muskan scholarship 12000

ಮುಸ್ಕಾನ್ ಸ್ಕಾಲರ್‌ಶಿಪ್ 2026: ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ; ಅರ್ಜಿ ಪ್ರಕ್ರಿಯೆ ಆರಂಭ

ವ್ಯಾಲ್ವೋಲಿನ್ ಕಮಿನ್ಸ್ ಪ್ರೈವೇಟ್ ಲಿಮಿಟೆಡ್ (VCPL) ವತಿಯಿಂದ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಸ್ಕಾನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2.0 (2026-27) ಅಡಿ ₹12,000 ವರೆಗೆ ವಿದ್ಯಾರ್ಥಿವೇತನ. ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಬೇಕಾಗುವ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

  • *ವಿದ್ಯಾರ್ಥಿವೇತನ: 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು.
  • *₹12,000 ಧನಸಹಾಯ: ಶೈಕ್ಷಣಿಕ ವೆಚ್ಚಗಳಿಗಾಗಿ ವಾರ್ಷಿಕ ₹12,000 ವರೆಗಿನ ಸ್ಕಾಲರ್‌ಶಿಪ್.
  • *ಕೊನೆಯ ದಿನಾಂಕ: 20 ಆಗಸ್ಟ್ 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಮುಸ್ಕಾನ್ ಸ್ಕಾಲರ್‌ಶಿಪ್ 2026: 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ; ಇಂದೇ ಅರ್ಜಿ ಸಲ್ಲಿಸಿ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು (EWS), ವಾಣಿಜ್ಯ ವಾಹನ ಚಾಲಕರು ಹಾಗೂ ಮೆಕ್ಯಾನಿಕ್‌ಗಳ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಅವರ ಶೈಕ್ಷಣಿಕ ಕನಸುಗಳಿಗೆ ಆರ್ಥಿಕ ಬಲ ತುಂಬಲು ವ್ಯಾಲ್ವೋಲಿನ್ ಕಮಿನ್ಸ್ ಪ್ರೈವೇಟ್ ಲಿಮಿಟೆಡ್ (VCPL) ಮಹತ್ವದ ಹೆಜ್ಜೆಯಿಟ್ಟಿದೆ. ‘ಮುಸ್ಕಾನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2.0 (2026-27)’ ಯೋಜನೆ ಮೂಲಕ, ಪ್ರಸ್ತುತ 9 ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಭರ್ಜರಿ ವಿದ್ಯಾರ್ಥಿವೇತನವನ್ನು (Scholarship) ಘೋಷಿಸಲಾಗಿದೆ.

ಈ ಯೋಜನೆಯಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಗರಿಷ್ಠ ₹12,000 ವರೆಗೆ ಆರ್ಥಿಕ ನೆರವು ನೀಡಲಾಗುವುದು. ಜೊತೆಗೆ, ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಭವಿಷ್ಯದ ಗುರಿಗಳನ್ನು ತಲುಪಲು ಸಹಾಯವಾಗುವಂತೆ ವಿಶೇಷ ಮಾರ್ಗದರ್ಶನ (Mentorship) ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.

ಸ್ಕಾಲರ್‌ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳೇನು? (Eligibility Criteria)

ಅಷ್ಟಕ್ಕೂ ಈ ಸ್ಕಾಲರ್‌ಶಿಪ್ ಯಾರಿಗೆಲ್ಲ ಸಿಗುತ್ತೆ? ಅರ್ಜಿ ಹಾಕಲು ಏನೆಲ್ಲಾ ಅರ್ಹತೆಗಳಿರಬೇಕು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ

