ಡಿಜಿ ಐಜಿಪಿ ಪದಕ

ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ, ಪಿಸಿ ಆನಂದ್‌ಗೆ ಒಲಿದ ‘ಡಿಜಿ-ಐಜಿಪಿ’ ಪದಕದ ಗರಿ

2025-26ನೇ ಸಾಲಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ‘ಡಿಜಿ-ಐಜಿಪಿ ಪ್ರಶಂಸಾ ಪದಕ’ಕ್ಕೆ ಹಾವೇರಿ ಎಸ್ ಪಿ ಯಶೋಧಾ ವಂಟಗೋಡಿ ಹಾಗೂ ಸೈಬರ್ ಕ್ರೈಂ ಠಾಣೆಯ ಕಾನ್ಸ್‌ಟೇಬಲ್ ಆನಂದ ದೊಡ್ಡಕುರುಬರ ಭಾಜನರಾಗಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ…

  • *ಹಾವೇರಿ ಎಸ್‌ಪಿ ಯಶೋಧಾ ಹಾಗೂ ಪಿಸಿ ಆನಂದ್‌ಗೆ ಪ್ರಶಸ್ತಿ.
  • *2025-26ನೇ ಸಾಲಿನ ಡಿಜಿ-ಐಜಿಪಿ ಪ್ರಶಂಸಾ ಪದಕ ಘೋಷಣೆ.
  • *ಉತ್ತಮ ಆಡಳಿತ ಹಾಗೂ ಅಪರಾಧ ಪ್ರಕರಣಗಳ ಭೇದಿಸಿದ್ದಕ್ಕೆ ಗೌರವ.

ಹಾವೇರಿ: ಪೊಲೀಸ್ ಇಲಾಖೆಯಲ್ಲಿ ವರ್ಷಪೂರ್ತಿ ಶಿಸ್ತು, ಕಠಿಣ ಪರಿಶ್ರಮ ಮತ್ತು ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟು ಅತ್ಯುತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ನೀಡಲಾಗುವ ಪ್ರತಿಷ್ಠಿತ “ಡಿಜಿ-ಐಜಿಪಿ ಪ್ರಶಂಸಾ ಪದಕ” (DG-IGP Commendation Medal) ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಇಬ್ಬರು ಅಧಿಕಾರಿಗಳು ಭಾಜನರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಹಾವೇರಿಯ ಸಾಧಕ ಅಧಿಕಾರಿಗಳು

2026ನೇ ಸಾಲಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಶಂಸಾ ಪದಕ ಪ್ರಶಸ್ತಿಗೆ ಹಾವೇರಿ ಜಿಲ್ಲೆಯಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದೆ:

  • ಯಶೋಧಾ ವಂಟಗೋಡಿ: ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP).
  • ಆನಂದ ದೊಡ್ಡಕುರುಬರ: ಸೈಬರ್ ಕ್ರೈಂ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ (PC).
yashoda haveri sp

ಪ್ರಶಸ್ತಿಗೆ ಆಯ್ಕೆಯಾಗಲು ಕಾರಣವೇನು?: ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ಅವರು ಜಿಲ್ಲೆಯಲ್ಲಿ ತೋರಿದ ಅತ್ಯುತ್ತಮ ಆಡಳಿತ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿನ ಬದ್ಧತೆ ಹಾಗೂ ಜಿಲ್ಲೆಯ ವಿವಿಧ ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಅವರ ಈ ಜನಪರ ಸೇವೆಯನ್ನು ಗುರುತಿಸಿ ಈ ಉನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

anand doddakurubar

ಒಟ್ಟು 200 ಅಧಿಕಾರಿಗಳಿಗೆ ಗೌರವ

2025-26ನೇ ಸಾಲಿನಲ್ಲಿ ರಾಜ್ಯಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸಿದ ಒಟ್ಟು 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಅತ್ಯುನ್ನತ “ಡಿಜಿ-ಐಜಿಪಿ ಪ್ರಶಂಸನಾ ಪದಕ” ವನ್ನು ಘೋಷಿಸಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ಅವರು ಜೂನ್ 22ರಂದು ಈ ಪ್ರಶಸ್ತಿ ಪುರಸ್ಕೃತರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ಕಾನ್ಸ್‌ಟೇಬಲ್‌ನಿಂದ ಐಪಿಎಸ್‌ವರೆಗೆ!

ಪೊಲೀಸ್ ಇಲಾಖೆಯು ಹೊರಡಿಸಿರುವ ಈ ಗೌರವಾನ್ವಿತ ಪಟ್ಟಿಯಲ್ಲಿ ಉನ್ನತ ಮಟ್ಟದ 17 ಐಪಿಎಸ್ (IPS) ಅಧಿಕಾರಿಗಳಿಂದ ಹಿಡಿದು, ತಳಮಟ್ಟದಲ್ಲಿ ಹಗಲಿರುಳು ಬಿಸಿಲು-ಮಳೆ ಎನ್ನದೆ ಶ್ರಮಿಸುವ ಕಾನ್ಸ್‌ಟೇಬಲ್‌ಗಳವರೆಗೂ ಹಲವರು ಸ್ಥಾನ ಪಡೆದುಕೊಂಡಿದ್ದಾರೆ.

ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ಅಪ್ರತಿಮ ಸಾಧನೆ ತೋರಿದ ಇಲಾಖೆಯ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದ್ದು, ಶೀಘ್ರದಲ್ಲೇ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಪುರಸ್ಕೃತರಿಗೆ ಈ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.

ವರದಿ: ಮಾರುತಿ ತಳವಾರ, ನೀಡ್ಸ್ ಆಫ್ ಪಬ್ಲಿಕ್

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories