cesc mysore recruitment 2026 scaled

ಮೈಸೂರು ಚೆಸ್ಕಾಂ ನೇಮಕಾತಿ 2026: ಪರೀಕ್ಷೆ ಇಲ್ಲದೆ 200 ಹುದ್ದೆಗಳ ಭರ್ತಿ, ಯಾವುದೇ ಡಿಗ್ರಿ ಆದವರು ಅಪ್ಲೈ ಮಾಡಿ.

ಸ್ಪರ್ಧಾತ್ಮಕ ಪರೀಕ್ಷೆ, ಇಂಟರ್ವ್ಯೂ ಇಲ್ಲದೆ ಮೈಸೂರು ಚೆಸ್ಕಾಂ (CESC) ನಲ್ಲಿ 200 ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ. B.E, ಡಿಪ್ಲೊಮಾ, B.A, B.Com, B.Sc ಓದಿದವರು ಇಂದೇ ಅರ್ಜಿ ಸಲ್ಲಿಸಿ.

ಮುಖ್ಯಾಂಶಗಳು (Highlights)

  • ಪರೀಕ್ಷೆ, ಇಂಟರ್ವ್ಯೂ ಟೆನ್ಷನ್ ಇಲ್ಲ: ಕೇವಲ ನಿಮ್ಮ ಡಿಗ್ರಿ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮೂಲಕ ನೇರ ಕೆಲಸ!
  • ಆರ್ಟ್ಸ್, ಕಾಮರ್ಸ್ ನವರಿಗೂ ಚಾನ್ಸ್: ಇಂಜಿನಿಯರಿಂಗ್ ಮಾತ್ರವಲ್ಲ; B.A, B.Com, B.Sc ಓದಿದವರಿಗೂ ಸಿಗಲಿದೆ ₹12,300 ಸ್ಟೈಫಂಡ್.
  • ಮೇ 29 ಕಡೆ ದಿನ: ನ್ಯಾಟ್ಸ್ (NATS) ಪೋರ್ಟಲ್‌ನಲ್ಲಿ ತಕ್ಷಣ ಅರ್ಜಿ ಸಲ್ಲಿಸದಿದ್ದರೆ ಮಿಸ್ ಆಗುತ್ತೆ ಈ ಸರ್ಕಾರಿ ಅವಕಾಶ.

ಕರ್ನಾಟಕದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಭರ್ಜರಿ ಸಿಹಿಸುದ್ದಿ. ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು (CESC Mysore) 2026-27ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

ಒಟ್ಟು 200 ಅಪ್ರೆಂಟಿಸ್ (Apprenticeship Training) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇಂಜಿನಿಯರಿಂಗ್, ಡಿಪ್ಲೊಮಾ ಹಾಗೂ ನಾನ್-ಇಂಜಿನಿಯರಿಂಗ್ ಪದವೀಧರರು (B.A, B.Com, B.Sc, BBA, BCA) ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 29, 2026 ಕೊನೆಯ ದಿನವಾಗಿದೆ. ನೀಡ್ಸ್ ಆಫ್ ಪಬ್ಲಿಕ್ ನ ಓದುಗರಿಗೆ, ಅನುಕೂಲವಾಗುವಂತೆ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಮುಂದೆ ಓದಿ.

ಹುದ್ದೆಗಳು ಎಷ್ಟು? ತಿಂಗಳ ಸ್ಟೈಫಂಡ್ ಎಷ್ಟು ಸಿಗುತ್ತೆ?

ಚೆಸ್ಕಾಂ (CESC) ಒಟ್ಟು ಮೂರು ವಿಭಾಗಗಳಲ್ಲಿ 200 ಅಭ್ಯರ್ಥಿಗಳನ್ನು 1 ವರ್ಷದ ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಿದೆ. ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ ಮತ್ತು ಅವರಿಗೆ ಸಿಗುವ ಮಾಸಿಕ ಸ್ಟೈಫಂಡ್ (ವೇತನ) ಎಷ್ಟು ಎಂಬ ಮಾಹಿತಿ ಇಲ್ಲಿದೆ:

ಹುದ್ದೆಗಳ ವಿವರ ಮತ್ತು ಸ್ಟೈಫಂಡ್

ವಿದ್ಯಾರ್ಹತೆ ವಿಭಾಗಒಟ್ಟು ಹುದ್ದೆಗಳುಮಾಸಿಕ ಸ್ಟೈಫಂಡ್
ಇಂಜಿನಿಯರಿಂಗ್ ಪದವೀಧರರು (B.E/B.Tech)80 ಹುದ್ದೆಗಳು₹12,300/-
ಡಿಪ್ಲೊಮಾ ಅಭ್ಯರ್ಥಿಗಳು (Technician)55 ಹುದ್ದೆಗಳು₹10,900/-
ನಾನ್-ಇಂಜಿನಿಯರಿಂಗ್ (B.A, B.Com, B.Sc, BBA, BCA)65 ಹುದ್ದೆಗಳು₹12,300/-

ಶೈಕ್ಷಣಿಕ ಅರ್ಹತೆಗಳು ಮತ್ತು ನಿಯಮಗಳು (Eligibility Criteria)

