣುವ “Post Matric – Apply” ಬಟನ್ ಮೇಲೆ ಕ್ಲಿಕ್ ಮಾಡಿ.

ಗಮನಿಸಿ: ನಿಮ್ಮ ಬಳಿ ಈಗಾಗಲೇ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (SSP ID) ಖಾತೆ ಇದ್ದಲ್ಲಿ “YES” ಕ್ಲಿಕ್ ಮಾಡಿ, ಇಲ್ಲದಿದ್ದರೆ “NO” ಕ್ಲಿಕ್ ಮಾಡಿ ಹೊಸ ಖಾತೆ ತೆರೆಯಿರಿ. SSP ID ಮತ್ತು SHP ID ಒಂದೇ ಆಗಿರುವುದರಿಂದ, ನೀವು SSP ಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ನೇರವಾಗಿ ಲಾಗಿನ್ ಆಗಬಹುದು.

bcm
  • ಎಸ್‌ಎಸ್‌ಎಲ್‌ಸಿ ವಿವರ: ನಿಮ್ಮ 10ನೇ ತರಗತಿಯ ಬೋರ್ಡ್ ಟೈಪ್, ನೋಂದಣಿ ಸಂಖ್ಯೆ (Registration Number) ಮತ್ತು ತೇರ್ಗಡೆಯಾದ ವರ್ಷವನ್ನು ನಮೂದಿಸಿ “GET DATA” ಕ್ಲಿಕ್ ಮಾಡಿ. ವಿವರಗಳು ಸರಿಯಾಗಿದ್ದರೆ “SAVE SSLC DETAILS” ಒತ್ತಿ.
  • ಜಾತಿ ಮತ್ತು ಆದಾಯದ ವಿವರ: ನಿಮ್ಮ ಧರ್ಮ ಮತ್ತು ಪ್ರವರ್ಗವನ್ನು (Category) ಆಯ್ಕೆಮಾಡಿ. ಕಂದಾಯ ಇಲಾಖೆ ನೀಡಿರುವ ನಿಮ್ಮ 15-ಅಂಕಿಯ ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರದ RD ಸಂಖ್ಯೆಯನ್ನು ನಮೂದಿಸಿ “CHECK” ಬಟನ್ ಕ್ಲಿಕ್ ಮಾಡಿ. ವಿವರಗಳನ್ನು ಖಚಿತಪಡಿಸಿಕೊಂಡು “SAVE DETAILS” ಕ್ಲಿಕ್ ಮಾಡಿ.
  • ವೈಯಕ್ತಿಕ ವಿವರ: ನಿಮ್ಮ ವಿಳಾಸ, ವಿಧಾನಸಭಾ ಕ್ಷೇತ್ರ, ಪಿನ್ ಕೋಡ್ ವಿವರಗಳನ್ನು ಭರ್ತಿ ಮಾಡಿ. ಪೋಷಕರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಮೂಲಕ ಪರಿಶೀಲಿಸಿ. ಕೊನೆಯದಾಗಿ ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು (JPEG ಫಾರ್ಮ್ಯಾಟ್, 1MB ಒಳಗಿರಬೇಕು) ಅಪ್‌ಲೋಡ್ ಮಾಡಿ “Save Personal Details” ಕ್ಲಿಕ್ ಮಾಡಿ.
bcm 1

Step 2: ವಿದ್ಯಾರ್ಥಿಯ ಶೈಕ್ಷಣಿಕ ವಿವರಗಳು (Student Academic Details)