  • ರಾಜ್ಯವಾರು ಅರ್ಹತೆ: ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಅಸ್ಸಾಂ, ಬಿಹಾರ ಸೇರಿದಂತೆ ಅಧಿಸೂಚನೆಯಲ್ಲಿ ತಿಳಿಸಿರುವ ಒಟ್ಟು 19 ರಾಜ್ಯಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ವೃತ್ತಿ ಆಧಾರಿತ ಆದ್ಯತೆ: ಲಘು/ಭಾರಿ ವಾಣಿಜ್ಯ ವಾಹನಗಳ ಚಾಲಕರ ಮಕ್ಕಳು (LMV/HMV Drivers), ಮೆಕ್ಯಾನಿಕ್‌ಗಳ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ಲಭ್ಯವಿದೆ.
  • ಶೈಕ್ಷಣಿಕ ಮಾನದಂಡ: ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ (Previous Class) ಕನಿಷ್ಠ ಶೇ. 60 (60%) ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.
  • ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹8 ಲಕ್ಷವನ್ನು ಮೀರಿರಬಾರದು.
  • ಸೂಚನೆ: ವ್ಯಾಲ್ವೋಲಿನ್ ಕಮಿನ್ಸ್ ಪ್ರೈವೇಟ್ ಲಿಮಿಟೆಡ್ (VCPL) ಮತ್ತು ಬಡ್ಡಿಫಾರ್‌ಸ್ಟಡಿ (Buddy4Study) ಸಂಸ್ಥೆಗಳ ಉದ್ಯೋಗಿಗಳ ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಪ್ರಮುಖ ದಾಖಲೆಗಳು (Required Documents)

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳ ಸ್ಪಷ್ಟವಾದ ಸಾಫ್ಟ್ ಕಾಪಿಗಳನ್ನು (Soft Copies) ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು:

  1. ವಿದ್ಯಾರ್ಥಿಯ ಗುರುತಿನ ಚೀಟಿ: ವೋಟರ್ ಐಡಿ, ಪ್ಯಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್.
  2. ಪ್ರಸ್ತುತ ವರ್ಷದ ಪ್ರವೇಶ ದೃಢೀಕರಣ: ಶುಲ್ಕ ಪಾವತಿಸಿದ ರಸೀದಿ (Fee Receipt), ಅಡ್ಮಿಷನ್ ಲೆಟರ್, ಸಂಸ್ಥೆಯ ಐಡಿ ಕಾರ್ಡ್ ಅಥವಾ ಬೋನಫೈಡ್ ಸರ್ಟಿಫಿಕೇಟ್ (Bonafide Certificate).
  3. ಅಂಕಪಟ್ಟಿ: ಹಿಂದಿನ ತರಗತಿಯ ಒರಿಜಿನಲ್ ಅಂಕಪಟ್ಟಿ (ಸಂಬಂಧಪಟ್ಟವರಿಂದ ಸಹಿ ಮತ್ತು ಮೊಹರು ಹಾಕಿರಬೇಕು).
  4. ಪೋಷಕರ ವೃತ್ತಿಯ ಪುರಾವೆ (ಯಾವುದಾದರೂ ಒಂದು):
  • ಚಾಲಕರಾಗಿದ್ದರೆ ಅವರ ಕಮರ್ಷಿಯಲ್ ಡ್ರೈವಿಂಗ್ ಲೈಸೆನ್ಸ್ (Commercial Driving License).
  • ಶ್ರಮಿಕ್ ಕಾರ್ಡ್ (Shramik Card).
  • ಉದ್ಯೋಗದಾತರಿಂದ ದೃಢೀಕರಣ ಪತ್ರ ಅಥವಾ ಅಧಿಕೃತ ಪ್ರಾಧಿಕಾರದಿಂದ ದೃಢೀಕರಿಸಿದ ಸ್ವಯಂ-ಘೋಷಣಾ ಪತ್ರ.

5.ಕುಟುಂಬದ ಆದಾಯ ಪ್ರಮಾಣಪತ್ರ (ಯಾವುದಾದರೂ ಒಂದು):

  • ಗ್ರಾಮ ಪಂಚಾಯಿತಿ / ವಾರ್ಡ್ ಕೌನ್ಸಿಲರ್ / ಸರ್ಪಂಚ್ ಅವರಿಂದ ಪಡೆದ ಆದಾಯ ಪ್ರಮಾಣಪತ್ರ.
  • ತಹಶೀಲ್ದಾರ್ / SDM ಅವರಿಂದ ಪಡೆದ ಅಧಿಕೃತ ಆದಾಯ ಪ್ರಮಾಣಪತ್ರ.
  • ಕಳೆದ ಮೂರು ತಿಂಗಳ ಸ್ಯಾಲರಿ ಸ್ಲಿಪ್ ಅಥವಾ ಆದಾಯ ತೆರಿಗೆ ರಿಟರ್ನ್ (ITR) ಪ್ರತಿ.

6.ಬ್ಯಾಂಕ್ ಖಾತೆ ವಿವರ: ಕಡ್ಡಾಯವಾಗಿ ವಿದ್ಯಾರ್ಥಿಯ (ಅರ್ಜಿದಾರನ) ಹೆಸರಿನಲ್ಲೇ ಇರುವ ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ಮುಖಪುಟ. (ಪೋಷಕರ ಅಥವಾ ಪೋಷಕರ ಬ್ಯಾಂಕ್ ಖಾತೆಯನ್ನು ಪರಿಗಣಿಸಲಾಗುವುದಿಲ್ಲ).

7.ಭಾವಚಿತ್ರ: ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.

ಅರ್ಜಿ ಸಲ್ಲಿಸುವ ವಿಧಾನ (How to Apply Online)

ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅಧಿಕೃತ ‘Buddy4Study’ ಪೋರ್ಟಲ್ ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಹಂತಗಳು ಈ ಕೆಳಗಿನಂತಿವೆ:

Step 1: ಮೊದಲಿಗೆ, Buddy4Study ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ‘Muskaan Scholarship Program 2.0 (2026-27)’ ಪುಟವನ್ನು ತೆರೆಯಿರಿ.

    muskan

    Step 2: ಅಲ್ಲಿ ಕಾಣುವ ‘Apply Now’ (ಈಗಲೇ ಅರ್ಜಿ ಸಲ್ಲಿಸಿ) ಬಟನ್ ಮೇಲೆ ಕ್ಲಿಕ್ ಮಾಡಿ.

    Step 3: ನಿಮ್ಮ ಇಮೇಲ್ (Email), ಮೊಬೈಲ್ ಸಂಖ್ಯೆ ಅಥವಾ ಗೂಗಲ್ ಖಾತೆಯ ಮೂಲಕ ಲಾಗಿನ್ ಆಗಿ ಅಥವಾ ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಿ.

    muskan 1

    Step 4: ನಂತರ ‘Start Application’ ಬಟನ್ ಒತ್ತಿ, ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.

    Step 5: ಮೇಲೆ ತಿಳಿಸಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

    muskan 2

    Step 6: Terms and Conditions’ ಅನ್ನು ಒಪ್ಪಿಕೊಂಡು, ‘Preview’ ಬಟನ್ ಕ್ಲಿಕ್ ಮಾಡಿ ಒಮ್ಮೆ ಪರಿಶೀಲಿಸಿ. ಎಲ್ಲಾ ವಿವರಗಳು ಸರಿಯಾಗಿದ್ದರೆ, ಅಂತಿಮವಾಗಿ ‘Submit’ (ಸಲ್ಲಿಸಿ) ಬಟನ್ ಒತ್ತಿ.

      ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಆಗಸ್ಟ್ 2026

      ಶಿಕ್ಷಣವೇ ಭವಿಷ್ಯದ ಅಡಿಪಾಯ. ಇಂತಹ ವಿದ್ಯಾರ್ಥಿವೇತನಗಳು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದೊಡ್ಡ ಆಸರೆಯಾಗಲಿವೆ. ಆದ್ದರಿಂದ, ತಡಮಾಡದೆ ಇಂದೇ ಅರ್ಜಿ ಸಲ್ಲಿಸಿ.

      ವರದಿ: ಕೃಷ್ಣಸಾಗರಿ – ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

      ಈ ಮಾಹಿತಿಗಳನ್ನು ಓದಿ:

        WhatsApp Group Join Now
        Telegram Group Join Now

        Leave a Reply

        Your email address will not be published. Required fields are marked *


        Popular Categories