  • ಶೈಕ್ಷಣಿಕ ವರ್ಷ: ಅಭ್ಯರ್ಥಿಗಳು 2022, 2023, 2024, 2025 ಅಥವಾ 2026 ರಲ್ಲಿ ತಮ್ಮ ವ್ಯಾಸಂಗ ಮುಗಿಸಿರುವವರಾಗಿರಬೇಕು.
  • ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು.
  • ಭಾಷಾ ಜ್ಞಾನ: ಅಭ್ಯರ್ಥಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ತಿಳಿದಿರಬೇಕು.
  • ಅನರ್ಹತೆ: ಈ ಹಿಂದೆ ಅಪ್ರೆಂಟಿಸ್ ತರಬೇತಿ ಪಡೆದವರು ಅಥವಾ 1 ವರ್ಷದ ಕೆಲಸದ ಅನುಭವ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ಡಿಗ್ರಿ ಅಥವಾ ಡಿಪ್ಲೊಮಾದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು (Merit List) ತಯಾರಿಸಲಾಗುತ್ತದೆ.

ದಕ್ಷಿಣ ವಲಯದ ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್ (BOAT-SR) ಸಂಸ್ಥೆಯು ಆನ್‌ಲೈನ್ ಅರ್ಜಿಗಳ ಡೇಟಾದಿಂದ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುವುದು. ಬಳಿಕ ಅವರು ಮೈಸೂರಿನ CESC ಕೇಂದ್ರ ಕಚೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ (Document Verification) ಹಾಜರಾಗಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ (How to Apply Guide)

ಈ ಹುದ್ದೆಗಳಿಗೆ ಯಾವುದೇ ಆಫ್‌ಲೈನ್ ಅರ್ಜಿಗಳಿಲ್ಲ. ಅರ್ಜಿ ಪ್ರಕ್ರಿಯೆಯು ಸಂಪೂರ್ಣ ಆನ್‌ಲೈನ್ ಆಗಿದ್ದು, ನೀವು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸಿ ಈ ಕೆಳಗಿನ 5 ಸರಳ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು:

Step 1: (ಮೊದಲ ಬಾರಿಗೆ ನೋಂದಣಿ): ಮೊದಲು ಕೇಂದ್ರ ಸರ್ಕಾರದ ಅಧಿಕೃತ NATS ವೆಬ್‌ಪೋರ್ಟಲ್‌ಗೆ (https://nats.education.gov.in/) ಭೇಟಿ ನೀಡಿ.

ಮುಖಪುಟದಲ್ಲಿರುವ Student ವಿಭಾಗವನ್ನು ಆಯ್ಕೆ ಮಾಡಿಕೊಂಡು, ನಿಮ್ಮ ಮೂಲ ವಿವರಗಳು ಹಾಗೂ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ. (ಈಗಾಗಲೇ ರಿಜಿಸ್ಟರ್ ಆದವರು ನೇರವಾಗಿ 3ನೇ ಹಂತಕ್ಕೆ ಹೋಗಿ).

ಚೆಸ್ಕಾಂ apply 1 1

Step 2: Student ವಿಭಾಗದಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ನೀಡಿ ನೋಂದಣಿ (Register) ಮಾಡಿಕೊಳ್ಳಿ. ನಿಮ್ಮ ವಿದ್ಯಾರ್ಥಿ ಪ್ರೊಫೈಲ್ ಪೂರ್ಣಗೊಂಡ ನಂತರ, ನಿಮ್ಮ ಇಮೇಲ್ ಅಥವಾ ಡ್ಯಾಶ್‌ಬೋರ್ಡ್‌ನಲ್ಲಿ 12 ಅಂಕಿಯ (12-digit) ಎನ್‌ರೋಲ್‌ಮೆಂಟ್ ನಂಬರ್ ಜನರೇಟ್ ಆಗುತ್ತದೆ. ಲಾಗಿನ್ ಆಗಲು ಇದು ಅತಿ ಮುಖ್ಯ, ಇದನ್ನು ಬರೆದಿಟ್ಟುಕೊಳ್ಳಿ.

ಚೆಸ್ಕಾಂ apply 2 1

Step 3: ಈಗ ಮತ್ತೆ ಅದೇ NATS ಪೋರ್ಟಲ್ ಮುಖಪುಟಕ್ಕೆ ಬಂದು, ನಿಮಗೆ ಬಂದಿರುವ 12 ಅಂಕಿಯ ಎನ್‌ರೋಲ್‌ಮೆಂಟ್ ನಂಬರ್ ಮತ್ತು ನೀವು ಸೆಟ್ ಮಾಡಿರುವ ಪಾಸ್‌ವರ್ಡ್ ಬಳಸಿ ಖಾತೆಗೆ ಲಾಗಿನ್ ಆಗಿ.