  • ಪ್ರಸ್ತುತ ವರ್ಷ ನೀವು ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯ (University) ಅಥವಾ ಮಂಡಳಿಯನ್ನು ಆಯ್ಕೆಮಾಡಿ.
  • ನಿಮ್ಮ ಕೋರ್ಸ್ ವಿವರ (PUC/Diploma/ITI/UG/PG) ಹಾಗೂ ಕಾಲೇಜು ಇರುವ ಜಿಲ್ಲೆ, ತಾಲೂಕು ಮತ್ತು ಕಾಲೇಜಿನ ಹೆಸರನ್ನು ಆಯ್ಕೆಮಾಡಿ.
  • ನಿಮ್ಮ ವಿಶ್ವವಿದ್ಯಾಲಯದ ನೋಂದಣಿ ಸಂಖ್ಯೆಯನ್ನು ನಮೂದಿಸಿ “GET DATA” ಕ್ಲಿಕ್ ಮಾಡಿದಾಗ ಶೈಕ್ಷಣಿಕ ವಿವರಗಳು ಲಭ್ಯವಾಗುತ್ತವೆ (ಒಂದು ವೇಳೆ UUCMS/UNIDATA ದಲ್ಲಿ ವಿವರ ಸಿಗದಿದ್ದರೆ ಮ್ಯಾನುಯಲ್ ಆಗಿ ಭರ್ತಿ ಮಾಡಬಹುದು).
  • ಹಿಂದಿನ ಅಂಕಗಳು: ನೀವು ಪದವಿ (UG) ಓದುತ್ತಿದ್ದರೆ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಅಂಕಗಳನ್ನು, ಪಿಯುಸಿ ಓದುತ್ತಿದ್ದರೆ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಿ “Save College Details” ಕ್ಲಿಕ್ ಮಾಡಬೇಕು.

Step 3: ವಸತಿನಿಲಯಗಳ ಆದ್ಯತೆ/ಆಯ್ಕೆ (Selection of Hostels & Preference)

  • ನೀವು ಹಂತ 2ರಲ್ಲಿ ಆಯ್ಕೆ ಮಾಡಿದ ಕಾಲೇಜಿನ ಆಧಾರದ ಮೇಲೆ ಆಯಾ ತಾಲೂಕಿನಲ್ಲಿ ಲಭ್ಯವಿರುವ BCM ವಸತಿನಿಲಯಗಳ ಪಟ್ಟಿ ಕಾಣಿಸುತ್ತದೆ.
  • “GET HOSTELS” ಕ್ಲಿಕ್ ಮಾಡಿದ ನಂತರ ಕಾಣಿಸುವ ಹಾಸ್ಟೆಲ್‌ಗಳ ಪಟ್ಟಿಯಲ್ಲಿ, ನಿಮಗೆ ಮೊದಲ ಆದ್ಯತೆ ಬೇಕಾದ ಹಾಸ್ಟೆಲ್‌ಗೆ ಡ್ರಾಪ್-ಡೌನ್ ಮೂಲಕ Priority (1, 2, 3…) ನೀಡಿ. ಕೌನ್ಸೆಲ್ಲಿಂಗ್ ಸಮಯದಲ್ಲಿ ಈ ಆದ್ಯತೆಯ ಮೇಲೆಯೇ ಸೀಟು ಹಂಚಿಕೆಯಾಗುತ್ತದೆ.
  • ಆದ್ಯತೆಗಳನ್ನು ನಿಗದಿಪಡಿಸಿದ ನಂತರ “SAVE HOSTEL PRIORITY” ಬಟನ್ ಕ್ಲಿಕ್ ಮಾಡಿ.

Step 4: ಪೂರ್ವವೀಕ್ಷಣೆ ಹಾಗೂ ಅರ್ಜಿ ಸಲ್ಲಿಕೆ (Preview and Final Submit)

  • ಇದುವರೆಗೆ ನೀವು ಅರ್ಜಿಯಲ್ಲಿ ಭರ್ತಿ ಮಾಡಿರುವ ಎಲ್ಲಾ ವಿವರಗಳ ‘ಪೂರ್ವವೀಕ್ಷಣೆ’ (Preview) ಪರದೆಯ ಮೇಲೆ ಮೂಡುತ್ತದೆ.
  • ವಿವರಗಳನ್ನು ಮತ್ತೊಮ್ಮೆ ಸಂಪೂರ್ಣವಾಗಿ ಪರಿಶೀಲಿಸಿ, ಎಲ್ಲವೂ ಸರಿಯಾಗಿದ್ದಲ್ಲಿ “Final Submit” ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಸಹಾಯವಾಣಿ (Helpline): ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳಾದಲ್ಲಿ ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 8050770004 ಗೆ ಸಂಪರ್ಕಿಸಬಹುದು. ಅಥವಾ, [email protected] ಗೆ ಇ-ಮೇಲ್ ಮುಖಾಂತರ ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲಾ ಅಥವಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬಹುದು.

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories