ಹೆಸ್ಕಾಂ ನೇಮಕಾತಿ (HESCOM) ಮುಖ್ಯಾಂಶಗಳು
- ಹುದ್ದೆಯ ಹೆಸರು: ಐಟಿಐ ಎಲೆಕ್ಟ್ರಿಷಿಯನ್ (ಶಿಶುಕ್ಷು / Apprentice)
- ವಿದ್ಯಾರ್ಹತೆ: ಐಟಿಐ ಎಲೆಕ್ಟ್ರಿಷಿಯನ್ (ITI Electrician) ಪಾಸ್ ಆಗಿರಬೇಕು.
- ಮಾಸಿಕ ಸ್ಟೈಫಂಡ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹9,600 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಮಾರ್ಚ್ 2026
ಹುಬ್ಬಳ್ಳಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಐಟಿಐ (ITI) ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ವತಿಯಿಂದ 2026-27ನೇ ಸಾಲಿನ ಅವಧಿಗೆ ‘ಐಟಿಐ ಎಲೆಕ್ಟ್ರಿಷಿಯನ್’ ವೃತ್ತಿ ತರಬೇತಿಗಾಗಿ (ಶಿಶುಕ್ಷು/Apprentice) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ಅವಧಿ ಮತ್ತು ಸ್ಟೈಫಂಡ್ (Stipend)
ಈ ಅಪ್ರೆಂಟಿಸ್ ತರಬೇತಿಯ ಅವಧಿಯು 1 ವರ್ಷದ್ದಾಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಗರಿಷ್ಠ ₹9,600 ವರೆಗೆ ಸ್ಟೈಫಂಡ್ (ಶಿಷ್ಯವೇತನ) ನೀಡಲಾಗುತ್ತದೆ.
ಅರ್ಹತೆಗಳು (Eligibility Criteria)
- ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 2 ವರ್ಷದ ‘ಐ.ಟಿ.ಐ ಎಲೆಕ್ಟ್ರಿಷಿಯನ್’ ಟ್ರೇಡ್‌ನಲ್ಲಿ ಉತ್ತೀರ್ಣರಾಗಿರಬೇಕು ಮತ್ತು NCVT/SCVT ಯಿಂದ ನೀಡಲಾದ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರವನ್ನು ಹೊಂದಿರಬೇಕು.
- ಎಸ್.ಎಸ್.ಎಲ್.ಸಿ. (SSLC) ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿರಬೇಕು ಹಾಗೂ ಕನ್ನಡದಲ್ಲಿ ಓದಲು-ಬರೆಯಲು ತಿಳಿದಿರಬೇಕು.
- ಸೂಚನೆ: ಈಗಾಗಲೇ ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಿದ ಅಥವಾ ಪ್ರಸ್ತುತ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ವಯೋಮಿತಿ (Age Limit)
(09-03-2026 ರ ಅನ್ವಯ)
- ಕನಿಷ್ಠ ವಯೋಮಿತಿ: 25 ವರ್ಷಗಳು
- ಗರಿಷ್ಠ ವಯೋಮಿತಿ: 30 ವರ್ಷಗಳು
ಅರ್ಜಿ ಶುಲ್ಕ (Application Fee)
ಸಾಮಾನ್ಯ ಅಭ್ಯರ್ಥಿಗಳು ₹100 ರೂ. ಮತ್ತು ಪ.ಜಾತಿ/ಪ.ಪಂಗಡದ (SC/ST) ಅಭ್ಯರ್ಥಿಗಳು ₹50 ರೂ. ಮೊತ್ತದ ಇಂಡಿಯನ್ ಪೊಸ್ಟಲ್ ಆರ್ಡರನ್ನು (Indian Postal Order) “ಆರ್ಥಿಕ ಸಲಹೆಗಾರರು, ಹುವಿಸಕಂನಿ, ಹುಬ್ಬಳ್ಳಿ” ಇವರ ಹೆಸರಿನಲ್ಲಿ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.
ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (How to Apply)
- ಮೊದಲಿಗೆ ಅಭ್ಯರ್ಥಿಗಳು ಅಪ್ರೆಂಟಿಸ್ ಅಧಿಕೃತ ಜಾಲತಾಣವಾದ
https://www.apprenticeshipindia.gov.in/ಗೆ ಭೇಟಿ ನೀಡಿ ನೋಂದಣಿ (Registration) ಮಾಡಿಕೊಳ್ಳಬೇಕು. - “ಜಾಹೀರಾತು ಮಾಡಿದ ಖಾಲಿ ಹುದ್ದೆಗಳ ವಿರುದ್ಧ ಅರ್ಜಿ ಸಲ್ಲಿಸಿ” ವಿಭಾಗದಲ್ಲಿ “ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ” (HESCOM) ಎಂದು ಹುಡುಕಿ, “ಹೆಸ್ಕಾಂ ಅಪ್ರೆಂಟಿಸ್ ತರಬೇತಿ 2026” ಗೆ ಅನ್ವಯಿಸು (Apply) ಕ್ಲಿಕ್ ಮಾಡಿ.
- ಆನ್‌ಲೈನ್ ಪ್ರಕ್ರಿಯೆ ಮುಗಿದ ಬಳಿಕ, ಹೆಸ್ಕಾಂನ ಅಧಿಕೃತ ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
- ಅರ್ಜಿಯಲ್ಲಿ ಕೇಳಲಾಗಿರುವ ಸ್ವವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳ ಜೆರಾಕ್ಸ್ ಪ್ರತಿಗಳು ಹಾಗೂ ಪೋಸ್ಟಲ್ ಆರ್ಡರ್ ಅನ್ನು ಲಗತ್ತಿಸಿ.
- ಲಕೋಟೆಯ ಮೇಲೆ “ಎಲೆಕ್ಟ್ರಿಷಿಯನ್ ವೃತ್ತಿಯ ಶಿಶುಕ್ಷು ತರಬೇತಿಗಾಗಿ ಅರ್ಜಿ” ಎಂದು ಕಡ್ಡಾಯವಾಗಿ ನಮೂದಿಸಿ.
- ಈ ಲಕೋಟೆಯನ್ನು ಮಾರ್ಚ್ 09ರೊಳಗೆ ಖುದ್ದಾಗಿ ಅಥವಾ ಅಂಚೆ (Post) ಮೂಲಕ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ),
ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ – 580024
| 🗓️ ಪ್ರಮುಖ ಘಟನೆಗಳು (Important Events) |
ದಿನಾಂಕ (Dates) |
|---|---|
| 🟢 ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 11 ಫೆಬ್ರವರಿ 2026 |
| 🟠 ಆನ್‌ಲೈನ್ (Apprenticeship Portal) ನೋಂದಣಿಗೆ ಕೊನೆಯ ದಿನಾಂಕ | 02 ಮಾರ್ಚ್ 2026 |
| 🔴 ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ | 09 ಮಾರ್ಚ್ 2026 |
| ಪ್ರಮುಖ ಲಿಂಕ್‌ಗಳು (Important Links) | ಡೌನ್‌ಲೋಡ್ / ಭೇಟಿ ನೀಡಿ |
|---|---|
|
📄 ಅಧಿಕೃತ ಅಧಿಸೂಚನೆ ಪಿಡಿಎಫ್ (Official Notification PDF) |
Download PDF |
|
📝 ಆಫ್‌ಲೈನ್ ಅರ್ಜಿ ನಮೂನೆ (Application Form PDF) |
Download Form |
|
🌐 ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ (Online Application Portal) |
Apply Online |
|
🏢 ಹೆಸ್ಕಾಂ ಅಧಿಕೃತ ವೆಬ್‌ಸೈಟ್ (HESCOM Official Website) |
Visit Website |
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