ಚೆಸ್ಕಾಂ apply 3 1

Step 3: ನಿಮ್ಮ ಪ್ರೊಫೈಲ್ ಓಪನ್ ಆದ ಮೇಲೆ, ಅಲ್ಲಿರುವ Apply against advertised vacancies (ಅಥವಾ Opportunities) ವಿಭಾಗದ ಮೇಲೆ ಕ್ಲಿಕ್ ಮಾಡಿ. ಅಲ್ಲಿನ ಸರ್ಚ್ ಬಾಕ್ಸ್‌ನಲ್ಲಿ Chamundeshwari Electricity Supply Corporation Limited ಎಂದು ಟೈಪ್ ಮಾಡಿ ಸರ್ಚ್ ಮಾಡಿ.

ಚೆಸ್ಕಾಂ apply 4 1 1

Step 4: ಪಟ್ಟಿಯಲ್ಲಿ ಮೈಸೂರು ಚೆಸ್ಕಾಂ (CESC) ಅಪ್ರೆಂಟಿಸ್ ಹುದ್ದೆಗಳು ಕಾಣಿಸಿದ ಕೂಡಲೇ, ಅದರ ಮುಂಭಾಗದಲ್ಲಿರುವ Apply ಬಟನ್ ಮೇಲೆ ಕ್ಲಿಕ್ ಮಾಡಿ. ಇಷ್ಟಾದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದಂತೆ!

ಕಡ್ಡಾಯ ಸೂಚನೆ: ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ಬಳಿಕ, ಭವಿಷ್ಯದ ರೆಫರೆನ್ಸ್‌ಗಾಗಿ ಆ ಪೇಜ್ ಅನ್ನು ಒಂದು ಪ್ರಿಂಟ್ ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದಿಟ್ಟುಕೊಳ್ಳಲು ಮರೆಯದಿರಿ.

ನೆನಪಿಡಬೇಕಾದ ದಿನಾಂಕಗಳು:

  • ಅರ್ಜಿ ಹಾಕಲು ಕಡೆ ದಿನ: ಮೇ 29, 2026
  • ಆಯ್ಕೆಯಾದವರ ಲಿಸ್ಟ್ ಬರುವ ದಿನ: ಜೂನ್ 05, 2026
  • ದಾಖಲೆಗಳ ಪರಿಶೀಲನೆ (ಮೈಸೂರಿನಲ್ಲಿ): ಜೂನ್ 15 ರಿಂದ ಜೂನ್ 19, 2026

(ಯಾವುದೇ ಡೌಟ್ ಇದ್ದರೆ ನೀವು ನೇರವಾಗಿ 044-22542235 ಅಥವಾ 8277892518 ನಂಬರ್‌ಗೆ ಕರೆ ಮಾಡಬಹುದು).

ನಿಮ್ಮ ಪ್ರಶ್ನೆ, ನಮ್ಮ ಉತ್ತರ (FAQs)

Q1: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏನಾದರೂ ಫೀಸ್ (Application Fee) ಕಟ್ಟಬೇಕಾ?

ಉತ್ತರ: ಇಲ್ಲ, NATS ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಸಂಪೂರ್ಣ ಉಚಿತವಾಗಿದೆ. ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

Q2: ನಾನು 2021 ರಲ್ಲಿ ಡಿಗ್ರಿ ಮುಗಿಸಿದ್ದೇನೆ, ನಾನು ಅರ್ಜಿ ಹಾಕಬಹುದಾ?

ಉತ್ತರ: ಇಲ್ಲ. ಅಧಿಕೃತ ಅಧಿಸೂಚನೆಯ ಪ್ರಕಾರ ಕೇವಲ 2022 ರಿಂದ 2026 ರ ನಡುವೆ ವ್ಯಾಸಂಗ ಮುಗಿಸಿದ ಅಭ್ಯರ್ಥಿಗಳಿಗೆ ಮಾತ್ರ ಈ ಅವಕಾಶ ನೀಡಲಾಗಿದೆ.

Q3: ಅಪ್ರೆಂಟಿಸ್ ಮುಗಿದ ಮೇಲೆ ಅದೇ ಇಲಾಖೆಯಲ್ಲಿ ಖಾಯಂ ಕೆಲಸ ಸಿಗುತ್ತಾ? ಉತ್ತರ:

ಇದು ಕೇವಲ 1 ವರ್ಷದ ತರಬೇತಿಯಾಗಿದೆ (Apprenticeship Training). ಒಂದು ವರ್ಷದ ನಂತರ ಖಾಯಂ ಹುದ್ದೆ ನೀಡುವ ಭರವಸೆಯನ್ನು ಇಲಾಖೆ ನೀಡುವುದಿಲ್ಲ. ಆದರೆ, ಇದು ನಿಮ್ಮ ವೃತ್ತಿಜೀವನಕ್ಕೆ ಅತ್ಯುತ್ತಮ ಅನುಭವದ ಪ್ರಮಾಣಪತ್ರ ಒದಗಿಸುತ್ತದೆ.

ವರದಿ: ಕೃಷ್ಣಸಾಗರಿ, ನೀಡ್ಸ್ ಆಫ್ ಪಬ್ಲಿಕ್ – ದಾವಣಗೆರೆ

WhatsApp Group Join Now
Telegram Group Join Now

Popular Categories